
ಭವ್ಯಾ ಗೌಡ ಅವರು ‘ಗೀತಾ’ ಧಾರಾವಾಹಿ ಮಾಡಿ ಜನಪ್ರಿಯತೆ ಪಡೆದವರು. ಆ ಬಳಿಕ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಸ್ಪರ್ಧಿಸಿ ಮತ್ತಷ್ಟು ಜನಪ್ರಿಯತೆ ಪಡೆದರು. ಈಗ ಅವರು ಜೀ ಕನ್ನಡದ ‘ಕರ್ಣ’ ಧಾರಾವಾಹಿಯಲ್ಲಿ ನಿಧಿ ಹೆಸರಿನ ಪಾತ್ರವನ್ನು ಮಾಡುತ್ತಿದ್ದಾರೆ. ಈಗ ಅವರು ಒಂದೇ ದಿನ ಎರಡು ಸಿಹಿ ಸುದ್ದಿ ನೀಡಿದ್ದಾರೆ ಎಂಬುದು ವಿಶೇಷ. ಆ ಬಗ್ಗೆ ಇಲ್ಲಿದೆ ವಿವರ.
ಭವ್ಯಾ ಗೌಡ ಅವರ ಅಭಿಮಾನಿ ಬಳಗ ದೊಡ್ಡದಿದೆ. ಅವರು ಕಿರುತೆರೆ ಲೋಕದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ನಿಧಿ ಆಗಿ ಅವರು ಎಲ್ಲರ ಗಮನ ಸೆಳೆಯುತ್ತಾ ಇದ್ದಾರೆ. ಧಾರಾವಾಹಿ ಒಳ್ಳೆಯ ಟಿಆರ್ಪಿ ಪಡೆದುಕೊಳ್ಳುತ್ತಿದೆ. ಭವ್ಯಾ ಗೌಡ ಅವರು ಜನಪ್ರಿಯತೆ ಜೊತೆಗೆ ಒಂದಷ್ಟು ಹಣ ಕೂಡ ಮಾಡಿಕೊಂಡಿದ್ದಾರೆ. ಹೀಗಾಗಿ, ಭವ್ಯಾ ಗೌಡ ಅವರು ಒಂದಷ್ಟು ಖುಷಿ ವಿಚಾರ ಹಂಚಿಕೊಂಡಿದ್ದಾರೆ. ಹೊಸ ಕಾರು ಖರೀದಿ ಮಾಡಿದ್ದಾರೆ ಜೊತೆಗೆ ಹೊಸ ಉದ್ಯಮ ಆರಂಭಿಸಿದ್ದಾರೆ.
ಭವ್ಯಾ ಗೌಡ ಅವರಿಗೆ ಮೊದಲಿನಿಂದಲೂ ಒಂದು ಹೊಸ ಕಾರು ಖರೀದಿ ಮಾಡಬೇಕು ಎಂಬ ಆಸೆ ಇತ್ತು. ಅದೇ ರೀತಿ ಅವರು ಹೊಸ ಕಾರನ್ನು ಖರೀದಿ ಮಾಡಿದ್ದಾರೆ. ಈ ವಿಡಿಯೋನ ಅವರು ಹಂಚಿಕೊಂಡಿದ್ದಾರೆ. ಇದು ಗಮನ ಸೆಳೆದಿದೆ. ಸ್ಕೋಡಾ ಕಾರನ್ನು ಅವರು ಖರೀದಿಸಿದ್ದಾರೆ. ಈ ಸಂದರ್ಭದಲ್ಲಿ ಅವರ ಕುಟುಂಬದವರು ಕೂಡ ಜೊತೆಯಲ್ಲಿ ಇದ್ದರು. ಅವರಿಗೆ ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ.
‘ನಾವು ಒಂದು ಬಿಸ್ನೆಸ್ ಶುರು ಮಾಡುತ್ತಿದ್ದೇವೆ. ನಮಗೇನು ಗೊತ್ತಿದೆ ಎಂಬುದುರ ಮೇಲೆ ಉದ್ಯಮ ಆರಂಭಿಸುತ್ತಿದ್ದೇವೆ. ಹೊಸ ಉದ್ಯಮಕ್ಕೆ ನಿಮ್ಮ ಬೆಂಬಲ ನೀಡಿ. ಎಲ್ಲರೂ ಮಾಡ್ತಿರೋದು ಬೇಡ, ಹೊಸದಾಗಿ ಮಾಡೋಣ ಎಂಬುದಿತ್ತು’ ಎಂದಿದ್ದಾರೆ ಭವ್ಯಾ ಹಾಗೂ ಅವರ ಸಹೋದರಿ ದಿವ್ಯಾ.
ಇದನ್ನೂ ಓದಿ: ರುಕ್ಮಿಣಿ ಕೈಯಿಂದ ‘ಜನಪ್ರಿಯ ನಟಿ’ ಅವಾರ್ಡ್ ಪಡೆದ ‘ಕರ್ಣ’ ನಟಿ ಭವ್ಯಾ ಗೌಡ
‘ಹೌಸ್ ಆಫ್ ಫ್ವವರ್ಸ್’ ಎಂಬುದು ಅವರ ಬಿಸ್ನೆಸ್ ಹೆಸರು. ಇದು ಹೂವಿನ ಬೊಕೆ ಬಿಸ್ನೆಸ್ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಅವರ ಕಡೆಯಿಂದ ಮತ್ತಷ್ಟು ಸ್ಪಷ್ಟನೆ ಸಿಗಬೇಕಿದೆ. ಈ ವಿಚಾರ ಕೇಳಿ ಫ್ಯಾನ್ಸ್ ತುಂಬಾನೇ ಖುಷಿಪಟ್ಟಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.