‘ನಿಂಗೆ ಒಂದೂ ಟಾಸ್ಕ್ ಆಡೋಕೆ ಬರಲ್ಲ’; ಸೋತ ಗಿಲ್ಲಿಯನ್ನು ಹಂಗಿಸಿದ ರಾಶಿಕಾ ಶೆಟ್ಟಿ
Bigg Boss Kannada: ರಿಯಾಲಿಟಿ ಶೋನಲ್ಲಿ ರಾಶಿಕಾ ಶೆಟ್ಟಿ, ಗಿಲ್ಲಿಗೆ ಟಾಸ್ಕ್ ಸೋಲಿಗೆ ಹಂಗಿಸಿದ್ದಾರೆ. ಇಬ್ಬರ ನಡುವೆ ಮೊದಲಿನಿಂದಲೂ ಗೆಳೆತನ ಇರಲಿಲ್ಲ. ರಕ್ಷಿತಾ ಪರ ನಿಂತ ಗಿಲ್ಲಿ, ರಾಶಿಕಾಳ ಜಗಳದಲ್ಲಿ ಮಧ್ಯ ಪ್ರವೇಶಿಸಿದರು. ಇದು ವಾಗ್ವಾದಕ್ಕೆ ತಿರುಗಿ, ರಾಶಿಕಾ ಗಿಲ್ಲಿಯನ್ನು ಹೀಯಾಳಿಸಿದರು.

ರಾಶಿಕಾ ಶೆಟ್ಟಿ (Rashika Shetty) ಹಾಗೂ ಗಿಲ್ಲಿ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆದಿದ್ದು ಕಡಿಮೆ. ಇಡೀ ಸೀಸನ್ ಅಲ್ಲಿ ಒಮ್ಮೆ ಅಥವಾ ಎರಡು ಬಾರಿ ಇಬ್ಬರೂ ಒಟ್ಟಿಗೆ ಇದ್ದರು. ಒಬ್ಬರನ್ನೊಬ್ಬರು ಬೆಂಬಲಿಸಿದ್ದೂ ಬೆರಳೆಣಿಕೆ ಬಾರಿ ಮಾತ್ರ. ಇಬ್ಬರ ಮಧ್ಯೆ ಆಗಾಗ ವೈಮನಸ್ಸು ಮೂಡುತ್ತಲೇ ಇರುತ್ತದೆ. ಈಗ ಗಿಲ್ಲಿ ನಟ ಅವರನ್ನು ರಾಶಿಕಾ ಹಂಗಿಸಿದ್ದಾರೆ. ಟಾಸ್ಕ್ ವಿಷಯವಾಗಿ ಗಿಲ್ಲಿಗೆ ಅವರು ಟಾಂಟ್ ಕೊಟ್ಟಿದ್ದಾರೆ.
ಗಿಲ್ಲಿ ನಟ ಹಾಗೂ ಧ್ರುವಂತ್ ಮಧ್ಯೆ ಟಾಸ್ಕ್ ನಡೆಯಿತು. ಈ ಟಾಸ್ಕ್ ಆಡುವ ವೇಳೆ ಗಿಲ್ಲಿ ನಿಧಾನಗತಿ ತೋರಿದರು. ಬಾಲ್ ಎಸೆಯುವ ಟಾಸ್ಕ್ ಇದಾಗಿತ್ತು. ಗಿಲ್ಲಿ ಎಲ್ಲಿಯೂ ವೇಗ ತೋರಿಲ್ಲ. ಇದು ಅವರು ಟಾಸ್ಕ್ ಸೋಲಲು ಪ್ರಮುಖ ಕಾರಣ ಆಯಿತು.ಈ ವಿಷಯವನ್ನು ಇಟ್ಟುಕೊಂಡು ರಾಶಿಕಾ ಅವರು ಗಿಲ್ಲಿಯನ್ನು ಹಂಗಿಸಿದ್ದಾರೆ. ಆದರೆ, ಇದಕ್ಕೆ ಗಿಲ್ಲಿ ಅವರು ಅಷ್ಟಾಗಿ ತಲೆಕೆಡಿಸಿಕೊಂಡಂತೆ ಕಾಣಿಸಿಲ್ಲ.
ಟಾಸ್ಕ್ ಸೋತು ತುಂಬಾ ಸಮಯ ಆಗಿತ್ತು. ಈ ವೇಳೆ ರಕ್ಷಿತಾ ಹಾಗೂ ರಾಶಿಕಾ ಮಧ್ಯೆ ಜಗಳ ನಡೆಯುತ್ತಿತ್ತು. ಇಬ್ಬರೂ ಒಂದೇ ತಂಡದಲ್ಲಿ (ರಘು ಜೊತೆ) ಆಡುವ ಪ್ರಯತ್ನದಲ್ಲಿ ಇದ್ದರು. ಆದರೆ, ರಕ್ಷಿತಾ ತಂಡ ಸೇರೋದು ರಾಶಿಕಾಗೆ ಇಷ್ಟ ಇರಲಿಲ್ಲ. ಹೀಗಾಗಿ, ಅವರು ಈ ಬಗ್ಗೆ ಅಪಸ್ವರ ತೆಗೆದರು. ಈ ಜಗಳದಲ್ಲಿ ಗಿಲ್ಲಿ ಎಂಟ್ರಿ ಆಗಿದೆ.
ಇದನ್ನೂ ಓದಿ: ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ರಕ್ಷಿತಾ ಪರವಾಗಿ ಗಿಲ್ಲಿ ನಟ ಅನೇಕ ಬಾರಿ ನಿಂತಿದ್ದು ಇದೆ. ರಾಶಿಕಾ ಹಾಗೂ ರಕ್ಷಿತಾ ಫೈಟ್ ಮಧ್ಯೆ ಗಿಲ್ಲಿ ಮಧ್ಯ ಪ್ರವೇಶಿಸಲು ಕೂಡ ಇದೇ ಕಾರಣ. ಗಿಲ್ಲಿ ಮಧ್ಯೆ ಬಂದಿದ್ದು ರಾಶಿಕಾಗೆ ಇಷ್ಟ ಆಗಿಲ್ಲ. ಹೀಗಾಗಿ, ಅವರು ಇದನ್ನು ಪ್ರಶ್ನೆ ಮಾಡಿದ್ದಾರೆ. ಆ ಬಳಿಕ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ. ಈ ಸಂದರ್ಭದಲ್ಲಿ ಗಿಲ್ಲಿಯ ಟಾಸ್ಕ್ ವಿಷಯವನ್ನು ರಾಶಿಕಾ ಪ್ರಸ್ತಾಪಿಸಿದರು. ‘ಟಾಸ್ಕ್ ಆಡೋಕೆ ಬರಲ್ಲ ನಿಂಗೆ’ ಎಂದು ನೇರವಾಗಿ ಹೇಳಿದರು. ಆ ಬಳಿಕ ಗಿಲ್ಲಿ, ‘ಈ ಬಾರಿ ಗೆದ್ದು ತೋರಿಸು’ ಎಂದು ಸವಾಲು ಹಾಕಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




