AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಂದ ಗೋಕುಲ’ ಧಾರಾವಾಹಿಯಲ್ಲಿ ವಲ್ಲಭ-ಅಮೂಲ್ಯ ವಿವಾಹ; ದೊಡ್ಡ ಟ್ವಿಸ್ಟ್

‘ನಂದ ಗೋಕುಲ’ ಧಾರಾವಾಹಿಯಲ್ಲಿ ವಲ್ಲಭ ಮತ್ತು ಅಮೂಲ್ಯ ವಿವಾಹವಾಗಲಿದ್ದಾರೆ. ಇದು ಅಚ್ಚರಿಯ ತಿರುವು. ಸಿದ್ದು ವಂಚನೆಯಿಂದ ಅಮೂಲ್ಯ ಸಂಕಷ್ಟಕ್ಕೆ ಸಿಲುಕಿದಳು. ಆತ್ಮಹತ್ಯೆಗೆ ಮುಂದಾದ ಅಮೂಲ್ಯಳನ್ನು ಚಿನ್ನು ಕಾಪಾಡಿದಳು. ವಲ್ಲಭನ ನಿರ್ಧಾರದಿಂದ ಕಥೆಗೆ ಹೊಸ ದಿಕ್ಕು ಸಿಕ್ಕಿದೆ. ಈ ಮದುವೆಯಿಂದ ಧಾರಾವಾಹಿಯ TRP ಹೆಚ್ಚುವ ನಿರೀಕ್ಷೆಯಿದೆ.

‘ನಂದ ಗೋಕುಲ’ ಧಾರಾವಾಹಿಯಲ್ಲಿ ವಲ್ಲಭ-ಅಮೂಲ್ಯ ವಿವಾಹ; ದೊಡ್ಡ ಟ್ವಿಸ್ಟ್
ನಂದ ಗೋಕುಲ
 ಶ್ರೀಲಕ್ಷ್ಮೀ ಎಚ್
| Edited By: |

Updated on: Oct 12, 2025 | 7:48 AM

Share

‘ನಂದ ಗೋಕುಲ’ ಧಾರಾವಾಹಿಯಲ್ಲಿ ಯಾರೂ ಊಹಿಸದಂತಹ ತಿರುವು ಬಂದಿದೆ ಎಂದರೂ ಅಚ್ಚರಿ ಏನಿಲ್ಲ. ಹಾವು ಹಾಗೂ ಮುಂಗುಸಿಯಂತೆ ಕಿತ್ತಾಡಿಕೊಳ್ಳುತ್ತಿದ್ದ ವಲ್ಲಭ ಹಾಗೂ ಅಮೂಲ್ಯ ಈಗ ಪತಿ-ಪತ್ನಿ ಆಗುವ ಹಂತ ತಲುಪಿದ್ದಾರೆ. ಇಬ್ಬರೂ ವಿವಾಹ ಆಗುವ ದಿನ ಸಮೀಪಿಸಿಯೇ ಬಿಟ್ಟಿದೆ. ಪ್ರೇಕ್ಷಕರಿಗೆ ಈ ವಿಚಾರ ಖುಷಿ ಕೊಟ್ಟಿದೆ. ‘ನಂದ ಗೋಕುಲ’ ಧಾರಾವಾಹಿಯಲ್ಲೇ ಇದು ದೊಡ್ಡ ತಿರುವಾಗಿದೆ.

ಅಮೂಲ್ಯ ಹಾಗೂ ಸಿದ್ದು ಪರಸ್ಪರ ಪ್ರೀಸಿಸುತ್ತಿದ್ದರು. ಕಾಲೇಜಿನಲ್ಲಿ ಇವರ ಮಧ್ಯೆ ಪ್ರೀತಿ ಮೂಡಿತ್ತು. ಸಿದ್ದು ತುಂಬಾನೇ ಕೆಟ್ಟವನು. ಆದರೆ, ಇದನ್ನು ಅವನು ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಬದಲಿಗೆ ಆಕೆಯಿಂದ ದುಡ್ಡನ್ನು ಹೊಡೆಯಲು ಪ್ಲ್ಯಾನ್ ರೂಪಿಸಿದ್ದ. ಈ ಸಮಯಕ್ಕೆ ಸರಿಯಾಗಿ ಅಮೂಲ್ಯಾಗೆ ಬೇರೆ ಮದುವೆ ಫಿಕ್ಸ್ ಮಾಡಲಾಯಿತು. ಈ ಸಮಯಕ್ಕೆ ಸರಿಯಾಗಿ ಎಂಟ್ರಿ ಕೊಟ್ಟ ಸಿದ್ದು, ಚಿನ್ನ-ಹಣದ ಸಮೇತ ಅಮೂಲ್ಯಾನ ಓಡಿಸಿಕೊಂಡು ಹೋದ.

ಇದನ್ನೂ ಓದಿ
Image
‘ಕಾಂತಾರ’ ಶನಿವಾರದ ಕಲೆಕ್ಷನ್ ಇಷ್ಟೊಂದಾ?; ಭಾರತದಲ್ಲೇ 400 ಕೋಟಿ ಗಳಿಕೆ
Image
ಈ ವಾರ ಬಿಗ್ ಬಾಸ್​ನಿಂದ ಎಲಿಮಿನೇಟ್ ಆಗಿದ್ದು ಯಾರು? ಕಾದಿದೆ ದೊಡ್ಡ ಟ್ವಿಸ್
Image
ವಿದೇಶದಲ್ಲೂ ಆಸ್ತಿ ಹೊಂದಿದ್ದಾರೆ ಅಮಿತಾಭ್ ಬಚ್ಚನ್; ಇಲ್ಲಿದೆ ವಿವರ
Image
ಒಂದಲ್ಲ, ಎರಡಲ್ಲ ಆರು ಗಂಟೆ ಸ್ನಾನ ಮಾಡಿದ ಸತೀಶ್; ಒಡೆಯಿತು ತಾಳ್ಮೆಯ ಕಟ್ಟೆ

ಅಮೂಲ್ಯನ ಓಡಿಸಿಕೊಂಡು ಹೋದ ಸಿದ್ದು, ಆಕೆಯಿಂದ ಹಣ ಹಾಗೂ ಚಿನ್ನ ಲೂಟಿ ಮಾಡಿ ತನ್ನ ನಿಜವಾದ ಮುಖ ತೋರಿಸಿಯೇ ಬಿಟ್ಟ. ಇತ್ತ, ಅಮೂಲ್ಯ ಮನೆಯಲ್ಲಿ ಮದುವೆ ನಿಂತಿದ್ದಕ್ಕೆ ದೊಡ್ಡ ರಂಪಾಟವೇ ಆಗಿ ಹೋಗಿತ್ತು. ಆಕೆಯನ್ನು ವಿವಾಹ ಆಗಲು ಬಂದವರು ಬೈದುಕೊಳ್ಳುತ್ತಾ ಅಲ್ಲಿಂದ ತೆರಳಿದರು. ಈಗ ಅಮೂಲ್ಯಾಗೆ ಬೇರೆ ದಾರಿ ಕಾಣದೆ ಆತ್ಮಹತ್ಯೆಗೆ ನಿರ್ಧರಿಸಿದ್ದಾಳೆ.

ನಂದ ಗೋಕುಲ ಧಾರಾವಾಹಿ

ದೊಡ್ಡ ಬೆಟ್ಟದ ಮೇಲೆ ನಿಂತು ಆತ್ಮಹತ್ಯೆ ಮಾಡಿಕೊಳ್ಳುವವಳಿದ್ದಳು. ಆ ಸಮಯಕ್ಕೆ ಸರಿಯಾಗಿ ಚಿನ್ನು (ಕವಿತಾ ಗೌಡ) ಎಂಟ್ರಿ ಆಗಿದೆ. ಆಕೆ ಬಂದು ಅಮೂಲ್ಯಾನ ಕಾಪಾಡಿದ್ದಾಳೆ. ಇತ್ತ, ಮನೆಯಲ್ಲಿ ನಂದನ ಪತ್ನಿ ಅಮೂಲ್ಯಾ ಬಗ್ಗೆ ಚಿಂತಿಸಿ ಬೇಸರ ಮಾಡಿಕೊಂಡಿದ್ದಾಳೆ. ವಲ್ಲಭನ ಬಳಿ ಮದುವೆ ಆಗುವಂತೆ ಸೂಚಿಸಿದ್ದಾಳೆ. ಹಿಂದೂ-ಮುಂದು ನೋಡದೆ ಆತ ವಿವಾಹಕ್ಕೆ ರೆಡಿ ಆಗಿದ್ದಾನೆ. ಇದರಿಂದ ಹೊಸ ತಿರುವುದು ಎದುರಾಗುವ ಸೂಚನೆ ಸಿಕ್ಕಿದೆ.

ಇದನ್ನೂ ಓದಿ: ‘ಕರ್ಣ’ ಧಾರಾವಾಹಿ: ಅಭಿಮಾನಿಗಳ ಎದುರು ವಿಶೇಷ ಕೋರಿಕೆ ಇಟ್ಟ ನಿತ್ಯಾ-ನಿಧಿ

ಕಲರ್ಸ್ ಕನ್ನಡದಲ್ಲಿ ‘ನಂದ ಗೋಕುಲ’ ಧಾರಾವಾಹಿ ಪ್ರಸಾರ ಆಗುತ್ತಿದೆ. ಈ ಧಾರಾವಾಹಿ ಒಳ್ಳೆಯ ಟಿಆರ್​ಪಿ ಪಡೆದುಕೊಳ್ಳುತ್ತಿದೆ. ಈಗ ಮದುವೆ ಕಾರಣಕ್ಕೆ ಧಾರಾವಾಹಿ ಮತ್ತಷ್ಟು ಉತ್ತಮ ಟಿಆರ್​ಪಿ ಪಡೆದುಕೊಳ್ಳುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.