Bigg Boss 12 Grand Finale Live Updates: ಫಿನಾಲೆ ಶೂಟಿಂಗ್ ಶುರು, ಬಿಗಿ ಭದ್ರತೆ
Bigg Boss Kannada 12 Grand Finale Live Event Updates: ಬಿಗ್ಬಾಸ್ ಕನ್ನಡ ಸೀಸನ್ 12ರ ಫಿನಾಲೆ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಗಿಲ್ಲಿ, ಕಾವ್ಯಾ, ಅಶ್ವಿನಿ, ರಕ್ಷಿತಾ, ರಘು, ಧನುಶ್ ಅವರುಗಳು ಸ್ಪರ್ಧೆಯಲ್ಲಿದ್ದು, ಇವರಲ್ಲಿ ಒಬ್ಬರು ವಿಜೇತರಾಗಲಿದ್ದಾರೆ. ಬಿಗ್ಬಾಸ್ ಫಿನಾಲೆಯ ಕ್ಷಣ-ಕ್ಷಣದ ಲೈವ್ ಮಾಹಿತಿ ಇಲ್ಲಿದೆ...

LIVE NEWS & UPDATES
-
ಗೆಲ್ಲುವವರು ಯಾರು?
ಫಿನಾಲೆಯಲ್ಲಿ ಆರು ಮಂದಿ ಸ್ಪರ್ಧಿಗಳಿದ್ದಾರೆ. ಗಿಲ್ಲಿ ನಟ, ಧನುಶ್, ಅಶ್ವಿನಿ ಗೌಡ, ರಘು, ಕಾವ್ಯಾ ಮತ್ತು ರಕ್ಷಿತಾ ಶೆಟ್ಟಿ. ಈ ಆರು ಮಂದಿಯಲ್ಲಿ ಒಬ್ಬರು ಈ ಬಾರಿ ವಿನ್ನರ್ ಎನಿಸಿಕೊಳ್ಳಲಿದ್ದಾರೆ.
-
ಶೂಟಿಂಗ್ ಶುರು
ಬಿಗ್ಬಾಸ್ ಕನ್ನಡ ಸೀಸನ್ 12ರ ಫಿನಾಲೆಯ ಚಿತ್ರೀಕರಣ ಈಗಾಗಲೇ ಬಿಡದಿಯ ಜಾಲಿವುಡ್ ಸ್ಟುಡಿಯೋಸ್ನಲ್ಲಿ ಪ್ರಾರಂಭ ಆಗಿದೆ. ಇದೇ ಕಾರಣಕ್ಕೆ ಜಾಲಿವುಡ್ ಸ್ಟುಡಿಯೋ ಬಳಿ ಬಿಗಿ ಬಂದೋಬಸ್ತ್ ಆಯೋಜಿಸಲಾಗಿದೆ.
-
-
ಜಾಲಿವುಡ್ ಸ್ಟುಡಿಯೋ
ಜಾಲಿವುಡ್ ಸ್ಟುಡಿಯೋದ ಗೇಟ್ನ ಎದುರು ಸ್ಪರ್ಧಿಗಳ ಅಭಿಮಾನಿಗಳು ತಮ್ಮ ನೆಚ್ಚಿನ ಸ್ಪರ್ಧಿಗಳ ಫ್ಲೆಕ್ಸ್ ಬ್ಯಾನರ್ಗಳನ್ನು ಹಾಕಿದ್ದಾರೆ. ಒಟ್ಟಾರೆ ಫಿನಾಲೆಗೆ ಭಾರಿ ಕುತೂಹಲದಿಂದ ಎದುರು ನೋಡುತ್ತಿದ್ದಾರೆ.
ಬಿಗ್ಬಾಸ್ ಕನ್ನಡ ಸೀಸನ್ 12ರ ಫಿನಾಲೆ ಇಂದು (ಭಾನುವಾರ) ನಡೆಯಲಿದೆ. ಸೆಪ್ಟೆಂಬರ್ 28, 2025ರಂದು ಪ್ರಾರಂಭವಾದ ಬಿಗ್ಬಾಸ್ ಸೀಸನ್ 12 ಇಂದಿಗೆ 112 ದಿನಗಳನ್ನು ಪೂರೈಸಲಿದೆ. ಫಿನಾಲೆಗೆ ಗಿಲ್ಲಿ ನಟ, ಅಶ್ವಿನಿ ಗೌಡ, ಧನುಶ್, ಕಾವ್ಯಾ, ರಘು ಮತ್ತು ರಕ್ಷಿತಾ ಶೆಟ್ಟಿ ಅವರುಗಳು ಬಂದಿದ್ದಾರೆ. ಈ ಆರರಲ್ಲಿ ಒಬ್ಬರು ಈ ಸೀಸನ್ನ ವಿಜೇತರಾಗಲಿದ್ದಾರೆ. ಒಬ್ಬ ಸ್ಪರ್ಧಿಗೆ 37 ಕೋಟಿಗೂ ಅಧಿಕ ವೋಟು ಬಂದಿದೆ, ಇನ್ನೊಬ್ಬ ಸ್ಪರ್ಧಿಗೂ ಸರಿ ಸುಮಾರು ಇಷ್ಟೆ ಮತಗಳು ಬಂದಿವೆ ಎಂದು ಸುದೀಪ್ ಹೇಳಿರುವುದು ಕುತೂಹಲ ಮೂಡಿಸಿದೆ. ಕೆಲವೇ ಗಂಟೆಗಳಲ್ಲಿ ವಿನ್ನರ್ ಘೋಷಣೆ ಆಗಲಿದೆ. ಬಿಗ್ಬಾಸ್ ಫಿನಾಲೆಯ ಕ್ಷಣ-ಕ್ಷಣದ ಮಾಹಿತಿಯನ್ನು ಇಲ್ಲಿ ಗಮನಿಸಿ…
Published On - Jan 18,2026 2:52 PM




