‘ಬಿಗ್ ಬಾಸ್’ ಮನೆಗೆ ಬಂದ ಡಿವೋರ್ಸ್ ಲಾಯರ್; ಕಾರಣವೇನು?
ಬಿಗ್ ಬಾಸ್ ಕನ್ನಡದ ಕೊನೆಯ ವಾರದಲ್ಲಿ ಡಿವೋರ್ಸ್ ವಕೀಲರ ಆಗಮನ ಕುತೂಹಲ ಮೂಡಿಸಿದೆ. ಜನವರಿ 27ರಿಂದ ‘ವಧು’ ಎಂಬ ಹೊಸ ಧಾರಾವಾಹಿ ಆರಂಭವಾಗುತ್ತಿದೆ. ಈ ಧಾರಾವಾಹಿಯ ನಾಯಕಿ ಡಿವೋರ್ಸ್ ವಕೀಲೆಯಾಗಿ ನಟಿಸುತ್ತಿದ್ದಾರೆ. ಈ ಧಾರಾವಾಹಿಯ ಪ್ರಮೋಷನ್ ಬಿಗ್ ಬಾಸ್ನಲ್ಲಿ ನಡೆದಿದೆ .
ಬಿಗ್ ಬಾಸ್ ಕೊನೆಯ ವಾರದಲ್ಲಿ ಅನೇಕ ಅತಿಥಿಗಳು ದೊಡ್ಮನೆ ಒಳಗೆ ಬಂದು ಹೋಗಿದ್ದಾರೆ. ಈ ಪೈಕಿ ಅನೇಕರು ಸ್ಪರ್ಧಿಗಳಿಗೆ ಹೊಸ ಸ್ಫೂರ್ತಿ ಕೊಟ್ಟಿದ್ದಾರೆ. ದೊಡ್ಮನೆ ಒಳಗೆ ಬಂದ ಎಲ್ಲಾ ಸ್ಪರ್ಧಿಗಳಿಗೂ ಒಂದು ಕಾರಣ ಇದ್ದೇ ಇರುತ್ತಿತ್ತು. ಈಗ ಬಿಗ್ ಬಾಸ್ ಮನೆಗೆ ಡಿವೋರ್ಸ್ ಲಾಯರ್ ಬಂದಿದ್ದಾರೆ. ಅಷ್ಟಕ್ಕೂ ಅವರ ಆಗಮನ ಆಗಿದ್ದು ಏಕೆ? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಸದ್ಯ ಬಿಗ್ ಬಾಸ್ ಪ್ರಸಾರ ಕಾಣುತ್ತಿದೆ. ಈ ಶೋಗೆ ಜನವರಿ 26ರಂದು ಫಿನಾಲೆ ನಡೆಯಲಿದೆ. ಇದಾದ ಬಳಿಕ ಅಂದರೆ ಜನವರಿ 27ರಿಂದ ಸೋಮವಾರದಿಂದ ಶುಕ್ರವಾರದವರೆಗೆ ‘ವಧು’ ಧಾರಾವಾಹಿ ಪ್ರಸಾರ ಕಾಣಲಿದೆ. ಈ ಧಾರಾವಾಹಿಯ ಕಥಾ ನಾಯಕಿ ದುರ್ಗಾಶ್ರೀ ಅವರು ವಧು ಹೆಸರಿನ ಪಾತ್ರ ಮಾಡಿದ್ದಾರೆ. ವಧು ಡಿವೋರ್ಸ್ ಲಾಯರ್. ಅಭಿಷೇಕ್ ಶ್ರೀಕಾಂತ್ ಅವರು ನಾಯಕನ ಪಾತ್ರ ಮಾಡಿದ್ದಾರೆ.
‘ನಾನು ಡಿವೋರ್ಸ್ ಲಾಯರ್. ನನ್ನ ಮದುವೆ ಮಾಡಬೇಕು ಎಂಬುದು ಅಪ್ಪನ ಕನಸು. ನಾನು ಡಿವೋರ್ಸ್ ಲಾಯರ್ ಎಂದು ಯಾರೂ ನನ್ನ ಮದುವೆ ಆಗೋಕೆ ಒಪ್ಪಲ್ಲ. ನಾನು ಡಿವೋರ್ಸ್ ಲಾಯರ್, ನನಗೆ ಸಂಬಂಧಗಳ ಬಗ್ಗೆ ಬೆಲೆ ಇಲ್ಲ ಎಂಬುದು ಎಲ್ಲರ ನಂಬಿಕೆ ಆಗಿರುತ್ತದೆ. ನನಗೆ ಮದುವೆನೇ ಆಗಲ್ಲ. ನನ್ನ ಮದುವೆ ಗ್ರ್ಯಾಂಡ್ ಆಗಿ ಮಾಡಬೇಕು ಎಂಬುದು ಅಪ್ಪನ ಆಸೆ ಆಗಿರುತ್ತದೆ. ಆದರೆ, ಅದು ಸಾಧ್ಯ ಆಗಲ್ಲ’ ಎಂದು ಕಥಾ ನಾಯಕಿ ದುರ್ಗಾಶ್ರೀ ವಿವರಿಸಿದರು.
ಇದನ್ನೂ ಓದಿ: ತಂದೆಯ ಸ್ಥಾನದಲ್ಲಿ ತ್ರಿವಿಕ್ರಮ್ಗೆ ಪತ್ರ ಬರೆದ ಬಿಗ್ ಬಾಸ್; ಈಡೇರಿತು ಕೋರಿಕೆ
‘ದುಡ್ಡಿದೆ, ಚೆನ್ನಾಗಿರುತ್ತೆ ಎಂದುಕೊಂಡಿರುತ್ತೇನೆ. ಆ್ಯನಿವರ್ಸಿ ದಿನ ಹೆಂಡತಿ ಡಿವೋರ್ಸ್ ಕೇಳುತ್ತಾಳೆ’ ಎಂದಿದ್ದಾರೆ ಕಥಾ ನಾಯಕ. ಈ ರೀತಿಯಲ್ಲಿ ಕಥೆ ಸಾಗುತ್ತದೆ. ಈ ಧಾರಾವಾಹಿಗೆ ಪರಮೇಶ್ವರ್ ಗುಂಡ್ಕಲ್ ಕಥೆ ಬರೆದಿದ್ದಾರೆ. ದಿಲೀಪ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಾ ಇದ್ದಾರೆ. ಜನವರಿ 27ರಿಂದ ರಾತ್ರಿ 9.30ಕ್ಕೆ ಧಾರಾವಾಹಿ ಪ್ರಸಾರ ಕಾಣಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:27 am, Fri, 24 January 25