‘ಗೆಟೌಟ್ ಅನ್ನೋದಲ್ಲ ಬೇಡ’; ವಿನಯ್​ ಗೌಡಗೆ ನೇರವಾಗಿ ಹೇಳಿದ ಸ್ಪರ್ಧಿ

‘ಬಿಗ್ ಬಾಸ್ ಅಗ್ನಿಪರೀಕ್ಷೆ’ ಶೋನಲ್ಲಿ ವಿನಯ್ ಗೌಡ ಸ್ಪರ್ಧಿಗಳಿಗೆ ನೀಡಿದ ‘ಗೆಟ್ ಔಟ್’ ಕೌಂಟರ್ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅವರ ಆ್ಯಟಿಟ್ಯೂಡ್ ಮತ್ತು ಪದಬಳಕೆಗೆ ಅಸಮಾಧಾನ ವ್ಯಕ್ತಪಡಿಸಿದ ಸ್ಪರ್ಧಿಯೊಬ್ಬರು ನೇರವಾಗಿಯೇ ತಿರುಗೇಟು ನೀಡಿದ್ದಾರೆ. ಈ ಘಟನೆಯ ಬಳಿಕ ವಿನಯ್ ಗೌಡ ವರ್ತನೆಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಟ್ರೋಲ್ ಹಾಗೂ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

‘ಗೆಟೌಟ್ ಅನ್ನೋದಲ್ಲ ಬೇಡ’; ವಿನಯ್​ ಗೌಡಗೆ ನೇರವಾಗಿ ಹೇಳಿದ ಸ್ಪರ್ಧಿ
ವಿನಯ್ ಗೌಡ

Updated on: Aug 24, 2026 | 7:40 AM

ಮುಖ್ಯಾಂಶಗಳು

  • ‘ಗೆಟ್ ಔಟ್’ ಎಂದ ವಿನಯ್ ಗೌಡಗೆ ಬಿತ್ತು ತಕ್ಕ ಕೌಂಟರ್
  • ಟಾಸ್ಕ್ ನೆಪದಲ್ಲಿ ಅತಿಯಾಯ್ತಾ ಆ್ಯಟಿಟ್ಯೂಡ್?
  • ವೇದಿಕೆಗೆ ಅವಮಾನ ಅಂದ ವಿನಯ್‌ಗೆ ಸ್ಪರ್ಧಿ ಕೊಟ್ಟಿದ್ದೇನು?

‘ಬಿಗ್ ಬಾಸ್ ಅಗ್ನಿಪರೀಕ್ಷೆ’ (Bigg Boss) ಸದ್ಯ ಸುದ್ದಿಯಲ್ಲಿದೆ. ಇಲ್ಲಿ ಕೊಡೋ ಟಾಸ್ಕ್ ವಿಷಯ ಸಾಕಷ್ಟು ಟ್ರೋಲ್ ಆಗಿತ್ತು. ಅನೇಕರು ಈ ಟಾಸ್ಕ್​​ಗಳನ್ನು ಟೀಕಿಸಿದ್ದರು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುವಾಗಲೇ ವಿನಯ್ ಗೌಡ ಹೆಸರು ಸುದ್ದಿಯಲ್ಲಿದೆ. ಅವರು ವೃತ್ತಕ್ಕೆ ‘ಇನ್ ಸೈಡ್ ಹಾಗೂ ಔಟ್​ ಸೈಡ್’ ಎಂಬ ಎರಡು ಸೈಡ್ ಇರುತ್ತದೆ ಎಂದು ಹೇಳಿ ಟ್ರೋಲ್ ಆಗಿದ್ದಾರೆ. ಈಗ ಅವರು ನಡೆದುಕೊಂಡ ರೀತಿಗೆ ಸ್ಪರ್ಧಿಯೇ ಸಿಟ್ಟಾಗಿ ಕೌಂಟರ್ ಕೊಟ್ಟಿದ್ದಾರೆ.

ಈ ಬಾರಿ ಬಿಗ್ ಬಾಸ್ ನೇರವಾಗಿ ಆರಂಭ ಆಗುತ್ತಿಲ್ಲ. ಬಿಗ್ ಬಾಸ್​ಗೆ ಬರೋ 18 ಸ್ಪರ್ಧಿಗಳ ಪೈಕಿ 3 ಸ್ಪರ್ಧಿಗಳು ಅಗ್ನಿಪರೀಕ್ಷೆಯಿಂದ ತೆರಳುತ್ತಿದ್ದಾರೆ. ಹೀಗಾಗಿ, ಅಗ್ನಿ ಪರೀಕ್ಷೆಯಲ್ಲಿ ವಿವಿಧ ಟಾಸ್ಕ್ ಕೊಡಲಾಗುತ್ತಿದೆ. ಆರಂಭದಲ್ಲಿ ತಲೆ ಬೋಳಿಸಿಕೊಳ್ಳೋದು, ಮೊಬೈಲ್ ಒಡೆದು ಹಾಕುವ ಟಾಸ್ಕ್​ಗಳನ್ನು ನೀಡಲಾಗಿತ್ತು. ಇದೆಲ್ಲವನ್ನು ಸ್ಪರ್ಧಿಗಳು ಸಹಿಸಿಕೊಂಡರು. ಇದರ ಜೊತೆಗೆ ಜಡ್ಜ್​ಗಳು ನಡೆದುಕೊಳ್ಳುವ ಬಗ್ಗೆಯೂ ಅಸಮಾಧಾನ ಮೂಡಿದೆ.

ವಿನಯ್ ಗೌಡ ಅವರಿಗೆ ಅತಿಯಾದ ಆ್ಯಟಿಟ್ಯೂಡ್ ಎಂಬ ಆರೋಪ ಸೋಶಿಯಲ್ ಮೀಡಿಯಾದಲ್ಲಿ ಕೇಳಿ ಬಂದಿದೆ. ‘ನನ್ನ ಗುಣವೇ ಹಾಗೆ’ ಎಂದು ಅವರು ಇದಕ್ಕೆ ಸ್ಪಷ್ಟನೆ ಕೊಡಬಹುದು. ಆದರೆ, ಸ್ಪರ್ಧಿಗಳ ವಿರುದ್ಧ ಅವರು ಬಳಕೆ ಮಾಡುವ ಪದಗಳ ಬಗ್ಗೆ ಚರ್ಚೆ ಶುರುವಾಗಿದೆ. ಹೀಗಿರುವಾಗಲೇ ಸ್ಪರ್ಧಿಯೊಬ್ಬರು ವಿನಯ್ ಗೌಡಗೆ ಕೌಂಟರ್ ಕೊಟ್ಟಿದ್ದಾರೆ.

ಇದನ್ನೂ ಓದಿ: ಸೆಪ್ಟೆಂಬರ್ 6ರಂದು ‘ಬಿಗ್ ಬಾಸ್ ಕನ್ನಡ 13’ ಶುರು; ಅಧಿಕೃತವಾಗಿ ತಿಳಿಸಿದ ಕಿಚ್ಚ ಸುದೀಪ್

ಅಗ್ನಿ ಪರೀಕ್ಷೆಗೆ 60 ಸ್ಪರ್ಧಿಗಳು ಬಂದಿದ್ದರು. ಇವರ ಪೈಕಿ ಫಿಲ್ಟರ್ ಮಾಡಿ ಕೆಲವರನ್ನು ಇಟ್ಟುಕೊಳ್ಳಲಾಗಿದೆ. ಇವರಿಗೂ ವಿವಿಧ ಸ್ಪರ್ಧೆ ನೀಡಲಾಗುತ್ತಿದೆ. ಹೀಗಿರುವಾಗಲೇ ಸ್ಪರ್ಧಿಯೊಬ್ಬರಿಗೆ ವಿನಯ್ ಅವರು ‘ಆಗಲ್ಲ ಅಂದ್ರೆ ಗೆಟೌಟ್’ ಎಂದು ಪದ ಬಳಕೆ ಮಾಡಿದ್ದಾರೆ. ಇದನ್ನು ಸಹಿಸದ ಸ್ಪರ್ಧಿ ‘ಗೆಟೌಟ್ ಪದ ಬೇಡ’ ಎಂದು ನೇರವಾಗಿ ಹೇಳಿದ್ದಾರೆ. ಆಗ ವಿನಯ್ ಅವರು ‘ಈ ವೇದಿಕೆಗೆ ಅವಮಾನ ಮಾಡಬೇಡಿ’ ಎಂದು ಕೌಂಟರ್ ಕೊಟ್ಟಿದ್ದಾರೆ. ಸದ್ಯ ಈ ವಿಷಯ ಚರ್ಚೆ ಹುಟ್ಟುಹಾಕಿದೆ. ವಿನಯ್ ಅವರಿಗೆ ಸರಿಯಾಗಿಯೇ ಆಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಅಭಿಪ್ರಾಯ ಹೊರಹಾಕಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Loading...
Unable to load recommendations.
Follow Us