AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಈ ವಾರ ಇನ್ನೂ ಕೆಟ್ಟದಾಗಿರುತ್ತದೆ’; ಸೂಚನೆ ಕೊಟ್ಟ ಜಗದೀಶ್

ಈ ಸೀಸನ್​ನ ಬಿಗ್​ ಬಾಸ್​ ಮನೆಯಲ್ಲಿ ಎರಡು ಭಾಗ ಆಗಿದೆ. ಸ್ವರ್ಗ ಮತ್ತು ನರಕ ಎಂಬ ಎರಡು ಪ್ರತ್ಯೇಕ ಜಾಗ ಇದೆ. ನರಕದವರಿಗೆ ಹೆಚ್ಚಿನ ಸೌಕರ್ಯಗಳು ಇಲ್ಲ. ಆದರೆ ಸ್ವರ್ಗದವರಿಗೆ ಒಂದಷ್ಟು ಸೌಲಭ್ಯಗಳನ್ನು ನೀಡಲಾಗಿದೆ. ಈ ಮಧ್ಯೆ ಜಗದೀಶ್ ಅವರು ಕಿರಿಕ್ ಮಾಡಿಕೊಳ್ಳುವ ಸೂಚನೆ ಕೊಟ್ಟಿದ್ದಾರೆ.

‘ಈ ವಾರ ಇನ್ನೂ ಕೆಟ್ಟದಾಗಿರುತ್ತದೆ’; ಸೂಚನೆ ಕೊಟ್ಟ ಜಗದೀಶ್
ಜಗದೀಶ್
ರಾಜೇಶ್ ದುಗ್ಗುಮನೆ
|

Updated on: Oct 08, 2024 | 7:26 AM

Share

‘ಬಿಗ್ ಬಾಸ್ ಕನ್ನಡ ಸೀಸನ್ 11’ ಎರಡನೇ ವಾರಕ್ಕೆ ಕಾಲಿಟ್ಟಿದೆ. ಕಳೆದ ವರ್ಷದಂತೆ ಈ ವರ್ಷವೂ ಯಾವುದೇ ಹಾಸ್ಯ ಘಟನೆಗಳು ನಡೆಯುತ್ತಿವೆ. ಮುಂಜಾನೆಯಿಂದ ಸಂಜೆಯವರೆಗೆ ದೊಡ್ಮನೆಯಲ್ಲಿ ನಡೆಯುತ್ತಿರುವುದು ಕೇವಲ ಗಲಾಟೆಯೇ. ಅದರಲ್ಲೂ ಬಿಗ್ ಬಾಸ್ ಮನೆಯ ವಾತಾವರಣವನ್ನು ಹಾಳು ಮಾಡುವ ಕೆಲಸವನ್ನು ಜಗದೀಶ್ ಮಾಡುತ್ತಿದ್ದಾರೆ. ಈ ವಾರವೂ ಅದು ಮುಂದುವರಿಯಲಿದೆ ಎಂದು ಜದೀಶ್ ಅವರು ಎಚ್ಚರಿಕೆ ಕೊಟ್ಟಿದ್ದಾರೆ.

ಕಳೆದ ವಾರ ಜಗದೀಶ್ ಅವರು ‘ಬಿಗ್ ಬಾಸ್’ ಮನೆಯಲ್ಲಿ ಸಾಕಷ್ಟು ಕಿತ್ತಾಡಿಕೊಂಡಿದ್ದರು. ಅವರು ಸುಖಾಸುಮ್ಮನೆ ಎಲ್ಲರ ವಿರುದ್ಧವೂ ಕಾಲ್ಕೆರೆದುಕೊಂಡು ಜಗಳಕ್ಕೆ ಹೋಗಿದ್ದರು. ಈಗಲೂ ಹಾಗೆಯೇ ಆಗಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಎರಡನೇ ವಾರದಲ್ಲಿ ಜಗದೀಶ್ ಅವರು ಹೋರಾಟಕ್ಕೆ ಇಳಿದಿದ್ದಾರೆ. ಕಳೆದ ವಾರಕ್ಕಿಂತ ಈ ವಾರ ಇನ್ನೂ ಕೆಟ್ಟದಾಗಿರುತ್ತದೆ ಎನ್ನುವ ಎಚ್ಚರಿಕೆ ನೀಡಿದ್ದಾರೆ. ಅದಕ್ಕೆ ತಕ್ಕಂತೆ ಮನೆಯ ವಾತಾವರಣ ಬದಲಿಸುತ್ತಿದ್ದಾರೆ.

ಈ ಬಾರಿ ಬಿಗ್ ಬಾಸ್​ನಲ್ಲಿ ಸ್ವರ್ಗ ಹಾಗೂ ನರಕ ಕಾನ್ಸೆಪ್ಟ್ ತರಲಾಗಿದೆ. ಇಷ್ಟು ದಿನ ಜಗದೀಶ್ ಅವರು ಸ್ವರ್ಗದಲ್ಲಿ ಇದ್ದರು. ಅವರಿಗೆ ನರಕವನ್ನು ನೀಡುವ ಆದೇಶವನ್ನು ಕ್ಯಾಪ್ಟನ್ ಹಂಸ ತೆಗೆದುಕೊಂಡಿದ್ದಾರೆ. ನರಕದಲ್ಲಿದ್ದ ರಂಜಿತ್ ಸ್ವರ್ಗಕ್ಕೆ ಬಂದಿದ್ದಾರೆ. ಇದು ಜಗದೀಶ್​ಗೆ ಸಾಕಷ್ಟು ಕೋಪ ತರಿಸಿದೆ. ಈ ಕಾರಣಕ್ಕೆ ಅವರು ತಿರುಗಿ ಬಿದ್ದಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್​ನಲ್ಲಿ ಕಲುಷಿತ ನೀರಿನಿಂದ ಸ್ಪರ್ಧಿಗಳಿಗೆ ಅನಾರೋಗ್ಯ? ಪ್ರತಿಭಟನೆ ಮಾಡ್ತಾರಂತೆ ಜಗದೀಶ್

ಕಲುಷಿತ ನೀರಿನ ಕಾರಣಕ್ಕೆ ದೊಡ್ಮನೆಯಲ್ಲಿ ಸಮಸ್ಯೆ ಆಗಿದೆ ಸುಖಾಸುಮ್ಮನೆ ಗಲಾಟೆ ಎಬ್ಬಿಸಿದರು ಜಗದೀಶ್. ಇದು ಸುಳ್ಳು ಅನ್ನೋದು ಎಲ್ಲರಿಗೂ ಗೊತ್ತಿತ್ತು. ಆದರೂ ಈ ವಿಚಾರವನ್ನು ಅವರು ದೊಡ್ಡದು ಮಾಡಲು ಹೋದರು. ಇಷ್ಟಕ್ಕೆ ಅವರ ಹಾರಾಟ ನಿಂತಿಲ್ಲ. ಅವರು ಹಂಸ ಅವರನ್ನು ಕರೆದು ಪದೇ ಪದೇ ಕಿರಿಕ್ ಮಾಡಿಕೊಳ್ಳುತ್ತಾ ಇದ್ದರು. ಇಡೀ ವಾರ ಇದೇ ರೀತಿ ಇರುವ ಸೂಚನೆ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್