ಶ್ವಾನಗಳ ಬಗ್ಗೆ ಕೆಟ್ಟದಾಗಿ ಮಾತನಾಡಿದ ಸತೀಶ್; ಸುತ್ತಿಕೊಂಡು ಬಂದ ಕರ್ಮ

ಬಿಗ್ ಬಾಸ್ ಮಾಜಿ ಸ್ಪರ್ಧಿ ಸತೀಶ್ ಅವರು ಶ್ವಾನಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ವಿಡಿಯೋ ವೈರಲ್ ಆಗಿದ್ದು, ಇದು ಪ್ರಾಣಿಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ. ಸ್ವಯಂ ಡಾಗ್ ಬ್ರೀಡರ್ ಎಂದು ಹೇಳಿಕೊಳ್ಳುವ ಸತೀಶ್‌ಗೆ ಪ್ರಾಣಿ ಪ್ರೀತಿ ಇಲ್ಲವೆಂದು ಆರೋಪಿಸಲಾಗಿದೆ. ಈ ಹೇಳಿಕೆಗಳ ಸಂಬಂಧ ಅನಿಮಲ್ ವೆಲ್ಫೇರ್ ಸಪೋರ್ಟ್ ಲಕ್ಷ್ಮೀ ಅವರು ದೂರು ದಾಖಲಿಸಿದ್ದು, ಸತೀಶ್ ಈಗ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಶ್ವಾನಗಳ ಬಗ್ಗೆ ಕೆಟ್ಟದಾಗಿ ಮಾತನಾಡಿದ ಸತೀಶ್; ಸುತ್ತಿಕೊಂಡು ಬಂದ ಕರ್ಮ
ಸತೀಶ್

Updated on: Mar 06, 2026 | 7:10 AM

ಬಿಗ್ ಬಾಸ್ ಮಾಜಿ ಸ್ಪರ್ಧಿ ಸತೀಶ್ (Satish) ಅವರು ತಮ್ಮನ್ನು ತಾವು ಡಾಗ್ ಬ್ರೀಡರ್ ಎಂದು ಕರೆದುಕೊಂಡಿದ್ದಾರೆ. ಲಕ್ಷದಿಂದ ಹಿಡಿದು ಕೋಟಿವರೆಗಿನ ಡಾಗ್ ತಳಿಗಳನ್ನು ಖರೀದಿಸಿದ್ದಾಗಿ ಅವರು ಹೇಳುತ್ತಾರೆ. ಆದರೆ, ಅವರಿಗೆ ಪ್ರಾಣಿಗಳ ಮೇಲೆ ಸ್ವಲ್ಪವೂ ಪ್ರೀತಿ ಇದ್ದಂತೆ ಇಲ್ಲ. ಈ ವಿಷಯ ಪದೇ ಪದೇ ಸಾಬೀತಾಗುತ್ತಲೇ ಇದೆ. ಇತ್ತೀಚೆಗೆ ಸತೀಶ್ ಅವರ ವಿಡಿಯೋ ಒಂದು ವೈರಲ್ ಆಗಿತ್ತು. ಈ ವಿಡಿಯೋದಲ್ಲಿ ಅವರು ಶ್ವಾನಗಳ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು. ಈ ಹಿನ್ನೆಲೆಯಲ್ಲಿ ಕೇಸ್ ಮಾಡಲಾಗಿದೆ.

ಸತೀಶ್ ಹಾಗೂ ಸೋಶಿಯಲ್ ಮೀಡಿಯಾ ಇನ್​​ಫ್ಲುಯೆನ್ಸರ್ ನಕ್ಕನ್​ಲೇ ಸುಭಾಷ್ ವಿಡಿಯೋ ಒಂದನ್ನು ಮಾಡಿದ್ದರು. ಈ ಸಂದರ್ಭದಲ್ಲಿ ಶ್ವಾನಗಳ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು. ಸುಭಾಷ್ ಕೇಳಿದ ಪ್ರಶ್ನೆ ಅಸಹ್ಯವಾಗಿದ್ದರೆ, ಸತೀಶ್ ಕೊಟ್ಟ ಉತ್ತರ ಕೂಡ ಅಷ್ಟೇ ಕೆಟ್ಟದಾಗಿತ್ತು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಸುಭಾಷ್​ ಅವರಿಗಂತೂ ಪ್ರಾಣಿಗಳ ಬಗ್ಗೆ ಗೌರವ ಇಲ್ಲ. ಸತೀಶ್ ಡಾಗ್ ಬ್ರೀಡರ್. ಅವರಿಗಾದರೂ ಪ್ರಾಣಿಗಳ ಮೇಲೆ ಪ್ರೀತಿ ಬೇಡವೇ ಎಂದು ಅನೇಕರು ಪ್ರಶ್ನೆ ಮಾಡಿದ್ದರು. ‘ನಿಜವಾದ ಡಾಗ್​ ಬ್ರೀಡರ್​​ಗಳು ಶ್ವಾನಗಳ ಮೇಲೆ ಯಾವ ರೀತಿ ಪ್ರೀತಿ ತೋರಿಸುತ್ತಾರೆ, ಅವುಗಳನ್ನು ಎಷ್ಟು ಗೌರವಿಸುತ್ತಾರೆ ಎಂಬುದನ್ನು ನೋಡಿಲ್ಲ ಎಂದು ಎಲ್ಲಾದರೂ ನೋಡಿ ಕಲಿತಿಕೊಳ್ಳಿ’ ಎಂದು ಕೆಲವರು ಸತೀಶ್​​ಗೆ ಕಿವಿಮಾತು ಹೇಳಿದ್ದರು. ಈಗ ಸತೀಶ್ ತಮ್ಮ ಹೇಳಿಕೆಯಿಂದ ಸಂಕಷ್ಟ ಅನುಭವಿಸುವಂತಾಗಿದೆ.

ಇದನ್ನೂ ಓದಿ: ‘ನಾನು ಮೀಟರ್ ಇರೋವ್ನು, ಸಿಎಂ ಹೇಳಿದ್ರೂ ವಿಡಿಯೋ ಡಿಲೀಟ್ ಮಾಡಲ್ಲ’; ಸತೀಶ್

ಅನಿಮಲ್​ ವೆಲ್​​ಫೇರ್ ಸಪೋರ್ಟ್​ ಲಕ್ಷ್ಮೀ ಅವರು ದೂರು ದಾಖಲು ಮಾಡಿದ್ದಾರೆ. ಈ ಸಂಬಂಧ ಲಾಯರ್ ಕಿರಣ್ ಅವರು ಮಾಹಿತಿ ನೀಡಿದ್ದಾರೆ. ‘ಸೋಶಿಯಲ್ ಮೀಡಿಯದಲ್ಲಿ ಕೆಟ್ಟ ಕೆಟ್ಟ ವಿಡಿಯೋಗಳನ್ನು ಮಾಡಿ ಹಾಕುವ ಮುನ್ನ ಎಚ್ಚರ’ ಎಂದು ಅವರು ಕಿವಿ ಮಾತು ಹೇಳಿದ್ದಾರೆ. ಸತೀಶ್ ಅವರು ಏನೇ ಆದರೂ ಸರಿ ಪ್ರಚಾರ ಸಿಗಲಿ ಎಂದು ಬಯಸುತ್ತಾರೆ.ಅದು ಕೆಲವೊಮ್ಮೆ ಮಿತಿ ಮೀರಿದ್ದು ಇದೆ. ಈಗ ಅವರು ಮಾಡಿದ ತಪ್ಪಿಗೆ ತೊಂದರೆ ಅನುಭವಿಸುವಂತಾಗಿದೆ.

ಇತ್ತೀಚೆಗೆ ಮೂತ್ರ ಮಾಡುವಾಗಿನ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದ ಸತೀಶ್, ಅದಕ್ಕೆ ಸುದೀಪ್ ಹಾಡು ಹಾಕಿದ್ದರು. iದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಯಿತು. ಆದರೆ, ಈ ಬಗ್ಗೆ ಅವರು ಅಷ್ಟಾಗಿ ತಲೆಕೆಡಿಸಿಕೊಂಡಿರಲಿಲ್ಲ. ಈಗ ಅವರು ಬೇರೆ ಪ್ರಕರಣದಲ್ಲಿ ಸಂಕಷ್ಟ ಎದುರಿಸುವಂತೆ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:10 am, Fri, 6 March 26

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us