AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅವರನ್ನು ಚಾನೆಲ್ ಅವರೇ ಉಳಿಸ್ತಾರೆ’; ಬಿಗ್ ಬಾಸ್​ನಲ್ಲಿ ವಿವಾದದ ಕಿಡಿ ಹೊತ್ತಿಸಿದ ಜಾನ್ವಿ

ಬಿಗ್ ಬಾಸ್ ಮನೆಯಲ್ಲಿ ಜಾನ್ವಿ ಅವರು ವೋಟಿಂಗ್ ಪ್ರಕ್ರಿಯೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಚಾನೆಲ್ ಮಧ್ಯಸ್ಥಿಕೆ, ಸ್ಪಂದನಾ ಸೇವ್ ಆಗಿರುವುದರ ಬಗ್ಗೆ ಪ್ರಶ್ನಿಸಿದ್ದಾರೆ. ಇದಕ್ಕೆ ಸೂರಜ್ ತಿರುಗೇಟು ನೀಡಿದ್ದು, ಲವ್ ಟ್ರ್ಯಾಕ್ ಆರೋಪವನ್ನು ಅಲ್ಲಗಳೆದಿದ್ದಾರೆ. ವೀಕೆಂಡ್‌ನಲ್ಲಿ ಈ ವಿಷಯ ಪ್ರಸ್ತಾಪವಾದರೆ ಜಾನ್ವಿಗೆ ಸಮಸ್ಯೆ ಆಗುವ ಎಚ್ಚರಿಕೆ ನೀಡಿದ್ದಾರೆ.

‘ಅವರನ್ನು ಚಾನೆಲ್ ಅವರೇ ಉಳಿಸ್ತಾರೆ’; ಬಿಗ್ ಬಾಸ್​ನಲ್ಲಿ ವಿವಾದದ ಕಿಡಿ ಹೊತ್ತಿಸಿದ ಜಾನ್ವಿ
ಜಾನ್ವಿ
ರಾಜೇಶ್ ದುಗ್ಗುಮನೆ
|

Updated on:Nov 13, 2025 | 11:45 AM

Share

ಬಿಗ್ ಬಾಸ್ (Bigg Boss) ಸಂಪೂರ್ಣವಾಗಿ ನಡೆಯೋದು ಜನರ ವೋಟಿಂಗ್ ಆಧಾರದ ಮೇಲೆ. ಯಾರು ಉಳಿಯಬೇಕು, ಯಾರು ಇರಬಾರದು ಎಂಬುದನ್ನು ಜನರೇ ನಿರ್ಧರಿಸುತ್ತಾರೆ. ಆದರೆ, ಕೆಲವು ಸ್ಪರ್ಧಿಗಳು ಈ ಬಗ್ಗೆ ಅನುಮಾನ ಹೊರಹಾಕಿದ್ದು ಇದೆ. ಸ್ವತಃ ಜಾನ್ವಿ ಅವರೇ ಈ ಬಗ್ಗೆ ಮಾತನಾಡಿದ್ದು ಚರ್ಚೆಗೆ ಕಾರಣ ಆಗಿದೆ. ಜಾನ್ವಿ ಕೂಡ ಕಲರ್ಸ್ ಅಲ್ಲಿ ಶೋ ಮಾಡಿದ್ದಾರೆ. ಅವರು ಈ ರೀತಿ ಆರೋಪ ಮಾಡಿದ್ದು ಎಷ್ಟು ಸರಿ ಎಂಬ ಪ್ರಶ್ನೆ ಮೂಡಿದೆ.

ಜಾನ್ವಿ, ಸೂರಜ್ ಹಾಗೂ ರಾಶಿಕಾ ಒಟ್ಟಿಗೆ ನಿಂತು ಮಾತನಾಡುತ್ತಿದ್ದರು. ಈ ವೇಳೆ ಜಾನ್ವಿ ಈ ವಾದ ಮುಂದೆ ಇಟ್ಟರು. ರಾಶಿಕಾ ಹಾಗು ಸೂರಜ್ ಮಧ್ಯೆ ಒಳ್ಳೆಯ ಬಾಂಧವ್ಯ ಇದೆ. ಇದರಿಂದ ಚಾನೆಲ್​ ಅವರು ಇವರನ್ನು ಕಳುಹಿಸಿಕೊಡಲ್ಲ ಎಂಬ ನಂಬಿಕೆಯಲ್ಲಿ ಜಾನ್ವಿ ಇದ್ದಂತೆ ಇದೆ. ಇದಕ್ಕೆ ಸೂರಜ್ ಉತ್ತರಿಸಿದ್ದಾರೆ.

‘ರಾಶಿ ಹಾಗೂ ಸೂರಜ್ ಮಧ್ಯೆ ಒಂದು ಲವ್​ ಟ್ರ್ಯಾಕ್ ನಡೆಯುತ್ತಿದೆ. ಇದರಿಂದ ಚಾನೆಲ್ ಅವರು ಉಳಿಸುತ್ತಾರೆ ಎಂದು ನೀವು ಹೇಳ್ತಾ ಇದೀರಾ. ಇದು ತಪ್ಪು. ಮೊದಲನೆಯದಾಗಿ ನಮ್ಮ ಮಧ್ಯೆ ಲವ್ ಇಲ್ಲ. ಚಾನೆಲ್ ಆ್ಯಂಗಲ್​ನಿಂದ ನೀವು ಮಾತನಾಡುತ್ತಿರುವುದು ಕೂಡ ತಪ್ಪೇ. ವೀಕೆಂಡ್​ನಲ್ಲಿ ಈ ವಿಚಾರ ಬಂದ್ರೆ ಸಮಸ್ಯೆ ಆಗುತ್ತೆ. ನಿಮ್ಮ ಹಳ್ಳ ನೀವೇ ತೋಡಿಕೊಳ್ಳಬೇಡಿ’ ಎಂದು ಸೂರಜ್ ಅವರು ಜಾನ್ವಿಗೆ ಕಿವಿಮಾತು ಹೇಳಿದರು.

ಇದನ್ನೂ ಓದಿ: ದಡ್ಡತನದಿಂದ ಅಪರೂಪದ ಅವಕಾಶ ಕಳೆದುಕೊಂಡ ರಾಶಿಕಾ ಶೆಟ್ಟಿ

ಸ್ಪಂದನಾ ಸೇವ್ ಆಗುತ್ತಿರುವ ಬಗ್ಗೆ ಜಾನ್ವಿಗೆ ಬೇಸರ ಇದೆ. ಈ ಬಗ್ಗೆಯೂ ಅವರು ಮಾತನಾಡಿದರು. ‘ಸ್ಪಂದನಾ ಯಾಕೆ ಸೇವ್ ಆಗುತ್ತಿದ್ದಾರೆ? ಅದು ನನ್ನ ಪ್ರಶ್ನೆ. ಅವರನ್ನು ಎತ್ತುತ್ತಿದ್ದಾರೆ ಎಂದು ನನಗೆ ಅನಿಸುತ್ತಿದೆ. ಫ್ಯಾನ್ ಫಾಲೋಯಿಂಗ್ ಕೂಡ ಮುಖ್ಯವಾಗುತ್ತದೆ’ ಎಂದು ಜಾನ್ವಿ ಅವರು ಹೇಳಿದರು. ಈ ಮೊದಲು ಆರ್ಯವರ್ಧನ್ ಗುರೂಜಿ ಅವರು ಇದೇ ರೀತಿಯ ಆರೋಪ ಮಾಡಿದ್ದರು. ಸುದೀಪ್ ಸಿಟ್ಟಾಗಿ ಕ್ಲಾಸ್ ತೆಗೆದುಕೊಂಡಿದ್ದರು. ಈ ವಾರವೂ ಜಾನ್ವಿಗೆ ಇದೇ ರೀತಿಯ ಪಾಠ ಇರುತ್ತದೆಯೇ ಎಂಬ ಪ್ರಶ್ನೆ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:41 am, Thu, 13 November 25