ಧಾರಾವಾಹಿ: ಲಕ್ಷಣ
ಪ್ರಸಾರ: ಕಲರ್ಸ್ ಕನ್ನಡ
ಸಮಯ: ರಾತ್ರಿ 8.30
ನಿರ್ದೇಶನ: ಶಿವರಾಮ್ ಮಾಗಡಿ
ಹಿಂದಿನ ಎಪಿಸೋಡ್ನಲ್ಲಿ ಏನಾಗಿತ್ತು?
ಪಾತ್ರವರ್ಗ: ಜಗನ್.ಸಿ, ವಿಜಯಲಕ್ಷ್ಮೀ , ಸುಕೃತ ನಾಗ್ ಹಾಗೂ ಇತರರು
ಚಂದ್ರಶೇಖರ್ ನೆಮ್ಮದಿ ಕೆಡಿಸುವ ಉದ್ದೇಶದಿಂದ ಭಾರ್ಗವಿಯು ಮೌರ್ಯನನ್ನು ಜೈಲಿಂದ ಹೊರಬರುವಂತೆ ಮಾಡಿದ್ದಾಳೆ. ಆತ ಜೈಲಿನಿಂದ ತಪ್ಪಿಸಿಕೊಂಡ ಕ್ಷಣದಿಂದ ಚಂದ್ರಶೇಖರ್‌ಗೆ ಮಗಳ ಪ್ರಾಣಕ್ಕೆ ಕುತ್ತು ಬರುತ್ತೋ ಎನ್ನುವ ಭಯ ಶುರುವಾಗಿದೆ.
ಚಂದ್ರಶೇಖರ್ ಮನೆಯವರಿಗೆ ಪ್ರತಿಕ್ಷಣವೂ ಭಯ
ನೇರವಾಗಿ ಚಂದ್ರಶೇಖರ್ ಅಪಹರಣ ಮಾಡಿಸಿದ್ದಾಳೆ ಭಾರ್ಗವಿ. ಮೌರ್ಯ ತಪ್ಪಿಸಿಕೊಂಡಾಗಿನಿಂದ ಭೂಪತಿ ಮನೆಯವರು ಹಾಗೂ ಚಂದ್ರಶೇಖರ್ ಮನೆಯವರಿಗೆ ಪ್ರತಿಕ್ಷಣವೂ ಭಯದಿಂದ ಬದುಕುವಂತೆ ಮಾಡುತ್ತಿದೆ. ಮಗಳ ಪ್ರಾಣಕ್ಕೆ ಮೌರ್ಯನಿಂದ ಅಪಾಯ ತಪ್ಪಿದ್ದಲ್ಲ ಎಂದು ತಿಳಿದ ಚಂದ್ರಶೇಖರ್ ನೇರವಾಗಿ ಭೂಪತಿಯ ಮನೆಗೆ ಪೋಲಿಸರನ್ನು ಪ್ರೊಟೆಕ್ಷನ್ ಉದ್ದೇಶದಿಂದ ಕರೆದುಕೊಂಡು ಬರುತ್ತಾರೆ. ಆದರೆ ಇದು ಭೂಪತಿಗೆ ಮಾತ್ರ ಹಿಡಿಸಲಿಲ್ಲ.
ನೀವು ನಮ್ಮ ಮನೆಯ ವಿಷಯಕ್ಕೆ ಮೂಗು ತುರಿಸುವ ಅವಶ್ಯಕತೆ ಇಲ್ಲ. ನಕ್ಷತ್ರಳನ್ನು ಹೇಗೆ ರಕ್ಷಣೆ ಮಾಡಬೇಕೆಂಬುದು ನಮಗೆ ಗೊತ್ತು. ನೀವು ನಿಮ್ಮ ಮನೆಯಲ್ಲಿ ಸುರಕ್ಷಿತವಾಗಿರಿ ಎಂದು ಭೂಪತಿ ಹೇಳುತ್ತಾನೆ. ಆದರೂ ಇನ್‌ಸ್ಪೆಕ್ಟರ್ ಭೂಪತಿಯನ್ನು ಕನ್ವೆನ್ಸ್ ಮಾಡಿ ಪೋಲಿಸ್ ಪ್ರೊಟೆಕ್ಷನ್ ಈಗ ಅವಶ್ಯಕತೆ ಇದೆ ಎಂದು ಹೇಳಿ ಪ್ರೊಟೆಕ್ಷನ್ ಕೊಡುತ್ತಾರೆ. ಚಂದ್ರಶೇಖರ್ ಭೂಪತಿಯ ಮನೆಯಿಂದ ತನ್ನ ಮನೆಗೆ ವಾಪಸ್ ಬಂದರೂ ಅವರಿಗೆ ಮಗಳದ್ದೇ ಚಿಂತೆ. ನಕ್ಷತ್ರಳ ಪ್ರಾಣಕ್ಕೆ ಮೌರ್ಯ ತೊಂದರೆ ಕೊಡಬಹುದು ಎಂದು ಅದೇ ಯೋಚನೆಯಲ್ಲಿ ಪ್ರತಿಕ್ಷಣ ಒದ್ದಾಡುವಂತಾಗಿದೆ ಚಂದ್ರಶೇಖರ್ ಪರಿಸ್ಥಿತಿ.
ಇದನ್ನು ಓದಿ:ಜೈಲಿಂದ ಪರಾರಿಯಾಗಿದ್ದಾನೆ ಮೌರ್ಯ, ಚಂದ್ರಶೇಖರ್ ನಕ್ಷತ್ರಗೆ ಮನದಲ್ಲಿ ಶುರುವಾಗಿದೆ ಭಯ
ಮಗಳ ಬಗ್ಗೆ ಯೋಚನೆ ಮಾಡುತ್ತಾ ನಿಂತಿದ್ದ ಸಿ.ಎಸ್‌ಗೆ ಮೌರ್ಯ ಕಾಲ್ ಮಾಡಿ ಮಗಳಿಗೆ ಚೆನ್ನಾಗಿ ಪೋಲಿಸ್ ಸೆಕ್ಯುರಿಟಿ ಅರೆಂಜ್ ಮಾಡಿದ್ದೀಯಾ ಅಲ್ವ. ಇದೇ ರೀತಿ ಪ್ರತಿಕ್ಷಣ ಭಯ ಪಡಬೇಕು ನೀನು. ಈಗಲೇ ತಿಥಿ ಕಾರ್ಡ್ ರೆಡಿ ಮಾಡಿ ಇಡು. ಈ ಸಲ ನಿನ್ನ ಮಗಳ ಪ್ರಾಣವನ್ನು ತೆಗೆದೇ ತೀರುತ್ತೇನೆ ಅಂತ ಚಾಲೆಂಜ್ ಮಾಡುತ್ತಾನೆ. ಇದರಿಂದ ಭಯಗೊಂಡ ಸಿ.ಎಸ್ ಆರತಿ ನಕ್ಷತ್ರಳಿಗೆ ಕಾಲ್ ಮಾಡಿ ಎಚ್ಚರಿಕೆಯಿಂದ ಇರುವಂತೆ ಹೇಳುತ್ತಾರೆ.
ನಿನ್ನ ಅಪ್ಪ ನಿನ್ನ ಬಗ್ಗೆ ಚಿಂತೆ ಮಾಡುತ್ತಾ ಊಟ ನಿದ್ದೆ ಮಾಡುತ್ತಿಲ್ಲ, ನೀನೆ ಏನಾದರೂ ತಿನ್ನುವಂತೆ ಹೇಳು ನಕ್ಷತ್ರ ಎಂದು ಆರತಿ ಕೇಳಿಕೊಳ್ಳುತ್ತಾಳೆ. ಹಾಗೇ ನಕ್ಷತ್ರ ಆರೋಗ್ಯದ ಕಡೆ ಗಮನವಹಿಸುವಂತೆ ಸಿ.ಎಸ್‌ಗೆ ಹೇಳುತ್ತಾಳೆ. ಇದಾದ ಬಳಿಕ ಭಾರ್ಗವಿಯ ಬಳಿ ಹಾಲು ಬಿಸಿ ಮಾಡಿ ಅದಕ್ಕೆ ನಿದ್ದೆ ಮಾತ್ರೆ ಹಾಕಿಕೊಂಡು ಬರುವಂತೆ ಹೇಳಿ ಅದನ್ನು ಚಂದ್ರಶೇಖರ್‌ಗೆ ಕುಡಿಸಿ ಚಿಂತೆ ಬಿಟ್ಟು ಮಲಗುವಂತೆ ಆರತಿ ಹೇಳುತ್ತಾಳೆ.
ಇದಾದ ಮಧ್ಯರಾತ್ರಿ ನಕ್ಷತ್ರಳಿಗೆ ಸಿ.ಎಸ್ ಫೋನ್‌ನಿಂದ ವಿಡಿಯೋ ಕಾಲ್ ಬರುತ್ತೆ. ತಂದೆ ಯಾಕೆ ಫೋನ್ ಮಾಡಿರಬಹುದು ಎಂದು ನಕ್ಷತ್ರ ನೋಡುವಾಗ ಆ ಕಡೆ ಸಿ.ಎಸ್‌ನ್ನು ಕೈ ಕಾಲು ಕಟ್ಟಿ ಕಾರ್ ಡಿಕ್ಕಿಲೀ ಮಲಗಿಸಿ ಕಿಡ್ನಾಪ್ ಮಾಡಲಾಗಿತ್ತು. ಇದು ಪಕ್ಕಾ ಮೌರ್ಯನ ಕೆಲಸ ಎನ್ನುವಂತಹದ್ದು ಭೂಪತಿ ಮತ್ತು ನಕ್ಷತ್ರಳಿಗೆ ಗೊತ್ತಾಗುತ್ತದೆ. ಗಂಡ ಕಾಣಿಸುತ್ತಿಲ್ಲ ಎಂದು ಮನೆ ಪೂರ್ತಿ ಹುಡುಕುವಾಗ ನಕ್ಷತ್ರ ಆರತಿಗೆ ಕಾಲ್ ಮಾಡಿ ಸಿ.ಎಸ್ ಕಿಡ್ಯಾಪ್ ಆಗಿರುವ ವಿಷಯ ತಿಳಿಸಿ ಸಮಧಾನ ಮಾಡುತ್ತಾಳೆ.
ಮನೆಯ ಸಿ.ಸಿ ಟಿವಿ ಫುಟೇಜ್ ಚೆಕ್ ಮಾಡುವಂತೆ ಭೂಪತಿ ಆರತಿಗೆ ಹೇಳುತ್ತಾನೆ. ಆದರೆ ಆರತಿಗೆ ಯಾವ ಪ್ರೂಫ್ ಕೂಡಾ ಸಿಕ್ಕಿರುವುದಿಲ್ಲ. ತುಂಬಾ ಪ್ಲಾನ್ ಮಾಡಿ ಕಿಡ್ನಾಪ್ ಮಾಡಿದ್ದಾರೆ ಎಂದು ಗೊತ್ತಾಗುತ್ತದೆ. ಎಲ್ಲರೂ ಇದು ಮೌರ್ಯನ ಕೆಲಸ ಅಂತ ಅಂದುಕೊಳ್ಳುವಾಗ ಭಾರ್ಗವಿ ಮನಸಿನಲ್ಲೇ ನಗುತ್ತಾ ಇಷ್ಟು ದಿನ ನಿಮ್ಮ ಕಣ್ಣ ಮುಂದೆಯೇ ಇಷ್ಟೆಲ್ಲ ಮಾಡಿದವಳಿಗೆ ಸಿಸಿ ಟಿವಿ ಕಣ್ಣು ತಪ್ಪಿಸಿ ಚಂದ್ರಶೇಖರ್ ಕಿಡ್ನಾಪ್ ಮಾಡುವುದು ದೊಡ್ಡ ವಿಷಯನಾ ಎಂದು ಅಂದುಕೊಳ್ಳುತ್ತಾಳೆ. ಅಸಲಿಗೆ ಈ ಕಿಡ್ನಾಪ್ ಪ್ಲಾನ್ ಭಾರ್ಗವಿಯದ್ದು, ದೂರು ಮಾತ್ರ ಮೌರ್ಯನ ಮೇಲೆ. ಮೌರ್ಯನನ್ನು ದಾಳವಾಗಿ ಬಳಸಿಕೊಂಡು ಬಹಳ ಚುರುಕುತನದಿಂದ ತನ್ನ ಕಾರ್ಯ ಸಾಧಿಸಿಕೊಳ್ಳುತ್ತಿದ್ದಾಳೆ ಭಾರ್ಗವಿ. ಸಿ.ಎಸ್ ಕಿಡ್ನಾಪ್ ಮಾಡಿಸಿ ಅವರ ಪ್ರಾಣಕ್ಕೆ ಏನಾದರೂ ತೊಂದರೆ ಮಾಡುತ್ತಾಳ ಎಂಬುದನ್ನು ಮುಂದೆ ನೋಡಬೇಕು.
ಮಧುಶ್ರೀ ಅಂಚನ್
ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:53 am, Fri, 18 November 22