ಅದ್ಧೂರಿಯಾಗಿ ಉದ್ಘಾಟನೆಯಾಯ್ತು ಬಿಗ್​ಬಾಸ್: ಸ್ಪರ್ಧಿಗಳು ಯಾರ್ಯಾರು?

Bigg Boss Hindi season 19: ಹಿಂದಿ ಬಿಗ್​ಬಾಸ್ ಸೀಸನ್ 19 ಪ್ರಾರಂಭ ಆಗಿದೆ. ಸಲ್ಮಾನ್ ಖಾನ್ ಅದ್ಧೂರಿಯಾಗಿ ಶೋ ಪ್ರಾರಂಭಿಸಿದ್ದಾರೆ. 19ನೇ ಸೀಸನ್​​ನಲ್ಲಿ 19 ಸ್ಪರ್ಧಿಗಳು ಬಿಗ್​ಬಾಸ್ ಮನೆ ಸೇರಿದ್ದಾರೆ. 19 ಸ್ಪರ್ಧಿಗಳ ಹೆಸರು, ಹಿನ್ನೆಲೆಯ ಬಗ್ಗೆ ಮಾಹಿತಿ ಇಲ್ಲಿದೆ. ಈ ಬಾರಿ ಯಾರು ಗೆಲ್ಲಲಿದ್ದಾರೆ? ಯಾರು ಹೊರ ಹೋಗಲಿದ್ದಾರೆ?

ಅದ್ಧೂರಿಯಾಗಿ ಉದ್ಘಾಟನೆಯಾಯ್ತು ಬಿಗ್​ಬಾಸ್: ಸ್ಪರ್ಧಿಗಳು ಯಾರ್ಯಾರು?
Salman Khan

Updated on: Aug 24, 2025 | 11:05 PM

ಬಿಗ್​ಬಾಸ್ ಸೀಸನ್ ಮತ್ತೆ ಪ್ರಾರಂಭ ಆಗಿದೆ. ಹಲವು ಭಾಷೆಗಳಲ್ಲಿ ಬಿಗ್​ಬಾಸ್ ಪ್ರಾರಂಭಕ್ಕೆ ದಿನಾಂಕಗಳು ನಿಗದಿ ಆಗಿವೆ. ಮಲಯಾಳಂ ಬಿಗ್​ಬಾಸ್ ಈಗಾಗಲೇ ಆರಂಭವಾಗಿದೆ. ಇಂದು (ಆಗಸ್ಟ್ 24) ಹಿಂದಿ ಬಿಗ್​ಬಾಸ್ ಸೀಸನ್ 19 ಅದ್ಧೂರಿಯಾಗಿ ಪ್ರಾರಂಭವಾಗಿದೆ. ಜಿಯೋ ಹಾಟ್​ಸ್ಟಾರ್ ಮತ್ತು ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಪ್ರತಿ ಬಾರಿಯಂತೆ ಸಲ್ಮಾನ್ ಖಾನ್ ಸ್ಟೈಲ್ ಆಗಿ ವೇದಿಕೆ ಎಂಟ್ರಿ ನೀಡಿ ಬಿಗ್​ಬಾಸ್ ಸೀಸನ್ 19ಕ್ಕೆ ಚಾಲನೆ ನೀಡಿದ್ದು ಸ್ಪರ್ಧಿಗಳನ್ನು ಸ್ವಾಗತ ಮಾಡಿದ್ದಾರೆ.

ಈ ಬಾರಿಯ ಹಿಂದಿ ಬಿಗ್​ಬಾಸ್ ಭಿನ್ನವಾಗಿರಲಿದೆ. ಈ ಬಾರಿಯ ಬಿಗ್​ಬಾಸ್ ಥೀಮ್ ‘ಪ್ರಜಾಪ್ರಭುತ್ವ’ ಆಗಿದೆ. ಈ ಬಾರಿ ಮನೆಯ ಸ್ಪರ್ಧಿಗಳಿಗೆ ಹೆಚ್ಚಿನ ಸ್ವಾತಂತ್ರ್ಯ ಇರಲಿದೆ. ಟಾಸ್ಕ್​​ಗಳು, ಇತರೆ ಕೆಲವು ನಿಯಮಗಳ ಮೇಲೆ ಬಿಗ್​ಬಾಸ್​ಗೆ ಯಾವುದೇ ಹಿಡಿತ ಇರುವುದಿಲ್ಲ. ಮನೆಯ ಒಳಗಿನ ವಿಚಾರಗಳನ್ನು ಸ್ಪರ್ಧಿಗಳೇ ನಿರ್ಧರಿಸಲಿದ್ದಾರೆ. ಮನೆಯ ಜಗಳಗಳು, ಗಾಸಿಪ್​​ಗಳು ಇನ್ನಿತರೆಗಳ ಬಗ್ಗೆಯೂ ಸಹ ಬಿಗ್​ಬಾಸ್ ಮೌನವಾಗಿಯೇ ಇರಲಿದ್ದಾರೆ.

ಬಿಗ್​ಬಾಸ್ ಸೀಸನ್ 19ರ ಮೊದಲ ಸ್ಪರ್ಧಿಯಾಗಿ ಜನಪ್ರಿಯ ಟಿವಿ ತಾರೆ ಅನ್ಶೂರ್ ಕೌರ್ ಎಂಟ್ರಿ ನೀಡಿದರು. ಅವರ ಬಳಿಕ ‘ಗ್ಯಾಂಗ್ಸ್ ಆಫ್ ವಸೇಪುರ್’ ನಟ, ಬರಹಗಾರ ಜೀಶಾನ್ ಖಾದ್ರಿ ಎಂಟ್ರಿ ಕೊಟ್ಟರು. ಪ್ರತಿಯೊಬ್ಬರನ್ನು ಸಲ್ಮಾನ್ ಖಾನ್ ಸ್ವಾಗತಿಸಿ ಅವರ ಪರಿಚಯ ಮಾಡಿಕೊಟ್ಟರು. ಬಳಿಕ ಬಂದಿದ್ದು 2018ರ ಮಿಸ್ ಏಷಿಯಾ ತಾನ್ಯಾ ಮಿತ್ತಲ್.

ಬಳಿಕ ಪ್ರೇಮಿಗಳಾದ ಆವೇಜ್ ದರ್ಬಾರ್ ಮತ್ತು ನಗ್ಮಾ ಮಿರಾಜ್​ಕರ್ ಹಾಡುತ್ತಾ-ಕುಣಿಯುತ್ತಾ ಬಿಗ್​ಬಾಸ್​ಗೆ ಎಂಟ್ರಿ ಕೊಟ್ಟರು. ಆರನೇ ಸ್ಪರ್ಧಿಯಾಗಿ 2018ರ ಮಿಸ್ ಯೂನಿವರ್ಸ್ ದಿವಾ ವಿಜೇತೆ ನೇಹಲ್ ಚುಡಾಸಮಾ ಎಂಟ್ರಿ ಕೊಟ್ಟರು. ಏಳು ಮತ್ತು ಎಂಟನೇ ಸ್ಪರ್ಧಿಗಳಾಗಿ ನಟ ಮತ್ತು ಸೋಷಿಯಲ್ ಮೀಡಿಯಾ ಇನ್​ಫ್ಲ್ಯುಯೆನ್ಸರ್​ಗಳಾದ ಅಭಿಷೇಕ್ ಬಜಾಜ್ ಮತ್ತು ಬಶೀರ್ ಅಲಿ ಅವರುಗಳು ಎಂಟ್ರಿ ಕೊಟ್ಟರು.

ಇದನ್ನೂ ಓದಿ:Bigg Boss Kannada 12: ಮತ್ತೆ ಬಂತು ಬಿಗ್​ಬಾಸ್: ಈ ಸಲ ಕಿಚ್ಚು ಹೆಚ್ಚು

9ನೇ ಸ್ಪರ್ಧಿಯಾಗಿ ಜನಪ್ರಿಯ ಟಿವಿ ಮತ್ತು ಸಿನಿಮಾ ನಟ ಗೌರವ್ ಖನ್ನಾ ಎಂಟ್ರಿ ಕೊಟ್ಟರು. 10ನೇ ಸ್ಪರ್ಧಿಯಾಗಿ ಪೋಲಿಶ್ ನಟಿ ನಟಾಲಿಯಾ ಜನೋಸ್ಜೆಕ್ ಆಗಮಿಸಿದರು. ಈಕೆ ಪೋಲಂಡ್​​ನಿಂದ ಬಂದಿದ್ದಾರೆ. ಖ್ಯಾತ ಸ್ಟ್ಯಾಂಡ್ ಅಪ್ ಕಮಿಡಿಯನ್ ಪ್ರಣಿತ್ ಮೋರೆ 11ನೇ ಸ್ಪರ್ಧಿಯಾಗಿ ಬಿಗ್​ಬಾಸ್ ಮನೆ ಸೇರಿದ್ದಾರೆ. ವೇದಿಕೆ ಮೇಲೆ ಕೆಲ ಒಳ್ಳೆ ಚಟಾಕಿಗಳನ್ನು ಇವರು ಹಾರಿಸಿದರು.

ಭೋಜ್ಪುರಿ ನಟಿ ನೀಲಮ್ ಗಿರಿ 12ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟರೆ ಕಾಶ್ಮೀರದ ಸುಂದರಿ ಫರ್ಹಾನಾ ಭಟ್ 13ನೇ ಸ್ಪರ್ಧಿಯಾಗಿ ಎಂಟ್ರಿ ನೀಡಿದರು. 14ನೇ ಸ್ಪರ್ಧಿಯಾಗಿ ಹಿರಿಯ ನಟಿ ಕುನಿಕಾ ಸದಾನಂದ್ ಎಂಟ್ರಿ ನೀಡಿದರು. ಪ್ರಸ್ತುತ ಬಿಗ್​ಬಾಸ್ ಮನೆಯ ಹಿರಿಯ ಸದಸ್ಯೆ ಈಕೆ. ಪ್ರೇಕ್ಷಕರ ಮತದಾನ ಆಧರಿಸಿ ಮೃದಾಲ್ ತಿವಾರಿ ಬಿಗ್​ಬಾಸ್ ಮನೆಗೆ ಎಂಟ್ರಿ ನೀಡಿದರು. ಅವರ ಹಿಂದೆಯೇ ಖ್ಯಾತ ಗಾಯಕ ಅಮಾಲ್ ಮಲ್ಲಿಕ್ ಬಿಗ್​ಬಾಸ್ ಸೀಸನ್ 19ರ ಕೊನೆಯ ಸ್ಪರ್ಧಿಯಾಗಿ ಮನೆ ಪ್ರವೇಶಿಸಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ