Bigg Boss 11 Grand Finale Live Updates: ಬಿಗ್ ಬಾಸ್ ಮನೆಯಿಂದ ಭವ್ಯ ಗೌಡ ಔಟ್

|

Updated on: Jan 25, 2025 | 11:05 PM

Bigg Boss Kannada 11 Grand Finale Live Event Updates: ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ರ ಗ್ರ್ಯಾಂಡ್‌ ಫಿನಾಲೆ ಪ್ರಾರಂಭವಾಗಿದ್ದು, ಮನೆಯಲ್ಲಿರುವ 6 ಸ್ಪರ್ಧಿಗಳ ಪೈಕಿ ಒಬ್ಬರು ಗೆದ್ದು, ಬಿಗ್​​ ಬಾಸ್​ ಕಿರೀಟ ಮುಡಿಗೇರಿಸಿಕೊಳ್ಳಲಿದ್ದಾರೆ. ಬಿಗ್ ಬಾಸ್ ಕುರಿತ ಕ್ಷಣ ಕ್ಷಣದ ಅಪ್​ಡೇಟ್ ಟಿವಿ9 ಕನ್ನಡ ಡಿಜಿಟಲ್​ನಲ್ಲಿ.

Bigg Boss 11 Grand Finale Live Updates: ಬಿಗ್ ಬಾಸ್ ಮನೆಯಿಂದ ಭವ್ಯ ಗೌಡ  ಔಟ್
Bhavya Gowda

ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ರ ಗ್ರ್ಯಾಂಡ್‌ ಫಿನಾಲೆಗೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಇವೆ. ಇದು ಸುದೀಪ್‌ ನಿರೂಪಣೆಯ ಕೊನೆಯ ಸೀಸನ್‌ ಕೂಡ ಆಗಿದೆ. ಮನೆಯಲ್ಲಿರುವ 6 ಸ್ಪರ್ಧಿಗಳ ಪೈಕಿ ಒಬ್ಬರು ಗೆದ್ದು, ಬಿಗ್​​ ಬಾಸ್​ ಕಿರೀಟ ಮುಡಿಗೇರಿಸಿಕೊಳ್ಳಲಿದ್ದಾರೆ. ಇಂದು ಮೂವರು ಎಲಿಮಿನೇಟ್ ಆಗುವ ಸಾಧ್ಯತೆ ಇದ್ದು, ನಾಳೆ ವಿನ್ನರ್ ಘೋಷಣೆ ಆಗಲಿದೆ. ಬಿಗ್ ಬಾಸ್ ಕುರಿತ ಕ್ಷಣ ಕ್ಷಣದ ಅಪ್​ಡೇಟ್ ಟಿವಿ9 ಕನ್ನಡ ಡಿಜಿಟಲ್​ನಲ್ಲಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

LIVE NEWS & UPDATES

The liveblog has ended.
  • 25 Jan 2025 10:52 PM (IST)

    ವಿನ್ ಆಗಲಿರುವ ಸ್ಪರ್ಧಿಗೆ ಬರೋಬ್ಬರಿ 5 ಕೋಟಿ ವೋಟ್​

    ‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋನಲ್ಲಿ ವಿನ್ ಆಗಲಿರುವ ಸ್ಪರ್ಧಿಗೆ ಬರೋಬ್ಬರಿ 5 ಕೋಟಿ 23 ಲಕ್ಷ 89 ಸಾವಿರದ 318 ವೋಟ್​ಗಳು ಬಂದಿವೆ. ವೀಕ್ಷಕರು ಈ ಶೋಗೆ ಎಷ್ಟು ಪ್ರೀತಿ ನೀಡಿದ್ದಾರೆ ಎಂಬುದನ್ನು ಈ ಸಂಖ್ಯೆಯೇ ಸಾಕ್ಷಿ.

  • 25 Jan 2025 10:26 PM (IST)

    ಬಿಗ್ ಬಾಸ್ ಮನೆಯಿಂದ ಭವ್ಯ ಗೌಡ ಔಟ್

    ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ರ ಗ್ರ್ಯಾಂಡ್‌ ಫಿನಾಲೆಯ ಮೊದಲ ದಿನ ಮನೆಯಲ್ಲಿರುವ 6 ಸ್ಪರ್ಧಿಗಳ ಪೈಕಿ ಭವ್ಯ ಗೌಡ ಔಟ್ ಆಗಿದ್ದಾರೆ. ಭವ್ಯಾಗೆ ಬಂದಿರುವ ಒಟ್ಟು ವೋಟ್​ 64,48,853. ನಾಳೆ ವಿನ್ನರ್ ಘೋಷಣೆ ಆಗಲಿದೆ.

  • 25 Jan 2025 09:05 PM (IST)

    ಸ್ಟ್ರಾಂಗ್​ ಕಂಟೆಸ್ಟೆಂಟ್ ಅವಾರ್ಡ್​​ ಗೆದ್ದ ರಜತ್​​​

    ಹಾರ್ಲಿಕ್ಸ್ ಸ್ಟ್ರಾಂಗ್​ ಕಂಟೆಸ್ಟೆಂಟ್ ಅವಾರ್ಡ್ ಅನ್ನು ರಜತ್​ ಪಡೆದುಕೊಂಡಿದ್ದಾರೆ. ಈ ಮೂಲಕ ಹಾರ್ಲಿಕ್ಸ್ ಕಡೆಯಿಂದ ರಜತ್​ ಅವರಿಗೆ ಗಿಫ್ಟ್​​ ಹ್ಯಾಂಪರ್​ ಸಿಕ್ಕಿದೆ.

  • 25 Jan 2025 08:02 PM (IST)

    ಬಿಗ್​ ಬಾಸ್​​ ವೇದಿಕೆಯಲ್ಲಿ ಡ್ಯಾನ್ಸ್ ಮಾಡಿದ ಉಗ್ರಂ ಮಂಜು ತಂದೆ ರಾಮಣ್ಣ

    ಉಗ್ರಂ ಮಂಜು ಅಪ್ಪ ರಾಗಿ ರಾಮಣ್ಣ ಅವರು ಬಿಗ್​ ಬಾಸ್​​ ಗ್ರ್ಯಾಂಡ್‌ ಫಿನಾಲೆ ವೇದಿಕೆಯಲ್ಲಿ ಸಖತ್​ ಆಗಿ ಡ್ಯಾನ್ಸ್​ ಮಾಡಿದ್ದಾರೆ. ಅಪ್ಪನ ಡ್ಯಾನ್ಸ್​ ಕಂಡು ಮಂಜು ಭಾವುಕರಾಗಿದ್ದಾರೆ.

  • 25 Jan 2025 06:57 PM (IST)

    ಮನೆಯೊಳಗೆ ಸಖತ್​​ ಸ್ಟೆಪ್​ ಹಾಕಿದ ಫೈನಲಿಸ್ಟ್​​

    ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ​​​ಟಾಪ್​ 6 ಫೈನಲಿಸ್ಟ್​​ಗಳಾಗಿ ಹೊರಹೊಮ್ಮಿದ ಭವ್ಯ ಗೌಡ, ತ್ರಿವಿಕ್ರಮ್, ರಜತ್, ಹನುಮಂತ, ಉಗ್ರಂ ಮಂಜು ಹಾಗೂ ಮೋಕ್ಷಿತಾ ಪೈ ದೊಡ್ಮನೆಯೊಳಗೆ ಸಖತ್​ ಆಗಿ ಡ್ಯಾನ್ಸ್​ ಮಾಡಿದ್ದಾರೆ.

  • 25 Jan 2025 06:40 PM (IST)

    ‘ಬಾಯ್ಸ್ Vs ಗರ್ಲ್ಸ್​’ಗೆ ಆಯ್ಕೆಯಾದ ರಜತ್​​, ಹನುಮಂತ ಹಾಗೂ ಭವ್ಯಗೌಡ

    ‘ಬಿಗ್ ಬಾಸ್ ಕನ್ನಡ ಸೀಸನ್​ 11’ ರಿಯಾಲಿಟಿ ಶೋ ಮುಗಿದ ಬಂತರ ‘ಕಲರ್ಸ್​ ಕನ್ನಡ’ದಲ್ಲಿ ‘ಬಾಯ್ಸ್ Vs ಗರ್ಲ್ಸ್​’ ಕಾರ್ಯಕ್ರಮ ಪ್ರಸಾರ ಆಗಲಿದೆ. ಇದಕ್ಕೆ ರಜತ್​​, ಹನುಮಂತ ಹಾಗೂ ಭವ್ಯಗೌಡ ಸ್ಪರ್ಧಿಗಳಾಗಿ ಆಯ್ಕೆಯಾಗಿದ್ದಾರೆ.

  • 25 Jan 2025 06:20 PM (IST)

    ಮಾಜಿ ಸ್ಪರ್ಧಿಗಳ ಜೊತೆ ಮಾತು

    ಕಿಚ್ಚ ಸುದೀಪ್ ಅವರು ಮಾಜಿ ಸ್ಪರ್ಧಿಗಳ ಜೊತೆ ಮಾತುಕತೆ ನಡೆಸುತ್ತಾ ಇದ್ದಾರೆ. ಅವರು ಎಲ್ಲಾ ಸ್ಪರ್ಧಿಗಳ ಭವಿಷ್ಯದ ಯೋಜನೆ ಕುರಿತು ಮಾತನಾಡಿದ್ದಾರೆ.

  • 25 Jan 2025 06:17 PM (IST)

    ಕಿಚ್ಚನ ಗ್ರ್ಯಾಂಡ್ ಎಂಟ್ರಿ

    ಕಿಚ್ಚ ಸುದೀಪ್ ಅವರು ಗ್ರ್ಯಾಂಡ್ ಆಗಿ ದೊಡ್ಮನೆಗೆ ಎಂಟ್ರಿ ಕೊಟ್ಟರು. ಅವರಿಗೆ ಅದ್ದೂರಿ ಸ್ವಾಗತ ಕೋರಲಾಯಿತು. ಹಳೆಯ ಡೈಲಾಗ್​ಗಳನ್ನು ಹೇಳಲಾಯಿತು. ಆ ಮೂಲಕ ಸ್ವಾಗತ ಕೊಡಲಾಯಿತು.

  • 25 Jan 2025 02:23 PM (IST)

    ಇನ್ನು ನಾಲ್ಕು ಗಂಟೆಗಳಲ್ಲಿ ಬಿಗ್ ಬಾಸ್

    ಇನ್ನು ಕೇವಲ ನಾಲ್ಕು ಗಂಟೆಗಳಲ್ಲಿ ಬಿಗ್ ಬಾಸ್ ಆರಂಭ ಆಗಲಿದೆ. ಇದಕ್ಕಾಗಿ ಎಲ್ಲರೂ ಕಾದಿದ್ದಾರೆ.

Published On - 2:22 pm, Sat, 25 January 25

Follow us on