ಈ ಬಾರಿ ಬಿಗ್ ಬಾಸ್ ನಿರೂಪಣೆಗೆ ನಾಗಾರ್ಜುನ ಪಡೆಯುವ ಸಂಭಾವನೆ ಎಷ್ಟು ಕೋಟಿ?
ಟಾಲಿವುಡ್ ಸ್ಟಾರ್ ಹೀರೋ ನಾಗಾರ್ಜುನ ಅವರು ತೆಲುಗಿನಲ್ಲಿ ಬಿಗ್ ಬಾಸ್ ನಿರೂಪಣೆ ಮಾಡಲಿದ್ದಾರೆ. ಹೊಸ ಸೀಸನ್ (ಬಿಗ್ ಬಾಸ್ ತೆಲುಗು 9) ಆರಂಭಕ್ಕೆ ಈಗಾಗಲೇ ಸಕಲ ಸಿದ್ಧತೆ ನಡೆಯುತ್ತಿದೆ. ಈ ಬಾರಿ ನಾಗಾರ್ಜುನ ಅವರ ಸಂಭಾವನೆ ಏರಿಕೆ ಆಗಿದೆ. ಆ ಬಗ್ಗೆ ಇಂಟರೆಸ್ಟಿಂಗ್ ವಿಷಯ ಇಲ್ಲಿದೆ.

ವರ್ಷದಿಂದ ವರ್ಷಕ್ಕೆ ಬಿಗ್ ಬಾಸ್ (Bigg Boss) ರಿಯಾಲಿಟಿ ಶೋ ವ್ಯಾಪ್ತಿ ಹಿರಿದಾಗುತ್ತಲೇ ಇದೆ. ಟಿಆರ್ಪಿ ಏರುತ್ತಲೇ ಇದೆ. ಹಾಗಾಗಿ ಶೋ ಆಯೋಜಕರು ಅದಕ್ಕೆ ಸುರಿಯುವ ಬಂಡವಾಳ ಕೂಡ ಪ್ರತಿ ವರ್ಷ ಹೆಚ್ಚಾಗುತ್ತಿದೆ. ಹಾಗೆಯೇ ಶೋ ನಿರೂಪಣೆ ಮಾಡುವ ಸ್ಟಾರ್ ನಟರ ಸಂಭಾವನೆಯಲ್ಲೂ ಭಾರಿ ಏರಿಕೆ ಆಗುತ್ತಿದೆ. ಕನ್ನಡದಲ್ಲಿ ಕಿಚ್ಚ ಸುದೀಪ್, ಹಿಂದಿಯಲ್ಲಿ ಸಲ್ಮಾನ್ ಖಾನ್, ತೆಲುಗಿನಲ್ಲಿ ನಾಗಾರ್ಜುನ (Nagarjuna) ಅವರು ಬಿಗ್ ಬಾಸ್ ಕಾರ್ಯಕ್ರಮದ ನಿರೂಪಣೆ ಮಾಡುತ್ತಿದ್ದಾರೆ. ತೆಲುಗು ಬಿಗ್ ಬಾಸ್ ಹೊಸ ಆವೃತ್ತಿಯ ನಿರೂಪಣೆ ಮಾಡಲು ನಾಗಾರ್ಜುನ ಪಡೆಯಲಿರುವ ಸಂಭಾವನೆ (Nagarjuna Bigg Boss Remuneration) ಬಗ್ಗೆ ಅಚ್ಚರಿಯ ಮಾಹಿತಿ ಕೇಳಿಬಂದಿದೆ.
ಟಾಲಿವುಡ್ನಲ್ಲಿ ನಾಗಾರ್ಜುನ ಅವರು ಸ್ಟಾರ್ ಹೀರೋ. ಇಂದಿಗೂ ಅವರಿಗೆ ಸಖತ್ ಬೇಡಿಕೆ ಇದೆ. ಇತ್ತೀಚೆಗೆ ಬಿಡುಗಡೆ ಆದ ‘ಕೂಲಿ’ ಸಿನಿಮಾದಲ್ಲಿ ಅವರು ಅಬ್ಬಿಸಿದ್ದಾರೆ. ಹಾಗೆಯೇ, ಬಿಗ್ ಬಾಸ್ ತೆಲುಗು 9ನೇ ಸೀಸನ್ ನಿರೂಪಣೆ ಮಾಡಲು ಅವರು ಸಜ್ಜಾಗಿದ್ದಾರೆ. ಈ ಬಾರಿ ಅವರಿಗೆ ಬಿಗ್ ಬಾಸ್ ಆಯೋಜಕರಿಂದ ಬರೋಬ್ಬರಿ 35 ಕೋಟಿ ರೂಪಾಯಿ ಸಂಭಾವನೆ ಸಿಗಲಿದೆ ಎಂದು ಹೇಳಲಾಗುತ್ತಿದೆ.
ಹಿಂದಿನ ಸೀಸನ್ನಲ್ಲಿ ನಾಗಾರ್ಜುನ ಅವರು 20 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದರು ಎಂಬ ಮಾಹಿತಿ ಇದೆ. ಆದರೆ ಈ ಸೀಸನ್ನಲ್ಲಿ ಅವರ ಸಂಭಾವನೆ ಏಕಾಏಕಿ ಏರಿಕೆ ಆಗಿದೆ. 35 ಕೋಟಿ ರೂಪಾಯಿ ಅವರ ಜೇಬು ಸೇರಲಿದೆ. ಆದರೆ ಈ ಬಗ್ಗೆ ಯಾರೂ ಅಧಿಕೃತವಾಗಿ ಹೇಳಿಕೆ ನೀಡಿಲ್ಲ. ಕನ್ನಡದಲ್ಲಿ ಕಿಚ್ಚ ಸುದೀಪ್ ಅವರ ಸಂಭಾವನೆ ಕೂಡ ಏರಿಕೆ ಆಗಿದೆ. ಎಷ್ಟು ಎಂಬುದು ಗೌಪ್ಯವಾಗಿದೆ.
ಎಲ್ಲ ಭಾಷೆಯಲ್ಲೂ ಬಿಗ್ ಬಾಸ್ ಕಾರ್ಯಕ್ರಮ ಫೇಮಸ್ ಆಗಿದೆ. ತೆಲುಗಿನಲ್ಲಿ ಈವರೆಗೂ ಒಟ್ಟು 8 ಸೀಸನ್ಗಳು ಯಶಸ್ವಿಯಾಗಿ ಮುಗಿದಿವೆ. 9ನೇ ಸೀಸನ್ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ‘ಬಿಗ್ ಬಾಸ್ ತೆಲುಗು 9’ ಆರಂಭ ಆಗಲಿದೆ. ಯಾವೆಲ್ಲ ಸ್ಪರ್ಧಿಗಳು ಬರಬಹುದು ಎಂಬ ಬಗ್ಗೆ ವೀಕ್ಷಕರಿಗೆ ಸಿಕ್ಕಾಪಟ್ಟೆ ಕುತೂಹಲ ಇದೆ.
ಇದನ್ನೂ ಓದಿ: ಈ ಬಾರಿ ಬಿಗ್ ಬಾಸ್ ಮನೆಗೆ ಬರ್ತಾರಾ ಅಂಡರ್ಟೇಕರ್, ಮೈಕ್ ಟೈಸನ್?
ಹಿಂದಿಯಲ್ಲಿ ನಟ ಸಲ್ಮಾನ್ ಖಾನ್ ಅವರು ಬಿಗ್ ಬಾಸ್ ಕಾರ್ಯಕ್ರಮ ನಡೆಸಿ ಕೊಡುತ್ತಿದ್ದಾರೆ. ಈ ಬಾರಿ ಹೊಸ ಥೀಮ್ನಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋ ನಡೆಯಲಿದೆ. ಮೂರು ತಿಂಗಳಿಗೂ ಹೆಚ್ಚಿ ಕಾಲ ಈ ಶೋ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಕನ್ನಡದಲ್ಲಿ ಕೂಡ ಸಾಕಷ್ಟು ಹೊಸತನ ಪರಿಚಯಿಸಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




