
ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಸ್ಪರ್ಧಿ ಆಗಿ ಗಮನ ಸೆಳೆದವರು ಯಮುನಾ ಶ್ರೀನಿಧಿ (Yamuna Srinidhi). ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸಿದ ಅವರು ಕಲಾವಿದೆಯಾಗಿ ಇಷ್ಟ ಆಗಿದ್ದಾರೆ. ಬಿಗ್ ಬಾಸ್ ಬಳಿಕ ಅವರಿಗೆ ಸಾಕಷ್ಟು ಆಫರ್ಗಳು ಸಿಕ್ಕಿವೆ. ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ‘ಯಜಮಾನ’ ಧಾರಾವಾಹಿಗೆ ಈಗ ಅವರು ಎಂಟ್ರಿ ಆಗಿದ್ದಾರೆ. ಈ ಧಾರಾವಾಹಿ ಮೂಲಕ ಅವರು ಗಮನ ಸೆಳೆಯಲು ರೆಡಿ ಆಗಿದ್ದಾರೆ.
‘ಯಜಮಾನ’ ಧಾರಾವಾಹಿಗೆ ಹೊಸ ಪಾತ್ರದ ಆಗಮನ ಆಗಿದೆ. ಅದುವೇ ಯಮುನಾ ಶ್ರೀನಿಧಿ. ಅವರು ಸುಮಿತ್ರಾ ಹೆಸರಿನ ಪಾತ್ರದಲ್ಲಿ ಬರುತ್ತಿದ್ದಾರೆ. ಹೊಸ ಪಾತ್ರದ ಮೂಲಕ ಧಾರಾವಾಹಿಗೆ ಹೊಸ ತಿರುವು ನೀಡಲು ಮತ್ತು ಧಾರಾವಾಹಿಯನ್ನು ಮತ್ತಷ್ಟು ರೋಚಕಗೊಳಿಸಲು ಅವರು ಸಿದ್ಧರಾಗಿದ್ದಾರೆ. ಯಮುನಾ ಅವರ ಧ್ವನಿ ದೊಡ್ಡದಾಗಿದೆ. ಅದು ಪಾತ್ರದ ಮೆರುಗು ಹೆಚ್ಚಿಸಬಹುದು.
ಧಾರಾವಾಹಿಯಲ್ಲಿ, ಯಮುನಾ ಅಭಿನಯಿಸುವ ಪಾತ್ರದ ಬಗ್ಗೆ ಮಾಹಿತಿ ಸಿಕ್ಕಿದೆ. ಯಮುನಾ ಅಭಿನಯಿಸುತ್ತಿರುವ ಸುಮಿತ್ರಾ ಪಾತ್ರ— ಕುಟುಂಬದ ಶಾಂತಿ ಮತ್ತು ಏಕತೆಯನ್ನು ಬಲಪಡಿಸುವ ಅವಳ ಸೂಕ್ಷ್ಮ ಸಂವೇದನೆ ಕಥೆಗೆ ಹೊಸ ತಿರುವುಗಳನ್ನು ನೀಡುತ್ತವೆ.
ಧಾರಾವಾಹಿಯ ಖಳನಾಯಕಿ ತುಳಸಿ ಕುತಂತ್ರಿ, ಮಹತ್ವಾಕಾಂಕ್ಷಿ ಮತ್ತು ಗುರಿ ಸಾಧನೆಗಾಗಿ ಏನನ್ನೂ ಬಿಟ್ಟುಕೊಡದ ಸ್ವಭಾವದವಳು ಅವಳಾಗಿದ್ದಾಳೆ. ಕುಟುಂಬದ ಶಾಂತಿ ಮತ್ತು ಒಗ್ಗಟನ್ನು ಹಾಳು ಮಾಡಲು ಅವಳ ಸೂಕ್ಷ್ಮ ಸಂಚುಗಳು ಕಥೆಗೆ ಹೊಸ ತಿರುವುಗಳನ್ನು ನೀಡಲಿವೆ ಎನ್ನಲಾಗುತ್ತಿದೆ. ಯಮುನಾ ಶ್ರೀನಿಧಿಯ ಪ್ರವೇಶದೊಂದಿಗೆ, ‘ಯಜಮಾನ’ ಧಾರಾವಾಹಿ ಮತ್ತಷ್ಟು ಕುತೂಹಲ ಸೃಷ್ಟಿಸಿದೆ. ಅವರಿಂದ ಕತೆಯಲ್ಲಿ ಮತ್ತಷ್ಟು ಹೊಸತನ ನಿರೀಕ್ಷಿಸಬಹುದಾಗಿದೆ.
ವಿಶೇಷವಾಗಿ, ತನ್ನ ಮಗ ಪ್ರಣವ್, ಜಾನ್ಸಿಯನ್ನು ಮದುವೆಯಾಗಬೇಕೆಂದು ಒತ್ತಾಯಿಸುವ ತುಳಸಿಯ ಯೋಜನೆಗಳು ಪ್ರೇಕ್ಷಕರನ್ನು ಕುತೂಹಲದ ಅಂಚಿನಲ್ಲಿ ಇಡುತ್ತವೆ. ಜೊತೆಗೆ ಜಾನ್ಸಿಯು ತಾಯಿ ಸುಮಿತ್ರಾನ ಹೇಗೆ ಸೇರುತ್ತಾರೆ ಎಂಬುದು ಕುತೂಹಲ. ತುಳಸಿಯು ಯಮನುನಾನ ಗುಪ್ತವಾಗಿ ಬಂಧಿಸಿರುವುದು ಕಥೆಯ ರೋಚಕತೆ ಮತ್ತು ಭಾವನಾತ್ಮಕ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.
ಇದನ್ನೂ ಓದಿ:ನಿನ್ನೆಯಿಂದ ಮನಸ್ಸು ಕೇವಲ ದರ್ಶನ್ ಬಗ್ಗೆ ಮಾತ್ರ ಯೋಚಿಸುತ್ತಿದೆ: ಯಮುನಾ ಶ್ರೀನಿಧಿ, ನಟಿ
ಜಾನ್ಸಿಗೆ ಅಪಘಾತ ಆದ ಮೇಲೆ ಅವಳ ನೆನಪಿನ ಶಕ್ತಿ ಸಂಪೂರ್ಣವಾಗಿ ಹೋಗಿದೆ. ಅವಳು ರಾಘುವನ್ನ ಮರೆತಿದ್ದಾಳೆ ಎಂಬುದು ಬೇಸರದ ವಿಷಯ. ತುಳಸಿ ಸಂಚು ಮಾಡಿರುವುದನ್ನು ತಪ್ಪಿಸಬೇಕಾದ ರಾಘು ಹೊಸ ಲುಕ್ ನೊಂದಿಗೆ ಬಂದಿರೋದು ಜನರಿಗೆ ಬಹಳ ಇಷ್ಟವಾಗಿದೆ. ರಾಘುವಿನ ಈ ಹೊಸ ಲುಕ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕಲರ್ಸ್ ಕನ್ನಡದಲ್ಲಿ ಪ್ರತಿ ದಿನ ಸಂಜೆ 6 ಗಂಟೆಗೆ ‘ಯಜಮಾನ’ ಧಾರಾವಾಹಿ ಪ್ರಸಾರವಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:45 am, Wed, 10 December 25