ಹ್ಯಾಕರ್ಸ್ ಪಾಲಾದ ಬಿಗ್ ಬಾಸ್ ವಿನ್ನರ್ ಯೂಟ್ಯೂಬ್​ ಅಕೌಂಟ್​

|

Updated on: Mar 12, 2024 | 2:42 PM

ಇತ್ತೀಚೆಗೆ ಹಲವು ನಕಲಿ ಖಾತೆಗಳು ಕಾಣ ಸಿಗುತ್ತವೆ. ಒರಿಜಿನಲ್ ಹೆಸರಿನಲ್ಲೇ ಈ ಸೈಟ್​ಗಳು ಕಾಣ ಸಿಗುತ್ತವೆ. ಅವುಗಳ ಒಳಗೆ ಎಂಟ್ರಿ ಕೊಟ್ಟರೆ ನಿಮ್ಮ ಮಾಹಿತಿಗಳನ್ನು ಕನ್ನ ಹಾಕಲಾಗುತ್ತದೆ. ಸ್ಟಾನ್ ಅವರಿಗೂ ಇದೇ ರೀತಿ ಆಗಿರಬಹುದು ಎಂದು ಅನೇಕರು ಊಹಿಸಿದ್ದಾರೆ. ಅವರ ಖಾತೆ ಶೀಘ್ರವೇ ಮರಳಿ ಸಿಗಲಿ ಎಂದು ಫ್ಯಾನ್ಸ್ ಬಯಸಿದ್ದಾರೆ.

ಹ್ಯಾಕರ್ಸ್ ಪಾಲಾದ ಬಿಗ್ ಬಾಸ್ ವಿನ್ನರ್ ಯೂಟ್ಯೂಬ್​ ಅಕೌಂಟ್​
ಬಿಗ್ ಬಾಸ್
Follow us on

‘ಬಿಗ್ ಬಾಸ್ ಹಿಂದಿ ಸೀಸನ್ 16’ರ ವಿನ್ನರ್ ಹಾಗೂ ರ‍್ಯಾಪರ್ ಎಂಸಿ ಸ್ಟಾನ್​ (MC Stan) ಯೂಟ್ಯೂಬ್ ಖಾತೆ ಹ್ಯಾಕ್​ ಆಗಿದೆ. ಇನ್​ಸ್ಟಾಗ್ರಾಮ್ ಮೂಲಕ ಈ ವಿಚಾರವನ್ನು ಅವರು ರಿವೀಲ್ ಮಾಡಿದ್ದಾರೆ. ಈ ವಿಚಾರದಲ್ಲಿ ಯೂಟ್ಯೂಬ್ ಇಂಡಿಯಾ ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಪರಿಹರಿಸಬೇಕು ಎಂದು ಅವರು ಕೋರಿದ್ದಾರೆ. ಅವರ ಯೂಟ್ಯೂಬ್ ಚಾನೆಲ್​ಗೆ ಸುಮಾರು 9.38 ಮಿಲಿಯನ್ ಅಂದರೆ, 9.38 ಲಕ್ಷ ಸಬ್​ಸ್ಕ್ರೈಬರ್ಸ್ ಇದ್ದಾರೆ.

‘ಗೆಳೆಯರೇ ನನ್ನ ಯೂಟ್ಯೂಬ್​ ಚಾನೆಲ್​ನ ಯಾರೋ ಹ್ಯಾಕ್ ಮಾಡಿದ್ದಾರೆ. ಸಮಸ್ಯೆ ಏನು ಎಂಬುದು ತಿಳಿಯುತ್ತಿಲ್ಲ. ಸ್ವಲ್ಪ ಸಮಯ ಸಂಯಮದಿಂದ ಕಾಯಿರಿ’ ಎಂದು ಎಂಸಿ ಸ್ಟಾನ್ ಕೋರಿದ್ದಾರೆ.  ಮತ್ತೊಂದು ಪೋಸ್ಟ್​ನಲ್ಲಿ ಅವರು ವಿಶೇಷ ಮನವಿ ಮಾಡಿದ್ದಾರೆ. ‘ನಿಮಗೆ ಗೊತ್ತಿಲ್ಲದ ಯಾವುದೇ ಕ್ಯೂಆರ್​ ಕೋಡ್​ನ ಸ್ಕ್ಯಾನ್ ಮಾಡಬೇಡಿ ಅಥವಾ ನಿಮ್ಮ ಯಾವುದೇ ಲಿಂಕ್​ನ ಕ್ಲಿಕ್ ಮಾಡಬೇಡಿ. ನೀವು ಇದರಿಂದ ತೊಂದರೆ ಅನುಭವಿಸುತ್ತಿರಾ’ ಎಂದು ಅವರು ಎಚ್ಚರಿಸಿದ್ದಾರೆ.

ಇತ್ತೀಚೆಗೆ ಹಲವು ನಕಲಿ ಖಾತೆಗಳು ಕಾಣ ಸಿಗುತ್ತವೆ. ಒರಿಜಿನಲ್ ಹೆಸರಿನಲ್ಲೇ ಈ ಸೈಟ್​ಗಳು ಕಾಣ ಸಿಗುತ್ತವೆ. ಅವುಗಳ ಒಳಗೆ ಎಂಟ್ರಿ ಕೊಟ್ಟರೆ ನಿಮ್ಮ ಮಾಹಿತಿಗಳನ್ನು ಕನ್ನ ಹಾಕಲಾಗುತ್ತದೆ. ಎಂಸಿ ಸ್ಟಾನ್ ಅವರಿಗೂ ಇದೇ ರೀತಿ ಆಗಿರಬಹುದು ಎಂದು ಅನೇಕರು ಊಹಿಸಿದ್ದಾರೆ. ಅವರ ಖಾತೆ ಶೀಘ್ರವೇ ಮರಳಿ ಸಿಗಲಿ ಎಂದು ಫ್ಯಾನ್ಸ್ ಬಯಸಿದ್ದಾರೆ.

ಇದನ್ನೂ ಓದಿ: 134ನೇ ದಿನಕ್ಕೆ ಪೂರ್ಣಗೊಂಡ ‘ಹಿಂದಿ ಬಿಗ್ ಬಾಸ್​’; ಸ್ಟಾರ್​ಗಳನ್ನು ಹಿಂದಿಕ್ಕಿ ವಿನ್ ಆದ ಎಂಸಿ ಸ್ಟಾನ್

ಸ್ಟಾನ್ ಅವರು ಹಲವು ರ‍್ಯಾಪ್ ಸಾಂಗ್ ಮೂಲಕ ಫೇಮಸ್ ಆಗಿದ್ದಾರೆ. ಅವರಿಗೆ ‘ಬಸ್ತಿ ಕಾ ಹಸ್ತಿ’ ಸಾಕಷ್ಟು ಖ್ಯಾತಿ ನೀಡಿತು. ಅವರು ‘ಬಿಗ್ ಬಾಸ್ ಸೀಸನ್ 16’ರಲ್ಲಿ ಸ್ಪರ್ಧಿಸಿದರು. ಅವರು ಕಪ್ ಗೆದ್ದು ಬಂದಿದ್ದಾರೆ. ಈ ರೀಯಾಲಿಟಿ ಶೋಗೆ ಬಂದಿದ್ದ ಅಬ್ದು ರೋಜಿಕ್, ಶಿವ್ ಠಾಕ್ರೆ ಹಾಗೂ ಸಾಜಿದ್ ಖಾನ್ ಜೊತೆ ಸ್ಟಾನ್​ಗೆ ಒಳ್ಳೆಯ ಗೆಳೆತನ ಇತ್ತು. ಆದರೆ, ಶೋ ಮುಗಿದ ಬಳಿಕ ಸ್ಟಾನ್ ಹಾಗೂ ಅದ್ದು ಮಧ್ಯೆ ವೈಮನಸ್ಸು ಮೂಡಿತ್ತು ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ