ವೀಕೆಂಡ್‌ನಲ್ಲಿ ಸುದೀಪ್ ಚರ್ಚೆ ಮಾಡಲೇಬೇಕಾದ ವಿಷಯಗಳಿವು; ಪಟ್ಟಿ ದೊಡ್ಡದಿದೆ
ಬಿಗ್ ಬಾಸ್ ಕನ್ನಡ 12ರ 7ನೇ ವಾರದ ವೀಕೆಂಡ್‌ನಲ್ಲಿ ಸುದೀಪ್ ಪ್ರಮುಖ ವಿಷಯಗಳನ್ನು ಚರ್ಚಿಸಲಿದ್ದಾರೆ. ಜಾನ್ವಿ ಅವರ ಹಾಲು ಕಳ್ಳತನ ಹಾಗೂ 'ಕಲರ್ಸ್ ಅವರು ಉಳಿಸುತ್ತಾರೆ' ಎಂಬ ಹೇಳಿಕೆ, ಧ್ರುವಂತ್ ರಕ್ಷಿತಾ ಕುರಿತ ಕಮೆಂಟ್‌ಗಳು, ಗಿಲ್ಲಿಯ ಕ್ಯಾಪ್ಟನ್ ರೂಂ ಪ್ರವೇಶ ಮತ್ತು ಅಶ್ವಿನಿ, ಸುಧಿ ಕಳಪೆ ಬಗ್ಗೆ ಈ ವಾರ ಚರ್ಚೆಗಳು ನಡೆವ ಸಾಧ್ಯತೆ ಇದೆ.

ಬಿಗ್ ಬಾಸ್ ಕನ್ನಡ ಸೀಸನ್ 12ರ ಏಳನೇ ವಾರದ ವೀಕೆಂಡ್ ಬಂದಿದೆ. ಸುದೀಪ್ ಅವರು ವೇದಿಕೆ ಮೇಲೆ ಆಗಮಿಸಿ ಹಲವು ಸ್ಪರ್ಧಿಗಳಿಗೆ ಪಾಠ ಹೇಳಿ ಹೋಗಲಿದ್ದಾರೆ. ಕಳೆದ ವಾರದಂತೆ ಈ ವಾರವೂ ಸಾಕಷ್ಟು ಬೆಳವಣಿಗೆಗಳು ನಡೆದಿವೆ. ಈ ಬಗ್ಗೆ ಸುದೀಪ್ ಅವರು ಚರ್ಚೆ ಮಾಡಲೇಬೇಕಾದ ಕೆಲವು ವಿಷಯಗಳು ಇವೆ. ಈ ವಿಷಯಗಳನ್ನು ಸುದೀಪ್ ಅವರು ಪ್ರಸ್ತಾಪ ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಜಾನ್ವಿ ವಿಚಾರ
ಜಾನ್ವಿ ಅವರು ಈ ವಾರ ಎರಡೆರಡು ತಪ್ಪುಗಳನ್ನು ಮಾಡಿದ್ದರು. ಎಲ್ಲರಿಗೂ ಸಿಗಬೇಕಿದ್ದ ಹಾಲನ್ನು ಕದ್ದು ಇಟ್ಟಿದ್ದು ಒಂದು ಕಡೆಯಾದರೆ, ಕಲರ್ಸ್ ಅವರು ಸ್ಪರ್ಧಿಗಳನ್ನು ಉಳಿಸುತ್ತಾರೆ ಎಂದು ಹೇಳಿದ್ದು ಮತ್ತೊಂದು ಕಡೆ. ಈ ವಿಚಾರ ಪ್ರಮುಖವಾಗಿ ಚರ್ಚೆ ಆಗಲೇಬೇಕಾದ ವಿಷಯ ಆಗಿದೆ. ಇದು ಗಂಭೀರವಾದ ವಿಷಯ ಆಗಿರುವುದರಿಂದ ಈ ಬಗ್ಗೆ ಹೆಚ್ಚು ಹೊತ್ತು ಚರ್ಚೆ ನಡೆಯೋ ಸಾಧ್ಯತೆ ಇದೆ.
ಜಾನ್ವಿ ಹಾಗೂ ಅಶ್ವಿನಿ ಮೈಕ್ ಇಲ್ಲದೆ ಮಾತನಾಡಿದ ವಿಷಯ
ಈ ಮೊದಲು ಚೇಂಜಿಂಗ್ ರೂಂನಲ್ಲಿ ಮೈಕ್ ಇಲ್ಲದೆ ಕೆಲವು ವಿಷಯಗಳನ್ನು ಜಾನ್ವಿ ಬಳಿ ಮಾತನಾಡಿದ್ದಾಗಿ ಅಶ್ವಿನಿ ಹೇಳಿಕೊಂಡಿದ್ದರು. ಈ ವಿಷಯ ಕೂಡ ಚರ್ಚೆಗೆ ಬರುವ ಸಾಧ್ಯತೆ ಇದೆ.
ಧ್ರುವಂತ್ ವಿಷಯ
ಧ್ರುವಂತ್ ಅವರು ಈ ಬಾರಿ ರಕ್ಷಿತಾ ಅವರನ್ನು ಪದೇ ಪದೇ ಹೀಯಾಳಿಸಿ ಮಾತನಾಡಿದ್ದರು. ಇದಲ್ಲದೆ, ಹುಡುಗಿಯರ ಬಗ್ಗೆ ಅವರು ಮಾಡಿದ ಕಮೆಂಟ್‌ಗಳು ಸರಿ ಇಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ಬಗ್ಗೆಯೂ ಚರ್ಚೆ ಆಗಬೇಕಿದೆ.
ಕಳಪೆ
ಕಳಪೆ ಹಾಗೂ ಉತ್ತಮ ಯಾರಿಗೆ ಕೊಡಬೇಕು ಎಂಬ ಬಗ್ಗೆ ಚರ್ಚೆಗಳನ್ನು ಮಾಡುವಂತಿಲ್ಲ. ಆದರೆ, ಅಶ್ವಿನಿ ಗೌಡ, ಸುಧಿ ಮೊದಲಾದವರು ಈ ಬಗ್ಗೆ ಸಾಕಷ್ಟು ಚರ್ಚೆ ಮಾಡಿದ್ದರು. ಅಂದುಕೊಂಡಂತೆ ಮಾಳುಗೆ ಕಳಪೆ ನೀಡಿದ್ದರು. ಈ ವಿಷಯದ ಬಗ್ಗೆಯೂ ಸುದೀಪ್ ಚರ್ಚೆ ಮಾಡುವ ಸಾಧ್ಯತೆ ಇದೆ.
ಗಿಲ್ಲಿ-ರಕ್ಷಿತಾ ಮಾಡಿದ ತಪ್ಪು
ರಕ್ಷಿತಾ ಶೆಟ್ಟಿ ಈ ವಾರ ಒಂದು ತಪ್ಪು ಮಾಡಿದ್ದರು. ಗಿಲ್ಲಿ ಅವರಿಂದ ಪ್ರಭಾವಿತಗೊಂಡು ಆಟ ಹಾಳು ಮಾಡಿದರು ಎಂಬ ಆರೋಪ ಇದೆ. ಇದರ ಜೊತೆಗೆ ಪಿಸು ಧ್ವನಿಯಲ್ಲಿ ಇವರು ಮಾತನಾಡಿದ್ದರು. ಇನ್ನು, ಗಿಲ್ಲಿ ನಾನು ವಾಯ್ಸ್ ಕ್ಯಾಪ್ಟನ್ ಎಂದುಕೊಂಡು ಕ್ಯಾಪ್ಟನ್ ರೂಂ ಒಳಗೆ ಹೋಗುವ ಕೆಲಸ ಮಾಡುತ್ತಿದ್ದಾರೆ. ಕ್ಯಾಪ್ಟನ್ ಹೊರತುಪಡಿಸಿ ಮತ್ಯಾರೂ ಕ್ಯಾಪ್ಟನ್ ರೂಂ ಒಳಗೆ ಹೋಗುವಂತಿಲ್ಲ. ಆದರೂ ಪದೇ ಪದೇ ಗಿಲ್ಲಿಯಿಂದ ಈ ತಪ್ಪು ಆಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




