ಬಿಗ್ ಬಾಸ್ ನಡೆಸಿಕೊಡಲು ಈ ವಾರ ಆ್ಯಂಕರ್ ಬದಲು; ಅನಿವಾರ್ಯ ಕಾರಣಗಳಿಂದ ಗೈರು

ಬಿಗ್ ಬಾಸ್ ಹಿಂದಿ 'ವೀಕೆಂಡ್ ಕಾ ವಾರ್'ಗೆ ಸಲ್ಮಾನ್ ಖಾನ್ ಗೈರಾಗಿದ್ದಾರೆ. ಖತಾರ್‌ನಲ್ಲಿ ಕಾರ್ಯಕ್ರಮವಿರುವ ಕಾರಣ, ನಿರ್ದೇಶಕ ರೋಹಿತ್ ಶೆಟ್ಟಿ ಈ ವಾರ ನಿರೂಪಣೆ ಮಾಡಲಿದ್ದಾರೆ. ನವೆಂಬರ್ 15 ಮತ್ತು 16 ರಂದು ರೋಹಿತ್ ಶೆಟ್ಟಿ ಬಿಗ್ ಬಾಸ್ ಹಿಂದಿ ನಡೆಸಿಕೊಡಲಿದ್ದಾರೆ. ಕನ್ನಡದಲ್ಲಿ ಸುದೀಪ್ ಮಾತ್ರ ಬಿಗ್ ಬಾಸ್ ನಿರೂಪಿಸಿದ್ದಾರೆ. ಅವರ ಸ್ಥಾನವನ್ನು ಬೇರೆ ಯಾರೂ ತುಂಬಿಲ್ಲ.

ಬಿಗ್ ಬಾಸ್ ನಡೆಸಿಕೊಡಲು ಈ ವಾರ ಆ್ಯಂಕರ್ ಬದಲು; ಅನಿವಾರ್ಯ ಕಾರಣಗಳಿಂದ ಗೈರು
ಬಿಗ್ ಬಾಸ್

Updated on: Nov 15, 2025 | 12:29 PM

ಭಾರತದ ವಿವಿಧ ಭಾಷೆಯಲ್ಲಿ ಬಿಗ್ ಬಾಸ್ ನಡೆಯುತ್ತಿದೆ. ಮಲಯಾಳಂನಲ್ಲಿ ಬಿಗ್ ಬಾಸ್ ಪೂರ್ಣಗೊಂಡಿದೆ. ತೆಲುಗು ಹಾಗೂ ಹಿಂದಿಯಲ್ಲಿ ಹಲವು ವಾರಗಳು ಪೂರ್ಣವಾಗಿವೆ. ಕನ್ನಡದಲ್ಲೂ ಬಿಗ್ ಬಾಸ್ ಉತ್ತಮವಾಗಿ ಸಾಗುತ್ತಿದೆ. ಈಗ ಹಿಂದಿಯಲ್ಲಿ ಈ ವಾರ ಬಿಗ್ ಬಾಸ್ ಆ್ಯಂಕರ್ ಬದಲಾಗಿದ್ದಾರೆ. ಸಲ್ಮಾನ್ ಖಾನ್ ಬದಲು ನಿರ್ದೇಶಕ ರೋಹಿತ್ ಶೆಟ್ಟಿ ಬಿಗ್ ಬಾಸ್ ನಡೆಸಿಕೊಟ್ಟಿದ್ದಾರೆ.

‘ಬಿಗ್ ಬಾಸ್ ಹಿಂದಿ ಸೀಸನ್ 19’ರಲ್ಲಿ ಸಲ್ಮಾನ್ ಖಾನ್ ಅವರು ಆ್ಯಂಕರ್. ಹಲವು ವರ್ಷಗಳಿಂದ ಅವರು ಶೋ ನಡೆಸಿಕೊಂಡು ಬರುತ್ತಿದ್ದಾರೆ. ಇದರ ಜೊತೆಗೆ ಹಲವು ಬಾರಿ ಅವರು ಶೋಗೆ ಗೈರಾಗಿದ್ದಾರೆ. ಈ ಬಾರಿ ಅವರು ಖತಾರ್​ನಲ್ಲಿ ಲೈವ್ ಪರ್ಫಾರ್ಮೆನ್ಸ್ ಕೊಡಲು ತೆರಳಿದ್ದಾರೆ. ಈ ಕಾರಣಕ್ಕೆ ಅವರು ಈ ವಾರ ವೀಕೆಂಡ್​ ಕಾ ವಾರ್ ನಡೆಸಿಕೊಡುತ್ತಿಲ್ಲ.

ರೋಹಿತ್ ಶೆಟ್ಟಿ ಅವರು ಈ ವಾರ ಹಿಂದಿ ಬಿಗ್ ಬಾಸ್ ನಿರೂಪಣೆ ಮಾಡುತ್ತಿದ್ದಾರೆ. ಇದರ ಪ್ರೋಮೋನ ರಿಲೀಸ್ ಮಾಡಲಾಗಿದೆ. ‘ವೀಕೆಂಡ್​ ಕಾ ವಾರ್​​ನ ನವೆಂಬರ್ 15 ಹಾಗೂ 16ರಂದು ನಾನು ನಡೆಸಿಕೊಡ್ತೀನಿ. ಹಾಟ್​ಸ್ಟಾರ್​ನಲ್ಲಿ 9 ಗಂಟೆಗೆ ಹಾಗೂ ಕಲರ್ಸ್ ಟಿವಿಯಲ್ಲಿ 10.30ಕ್ಕೆ ಶೋ ನೋಡಿ’ ಎಂದು ರೋಹಿತ್ ಶೆಟ್ಟಿ ಅವರು ಕೋರಿದ್ದಾರೆ.

ಇದನ್ನೂ ಓದಿ: ‘ಅವರನ್ನು ಚಾನೆಲ್ ಅವರೇ ಉಳಿಸ್ತಾರೆ’; ಬಿಗ್ ಬಾಸ್​ನಲ್ಲಿ ವಿವಾದದ ಕಿಡಿ ಹೊತ್ತಿಸಿದ ಜಾನ್ವಿ

ಬಿಗ್ ಬಾಸ್ ನಡೆಯುವಾಗ ಸಲ್ಮಾನ್ ಖಾನ್ ಅವರು ಶೂಟಿಂಗ್ ಮಧ್ಯೆ ಬಿಡುವು ಮಾಡಿಕೊಂಡು ಮುಂಬೈಗೆ ಆಗಮಿಸಿ ವೀಕೆಂಡ್ ಎಪಿಸೋಡ್ ನಡೆಸಿಕೊಡುತ್ತಿದ್ದರು. ಆದರೆ, ಹಲವು ಸಂದರ್ಭಗಳಲ್ಲಿ ಇದು ಸಾಧ್ಯವಾಗದೇ ಇದ್ದಾಗ ರೋಹಿತ್ ಶೆಟ್ಟಿ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಈ ಶೋ ನಡೆಸಿಕೊಟ್ಟ ಉದಾಹರಣೆ ಇದೆ. ಆದರೆ, ಕನ್ನಡದಲ್ಲಿ ಇಷ್ಟು ವರ್ಷಗಳಲ್ಲಿ ಸುದೀಪ್ ಅವರೇ ಶೋ ನಡೆಸಿಕೊಟ್ಟಿದ್ದಾರೆ. ಅವರು ಗೈರಾದಾಗ ಬೇರೆ ಸೆಲೆಬ್ರಿಟಿಗಳು ವೇದಿಕೆ ಏರಿಲ್ಲ. ಸುದೀಪ್ ಸ್ಥಾನ ತುಂಬಲು ಯಾರಿಂದಲೂ ಸಾಧ್ಯವಿಲ್ಲ ಎಂಬುದು ವೀಕ್ಷಕರ ಅಭಿಪ್ರಾಯ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.