ಝೇಂಡೆಗೆ ವಿಲನ್ ಆದ ಆರಾಧನಾ; ‘ಜೊತೆ ಜೊತೆಯಲಿ’ ಧಾರಾವಾಹಿಗೆ ಟ್ವಿಸ್ಟ್

ಅನು ಮನೆಗೆ ಸಂಜು ತೆರಳಿ ತುಂಬಾ ಸಮಯವಾಗಿದೆ. ಆತ ಮರಳಿ ಬರುತ್ತಿಲ್ಲ. ಇದನ್ನು ನೋಡಿ ಝೇಂಡೆಗೆ ಟೆನ್ಷನ್ ಶುರುವಾಗಿದೆ. ಆತ ಅನು ಕಡೆ ವಾಲಿದರೆ ಎನ್ನುವ ಭಯ ಶುರುವಾಗಿದೆ. ಆತನನ್ನು ಹೇಗಾದರೂ ಮಾಡಿ ತನ್ನ ಕಡೆ ಸೆಳೆದುಕೊಳ್ಳಬೇಕು ಎನ್ನುವ ತುಡಿತದಲ್ಲಿ ಆತ ಇದ್ದಾನೆ.

ಝೇಂಡೆಗೆ ವಿಲನ್ ಆದ ಆರಾಧನಾ; ‘ಜೊತೆ ಜೊತೆಯಲಿ’ ಧಾರಾವಾಹಿಗೆ ಟ್ವಿಸ್ಟ್
ಆರಾಧನಾ-ಝೇಂಡೆ
Follow us
TV9 Web
| Updated By: ಮದನ್​ ಕುಮಾರ್​

Updated on: Nov 19, 2022 | 7:30 AM

ಧಾರಾವಾಹಿ: ಜೊತೆ ಜೊತೆಯಲಿ

ವಾಹಿನಿ: ಜೀ ಕನ್ನಡ

ನಿರ್ದೇಶನ: ಆರೂರು ಜಗದೀಶ

ಇದನ್ನೂ ಓದಿ
Image
ಉರಿಯುತ್ತಿರುವ ರತ್ನಮಾಲಾ ಚಿತೆ ಎದುರು ಹೊಸ ಪ್ರತಿಜ್ಞೆ ಮಾಡಿದ ವರು; ಹರ್ಷ-ಭುವಿಗೆ ಇನ್ನಿದೆ ಕಷ್ಟ
Image
ಹರ್ಷ-ಭುವಿನ ಬೇರೆ ಮಾಡೋಕೆ ಮಾಸ್ಟರ್​ ಪ್ಲ್ಯಾನ್ ಮಾಡಿದ ವರುಧಿನಿ
Image
ರತ್ನಮಾಲಾ ಅಂತ್ಯಸಂಸ್ಕಾರ: ಕುಸಿದ ಹೋದ ಹರ್ಷ; ವಿಲ್ ವಿಚಾರ ಹೇಳಲು ಮುಂದಾದ ವರುಧಿನಿ
Image
ರತ್ನಮಾಲಾ ಅಂತ್ಯಸಂಸ್ಕಾರದಲ್ಲಿ ಸಾನಿಯಾಗೆ ಆಸ್ತಿ ಚಿಂತೆ; ಜೋರಾಗಿ ನಕ್ಕೇ ಬಿಟ್ಟಳು ವರುಧಿನಿ

ಕಲಾವಿದರು: ಹರೀಶ್ ರಾಜ್, ಮೇಘಾ ಶೆಟ್ಟಿ, ಮಾನಸ ಮನೋಹರ್ ಮೊದಲಾದವರು

ಸಮಯ: ರಾತ್ರಿ: 9.30

ಹಿಂದಿನ ಎಪಿಸೋಡ್​ನಲ್ಲಿ ಏನಾಗಿತ್ತು?

ಝೇಂಡೆಗೆ ಸಂಜು ಯಾರು, ಆತನ ಹಿನ್ನಲೆ ಏನು ಎಂಬುದು ಗೊತ್ತಾಗಿದೆ. ಉಪಾಯದಿಂದ ಆತ ಅಸಲಿ ವಿಚಾರ ತಿಳಿದುಕೊಂಡಿದ್ದಾನೆ. ಸಂಜುನೇ ಆರ್ಯವರ್ಧನ್ ಎಂಬ ವಿಚಾರವನ್ನು ಪ್ರಿಯಾ ಬಳಿ ರಿವೀಲ್ ಮಾಡಿಸಿದ್ದಾನೆ. ಇಡೀ ವರ್ಧನ್ ಆಸ್ತಿಯನ್ನು ತನ್ನ ಹೆಸರಿಗೆ ಬರೆಸಿಕೊಳ್ಳಬೇಕು ಎನ್ನುವ ಕನಸು ಕಂಡಿದ್ದಾನೆ ಆತ. ಇದಕ್ಕೆ ಆರ್ಯನನ್ನು ಏಣಿಯಾಗಿ ಬಳಸಿಕೊಳ್ಳಬೇಕು ಎಂಬ ಆಲೋಚನೆ ಇದೆ.

ವಠಾರದಲ್ಲಿ ಬೆರೆತು ಹೋದ ಸಂಜು

ಸಂಜು ವಠಾರಕ್ಕೆ ಬಂದಿದ್ದ. ಅಲ್ಲಿ ಅನು ಗೆಳತಿಯ ಎಂಗೇಜ್​ಮೆಂಟ್ ಸಿದ್ಧತೆಗಳು ನಡೆಯುತ್ತಿದ್ದವು. ಈ ಸಂಭ್ರಮದಲ್ಲಿ ಸಂಜು ಕೂಡ ಭಾಗಿ ಆಗಿದ್ದಾನೆ. ಆತ ಸಂತೋಷದಿಂದ ಅವರ ಜತೆ ಸಮಯ ಕಳೆದಿದ್ದಾನೆ. ಮನೆಯವರೆಲ್ಲರೂ ಸೇರಿ ಅಂತ್ಯಾಕ್ಷರಿ ಹಾಡುತ್ತಿದ್ದರು. ಅದರಲ್ಲಿ ಸಂಜು ಕೂಡ ಪಾಲ್ಗೊಂಡು ಹಾಡಿದ್ದಾನೆ. ಇದು ಅನುಗೆ ಖುಷಿ ನೀಡಿದೆ. ಅನು ತಂದೆ ಸುಬ್ಬು ಅಂತೂ ಸಂಜುನ ಮನೆ ಮಗನಂತೆ ನೋಡಿಕೊಳ್ಳುತ್ತಿದ್ದಾನೆ.

ಸಂಜು ವಠಾರದಲ್ಲೇ ಉಳಿದುಕೊಳ್ಳುವ ಪ್ಲ್ಯಾನ್​ನಲ್ಲಿ ಇದ್ದಾನೆ. ಈ ವಿಚಾರ ಅನುಗೆ ಇಷ್ಟವಾಗಿಲ್ಲ. ‘ನಿಮ್ಮ ಪತ್ನಿ ಮನೆಯಲ್ಲಿ ನಿಮಗೋಸ್ಕರ ಕಾಯುತ್ತಿದ್ದಾರೆ. ನೀವು ಇಲ್ಲಿ ಉಳಿದುಕೊಳ್ಳುವುದು ತಪ್ಪು’ ಎಂದಿದ್ದಾಳೆ ಅನು. ಇದಕ್ಕೆ ಸಂಜು ಪ್ರತ್ಯುತ್ತರ ನೀಡಿದ್ದಾನೆ. ‘ಇದು ತಪ್ಪು ಎಂದೇ ಇಟ್ಟುಕೊಳ್ಳೋಣ. ನಾನು ಹೇಳುವುದನ್ನು ನೀವು ಒಪ್ಪುತ್ತಿಲ್ಲ. ಆದಿನ ನದಿಗೆ ನಿಮ್ಮನ್ನು ಯಾರೋ ಬೇಕು ಎಂದೇ ತಳ್ಳಿದರು. ಅದು ನಿಮಗೂ ಗೊತ್ತು. ಆದರೂ ಒಪ್ಪಿಕೊಳ್ಳುತ್ತಿಲ್ಲ. ಆ ಝೇಂಡೆಯಿಂದ ನಿಮಗೆ ಅಪಾಯ ಇದೆ. ನಾನು ಹೇಳುತ್ತಿರುವುದು ನಿಜ’ ಎಂದು ಕಡ್ಡಿ ಮುರಿದಂತೆ ಹೇಳಿದ್ದಾನೆ ಸಂಜು.

ಝೇಂಡೆಗೆ ಟೆನ್ಷನ್

ಅನು ಮನೆಗೆ ಸಂಜು ತೆರಳಿ ತುಂಬಾ ಸಮಯವಾಗಿದೆ. ಆತ ಮರಳಿ ಬರುತ್ತಿಲ್ಲ. ಇದನ್ನು ನೋಡಿ ಝೇಂಡೆಗೆ ಟೆನ್ಷನ್ ಶುರುವಾಗಿದೆ. ಆತ ಅನು ಕಡೆ ವಾಲಿದರೆ ಎನ್ನುವ ಭಯ ಶುರುವಾಗಿದೆ. ಆತನನ್ನು ಹೇಗಾದರೂ ಮಾಡಿ ತನ್ನ ಕಡೆ ಸೆಳೆದುಕೊಳ್ಳಬೇಕು ಎನ್ನುವ ತುಡಿತದಲ್ಲಿ ಆತ ಇದ್ದಾನೆ. ಆದರೆ, ಝೇಂಡೆ ವಿಲನ್ ಎಂದು ಸಂಜು ಭಾವಿಸಿ ಆಗಿದೆ. ಹೀಗಾಗಿ, ಆತನ ಕಡೆ ಸಂಜು ಗಮನಹರಿಸುವುದು ಸದ್ಯಕ್ಕಂತೂ ಸಾಧ್ಯವಿಲ್ಲ.

ಆರಾಧನಾ ಪ್ಲ್ಯಾನ್

ಆರಾಧನಾಗೆ ರಾಜ ನಂದಿನಿ ವಿಲಾಸದವರ ಮೇಲಿದ್ದ ನಂಬಿಕೆ ಹೋಗಿದೆ. ತಾನು ಹೇಗಾದರೂ ಮಾಡಿ ವಿಶ್ವನನ್ನು (ಸಂಜು) ಮನೆಗೆ ಕರೆದುಕೊಂಡು ಹೋಗಬೇಕು ಎನ್ನುವ ಆಲೋಚನೆಯಲ್ಲಿ ಇದ್ದಾಳೆ. ಆದರೆ ಅದು ಆಗುತ್ತಿಲ್ಲ. ಆತ ಸರಿಯಾಗಿ ಟ್ರೀಟ್​ಮೆಂಟ್ ಕೂಡ ಪಡೆಯುತ್ತಿಲ್ಲ ಎನ್ನುವ ವಿಚಾರ ಗೊತ್ತಾಗಿ ಸಾಕಷ್ಟು ಬೇಸರ ಮಾಡಿಕೊಂಡಿದ್ದಾಳೆ. ಝೇಂಡೆಗೆ ಆರಾಧನಾ ವಿಲನ್ ಆಗಬಹುದು. ಸಂಜುನ ಕರೆದುಕೊಂಡು ಹೋಗಬೇಕು ಎನ್ನುವ ಪ್ಲ್ಯಾನ್​ನಿಂದ ಝೇಂಡೆಗೆ ಹೆಚ್ಚು ನಷ್ಟ ಉಂಟಾಗಲಿದೆ.

ಸಂಜುನೇ ಆರ್ಯವರ್ಧನ್. ಆತ ಜತೆಗೆ ಇದ್ದರೆ ವರ್ಧನ್ ಕಂಪನಿಯ ಎಲ್ಲಾ ಪ್ರಾಪರ್ಟಿಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಬಹುದು ಎಂಬ ಆಲೋಚನೆಯಲ್ಲಿ ಝೇಂಡೆ ಇದ್ದಾನೆ. ಒಂದೊಮ್ಮೆ ಆರಾಧನಾ ಸಂಜುನ ಕರೆದುಕೊಂಡು ಹೋದರೆ ಝೇಂಡೆಗೆ ನಷ್ಟ. ಸಂಜುನ ಕರೆದುಕೊಂಡು ಹೋಗಲು ಆರಾಧನಾ ಪ್ಲ್ಯಾನ್ ಮಾಡಿರುವ ವಿಚಾರ ಗೊತ್ತಾದರೆ ಅದನ್ನು ತಡೆಯಲು ಝೇಂಡೆ ಮತ್ತೊಂದು ಪ್ಲ್ಯಾನ್ ರೂಪಿಸಲೂಬಹುದು.

ಅವನು ನನ್ನ ಅಣ್ಣ ಎಂದ ಹರ್ಷ

ಹರ್ಷನಿಗೆ ಸಂಜು ಮೇಲೆ ವಿಶೇಷ ಭಾವನೆ ಇದೆ. ಆತ ಅಣ್ಣನ ರೀತಿಯೇ ಅನಿಸುತ್ತಿದ್ದಾನೆ.ಸಂಜುನ ಕಳುಹಿಸಿಕೊಡಲು ಈತನಿಗೆ ಮನಸ್ಸು ಬರುತ್ತಿಲ್ಲ. ಈ ವಿಚಾರದಲ್ಲಿ ಹರ್ಷನ ಪತ್ನಿ ಮಾನ್ಸಿಗೆ ಬೇಸರ ಇದೆ. ಮತ್ತೊಂದು ಕಡೆ ಸತ್ಯ ಹೇಳಲಾಗದೆ ಸಂಜು ತಾಯಿ ಪ್ರಿಯಾ ಧರ್ಮಸಂಕಟಕ್ಕೆ ಸಿಲುಕಿದ್ದಾಳೆ.

ಶ್ರೀಲಕ್ಷ್ಮಿ ಎಚ್.