ಹೊಸ ಧಾರಾವಾಹಿಯಲ್ಲಿ ಬಿಗ್ ಬಾಸ್ ಖ್ಯಾತಿಯ ಐಶ್ವರ್ಯಾ; ನೆಗೆಟಿವ್ ಪಾತ್ರ

Aishwarya Sindhogi: ಬಿಗ್​ಬಾಸ್​​ ಮಾಜಿ ಸ್ಪರ್ಧಿ ಐಶ್ವರ್ಯಾ ಸಿಂಧೋಗಿ ಹೊಸ ಕನ್ನಡ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ವಿಶೇಷವೆಂದರೆ ಐಶ್ವರ್ಯಾ ಅವರು ನೆಗೆಟಿವ್ ರೋಲ್​​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಐಶ್ವರ್ಯಾ ಅವರು ಬಿಗ್​ಬಾಸ್​ಗೆ ಬಂದಾಗ ಚೆನ್ನಾಗಿ ಆಡಿದ್ದರು. ಸಾಕಷ್ಟು ಜನರ ಮನಸ್ಸು ಗೆದ್ದಿದ್ದರು. ಇದೀಗ ಅವರು ಹೊಸದೊಂದು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

ಹೊಸ ಧಾರಾವಾಹಿಯಲ್ಲಿ ಬಿಗ್ ಬಾಸ್ ಖ್ಯಾತಿಯ ಐಶ್ವರ್ಯಾ; ನೆಗೆಟಿವ್ ಪಾತ್ರ
Aishawrya (1)
Updated By: ರಾಜೇಶ್ ದುಗ್ಗುಮನೆ

Updated on: Jun 06, 2025 | 7:54 AM

‘ಬಿಗ್ ಬಾಸ್ ಕನ್ನಡ ಸೀಸನ್ 11ರ’ (Bigg Boss Kannada) ಸ್ಪರ್ಧಿ ಆಗಿ ಗಮನ ಸೆಳೆದವರು ಐಶ್ವರ್ಯಾ ಶಿಂಧೋಗಿ. ಅವರು ಬಿಗ್ ಬಾಸ್ ಮನೆ ಮಗಳು ಎಂದು ಕರೆಸಿಕೊಂಡರು. ಅವರಿಗೆ ತಂದೆ-ತಾಯಿ ಇಲ್ಲ. ಈ ಸ್ಥಾನವನ್ನು ಸ್ವತಃ ಬಿಗ್ ಬಾಸ್ ತುಂಬಿದರು ಎಂದರೂ ತಪ್ಪಾಗಲಾರದು. ಈಗ ಅವರಿಗೆ ಧಾರಾವಾಹಿಯಲ್ಲಿ ನೆಗೆಟಿವ್ ಶೇಡ್​ನ ಪಾತ್ರ ಸಿಕ್ಕಿದೆ. ಈ ಸಂದರ್ಭದ ಪ್ರೋಮೋನ ಸ್ಟಾರ್ ಸುವರ್ಣ ವಾಹಿನಿಯು ಹಂಚಿಕೊಂಡಿದೆ.

ಸಾಮಾನ್ಯವಾಗಿ ಬಿಗ್ ಬಾಸ್​ನಲ್ಲಿ ಭಾಗಿ ಆದ ಬಳಿಕ ವಿವಿಧ ಸಿನಿಮಾ ಹಾಗೂ ಸೀರಿಯಲ್ ಆಫರ್​ಗಳು ಬರುತ್ತವೆ. ಈಗಾಗಲೇ ನಮ್ರತಾ ಗೌಡ ಹಾಗೂ ಭವ್ಯಾ ಗೌಡಗೆ ಧಾರಾವಾಹಿ ಆಫರ್ ಸಿಕ್ಕಿದೆ. ಕಾರ್ತಿಕ್ ಮಹೇಶ್ ಅವರು ಸಿನಿಮಾ ಮಾಡುತ್ತಿದ್ದಾರೆ. ಇವರೆಲ್ಲರೂ ಬಿಗ್ ಬಾಸ್ ಸ್ಪರ್ಧಿಗಳೇ ಆಗಿದ್ದರು. ಅದೇ ರೀತಿ ಐಶ್ವರ್ಯಾ ಶಿಂಧೋಗಿ ಕೂಡ ಬಿಗ್ ಬಾಸ್ ಸ್ಪರ್ಧಿಯಾಗಿ ಗಮನ ಸೆಳೆದರು. ಅವರಿಗೆ ಧಾರಾವಾಹಿಯ ಆಫರ್ ಬಂದಿದೆ.

ಸ್ಟಾರ್ ಸುವರ್ಣ ವಾಹಿನಿಯು ಕನ್ನಡದ ಪ್ರಮುಖ ವಾಹಿನಿಗಳಲ್ಲಿ ಒಂದು. ಈ ವಾಹಿನಿಯಲ್ಲಿ ‘ನಿನ್ನ ಜೊತೆ ನನ್ನ ಕಥೆ’ ಹೆಸರಿನ ಧಾರಾವಾಹಿಯು ಈಗಾಗಲೇ ಪ್ರಸಾರ ಕಾಣುತ್ತಿದೆ. ಈ ಧಾರಾವಾಹಿಯಲ್ಲಿ ವಿಲನ್ ಪಾತ್ರದಲ್ಲಿ  ಅವರು ನಟಿಸೋ ಸಾಧ್ಯತೆ ಇದೆ.

ಇದನ್ನೂ ಓದಿ:ಬಿಗ್ ಬಾಸ್ ಮನೆ ಮಗಳು ಐಶ್ವರ್ಯಾ ಸಿಂಧೋಗಿ ಜಾಲಿ ಟ್ರಿಪ್

‘ಹೆಸರು ಮಾತ್ರ ಸಾಕ್ಷಿ, ಆದರೆ ಮನಸಾಕ್ಷಿ ಇಲ್ಲ. ಮಹಾಭಾರತದಲ್ಲಿ ಮೆರೆಯೋ ದುರಹಂಕಾರಿ ಧುರ್ಯೋದನ ಇಷ್ಟ’ ಎಂದು ಐಶ್ವರ್ಯಾ ಅವರ ಪಾತ್ರ ಪರಿಚಯ ಆಗುತ್ತದೆ. ಇದು ನೆಗೆಟಿವ್ ಶೇಡ್ ಎಂಬುದು ಸ್ಪಷ್ಟವಾಗಿದೆ. ಕಥಾ ನಾಯಕ-ನಾಯಕಿ ಮಧ್ಯೆ ಸಾಕ್ಷಿ ಬರುತ್ತಾಳೆ. ರಾಣಾ ಪಾತ್ರದಲ್ಲಿ ಸುಂದರ್ ಅವರು ನಟಿಸಿದ್ದಾರೆ. ಈ ಪ್ರೋಮೋ ಗಮನ ಸೆಳೆದಿದೆ.

ಐಶ್ವರ್ಯಾ ಹಾಗೂ ಬಿಗ್ ಬಾಸ್​ನ ಮತ್ತೋರ್ವ ಸ್ಪರ್ಧಿ ಶಿಶಿರ್ ಶಾಸ್ತ್ರಿ ಇತ್ತೀಚೆಗೆ ಒಟ್ಟಾಗಿ ಸುತ್ತಾಟ ನಡೆಸುತ್ತಿದ್ದಾರೆ. ಇವರು ಎಲ್ಲ ಕಡೆಗಳಲ್ಲಿ ಸುತ್ತಾಟ ನಡೆಸಿ ರೀಲ್ಸ್ ಮಾಡುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಇವರು ಆಪ್ತರಾಗಿದ್ದರು. ಆ ಆಪ್ತತೆ ಹೊರ ಬಂದ ಬಳಿಕವೂ ಮುಂದುವರಿದಿದೆ. ಈ ಧಾರಾವಾಹಿಯಲ್ಲಿ ಅವರ ಪಾತ್ರ ಯಾವ ರೀತಿಯಲ್ಲಿ ಇರಲಿದೆ ಎಂಬ ಕುತೂಹಲ ಮೂಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:19 pm, Thu, 5 June 25