ನಿನ್ನೆಯಿಂದ ಮನಸ್ಸು ಕೇವಲ ದರ್ಶನ್ ಬಗ್ಗೆ ಮಾತ್ರ ಯೋಚಿಸುತ್ತಿದೆ: ಯಮುನಾ ಶ್ರೀನಿಧಿ, ನಟಿ
ದರ್ಶನ್ ಮಾತ್ರವಲ್ಲ, ಅವರ ಪತ್ನಿ ವಿಜಯಲಕ್ಷ್ಮಿ ಬಗ್ಗೆಯೂ ಯಮುನಾ ಶ್ರೀನಿಧಿಗೆ ಅಪಾರ ಅಭಿಮಾನ ಮತ್ತು ಗೌರವ. ಒಬ್ಬ ಹೆಣ್ಣುಮಗಳು ಅದರಲ್ಲೂ ವಿಶೇಷವಾಗಿ ಗೃಹಿಣಿಯೊಬ್ಬಳಲ್ಲಿ ಇರಬೇಕಾದ ಗುಣಲಕ್ಷಣಗಳ ಬಗ್ಗೆ ತನ್ನ ತಂದೆ ಹೇಳುತ್ತಿದ್ದರು, ಆ ಗುಣಗಳೆಲ್ಲ ವಿಜಯಲಕ್ಷ್ಮಿಯವರಲ್ಲಿವೆ ಎಂದ ಯಮುನಾ ಕ್ಷಮಯಾ ಧರಿತ್ರಿ ಎಂಬ ಮಾತು ಅವರಿಗೆ ಚೆನ್ನಾಗಿ ಸೂಟ್ ಆಗುತ್ತದೆ ಎಂದರು.
ಬೆಂಗಳೂರು: ಚಿತ್ರನಟಿ, ಡ್ಯಾನ್ಸರ್ ಮತ್ತು ಬಿಗ್ ಬಾಸ್ ಕನ್ನಡ 11 ನೇ ಸೀಸನ್ ಸ್ಪರ್ಧಿ ಯಮುನಾ ಶ್ರೀನಿಧಿ ನಿಸ್ಸಂದೇಹವಾಗಿ ನಟ ದರ್ಶನ್ ಅವರ ಅತಿ ದೊಡ್ಡ ಅಭಿಮಾನಿ. ಕನ್ನಡ ಚಿತ್ರರಂಗದ ಎಲ್ಲ ನಟರ ಬಗ್ಗೆ ಅಭಿಮಾನವಿದೆ ಪ್ರೀತಿಯಿದೆ ಎಂದು ಹೇಳುವ ಯಮುನಾ ದರ್ಶನ್ ಜೊತೆ ಕೆಲಸ ಮಾಡಿದ ಬಳಿಕ ಅವರೊಂದಿಗೆ ಬಾಂಧವ್ಯ ಬೆಳೆದುಬಿಡುತ್ತದೆ, ಅವರು ತನ್ನ ತಮ್ಮನೋ, ಮಗನೋ ಆಪ್ತನೋ ಎಂಬ ಬಾಂಧವ್ಯ ಬೆಸೆದುಕೊಂಡಿದೆ ಎನ್ನುತ್ತಾರೆ. ನಿನ್ನೆ ದರ್ಶನ್ ಜೈಲಿನಿಂದ ಹೊರಬಿದ್ದು ಬೆಂಗಳೂರಿಗೆ ಬರುವಾಗಲೂ ಮನಸ್ಸು ಕೇವಲ ಅವರ ಬಗ್ಗೆ ಮಾತ್ರ ಯೋಚಿಸುತಿತ್ತು ಎಂದು ಯಮುನಾ ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: 1 ವಾರಕ್ಕೆ ಸಿಕ್ಕ ಸಂಭಾವನೆ ಎಷ್ಟು ಅಂತ ಕೇಳಿದ್ದಕ್ಕೆ ‘ಕ್ಷಮಿಸಿ’ ಎಂದಿದ್ದೇಕೆ ಯಮುನಾ ಶ್ರೀನಿಧಿ?
Latest Videos