ಬಿಗ್​​ಬಾಸ್ ಸ್ಪರ್ಧಿಗಳಿಗೆ ಎದುರಾಗಲಿದೆ ಅಗ್ನಿಪರೀಕ್ಷೆ, ಎದುರಿದ್ದಾರೆ ನಾಲ್ವರು ತೀರ್ಪುಗಾರರು

Bigg Boss Kannada: ಈ ಬಾರಿ ಸಾಕಷ್ಟು ವಿಶೇಷತೆಗಳು ಬಿಗ್​​ಬಾಸ್​​ನಲ್ಲಿ ಇರಲಿವೆ. ಅದರಲ್ಲೂ ಸ್ಪರ್ಧಿಗಳ ಆಯ್ಕೆ ಈ ಬಾರಿ ಬಹಳ ಭಿನ್ನವಾಗಿರಲಿದೆ. ಈ ಬಾರಿ ‘ಬಿಗ್​​ಬಾಸ್ ಅಗ್ನಿಪರೀಕ್ಷೆ’ ಎಂಬ ಹೊಸ ಕಾನ್ಸೆಪ್ಟ್ ಅನ್ನು ಪರಿಚಯಿಸಲಾಗಿದ್ದು, ಮನೆಯ ಒಳಗೆ ಹೋಗುವ ಸ್ಪರ್ಧಿಗಳು ಮೊದಲು ಅಗ್ನಿಪರೀಕ್ಷೆಯನ್ನು ಎದುರಿಸಬೇಕಿರಲಿದೆ. ಈ ಪರೀಕ್ಷೆಯನ್ನು ತೆಗೆದುಕೊಳ್ಳುವವರು ನಾಲ್ಕು ಬಿಗ್​​ಬಾಸ್ ಪರಿಣಿತರು.

ಬಿಗ್​​ಬಾಸ್ ಸ್ಪರ್ಧಿಗಳಿಗೆ ಎದುರಾಗಲಿದೆ ಅಗ್ನಿಪರೀಕ್ಷೆ, ಎದುರಿದ್ದಾರೆ ನಾಲ್ವರು ತೀರ್ಪುಗಾರರು
Bigg Boss Agniparikshe

Updated on: Aug 07, 2026 | 10:25 PM

ಮುಖ್ಯಾಂಶಗಳು

  • ಬಿಗ್​​ಬಾಸ್ ಕನ್ನಡ ಸೀಸನ್ 13 ಶೀಘ್ರ ಶುರುವಾಗಲಿದೆ.
  • ಈ ಬಾರಿ ಸ್ಪರ್ಧಿಗಳ ಆಯ್ಕೆ ತುಸು ಭಿನ್ನವಾಗಿ ನಡೆಯಲಿದೆ.
  • ಸ್ಪರ್ಧಿಗಳಿಗೆ ಈ ಬಾರಿ ಆರಂಭದಲ್ಲಿಯೇ ಅಗ್ನಿಪರೀಕ್ಷೆ ಎದುರಾಗಲಿದೆ.

ಬಿಗ್​​ಬಾಸ್ ಕನ್ನಡ (Bigg Boss Kannada) ಹೊಸ ಸೀಸನ್ ಪ್ರಾರಂಭಕ್ಕೆ ದಿನಗಳಷ್ಟೆ ಬಾಕಿ ಇದೆ. ಮುಂದಿನ ವಾರವೇ ಕಾರ್ಯಕ್ರಮ ಪ್ರಾರಂಭ ಆಗಲಿದೆ. ಈ ಬಾರಿ ಸಾಮಾನ್ಯರಿಗೂ ಸಹ ಬಿಗ್​​ಬಾಸ್ ಮನೆಗೆ ಟಿಕೆಟ್ ನೀಡಲಾಗಿದೆ. ಈ ಬಾರಿ ಸಾಕಷ್ಟು ವಿಶೇಷತೆಗಳು ಬಿಗ್​​ಬಾಸ್​​ನಲ್ಲಿ ಇರಲಿವೆ. ಅದರಲ್ಲೂ ಸ್ಪರ್ಧಿಗಳ ಆಯ್ಕೆ ಈ ಬಾರಿ ಬಹಳ ಭಿನ್ನವಾಗಿರಲಿದೆ. ಈ ಬಾರಿ ‘ಬಿಗ್​​ಬಾಸ್ ಅಗ್ನಿಪರೀಕ್ಷೆ’ ಎಂಬ ಹೊಸ ಕಾನ್ಸೆಪ್ಟ್ ಅನ್ನು ಪರಿಚಯಿಸಲಾಗಿದ್ದು, ಮನೆಯ ಒಳಗೆ ಹೋಗುವ ಸ್ಪರ್ಧಿಗಳು ಮೊದಲು ಅಗ್ನಿಪರೀಕ್ಷೆಯನ್ನು ಎದುರಿಸಬೇಕಿರಲಿದೆ. ಈ ಪರೀಕ್ಷೆಯನ್ನು ತೆಗೆದುಕೊಳ್ಳುವವರು ನಾಲ್ಕು ಬಿಗ್​​ಬಾಸ್ ಪರಿಣಿತರು.

ಹೌದು, ಮನೆಯ ಒಳಗೆ ಹೋಗುವ ಸ್ಪರ್ಧಿಗಳಿಗೆ ಅಗ್ನಿಪರೀಕ್ಷೆಯಲ್ಲಿ ಗೆಲ್ಲಬೇಕಿರುತ್ತದೆ. ಈ ಅಗ್ನಿಪರೀಕ್ಷೆಯನ್ನು ತೆಗೆದುಕೊಂಡು ತೀರ್ಪು ನೀಡಿ ಸ್ಪರ್ಧಿಯನ್ನು ಒಳಗೆ ಕಳಿಸುವ ಜವಾಬ್ದಾರಿಯನ್ನು ನಾಲ್ವರು ಮಾಜಿ, ಬಿಗ್​​ಬಾಸ್ ಸ್ಪರ್ಧಿಗಳಿಗೆ ವಹಿಸಲಾಗಿದೆ. ಹಿರಿಯ ನಟಿ, ಮಾಜಿ ಬಿಗ್​​ಬಾಸ್ ವಿನ್ನರ್ ಶ್ರುತಿ, ಮಾಜಿ ಸ್ಪರ್ಧಿಗಳಾದ ಚಂದನ್ ಗೌಡ, ಸಂಗೀತಾ ಶೃಂಗೇರಿ ಮತ್ತು ವಿನಯ್ ಗೌಡ ಅವರನ್ನು ತೀರ್ಪುಗಾರರನ್ನಾಗಿ ಮಾಡಲಾಗಿದ್ದು, ಇವರುಗಳು ಸ್ಪರ್ಧಿಗಳ ಅಥವಾ ಆಕಾಂಕ್ಷಿಗಳ ಪರೀಕ್ಷೆಯನ್ನು ತೆಗೆದುಕೊಳ್ಳಲಿದ್ದಾರೆ.

ಈ ಕುರಿತು ಹೊಸ ಪ್ರೋಮೊ ಒಂದನ್ನು ಬಿಗ್​​ಬಾಸ್ ಹಂಚಿಕೊಂಡಿದ್ದು, ಪ್ರೋಮೊನಲ್ಲಿ ವಿನಯ್ ಗೌಡ, ಚಂದನ್, ಸಂಗೀತ ಮತ್ತು ಶ್ರುತಿ ಅವರುಗಳು ಬಿಗ್​​ಬಾಸ್​​ನಲ್ಲಿ ಈ ಬಾರಿ ಎದುರಾಗಲಿರುವ ಅಗ್ನಿಪರೀಕ್ಷೆ ಮತ್ತು ಅದರ ಕಠಿಣತೆಯ ಬಗ್ಗೆ ಮಾತನಾಡಿದ್ದಾರೆ. ‘ಪ್ರತಿ ಬಾರಿ ಬಿಗ್​​ಬಾಸ್ ಮನೆಯ ಒಳಗೆ ಯುದ್ಧ ಆಗೋದು ನೋಡಿದ್ದೀರ. ಆದರೆ ಈ ಬಾರಿ ಮನೆಯ ಒಳಗೆ ಹೋಗೋಕೆ ಮಹಾಯುದ್ಧನೇ ನಡೆಯಲಿದೆ. ಈ ಮಹಾಯುದ್ಧದಲ್ಲಿ ಗೆದ್ದು ಮನೆಯ ಒಳಗೆ ಎಂಟ್ರಿ ಆಗೋದು ಯಾರು’ ಎಂದು ಈ ನಾಲ್ವರು ತೀರ್ಪುಗಾರರು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ:ಬಿಗ್​​ಬಾಸ್ ಕನ್ನಡ: ಗಿಲ್ಲಿ ಪರವಾಗಿ ಮತ ಕೇಳಿದ ಮಳವಳ್ಳಿ ಶಾಸಕ

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವವರು, ಬಿಗ್​​ಬಾಸ್ ಮನೆಗೆ ಹೋಗಬೇಕೆಂದು ಅರ್ಜಿ ಸಲ್ಲಿಸಿರುವ ಸಾಮಾನ್ಯರು ಇನ್ನೂ ಕೆಲವರು ಈ ಅಗ್ನಿ ಪರೀಕ್ಷೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸಾಕಷ್ಟು ಮಂದಿ ಆಕಾಂಕ್ಷಿಗಳನ್ನು ಈ ತೀರ್ಪುಗಾರರು ಹಲವು ರೀತಿಯಲ್ಲಿ ಪರೀಕ್ಷೆ ನಡೆಸಿ ಕೆಲವರನ್ನು ಆಯ್ಕೆ ಮಾಡಲಿದ್ದಾರೆ. ಈ ಆಯ್ಕೆ ಪ್ರಕ್ರಿಯೆ ಶೀಘ್ರವೇ ನಡೆಯಲಿದೆ ಎನ್ನಲಾಗುತ್ತಿದೆ.

ಬಿಗ್​​ಬಾಸ್ ಕನ್ನಡ ಸೀಸನ್ 13 ಆಗಸ್ಟ್ 16 ರಿಂದ ಆರಂಭ ಆಗಲಿದೆ. ಸುದೀಪ್ ಅವರು ಪ್ರತಿಬಾರಿಯಂತೆ ಅದ್ಧೂರಿಯಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಸ್ಪರ್ಧಿಗಳನ್ನು ಪರಿಚಯಿಸಲಿದ್ದಾರೆ. ವೀಕೆಂಡ್ ಕಾರ್ಯಕ್ರಮವನ್ನು ಲೈವ್ ಆಗಿ ನೋಡಲು ಸಹ ಅವಕಾಶವನ್ನು ಪಡೆದುಕೊಳ್ಳಬಹುದಾಗಿದೆ. ಲಾಲ್​​ಬಾಗ್​​ನಲ್ಲಿ ನಡೆಯುತ್ತಿರುವ ಪುಷ್ಪ ಪ್ರದರ್ಶನದಲ್ಲಿ ಭಾಗವಹಿಸಿ ಅಲ್ಲಿ ಇರುವ ಬಿಗ್​​ಬಾಸ್​​ ಎಕ್ಸ್​​ಪೀರಿಯನ್ಸ್ ಜೋನ್​​ನಲ್ಲಿ ಸೆಲ್ಫಿ ತೆಗೆದುಕೊಂಡು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us