AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಹೂವಿನ ಬಾಣದಂತೆ’ ಹುಡುಗಿಗೆ ಜೀ ಕನ್ನಡ ಅವಕಾಶ; ಟ್ರೋಲ್ ಮಾಡಿದವರಿಗೆ ನಿತ್ಯಶ್ರೀ ತಿರುಗೇಟು

ಜೀ ಕನ್ನಡ ವಾಹಿನಿಯ ‘ಕಾಮಿಡಿ ಕಿಲಾಡಿಗಳು’ ಶೋನಲ್ಲಿ ನಟಿಸುವ ಅವಕಾಶವನ್ನು ನಿತ್ಯಶ್ರೀ ಪಡೆದುಕೊಂಡರು. ಆದರೆ ಅನೇಕರು ನಿತ್ಯಶ್ರೀ ಅವರನ್ನು ಟ್ರೋಲ್ ಮಾಡಿದ್ದಾರೆ. ಅಂಥವರಿಗೆ ವಿಡಿಯೋ ಮೂಲಕ ನಿತ್ಯಶ್ರೀ ಉತ್ತರ ನೀಡಿದ್ದಾರೆ. ‘ಕಾಮಿಡಿ ಕಿಲಾಡಿಗಳು’ ಶೋನಲ್ಲಿ ಅಭಿನಯಿಸಿ ಬಂದ ಅವರಿಗೆ ಬಹಳ ಹೆಮ್ಮೆ ಇದೆ. ಆ ಕುರಿತು ಇಲ್ಲಿದೆ ವಿವರ..

‘ಹೂವಿನ ಬಾಣದಂತೆ’ ಹುಡುಗಿಗೆ ಜೀ ಕನ್ನಡ ಅವಕಾಶ; ಟ್ರೋಲ್ ಮಾಡಿದವರಿಗೆ ನಿತ್ಯಶ್ರೀ ತಿರುಗೇಟು
Nithyashree
ಮದನ್​ ಕುಮಾರ್​
|

Updated on:Jan 07, 2026 | 10:00 PM

Share

‘ಹೂವಿನ ಬಾಣದಂತೆ’ (Hoovina Baanadanthe) ಹಾಡನ್ನು ತನ್ನದೇ ರೀತಿಯಲ್ಲಿ ಹಾಡುವ ಮೂಲಕ ನಿತ್ಯಶ್ರೀ ಅವರು ರಾತ್ರೋರಾತ್ರಿ ಫೇಮಸ್ ಆಗಿದ್ದರು. ಆ ಬಳಿಕ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಫಾಲೋವರ್ಸ್ ಸಂಖ್ಯೆ ಹೆಚ್ಚಾಯಿತು. ಅಲ್ಲದೇ ಹೊಸ ಹೊಸ ಅವಕಾಶಗಳು ಕೂಡ ಬರಲು ಆರಂಭಿಸಿದವು. ಇತ್ತೀಚೆಗೆ ನಿತ್ಯಶ್ರೀ ಅವರಿಗೆ ‘ಜೀ ಕನ್ನಡ’ ವಾಹಿನಿ ಕೂಡ ಕರೆದು ಅವಕಾಶ ನೀಡಿದೆ. ‘ಕಾಮಿಡಿ ಕಿಲಾಡಿಗಳು’ (Comedy Khiladigalu) ವೇದಿಕೆಯಲ್ಲಿ ನಟಿಸುವ ಅವಕಾಶ ನಿತ್ಯಶ್ರೀ ಅವರಿಗೆ ಸಿಕ್ಕಿದೆ. ಆದರೆ ಕೆಲವರು ಟ್ರೋಲ್ ಮಾಡಿದ್ದಾರೆ. ಅಂಥವರಿಗೆ ನಿತ್ಯಶ್ರೀ (Nithyashree) ಈಗ ತಿರುಗೇಟು ನೀಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ನಿತ್ಯಶ್ರೀ ಅವರು ಈ ವಿಡಿಯೋ ಹಂಚಿಕೊಂಡಿದ್ದಾರೆ. ತಮ್ಮನ್ನು ಟ್ರೋಲ್ ಮಾಡಿದ ಮಂದಿಗೆ ಅವರು ಉತ್ತರ ಕೊಟ್ಟಿದ್ದಾರೆ. ವಿಡಿಯೋ ಮಾಡುವುದಕ್ಕೂ ಮುನ್ನ ಸ್ವಲ್ಪ ಯೋಚಿಸಿ ಎಂದು ನಿತ್ಯಶ್ರೀ ಅವರು ಹೇಳಿದ್ದಾರೆ. ಈ ವಿಡಿಯೋ ಕೆಲವೇ ಗಂಟೆಗಳಲ್ಲಿ ಮಿಲಿಯನ್​ಗಟ್ಟೆಲೆ ವೀಕ್ಷಣೆ ಕಂಡಿದೆ. ಆದರೆ ಕಮೆಂಟ್ ಆಯ್ಕೆಯನ್ನು ನಿತ್ಯಶ್ರೀ ಅವರು ಆಫ್ ಮಾಡಿದ್ದಾರೆ.

‘ಮೊನ್ನೆ ಆದ ಕಾಮಿಡಿ ಕಿಲಾಡಿಗಳು ಶೋನಲ್ಲಿ ನಾನು ಅತಿಥಿಯಾಗಿ ನಟನೆ ಮಾಡಿದ್ದೇನೆ. ಅದನ್ನು ತುಂಬಾ ಜನರು ಕೆಟ್ಟದಾಗಿ ಟ್ರೋಲ್ ಮಾಡಿದ್ದಾರೆ. ಎಲ್ಲರಿಗೂ ನಾನು ಕೇಳುವುದು ಇಷ್ಟೇ.. ಇದೇ ಅವಕಾಶ ನಿಮ್ಮ ಅಕ್ಕ ಅಥವಾ ತಂಗಿಗೆ ಸಿಕ್ಕಿದ್ದರೆ ಇದನ್ನು ಉಪಯೋಗಿಸಿಕೊಳ್ಳದೇ ಬಿಡುತ್ತಿದ್ದರಾ? ಇದನ್ನು ಕೆಟ್ಟದಾಗಿ ಟ್ರೋಲ್ ಮಾಡುತ್ತಿದ್ರಾ?’ ಎಂದು ನಿತ್ಯಶ್ರೀ ಅವರು ಪ್ರಶ್ನೆ ಮಾಡಿದ್ದಾರೆ.

‘ಹೌದು, ನಾನು ಹಾಡನ್ನು ಕೆಟ್ಟದಾಗಿ ಹಾಡಿದ್ದೇನೆ. ಅದನ್ನು ನಾನು ಅರಿತುಕೊಂಡು ಕ್ಷಮೆ ಕೂಡ ಕೇಳಿದ್ದೇನೆ. ಕ್ಷಮೆ ಕೇಳುವ ಅವಶ್ಯಕತೆ ಇಲ್ಲ ಅಂತ ಅರ್ಜುನ್ ಜನ್ಯ ಸರ್ ಕೂಡ ಹೇಳಿದ್ದಾರೆ. ಹಾಗಂತ ಅದನ್ನು ನಾನು ಸ್ಫೂರ್ತಿಯಾಗಿ ತೆಗೆದುಕೊಳ್ಳುತ್ತಿಲ್ಲ. ಕೇವಲ ನೆನಪು ಮಾಡಿದ್ದೇನೆ ಅಷ್ಟೇ. ಏನು ಪ್ರತಿಭೆ ಇದೆ ಅಂತ ಕೇಳುತ್ತೀರಲ್ಲ.. ನನ್ನ ಜೀವನದಲ್ಲಿ ಮೊದಲ ಬಾರಿಗೆ ವೇದಿಕೆ ಹತ್ತಿದ್ದು ಎಂದರೆ ಅದು ಕಾಮಿಡಿ ಕಿಲಾಡಿಗಳು’ ಎಂದು ನಿತ್ಯಶ್ರೀ ಅವರು ಹೇಳಿದ್ದಾರೆ.

‘ಮೊದಲ ಬಾರಿಗೆ ತುಂಬಾ ಜನ ಕಲಾವಿದರು, ಪ್ರೇಕ್ಷಕರು ಹಾಗೂ ಜಡ್ಜ್​ಗಳು ಇದರು. ಅವರ ಮುಂದೆ ಸ್ಟೇಜ್ ಫಿಯರ್ ಇಲ್ಲದೇ ನಾನು ನಟನೆ ಮಾಡಿದ್ದೇನೆ. ಅದನ್ನು ನಮ್ಮ ಕಡೆ ಟ್ಯಾಲೆಂಟ್ ಅಂತಾನೇ ಕರೆಯೋದು. ಏನು ಸಾಧನೆ ಮಾಡಿದ್ದೀರಿ ಅಂತ ಕೇಳುತ್ತೀರಿ. ಹೌದು, ನಾನು ಸಾಧನೆ ಮಾಡಿಲ್ಲ ನಿಜ. ಸಾಧನೆ ಮಾಡೋಕೆ ನಮ್ಮ ಕರ್ನಾಟಕದ ಜನತೆ ಒಂದು ದಾರಿ ಮಾಡಿಕೊಟ್ಟಿದ್ದಾರೆ. ಅದನ್ನು ನಾನು ಉಪಯೋಗಿಸಿಕೊಳ್ಳುತ್ತಿದ್ದೇನೆ ಅಷ್ಟೇ’ ಎಂದು ನಿತ್ಯಶ್ರೀ ಹೇಳಿದ್ದಾರೆ.

ಇದನ್ನೂ ಓದಿ: ‘ಹೂವಿನ ಬಾಣದಂತೆ’ ಹುಡುಗಿಗೆ ಸಿಗುತ್ತಿದೆ ದೊಡ್ಡ ದೊಡ್ಡ ವೇದಿಕೆ

‘ನೀವು ಮಾಡುವ ವಿಡಿಯೋ ಬಗ್ಗೆ ಒಂದೇ ಒಂದು ಸಲ ಯೋಚನೆ ಮಾಡಿ. ನೀವು ಮಾಡುವ ವಿಡಿಯೋವನ್ನು ನಮ್ಮ ಅಪ್ಪ-ಅಮ್ಮ ಏನಾದರೂ ನೋಡಿದರೆ ಅವರ ಮನಸ್ಸಿಗೆ ಎಷ್ಟು ಬೇಜಾರು ಆಗಬಹುದು ಅಂತ ಯೋಚಿಸಿ. ಆಗಲಾದರೂ ಈ ರೀತಿ ವಿಡಿಯೋ ಮಾಡೋದು ನಿಲ್ಲಿಸಿತ್ತೀರಿ’ ಎಂದಿದ್ದಾರೆ ನಿತ್ಯಶ್ರೀ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 9:46 pm, Wed, 7 January 26

ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಅಜಿತ್ ಪವಾರ್ ಅಂತ್ಯಕ್ರಿಯೆ; ಮಕ್ಕಳಿಂದ ಅಪ್ಪನ ಚಿತೆಗೆ ಅಗ್ನಿಸ್ಪರ್ಶ
ಅಜಿತ್ ಪವಾರ್ ಅಂತ್ಯಕ್ರಿಯೆ; ಮಕ್ಕಳಿಂದ ಅಪ್ಪನ ಚಿತೆಗೆ ಅಗ್ನಿಸ್ಪರ್ಶ