
ಬಿಗ್ ಬಾಸ್ ಮನೆಯಲ್ಲಿ ಅತಿಥಿಗಳಾಗಿ ಉಗ್ರಂ ಮಂಜು, ರಜತ್, ಚೈತ್ರಾ ಕುಂದಾಪುರ, ಮೋಕ್ಷಿತಾ ಪೈ, ತ್ರಿವಿಕ್ರಂ ಬಂದಿದ್ದಾರೆ. ಇವರೆಲ್ಲರಿಗೂ ಮನೆಯವರಿಂದ ಒಳ್ಳೆಯ ಸ್ವಾಗತ ಸಿಕ್ಕಿದೆ. ಆದರೆ, ಗಿಲ್ಲಿ (Gilli) ಮಾತ್ರ ಇವರಿಗೆ ಕ್ಯಾರೇ ಎನ್ನುತ್ತಿಲ್ಲ. ಇದು ಬಿಗ್ ಬಾಸ್ ಅತಿಥಿಗಳ ಕೋಪಕ್ಕೆ ಕಾರಣ ಆಗಿದೆ. ಮಂಜು, ರಜತ್ ಮೊದಲಾದವರು ಎಚ್ಚರಿಕೆ ನೀಡಿದ್ದಾರೆ. ಆದಾಗ್ಯೂ ಗಿಲ್ಲಿ ಅವರು ಬದಲಾಗುವುದು ಅನುಮಾನ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ಗಿಲ್ಲಿ ಅವರು ಯಾರೇ ಬಂದರು ಕೇರ್ ಮಾಡೋದಿಲ್ಲ. ಅವರು ತಮ್ಮ ಆಟವನ್ನು ತಾವು ಮುಂದುವರಿಸುತ್ತಾರೆ. ಕೆಲವೊಮ್ಮೆ ಅವರ ಮಾತು ಅತಿ ಎನಿಸಿದ್ದೂ ಇದೆ. ಈಗ ನವೆಂಬರ್ 25ರ ಎಪಿಸೋಡ್ನಲ್ಲಿ ಹಾಗೆಯೇ ಆಗಿದೆ. ಗಿಲ್ಲಿ ಅವರು ಬಂದ ಅತಿಥಿಗಳಿಗೆ ಕಿರಿಕಿರಿ ಮಾಡಿದ್ದಾರೆ. ಖುಷಿಯಿಂದ ಸಮಯ ಕಳೆಯಲು ಬಂದ ಅತಿಥಿಗಳು ಅಸಮಧಾನಗೊಂಡಿದ್ದಾರೆ. ರಜತ್ ಹಾಗೂ ಮಂಜು ಪಿತ್ತ ನೆತ್ತಿಗೇರಿದೆ.
ಮಂಜು ಅವರ ಮದುವೆ ಎಂದು ಬಿಗ್ ಬಾಸ್ ಘೋಷಣೆ ಮಾಡಿದರು. ಇದಕ್ಕೆ ಗಿಲ್ಲಿ, ‘ಎರಡನೆಯದೋ ಅಥವಾ ಮೂರನೆಯದೋ’ ಎಂದು ಪ್ರಶ್ನೆ ಮಾಡಿದರು. ರಜತ್ ಬಳಿ, ‘ನೀವು ಬಿಟ್ಟಿ ಊಟ ಮಾಡೋಕೆ ಬಂದಿದೀರಾ’ ಎಂದರು. ಈ ಎಲ್ಲಾ ವಿಚಾರಗಳು ಅತಿಥಿಗಳ ಪಿತ್ತ ನೆತ್ತಿಗೇರಿಸಿದೆ. ರಜತ್ ಹಾಗೂ ಮಂಜು ಕರೆದು ಕಿವಿಮಾತು ಹೇಳಿದ್ದಾರೆ.
‘ಬಿಟ್ಟಿ ಊಟ ಮಾಡೋಕೆ ಬಂದೆ ಅಂತೆಲ್ಲ ಹೇಳಬೇಡ. ನನಗೆ ಸಿಟ್ಟು ಬರುತ್ತದೆ. ಊಟದ ವಿಚಾರದಲ್ಲಿ ಯಾರೂ ಮಾತನಾಡಬಾರದು. ಮಂಜುಗೆ ಎಷ್ಟನೇ ಮದುವೆ ಎಂದೆಲ್ಲ ಕೇಳ್ತಾ ಇದೀಯಾ. ಇದು ಸರಿ ಅಲ್ಲ’ ಎಂದು ರಜತ್ ಅವರು ಗಿಲ್ಲಿಗೆ ಕಿವಿಮಾತು ಹೇಳಿದರು. ಆ ಬಳಿಕ ಮಂಜು ಅವರು ಕರೆದು, ಗಿಲ್ಲಿಗೆ ಬುದ್ಧಿವಾದ ಹೇಳಿದರು.
ಇದನ್ನೂ ಓದಿ: ಗಿಲ್ಲಿ ಆಟ ಹನುಮಂತನ 10 ಪರ್ಸೆಂಟ್ ಇಲ್ಲ; ನೇರವಾಗಿ ಹೇಳಿದ ಬಿಗ್ ಬಾಸ್ ಅತಿಥಿಗಳು
‘ಎಲ್ಲರ ಪೇಮೆಂಟ್ ನೀನೆ ತೆಗೆದುಕೊಳ್ತಾ ಇದೀಯಾ? ಇಲ್ಲ ತಾನೇ? ಚೆನ್ನಾಗಿ ಆಡ್ತಾ ಇದೀಯಾ. ಆದರೆ, ಅವರವರ ಸ್ಪೇಸ್ನ ಅವರವರಿಗೆ ನೀಡಬೇಕು’ ಎಂದು ಗಿಲ್ಲಿಗೆ ಬುದ್ಧಿವಾದ ಹೇಳಿದರು. ಗಿಲ್ಲಿಯ ಆಟ ಕೆಲವರಿಗೆ ಇಷ್ಟ ಆಗಿದೆ. ಇನ್ನೂ ಕೆಲವರಿಗೆ ಗಿಲ್ಲಿ ಮಿತಿ ಮೀರಿ ನಡೆದುಕೊಳ್ಳುತ್ತಿದ್ದಾನೆ ಎಂದು ಅನಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:31 am, Wed, 26 November 25