1 ವಾರಕ್ಕೆ ಸಿಕ್ಕ ಸಂಭಾವನೆ ಎಷ್ಟು ಅಂತ ಕೇಳಿದ್ದಕ್ಕೆ ‘ಕ್ಷಮಿಸಿ’ ಎಂದಿದ್ದೇಕೆ ಯಮುನಾ ಶ್ರೀನಿಧಿ?

ಬಿಗ್​ ಬಾಸ್​ ಮನೆಯಿಂದ ಯಮುನಾ ಶ್ರೀನಿಧಿ ಅವರು ಎಲಿಮಿನೇಟ್​ ಆಗಿದ್ದು ಅನೇಕರಿಗೆ ಅಚ್ಚರಿ ಆಯಿತು. ಒಂದು ವಾರದ ಅನುಭವದ ಬಗ್ಗೆ ಅವರೀಗ ಮಾತನಾಡಿದ್ದಾರೆ. ‘ಬಿಗ್​ ಬಾಸ್ ಕನ್ನಡ ಸೀಸನ್​ 11’ ಶೋನಲ್ಲಿ ಇಷ್ಟು ದಿನ ಸ್ಪರ್ಧಿಸಿದ್ದಕ್ಕೆ ಯಮುನಾ ಶ್ರೀನಿಧಿ ಅವರಿಗೆ ಎಷ್ಟು ಸಂಭಾವನೆ ಸಿಕ್ಕಿರಬಹುದು ಎಂಬ ಕೌತುಕ ಎಲ್ಲರಿಗೂ ಇದೆ.

1 ವಾರಕ್ಕೆ ಸಿಕ್ಕ ಸಂಭಾವನೆ ಎಷ್ಟು ಅಂತ ಕೇಳಿದ್ದಕ್ಕೆ ‘ಕ್ಷಮಿಸಿ’ ಎಂದಿದ್ದೇಕೆ ಯಮುನಾ ಶ್ರೀನಿಧಿ?
ಯಮುನಾ ಶ್ರೀನಿಧಿ
Follow us
Malatesh Jaggin
| Updated By: ಮದನ್​ ಕುಮಾರ್​

Updated on: Oct 07, 2024 | 9:13 PM

ಹಿರಿಯ ನಟಿ ಯಮುನಾ ಶ್ರೀನಿಧಿ ಅವರು ‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ಶೋನಲ್ಲಿ ಸ್ಪರ್ಧಿಸಿ ಬಂದಿದ್ದಾರೆ. ಒಂದೇ ವಾರದಲ್ಲಿ ಅವರು ಎಲಿಮಿನೇಟ್​ ಆಗಿದ್ದಾರೆ. ಇದ್ದಷ್ಟು ದಿನವೂ ಪಟಪಟನೆ ಮಾತನಾಡುತ್ತಾ ಆ್ಯಕ್ಟೀವ್​ ಆಗಿದ್ದ ಅವರು ಇಷ್ಟು ಬೇಗ ಬಿಗ್​ ಬಾಸ್​ ಮನೆಯಿಂದ ಔಟ್​ ಆಗುತ್ತಾರೆ ಎಂದು ಬಹುತೇಕರು ಊಹಿಸಿರಲಿಲ್ಲ. ಆದರೆ ಕಡಿಮೆ ವೋಟ್​ ಬಂದಿದ್ದರಿಂದ ಅವರು ಎಲಿಮಿನೇಟ್​ ಆಗುವುದು ಅನಿವಾರ್ಯ ಆಯಿತು. ಈಗ ಅವರು ‘ಟಿವಿ9 ಕನ್ನಡ’ ಜೊತೆ ಆ ಬಗ್ಗೆ ಮಾತನಾಡಿದ್ದಾರೆ. ಸಂಭಾವನೆ ವಿಚಾರವಾಗಿ ಎದುರಾದ ಪ್ರಶ್ನೆಗೂ ಪ್ರತಿಕ್ರಿಯಿಸಿದ್ದಾರೆ.

‘ಒಬ್ಬೊಬ್ಬರಿಗೆ ಒಂದೊಂದು ರೀತಿಯ ಸಂಭಾವನೆ ಕೊಡುತ್ತಾರೆ. ಅದು ಅವರ ಸೀನಿಯಾರಿಟಿ ಮೇಲೆ ನಿರ್ಧಾರ ಆಗಿರಬಹುದು. ಆದರೆ ಅದರ ಬಗ್ಗೆ ನಾವು ಹೊರಗೆ ಎಲ್ಲಿಯೂ ಪ್ರಸ್ತಾಪ ಮಾಡುವಂತೆಯೇ ಇಲ್ಲ. ಹಾಗಾಗಿ ದಯವಿಟ್ಟು ಕ್ಷಮಿಸಿ’ ಎಂದು ಯಮುನಾ ಶ್ರೀನಿಧಿ ಅವರು ಹೇಳಿದ್ದಾರೆ. ಬಿಗ್​ ಬಾಸ್​ನಲ್ಲಿನ ಒಂದು ವಾರದ ಜರ್ನಿಯಿಂದ ಹೆಚ್ಚೇನೂ ವ್ಯತ್ಯಾಸ ಆಗಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ‘ಸುದೀಪ್​ ಮಾತಿಗೆ ಬೆಲೆ ಕೊಡ್ತೀನಿ, ಇನ್ಮೇಲೆ ಬದಲಾಗ್ತೀನಿ’: ಬಿಗ್​ ಬಾಸ್​ನಲ್ಲಿ ಜಗದೀಶ್ ನಿರ್ಧಾರ

‘ಕಡಿಮೆ ಓಟ್​ ಬಂದಿದ್ದಕ್ಕೆ ಕಾರಣ ಏನು ಎಂಬುದನ್ನು ಹೇಗೆ ಗುರುತಿಸುವುದೋ ಗೊತ್ತಿಲ್ಲ. ಈಗತಾನೇ ಧಾರಾವಾಹಿ ಮುಗಿಸಿದ ಹೆಣ್ಣು ಮಕ್ಕಳಿಗೆ ಸೋಶಿಯಲ್​ ಮೀಡಿಯಾದಲ್ಲಿ ಮಿಲಿಯನ್​ಗಟ್ಟಲೆ ಫಾಲೋವರ್ಸ್​ ಇದ್ದಾರೆ. ಅಂಥವರಲ್ಲಿ ಅರ್ಧದಷ್ಟು ಜನರು ವೋಟ್​ ಮಾಡಿದರೂ ಅವರಿಗೆ ಸಹಾಯ ಆಗುತ್ತದೆ. ಆದರೆ ನಮಗೆ ಇರುವ 20 ಸಾವಿರ ಫಾಲೋವರ್ಸ್​ ಪೈಕಿ ಪೂರ್ತಿ ಜನರು ವೋಟ್​ ಹಾಕಿದರೂ ಅದು ಅರ್ಧ ಮಿಲಿಯನ್​ಗೆ ಸಮ ಆಗುವುದಿಲ್ಲ’ ಎಂದು ಯಮುನಾ ಅವರು ಹೇಳಿದ್ದಾರೆ.

‘ದೊಡ್ಡ ಸಮೂಹಕ್ಕೆ ತಲುಪಬೇಕು ಎಂದರೆ ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಇರಲೇಬೇಕು. ಬಿಗ್​ ಬಾಸ್​ನಿಂದ ನಾನು ಏನಲ್ಲೂ ಕಳೆದುಕೊಂಡಿಲ್ಲ. ಹಲವು ಅಂಶಗಳನ್ನು ಪಡೆದುಕೊಂಡಿದ್ದೇನೆ. ನನಗೆ ಎಷ್ಟು ತಾಳ್ಮೆ ಇದೆ ಎಂಬುದು ಆ ಮನೆಯಿಂದಲೇ ಗೊತ್ತಾಗಿದ್ದು. ಫೋನ್​ ಇಲ್ಲದೇ ನಾನು ಒಂದು ವಾರ ಇದ್ದೆ ಎಂಬುದೇ ಸಾಧನೆ. ಮೊದಲ ವಾರ ಕೆಲವರು ಹೊರಗೆ ಹೋಗಬಹುದು ಎಂದುಕೊಂಡಿದ್ದೆ. ಐಶ್ವರ್ಯಾ ಮೋಕ್ಷಿತಾ, ಹಂಸಾ, ಧನರಾಜ್​ ನನ್ನ ಮನಸ್ಸಿನಲ್ಲಿ ಇದ್ದರು’ ಎಂದು ಯಮುನಾ ಅವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಕಾರ್​ ಶೋರೂಂನಲ್ಲಿ ಅಗ್ನಿ ಅವಘಡ, ಸುಟ್ಟು ಭಸ್ಮವಾದ ಹೊಸ ವಾಹನಗಳು
ಕಾರ್​ ಶೋರೂಂನಲ್ಲಿ ಅಗ್ನಿ ಅವಘಡ, ಸುಟ್ಟು ಭಸ್ಮವಾದ ಹೊಸ ವಾಹನಗಳು
Daily Devotional: ಮಂಗಳಸೂತ್ರದ ಮಹತ್ವ ತಿಳಿಯಿರಿ
Daily Devotional: ಮಂಗಳಸೂತ್ರದ ಮಹತ್ವ ತಿಳಿಯಿರಿ
ಬುಧಗ್ರಹ ಮಕರ ರಾಶಿಗೆ ಪ್ರವೇಶ ಮಾಡುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಬುಧಗ್ರಹ ಮಕರ ರಾಶಿಗೆ ಪ್ರವೇಶ ಮಾಡುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಸುದೀಪ್ ಸರ್ ನೋಡಿದ್ರೆ ಭಯ ಆಗುತ್ತೆ: ತೆಲುಗು ಬಿಗ್ ಬಾಸ್ ವಿನ್ನರ್ ಮಾತು
ಸುದೀಪ್ ಸರ್ ನೋಡಿದ್ರೆ ಭಯ ಆಗುತ್ತೆ: ತೆಲುಗು ಬಿಗ್ ಬಾಸ್ ವಿನ್ನರ್ ಮಾತು
ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ಬಿಗ್ ಬಾಸ್ ಮನೆಯಲ್ಲಿ ಕೊನೇ ವಾರ ಊಟ ಸೇರಲ್ಲ: ವಿನ್ನರ್ ನಿಖಿಲ್ ಅನುಭವ
ಬಿಗ್ ಬಾಸ್ ಮನೆಯಲ್ಲಿ ಕೊನೇ ವಾರ ಊಟ ಸೇರಲ್ಲ: ವಿನ್ನರ್ ನಿಖಿಲ್ ಅನುಭವ
ಕ್ಲಾಸ್​ ನಡೆಯುವಾಗಲೇ 3ನೇ ಮಹಡಿಯಿಂದ ಹಾರಿದ ಕಾಲೇಜು ವಿದ್ಯಾರ್ಥಿ
ಕ್ಲಾಸ್​ ನಡೆಯುವಾಗಲೇ 3ನೇ ಮಹಡಿಯಿಂದ ಹಾರಿದ ಕಾಲೇಜು ವಿದ್ಯಾರ್ಥಿ
ಶ್ರೀರಾಮುಲು ಕಾಂಗ್ರೆಸ್ ಸೇರ್ತಾರಾ? ರಾಜಕೀಯ ಗುಟ್ಟು ಬಿಚ್ಚಿಟ್ಟ ಹಳೇ ಕುಚಿಕು
ಶ್ರೀರಾಮುಲು ಕಾಂಗ್ರೆಸ್ ಸೇರ್ತಾರಾ? ರಾಜಕೀಯ ಗುಟ್ಟು ಬಿಚ್ಚಿಟ್ಟ ಹಳೇ ಕುಚಿಕು
ವ್ಯಕ್ತಿತ್ವದಲ್ಲಿ ಉತ್ತಮ ಈ ತ್ರಿವಿಕ್ರಮ: ಗೆಲುವಿನ ಸೂಚನೆ ಕೊಟ್ಟ ಬಿಗ್ ಬಾಸ್
ವ್ಯಕ್ತಿತ್ವದಲ್ಲಿ ಉತ್ತಮ ಈ ತ್ರಿವಿಕ್ರಮ: ಗೆಲುವಿನ ಸೂಚನೆ ಕೊಟ್ಟ ಬಿಗ್ ಬಾಸ್
ಶ್ರೀರಾಮುಲು ಕಾಂಗ್ರೆಸ್​ಗೆ ಕಳುಹಿಸಲು ಅವರೇ ಪ್ರಯತ್ನಿಸ್ತಿರಬಹುದು: ಡಿಕೆಶಿ
ಶ್ರೀರಾಮುಲು ಕಾಂಗ್ರೆಸ್​ಗೆ ಕಳುಹಿಸಲು ಅವರೇ ಪ್ರಯತ್ನಿಸ್ತಿರಬಹುದು: ಡಿಕೆಶಿ