ಗಿಲ್ಲಿ ನಿಜವಾದ ಎಂಟರ್​ಟೇನರ್​; ಬಾಯ್ತುಂಬ ಹೊಗಳಿದ ಶಿವಣ್ಣನ ವಿಡಿಯೋ ವೈರಲ್

ಬಿಗ್ ಬಾಸ್ ಕನ್ನಡ ಸೀಸನ್ 12 ಸ್ಪರ್ಧಿ ಗಿಲ್ಲಿ ಅವರ ಜನಪ್ರಿಯತೆ ಹೆಚ್ಚುತ್ತಿದೆ. ಶಿವರಾಜ್​ಕುಮಾರ್ ಅವರು ಗಿಲ್ಲಿಯನ್ನು "ನಿಜವಾದ ಎಂಟರ್​ಟೇನರ್" ಎಂದು ಬಣ್ಣಿಸಿದ ಹಳೆಯ ವಿಡಿಯೋ ವೈರಲ್ ಆಗಿದೆ. ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿಯ ಮನರಂಜನೆ ಗಮನ ಸೆಳೆಯುತ್ತಿದೆ. ಅವರು ಈ ಸೀಸನ್‌ನ ಪ್ರಬಲ ಸ್ಪರ್ಧಿ. ಶಿವಣ್ಣನ ಪ್ರಶಂಸೆ ಅಭಿಮಾನಿಗಳನ್ನು ಮತ್ತಷ್ಟು ಆಕರ್ಷಿಸಿದೆ.

ಗಿಲ್ಲಿ ನಿಜವಾದ ಎಂಟರ್​ಟೇನರ್​; ಬಾಯ್ತುಂಬ ಹೊಗಳಿದ ಶಿವಣ್ಣನ ವಿಡಿಯೋ ವೈರಲ್
ಗಿಲ್ಲಿ-ಶಿವಣ್ಣ
Edited By:

Updated on: Dec 04, 2025 | 7:39 AM

ಗಿಲ್ಲಿ ನಟ (Gilli Nata) ಅವರು ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿ ಆಗಿದ್ದಾರೆ. ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಮಾನಿ ಬಳಗ ಹುಟ್ಟಿಕೊಂಡಿದ್ದನ್ನು ಕಾಣಬಹುದು. ಅವರು ಈ ಸೀಸನ್ ವಿನ್ನರ್ ಎಂದು ಅವರ ಫ್ಯಾನ್ಸ್ ಭಾವಿಸಿದ್ದಾರೆ. ಅವರು ಒಳ್ಳೆಯ ರೀತಿಯಲ್ಲಿ ಮನರಂಜನೆ ಕೂಡ ನೀಡುತ್ತಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಗಿಲ್ಲಿ ನಿಜವಾದ ಎಂಟರ್​ಟೇನರ್ ಎಂದು ಶಿವರಾಜ್​ಕುಮಾರ್ ಅವರು ಬಾಯ್ತುಂಬ ಹೊಗಳಿದ ಹಳೆಯ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ.

ಗಿಲ್ಲಿ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ಗೆ ಬರುವುದಕ್ಕೂ ಮೊದಲು ಹಲವು ರಿಯಾಲಿಟಿ ಶೋಗಳನ್ನು ಮಾಡಿದ್ದಾರೆ. ಅದರಲ್ಲಿ ಪ್ರಮುಖವಾಗಿ ಗಮನ ಸೆಳೆದಿದ್ದು ಜೀ ಕನ್ನಡದಲ್ಲಿ ಪ್ರಸಾರ ಕಂಡ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್. ಈ ವೇದಿಕೆ ಮೇಲೆ ಗಿಲ್ಲಿ ನಟ ಅವರು ಮಿಂಚಿದ್ದರು. ಅವರು ವೇದಿಕೇ ಏರಿದ್ದಾಗ ಶಿವಣ್ಣ ಹೇಳಿದ ಒಂದು ಸಾಕಷ್ಟು ವೈರಲ್ ಆಗುತ್ತಾ ಇದೆ.

‘ನಿಮ್ಮನ್ನು ಯಾವಾಗಲೂ ನೆನಪಿಸಿಕೊಳ್ಳುತ್ತೇವೆ. ಒಳ್ಳೆಯವರನ್ನು ನೆನಪಿಸಿಕೊಳ್ಳಬೇಕು’ ಎಂದು ಶಿವರಾಜ್​ಕುಮಾರ್ ಹೇಳಿದ್ದರು. ಆ ಬಳಿಕ ರಕ್ಷಿತಾ ಕೂಡ ಮಾತನಾಡಿದರು. ‘ಈ ವೇದಿಕೆಯಿಂದ ಗಿಲ್ಲಿ ಸಾಕಷ್ಟು ಹೆಸರು ಮಾಡಬೇಕು. ಅವರು ದಿ ಡಿಕೆಡಿ’ ಎಂದಿದ್ದರು ರಕ್ಷಿತಾ. ಆಗ ಶಿವಣ್ಣ ಅದರ ಅರ್ಥ ವಿವರಿಸಿದರು. ‘ದಿ ಡಿಕೆಡಿ ಎಂದರೆ ನಿಜವಾದ ಎಂಟರ್​ಟೇನರ್ ಎಂದರ್ಥ’ ಎಂದು ಶಿವಣ್ಣ ಹೇಳಿದರು. ಇದನ್ನು ಕೇಳಿ ಗಿಲ್ಲಿ ಖುಷಿಪಟ್ಟಿದ್ದರು. ‘ನಮ್ಮ ಗಿಲ್ಲಿ ಅಂದರೆ ಇದು’ ಎಂದು ಕೆಲವರು ಈ ವಿಡಿಯೋನ ಶೇರ್ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ರಕ್ಷಿತಾನ ತಬ್ಬಿಕೊಳ್ಳಲು ಹೋದ ಗಿಲ್ಲಿಗೆ ಖಡಕ್ ವಾರ್ನಿಂಗ್ ನೀಡಿದ ಕಾವ್ಯ

ಬಿಗ್ ಬಾಸ್ ಮನೆಯಲ್ಲಿ ಈ ಬಾರಿ ಗಿಲ್ಲಿಗೆ ಯಾರೂ ದೊಡ್ಡ ಪ್ರತಿಸ್ಪರ್ಧಿ ಇಲ್ಲ ಎಂಬಂತಾಗಿದೆ. ಅವರು ಪ್ರತಿ ಹಂತದಲ್ಲೂ ಮನರಂಜನೆ ನೀಡುತ್ತಿದ್ದಾರೆ. ಅವರು ಸಾಕಷ್ಟು ನಗಿಸುತ್ತಿದ್ದಾರೆ. ಅವರ ಜೊತೆ ಮಾತಿಗೆ ನಿಲ್ಲಲು ಯಾರಿಂದಲೂ ಸಾಧ್ಯವಿಲ್ಲ. ಆ ರೀತಿಯಲ್ಲಿ ಅವರು ಮಾತನಾಡುತ್ತಾ ಇದ್ದಾರೆ. ಅವರ ಅಭಿಮಾನಿ ಬಳಗ ಹಿರಿದಾಗಿದೆ. ಅವರು ‘ದಿ ಡೆವಿಲ್’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ದರ್ಶನ್ ಹೀರೋ. ಈ ಚಿತ್ರ ಡಿಸೆಂಬರ್ 11ರಂದು ತೆರೆಗೆ ಬರುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.