ಬಿಗ್ ಬಾಸ್ ಫಾರ್ಮ್ಯಾಟ್ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಆಟ ಯಾವಾಗ ಹೇಗೆ ಬೇಕಾದರೂ ತಿರುಗಬಹುದು. ಆಟ ಇದೇ ರೀತಿ ಇರುತ್ತದೆ ಎಂದು ಊಹೀಸೋದು ಕಷ್ಟ. ಇದು ಆಡುವ ಆಟಗಾರರಿಗೆ ಹಾಗೂ ವೀಕ್ಷಕರಿಗೆ ಗೊತ್ತಿರುತ್ತದೆ. ಆದಾಗ್ಯೂ ಕೆಲವು ಸಂದರ್ಭದಲ್ಲಿ ಸ್ಪರ್ಧಿಗಳು ಬಿಗ್ ಬಾಸ್ ಬಗ್ಗೆ ಅಸಮಾಧಾನ ಹೊರಹಾಕಿದ ಉದಾಹರಣೆ ಇದೆ. ಈಗ ಭವ್ಯಾ ಗೌಡ ಅವರು ಇದಕ್ಕೆ ಹೊಸ ಸೇರ್ಪಡೆ.
ಈ ಮೊದಲು ಬಿಗ್ ಬಾಸ್ಗೆ ಬಂದ ಅನೇಕ ಸ್ಪರ್ಧಿಗಳು ಆಟದ ವಿರುದ್ಧ ಅಸಮಾಧಾನ ಹೊರಹಾಕಿದ್ದು ಇದೆ. ಆರ್ಯವರ್ಧನ್ ಗುರೂಜಿ, ಈ ಸೀಸನ್ನ ಲಾಯರ್ ಜಗದೀಶ್ ಹೀಗೆ ಅನೇಕರು ಈ ಸಾಲಿನಲ್ಲಿ ಇದ್ದಾರೆ. ಆದರೆ, ಭವ್ಯಾ ಕೂಡ ಈ ಸಾಲಿಗೆ ಸೇರಿಕೊಳ್ಳುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ.
‘ಬಿಗ್ ಬಾಸ್’ ಮಧ್ಯವಾರದ ಎಲಿಮಿನೇಷ್ನಿಂದ ಬಚಾವ್ ಆಗಲು ಸ್ಪರ್ಧಿಗಳಿಗೆ ಬಿಗ್ ಬಾಸ್ ವಿವಿಧ ಟಾಸ್ಕ್ ನೀಡಿದ್ದರು. ಗೆದ್ದ ಸ್ಪರ್ಧಿಗೆ 100 ಅಂಕ, ಎರಡನೇ ಬಂದ ಸ್ಪರ್ಧಿಗೆ 50 ಹಾಗೂ ಮೂರನೇ ಬಂದ ಸ್ಪರ್ಧಿಗೆ 25 ಅಂಕ ಸಿಕ್ಕಿತ್ತು. ಕೊನೆಯ ಟಾಸ್ಕ್‌ನಲ್ಲಿ ಬಿಗ್ ಬಾಸ್ ಒಂದು ಅವಕಾಶ ನೀಡಿದರು. ಯಾರು ಕೊನೆಯ ಟಾಸ್ಕ್ ಗೆಲ್ಲುತ್ತಾರೋ ಅವರಿಗೆ 100 ಅಂಕಗಳ ಜೊತೆ ಯಾವುದಾದರೂ ಒಂದು ಸ್ಪರ್ಧಿಯ ಅಂಕದಿಂದ ಶೇ.50 ಪಾಯಿಂಟ್ಸ್ ಕಸಿದುಕೊಳ್ಳುವ ಅವಕಾಶ ಇತ್ತು.
ಆ ಟಾಸ್ಕ್ನ ಧನರಾಜ್ ಅವರು ಗೆದ್ದರು. ಜೊತೆಗೆ ಭವ್ಯಾ ಅವರಿಂದ ಶೇ.50 ಪಾಯಿಂಟ್ಸ್ ಕಸಿದುಕೊಂಡರು. ಇದು ಭವ್ಯಾ ಅಸಮಾಧಾನಕ್ಕೆ ಕಾರಣ ಆಯಿತು. ಅವರು ಈ ಫಾರ್ಮ್ಯಾಟ್ ಬಗ್ಗೆ ತ್ರಿವಿಕ್ರಂ ಬಳಿ ಅಸಮಾಧಾನ ಹೊರಹಾಕಿದ್ದಾರೆ.
ಇದನ್ನೂ ಓದಿ: ಮತ್ತೆ ಒಂದಾದ ಮಂಜು, ಮೋಕ್ಷಿತಾ, ಗೌತಮಿ; ಇದೇನು ಹೊಸ ಡ್ರಾಮಾ?
‘ಇವರ ಫಾರ್ಮ್ಯಾಟ್ ಇಷ್ಟ ಆಗಿಲ್ಲ. ಮೈ ಕೈ ಹರಿದುಕೊಂಡು ಆಡಿದ್ದು ನಾವು, ಇನ್ಯಾರಿಗೋ ಪಾಯಿಂಟ್ಸ್ ಹೋಯಿತು. ನನನಗೆ ಪೂರ್ತಿ ಪಾಯಿಂಟ್ಸ್ ಬೇಕು. ಕನ್ಫ್ಯೂಸ್ ಮಾಡಿ ಬಿಡ್ತೀರಾ. ಆ ಮೇಲೆ ನೀವು ಕನ್ಫ್ಯೂಸ್ ಆದ್ರಿ ಅಂತೀರಾ’ ಎಂದು ಭವ್ಯಾ ಬಿಗ್ ಬಾಸ್ ವಿರುದ್ಧವೇ ಅಸಮಾಧಾನ ಹೊರಹಾಕಿದ್ದಾರೆ. ಈ ವಾರಾಂತ್ಯದಲ್ಲಿ ಸುದೀಪ್ ಈ ವಿಚಾರ ಮಾತನಾಡುವ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.