ಗಿಲ್ಲಿ ಗೆಲ್ಲಬೇಕು ಎಂದು ಪ್ರಸಾದ ಕೇಳಿದ ಫ್ಯಾನ್ಸ್; ಹೂವು ಯಾವ ಕಡೆ ಬಿತ್ತು?

ಬಿಗ್ ಬಾಸ್ ಸ್ಪರ್ಧಿ ಗಿಲ್ಲಿ ಅವರ ಅಭಿಮಾನಿ ಬಳಗ ಭಾರಿ ಪ್ರಮಾಣದಲ್ಲಿ ಬೆಳೆಯುತ್ತಿದೆ. ಹಾಸ್ಯಪ್ರಜ್ಞೆ ಹಾಗೂ ದಿಟ್ಟ ಪ್ರತಿಕ್ರಿಯೆಗಳಿಂದ ಗಮನ ಸೆಳೆದಿರುವ ಗಿಲ್ಲಿ ಕಪ್ ಗೆಲ್ಲಬೇಕೆಂದು ಅಭಿಮಾನಿಗಳು ಪ್ರಸಾದ ಕೇಳಿದ್ದಾರೆ. ಕೋಟಹಳ್ಳಿಯ ಶನಿಕ್ಷೇತ್ರದಲ್ಲಿ ಪ್ರಸಾದ ಕೇಳಿದಾಗ, ಗಿಲ್ಲಿ ಗೆಲುವಿಗೆ ಶುಭ ಸೂಚನೆಯಾಗಿ ಹೂವು ಬಿದ್ದಿದೆ.

ಗಿಲ್ಲಿ ಗೆಲ್ಲಬೇಕು ಎಂದು ಪ್ರಸಾದ ಕೇಳಿದ ಫ್ಯಾನ್ಸ್; ಹೂವು ಯಾವ ಕಡೆ ಬಿತ್ತು?
ಗಿಲ್ಲಿ ನಟ

Updated on: Jan 08, 2026 | 7:27 AM

ಬಿಗ್ ಬಾಸ್ (Bigg Boss) ಮನೆಯಲ್ಲಿರೋ ಗಿಲ್ಲಿ ನಟನ ಅಭಿಮಾನಿ ವರ್ಗ ತುಂಬಾನೇ ಹಿರಿದಾಗುತ್ತಿದೆ. ಎಲ್ಲಾ ವರ್ಗದ ಜನರು ಅವರಿಗೆ ಅಭಿಮಾನಿಗಳು. ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಗಿಲ್ಲಿಗೆ ಬೆಂಬಲ ಕೊಡುತ್ತಿದ್ದಾರೆ. ಅವರು ಕಪ್ ಗೆಲ್ಲಬೇಕು ಎಂಬುದು ಅಭಿಮಾನಿಗಳ ಕೋರಿಕೆ. ಈಗ ಈ ವಿಷಯದಲ್ಲಿ ಪ್ರಸಾದ ಕೇಳಲಾಗಿದೆ. ಹೂವು ಯಾವ ಕಡೆ ಬಿತ್ತು, ದೇವರ ಸೂಚನೆ ಏನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಗಿಲ್ಲಿ ನಟ ಅವರು ಹಾಸ್ಯ ಶೋಗಳ ಮೂಲಕ ಗಮನ ಸೆಳೆದವರು. ಕೆಲವು ಸಿನಿಮಾಗಳಲ್ಲೂ ನಟಿಸಿದ್ದಾರೆ. ಪ್ರಾಪರ್ಟಿ ಕಾಮಿಡಿ ಮೂಲಕ ಎಲ್ಲರ ನಗಿಸುತ್ತಿದ್ದ ಅವರು ಬಿಗ್ ಬಾಸ್​​ಗೆ ಬಂದು ಬೇರೆಯದೇ ರೀತಿಯಲ್ಲಿ ಜನಪ್ರಿಯತೆ ಪಡೆದರು. ಇನ್​​ಸ್ಟಾಗ್ರಾಮ್​​​ನಲ್ಲಿ ಕೇವಲ ಒಂದೂವರೆ ಲಕ್ಷ ಇದ್ದ ಅವರ ಹಿಂಬಾಲಕರ ಸಂಖ್ಯೆ ಈಗ ಮಿಲಿಯನ್ ಸಮೀಪಿಸುತ್ತಿದೆ. ಅವರ ಅಭಿಮಾನಿ ಬಳಗ ಹಿರಿದಾಗುತ್ತಿದೆ ಎಂಬುದಕ್ಕೆ ಇದು ಒಳ್ಳೆಯ ಉದಾಹರಣೆ. ಈಗ ಗಿಲ್ಲಿ ಗೆಲ್ಲಲಿ ಎಂದು ಪ್ರಸಾದ ಕೇಳಲಾಗಿದೆ.

ಇದನ್ನೂ ಓದಿ: ಗಿಲ್ಲಿ ಮನಸ್ಸು ಒಳ್ಳೇದು, ನಾನೇ ತಪ್ಪು ತಿಳಿದುಕೊಂಡಿದ್ದೆ; ಮರುಗಿದ ರಘು

ಕೋಟಹಳ್ಳಿಯ ಶನಿಕ್ಷೇತ್ರದಲ್ಲಿ ಅಭಿಮಾನಿಗಳು ಪ್ರಸಾದ ಕೇಳಿದ್ದಾರೆ. ‘ಗಿಲ್ಲಿ ಗೆಲ್ಲಬೇಕು ಎಂಬುದು ಅಭಿಮಾನಿಗಳ ಕೋರಿಕೆ. ಅವರು ಗೆಲ್ಲಲಿ ಎಂದು ಅಭಿಮಾನಿಗಳು ಸಾಕಷ್ಟು ಆಸೆ ಇಟ್ಟುಕೊಂಡಿದ್ದಾರೆ. ಅದನ್ನು ನಡೆಸಿಕೊಡಮ್ಮ’ ಎಂದು ಅರ್ಚಕರು ದೇವರ ಬಳಿ ಕೇಳುತ್ತಿದ್ದಂತೆ ಬಲಭಾಗದಿಂದ ಹೂವು ಬಿದ್ದಿದೆ. ಇದು ಶುಭ ಸೂಚನೆ ಎಂದು ಫ್ಯಾನ್ಸ್ ಹಿಗ್ಗುತ್ತಿದ್ದಾರೆ.


ಗಿಲ್ಲಿ ಅವರು ಹೆಚ್ಚು ಗಮನ ಸೆಳೆಯಲು ಅಶ್ವಿನಿ ಹಾಗೂ ಜಾನ್ವಿ ಕೂಡ ಕಾರಣ. ಅವರು ಸುಖಾಸುಮ್ಮನೆ ರಕ್ಷಿತಾನ ಕೆಣಕಿದರು. ಆ ಬಳಿಕ ಗಿಲ್ಲಿ ನಟ ಅವರಿಗೆ ತಿರುಗೇಟು ಕೊಟ್ಟರು. ಇದರಿಂದ ಅವರ ಹೆಸರು ಗಮನ ಸೆಳೆಯಿತು. ಏಟಿಗೆ ತಿರುಗೇಟು ಕೊಡಲು ಗಿಲ್ಲಿ ಎತ್ತಿದ ಕೈ. ಇಷ್ಟೇ ಅಲ್ಲ, ಗಿಲ್ಲಿ ಅವರು ತಮ್ಮ ಹಾಸ್ಯದ ಮೂಲಕ ಎಲ್ಲರ ಮನ ಗೆದ್ದಿದ್ದಾರೆ. ಅವರು ಗೆಲ್ಲಬೇಕು ಎಂದು ಫ್ಯಾನ್ಸ್ ಹರಕೆ ಹೊರುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.