ಈ ಬಾರಿ ಮೂರಲ್ಲ ಐದೂವರೆ ತಿಂಗಳು ನಡೆಯಲಿದೆ ಬಿಗ್ ಬಾಸ್

Bigg Boss New season: ಕೆಲವೇ ತಿಂಗಳಲ್ಲಿ ಮತ್ತೆ ಬಿಗ್​ಬಾಸ್ ಸೀಸನ್ ಪ್ರಾರಂಭ ಆಗಲಿದೆ. ಬೇರೆ ಬೇರೆ ಭಾಷೆಗಳ ಬಿಗ್​ಬಾಸ್​ ಸೀಸನ್ ಪ್ರಕ್ರಿಯೆ ಆರಂಭವಾಗಿವೆ. ಈ ಬಾರಿ ನೂರು ದಿನ ಅಂದರೆ ಮೂರು ತಿಂಗಳು ಅಲ್ಲ ಬದಲಿಗೆ ಐದು ತಿಂಗಳ ಕಾಲ ಬಿಗ್​ಬಾಸ್ ಶೋ ಅನ್ನು ನಡೆಸಲು ಯೋಜನೆ ಹಾಕಿಕೊಳ್ಳಲಾಗಿದೆ. ಅಷ್ಟಕ್ಕೂ ಯಾವ ಭಾಷೆಯ ಬಿಗ್​ಬಾಸ್ 100 ದಿನದ ಬದಲಿಗೆ ಐದು ತಿಂಗಳುಗಳ ಕಾಲ ನಡೆಯಲಿದೆ? ಇಲ್ಲಿದೆ ಮಾಹಿತಿ...

ಈ ಬಾರಿ ಮೂರಲ್ಲ ಐದೂವರೆ ತಿಂಗಳು ನಡೆಯಲಿದೆ ಬಿಗ್ ಬಾಸ್
Bigg Boss 5
Edited By:

Updated on: May 24, 2025 | 10:21 PM

ಬಿಗ್ ಬಾಸ್ (Bigg Boss) ಸಾಮಾನ್ಯವಾಗಿ 3 ತಿಂಗಳಿನ 10 ದಿನ ನಡೆಯುತ್ತದೆ. ಇದು ನಡೆದುಕೊಂಡ ಬಂದ ವಾಡಿಕೆ. ಕೆಲವೊಮ್ಮೆ ಟಿಆರ್​ಪಿ ಉತ್ತಮವಾಗಿ ಇದ್ದಾಗ ಇದನ್ನು ಕೆಲವು ವಾರ ಎಳೆದುಕೊಂಡು ಹೋಗಲಾಗುತ್ತದೆ. ಆದರೆ, ಬಿಗ್ ಬಾಸ್ ಹಿಂದಿ ಸೀಸನ್ ಐದೂವರೆ ತಿಂಗಳು ನಡೆಯಲಿದೆ ಎಂದರೆ ನೀವು ನಂಬ್ತೀರಾ? ನಂಬಲೇ ಬೇಕು. ಸಲ್ಮಾನ್ ಖಾನ್ ಅವರು ನಡೆಸಿಕೊಡೋ ಶೋ ಈಗ ತನ್ನ ಅವಧಿಯನ್ನು ಹೆಚ್ಚಿಸಿಕೊಳ್ಳಲಿದೆ ಎಂದು ಹೇಳಲಾಗುತ್ತಿದೆ.

‘ಬಿಗ್ ಬಾಸ್’ ಇದು 100 ದಿನಗಳ ಶೋ ಎಂದು ಕರೆಸಿಕೊಂಡಿದೆ. ದೊಡ್ಮನೆಗೆ ತೆರಳುವ ಸ್ಪರ್ಧಿಗಳು 100 ದಿನಗಳ ಕಾಲ ಅಲ್ಲಿ ಇದ್ದು ಎಲ್ಲರನ್ನೂ ರಂಜಿಸುತ್ತಾರೆ. ಆದರೆ, ಈ ಬಾರಿ ನೂರಲ್ಲ ಬರೋಬ್ಬರಿ ಸುಮಾರು 170 ದಿನಗಳ ಕಾಲ ಇರಲಿದೆ ಎಂದು ಹೇಳಲಾಗುತ್ತಿದೆ. ಇದನ್ನು ಕೇಳಿ ಅನೇಕರಿಗೆ ಶಾಕ್ ಆಗಿದೆ. ಇಷ್ಟೇ ಅಲ್ಲ, ಸ್ಪರ್ಧಿಗಳಾಗಿ ಬರುವವರು ಗಟ್ಟಿ ಧೈರ್ಯ ಮಾಡಬೇಕಾದ ಅನಿವಾರ್ಯತೆ ಇದೆ.

ಮೂರು ತಿಂಗಳು ಬಿಗ್ ಬಾಸ್ ಮನೆಯಲ್ಲಿ ಇರಬೇಕು ಎಂದರೆ ಅದು ದೊಡ್ಡ ಚಾಲೆಂಜ್. ಹೀಗಿರುವಾಗ ಐದೂವರೆ ತಿಂಗಳು ಬಿಗ್ ಬಾಸ್ ಮನೆಯಲ್ಲಿ ಇರಬೇಕು ಎಂದರೆ ಅದೆಷ್ಟು ದೊಡ್ಡ ಚಾಲೆಂಜ್ ಆಗಿರುತ್ತದೆ ಎಂದು ನೀವೇ ಯೋಚಿಸಿ. ಇನ್ನು ಸ್ಪರ್ಧಿಗಳ ಸಂಖ್ಯೆಯೂ ಇಲ್ಲಿ ಹೆಚ್ಚಿದರೂ ಅಚ್ಚರಿ ಏನಿಲ್ಲ ಬಿಡಿ. ಏಕೆಂದರೆ, 170 ದಿನ ಎಂದು ಬಂದಾಗ ಬರುವ ಸ್ಪರ್ಧಿಗಳ ಸಂಖ್ಯೆ, ವೈಲ್ಡ್ ಕಾರ್ಡ್ ಎಂಟ್ರಿಗಳ ಸಂಖ್ಯೆ ಹೆಚ್ಚಿರುತ್ತದೆ ಎಂದೇ ಹೇಳಬಹುದು.

ಇದನ್ನೂ ಓದಿ:‘ನಿದ್ರಾದೇವಿ ನೆಕ್ಸ್ಟ್​ ಡೋರ್’ ಚಿತ್ರದಲ್ಲಿ ಗೆಟಪ್ ಬದಲಿಸಿದ ಬಿಗ್ ಬಾಸ್ ಶೈನ್ ಶೆಟ್ಟಿ

ಬಿಗ್ ಬಾಸ್ ಎಂದಾಗ ಜಗಳ ಹೆಚ್ಚು. ಸ್ಪರ್ಧಿಗಳು ಹೆಚ್ಚಾದಂತೆ ಜಗಳ ಹಾಗೂ ವಿವಾದಗಳೂ ಹೆಚ್ಚಬಹುದು. 170 ದಿನ ಹೊರ ಜಗತ್ತನ್ನು ಬಿಟ್ಟು ಇರಲು ಸ್ಪರ್ಧಿಗಳು ಯಾವ ರೀತಿಯಲ್ಲಿ ರೆಡಿ ಆಗಿ ಬರುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಕೆಲವು ವರದಿಗಳ ಪ್ರಕಾರ ಜುಲೈ 30ರಿಂದ ಈ ಶೋ ಆರಂಭ ಆಗಲಿದೆಯಂತೆ. ಬರೋಬ್ಬರಿ ಜನವರಿ ತಿಂಗಳವರೆಗೆ ಈ ಶೋ ನಡೆಯಲಿದೆ.

ಸಲ್ಮಾನ್ ಖಾನ್ ಅವರು ಈ ಶೋನ ನಡೆಸಿಕೊಡಲಿದ್ದಾರೆ. ಅವರು ಈ ಸೀಸನ್​ಗಾಗಿ ಹೆಚ್ಚಿನ ಸಂಭಾವನೆ ಪಡೆದುಕೊಳ್ಳಲಿದ್ದಾರೆ. ಅವರು ಕೆಲವು ಚಿತ್ರಗಳ ಕಮಿಟ್​ಮೆಂಟ್ ಹಿಂದಿದ್ದಾರೆ. ಇವುಗಳ ಮಧ್ಯೆ ಅವರು ಬಿಗ್ ಬಾಸ್ ನಡೆಸಿಕೊಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ