ಹನುಮಂತ ಫಿನಾಲೆಗೆ ಎಂಟ್ರಿ: ಮೀಸಲಾತಿ ವ್ಯವಸ್ಥೆಗೆ ಹೋಲಿಸಿದ ನಟಿ ಹಂಸ

|

Updated on: Jan 24, 2025 | 8:07 PM

Bigg Boss Kannada season 11: ಬಿಗ್​ಬಾಸ್ ಕನ್ನಡ ಸೀಸನ್ 11 ರ ಫಿನಾಲೆ ಕೆಲವೇ ಗಂಟೆಗಳಲ್ಲಿ ಪ್ರಾರಂಭವಾಗಲಿದೆ. ಫಿನಾಲೆಯಲ್ಲಿ ಆರು ಮಂದಿ ಇದ್ದು, ಹನುಮಂತು ಫಿನಾಲೆಗೆ ಬಂದ ಮೊದಲಿಗ. ಇದೇ ಸೀಸನ್​ನ ಸ್ಪರ್ಧಿ ಆಗಿದ್ದ ನಟಿ ಹಂಸ, ಹನುಮಂತನ ಫಿನಾಲೆ ಎಂಟ್ರಿಯನ್ನು ಮೀಸಲಾತಿ ವ್ಯವಸ್ಥೆಗೆ ಹೋಲಿಕೆ ಮಾಡಿದ್ದಾರೆ.

ಹನುಮಂತ ಫಿನಾಲೆಗೆ ಎಂಟ್ರಿ: ಮೀಸಲಾತಿ ವ್ಯವಸ್ಥೆಗೆ ಹೋಲಿಸಿದ ನಟಿ ಹಂಸ
Hanumanthu Hamsa
Follow us on

ಬಿಗ್​ಬಾಸ್ ಕನ್ನಡ ಸೀಸನ್ 11ರ ಫಿನಾಲೆ ಈ ವೀಕೆಂಡ್ ನಡೆಯಲಿದೆ. ನಟಿ ಹಂಸ ಸಹ ಇದೇ ಸೀಸನ್​ನ ಸ್ಪರ್ಧಿ ಆಗಿದ್ದರು. ಆದರೆ ಕೆಲವೇ ವಾರಕ್ಕೆ ಎಲಿಮಿನೇಟ್ ಆದರು. ಬಿಗ್​ಬಾಸ್ ಫಿನಾಲೆ ವಾರ ಇದಾಗಿದ್ದು, ಹನುಮಂತ, ಮೋಕ್ಷಿತಾ, ಮಂಜು, ತ್ರಿವಿಕ್ರಮ್, ಭವ್ಯಾ ಮತ್ತು ರಜತ್ ಅವರು ಫಿನಾಲೆ ತಲುಪಿದ್ದಾರೆ. ಇವರಲ್ಲಿ ಮೊದಲಿಗೆ ಫಿನಾಲೆ ತಲುಪಿದ್ದು ಹನುಮಂತು. ಅದೂ ಟಾಸ್ಕ್ ಗೆದ್ದು. ಹನುಮಂತನ ಫಿನಾಲೆ ಎಂಟ್ರಿ ಬಗ್ಗೆ ನಟಿ ಹಂಸ ಮಾತನಾಡಿದ್ದು, ಹನುಮಂತನ ಪಯಣವನ್ನು ಮೀಸಲಾತಿ ವ್ಯವಸ್ಥೆಗೆ ಹೋಲಿಕೆ ಮಾಡಿದ್ದಾರೆ.

‘ನಾನು ಬಿಗ್​ಬಾಸ್ ಮನೆಯಲ್ಲಿದ್ದಾಗ ಧನರಾಜ್ ಮತ್ತು ಹನುಮಂತು ಯಾವಾಗಲೂ ಯಾವುದೋ ಮೂಲೆಯಲ್ಲಿ ಇರುತ್ತಿದ್ದರು. ನಮ್ಮಗಳ ಜೊತೆಗೆ ಸರಿಯಾಗಿ ಸೇರುತ್ತಲೇ ಇರಲಿಲ್ಲ. ಟಾಸ್ಕ್​ನಲ್ಲಿ ಸಹ ಅಷ್ಟಕ್ಕಷ್ಟೆ ಇರುತ್ತಿದ್ದರು. ಎಲ್ಲೋ ಕಳೆದು ಹೋಗಿರುತ್ತಿದ್ದರು. ಆದರೆ ಈಗ ಹನುಮಂತು ಫಿನಾಲೆ ವರೆಗೆ ಬಂದಿದ್ದಾರೆ. ಸೈಲೆಂಟ್ ಆಗಿ ಇದ್ದುಕೊಂಡೇ ಅವರು ಇಲ್ಲಿ ವರೆಗೆ ಬಂದಿದ್ದಾರೆ, ಅವರು ಬಹಳ ಅದೃಷ್ಟವಂತ’ ಎಂದಿದ್ದಾರೆ ಹಂಸ. ಆ ಮೂಲಕ ಏನೂ ಶ್ರಮ ಹಾಕದೆ ಫಿನಾಲೆ ತಲುಪಿದ್ದಾರೆ ಎಂಬರ್ಥದ ಮಾತುಗಳನ್ನಾಡಿದ್ದಾರೆ.

‘ಜನ ಯಾರನ್ನಾದರೂ ಇಷ್ಟ ಪಟ್ಟರೆ ಅವರನ್ನು ತಲೆ ಮೇಲೆ ಎತ್ತಿಕೊಂಡು ಕುಣಿಸುತ್ತಾರೆ. ಅವನ ಮುಗ್ಧತೆ ಇಷ್ಟ ಆಯ್ತೇನೋ, ಅವನ ಸಿಂಪಥಿ ಪ್ಲಸ್ ಆಗಿರಬಹುದು, ಯಾವುದೇ ರಿಯಾಲಿಟಿ ಶೋನಲ್ಲಿಯೂ ಹೀಗೆಯೇ ನಡೆಯುತ್ತದೆ. ಬಡವರ ಮನೆ ಮಕ್ಳು, ಹಳ್ಳಿಯಿಂದ ಬಂದಿರೋರು ಸುಲಭವಾಗಿ ಫಿನಾಲೆ ವರೆಗೂ ಹೋಗ್ತಾರೆ’ ಎಂದಿದ್ದಾರೆ ಹಂಸ.

ಇದನ್ನೂ ಓದಿ:ಸಂಕ್ರಾಂತಿ ಹಬ್ಬಕ್ಕೆ ಬಿಗ್ ಬಾಸ್ ಸ್ಪರ್ಧಿ ಹಂಸಾ ವಿಶೇಷ ಫೋಟೋಶೂಟ್

ಹನುಮನ ಫಿನಾಲೆ ತಲುಪಿರುವುದನ್ನು ಮೀಸಲಾತಿ ವ್ಯವಸ್ಥೆಯೊಂದಿಗೆ ಹೋಲಿಸಿ ಮಾತನಾಡಿರುವ ಹಂಸ, ‘ಶಾಲೆ, ಕಾಲೇಜುಗಳಲ್ಲಿ ವ್ಯವಸ್ಥೆ ಇರುತ್ತಲ್ಲ, ಜನರಲ್ ಕ್ಯಾಟಗರಿಯವರು ಶುಲ್ಕಗಳನ್ನು ಪೂರ್ತಿ ಕಟ್ಟಬೇಕು, ಬೇರೆ ಕ್ಯಾಟಗರಿಯವರು ಕಡಿಮೆ ಶುಲ್ಕ ಕಟ್ಟಬೇಕು. ನಾವು (ಜನರಲ್) ಎಷ್ಟೇ ಓದಿದರೂ ಸಹ ನೌಕರಿ ಕೊಡುವಾಗ ಮೊದಲು ಅವರನ್ನೇ (ಇತರೆ ವರ್ಗದವರು) ಪರಿಗಣಿಸುತ್ತಾರೆ. ನಮ್ಮನ್ನು ಕಡೆಗಣಿಸುತ್ತಾರೆ. ರಿಯಾಲಿಟಿ ಶೋಗಳಲ್ಲಿಯೂ ಹಾಗೆ ಆಗುತ್ತಿದೆ’ ಎಂದಿದ್ದಾರೆ ಹಂಸ.

‘ರಿಯಾಲಿಟಿ ಶೋಗಳಲ್ಲಿ ಸಿಂಪಥಿ ಹೆಚ್ಚಾಗಿ ವರ್ಕ್ ಆಗುತ್ತಿದೆ. ನಮಗೆಲ್ಲ ಇವರೇನು ಬಿಡಪ್ಪ ಬೆಂಗಳೂರಿನವರು, ಉಳ್ಳವರು ಇವರನ್ಯಾಕೆ ಗೆಲ್ಲಿಸೋದು ಎಂದುಕೊಂಡು, ಅಂಥಹವರನ್ನೇ ಗೆಲ್ಲಿಸುತ್ತಾರೆ’ ಎಂದಿದ್ದಾರೆ ನಟಿ ಹಂಸ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ