
ಬಿಗ್ ಬಾಸ್ (Bigg Boss) ಮನೆಗೆ ಬಂದ ವಿಚಿತ್ರ ಸ್ಪರ್ಧಿಗಳಲ್ಲಿ ಡಾಗ್ ಬ್ರೀಡರ್ ಸತೀಶ್ ಕೂಡ ಒಬ್ಬರು. ಅವರು ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ದಿನ ಇರಲಿಲ್ಲ. ಬಿಗ್ ಬಾಸ್ ಮನೆಯಲ್ಲಿ ಇದ್ದರೆ ಅವರಿಗೆ ಇಷ್ಟು ಪ್ರಚಾರ ಸಿಗುತ್ತಿತ್ತೋ ಅಥವಾ ಇಲ್ಲವೋ, ಆದರೆ, ಹೊರಗೆ ಅವರು ಸಂದರ್ಶನಗಳನ್ನು ನೀಡಿ ಪ್ರಚಾರದಲ್ಲಿರಲು ಪ್ರಯತ್ನಿಸುತ್ತಿದ್ದಾರೆ. ಈಗ ಸತೀಶ್ ಅವರು ನೀಡಿದ ಹೇಳಿಕೆ ಚರ್ಚೆಗೆ ಕಾರಣ ಆಗಿದೆ. ಗಿಲ್ಲಿ ಹೊರ ಹೋಗಿದ್ದಾರೆ ಎಂದು ಅವರು ಸಂಭ್ರಮಿಸಿದ್ದಾರೆ.
ಗಿಲ್ಲಿ ನಟನ ಕಂಡರೆ ಸತೀಶ್ ಅವರಿಗೆ ಆಗೋದಿಲ್ಲ. ಸಂದರ್ಶನಗಳಲ್ಲಿ ಅವರು ಗಿಲ್ಲಿ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ‘ಬಿಗ್ ಬಾಸ್ ಮುಗಿದ ಬಳಿಕ ಪಾರ್ಟಿ ಆಯೋಜಿಸುತ್ತೇನೆ. ಅದಕ್ಕೆ ಗಿಲ್ಲಿಗೆ ಮಾತ್ರ ಆಹ್ವಾನ ನೀಡೋದಿಲ್ಲ’ ಎಂದು ಈ ಮೊದಲು ಹೇಳಿಕೆ ನೀಡಿದ್ದರು. ಗಿಲ್ಲಿಗೆ ಕೊಳಕ, ಗಲೀಜು ಎಂದೆಲ್ಲ ಹೇಳಿದ್ದರು. ಬಿಗ್ ಬಾಸ್ ಮನೆಯಲ್ಲಿ ಅವರ ಜೊತೆ ಇರೋದು ಒಂದು ದೊಡ್ಡ ಟಾರ್ಚರ್ ಎಂಬುದು ಕೂಡ ಅವರ ಹೇಳಿಕೆ ಆಗಿತ್ತು.
ಈಗ ಗಿಲ್ಲಿ ನಟ ಅವರು ಎಲಿಮಿನೇಟ್ ಆಗಿದ್ದಾರೆ ಎಂದು ಸತೀಶ್ ಕುಣಿದಾಡಿದ್ದಾರೆ. ‘ಗಿಲ್ಲಿ ಔಟ್ ಆಗಿ ಆಚೆ ಬಂದಾಯ್ತು. ಇದಕ್ಕೆ ಕಾರಣ ನಾನೇ. ಪಾರ್ಟಿ ಕೊಡಿಸ್ತಾ ಇದೀನಿ. ಅವನನ್ನು ಹೊರಗೆ ಕಳಿಸಬೇಕು ಎಂದು ಹಠ ಹಿಡಿದಿದ್ದೆ. ಅದನ್ನು ಸಾಧಿಸಿದ್ದೇನೆ’ ಎಂದು ಕುಣಿದಾಡಿದ್ದಾರೆ ಸತೀಶ್. ಆದರೆ, ಅವರ ಹೇಳಿಕೆಯನ್ನು ಅಲ್ಲಿದ್ದವರೇ ನಂಬಿಲ್ಲ, ಇನ್ನು ಜನರು ನಂಬೋದು ಹೇಗೆ? ಭಾನುವಾರ ಸ್ಪಂದನಾ ಎಲಿಮಿನೇಟ್ ಆಗಿದ್ದಾರೆ.
ಇದನ್ನೂ ಓದಿ: ಬನಿಯನ್ ಹಾಕಿದರೂ ರಾಜನಂತೆ ಬಾಳುತ್ತಿರುವ ಗಿಲ್ಲಿ ನಟ: ಗೆಲುವಿನ ಸೂಚನೆ ಕೊಟ್ಟ ಸುದೀಪ್
ಈ ವಿಡಿಯೋ ವೈರಲ್ ಆಗಿದೆ. ‘ಕಳೆದ ವಾರ ಗಿಲ್ಲಿ ನಾಮಿನೇಟ್ ಆಗಿರಲೇ ಇಲ್ಲ ಕಣಣ್ಣ’ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು, ‘ಪ್ರಚಾರಕ್ಕಾಗಿ ಈ ರೀತಿಯೆಲ್ಲ ಮಾಡಬಾರದು’ ಎಂದು ಕೆಲವರು ಹೇಳಿದ್ದಾರೆ.
ಗಿಲ್ಲಿ ಅವರು ಈ ಬಾರಿಯ ಬಿಗ್ ಬಾಸ್ ಗೆಲ್ಲುತ್ತಾರೆ ಎಂಬುದು ಅವರ ಅಭಿಮಾನಿಗಳ ನಂಬಿಕೆ. ಅವರು ಉತ್ತಮವಾಗಿ ಆಟ ಆಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರ ಅಭಿಮಾನಿ ಬಳಗ ಹಿರಿದಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.