ಕೆನಡಾದಿಂದ ಬಿಗ್​​ಬಾಸ್​ಗೆ​ ಬಂದ: ವೈಲ್ಡ್ ಕಾರ್ಡ್ ಎಂಟ್ರಿ ಸೂರಜ್ ಸಿಂಗ್ ಯಾರು?

Bigg Boss Kannada season 12: ಬಿಗ್​​ಬಾಸ್ ಕನ್ನಡ ಸೀಸನ್ 12ರಿಂದ ಈ ವಾರ ಮೂವರು ಸ್ಪರ್ಧಿಗಳು ಎಲಿಮಿನೇಟ್ ಆಗಿ ಹೊರಗೆ ಹೋಗಿದ್ದಾರೆ. ಅವರ ಜಾಗಕ್ಕೆ ಮೂವರು ಹೊಸ ಸ್ಪರ್ಧಿಗಳು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ಅವರಲ್ಲಿ ಸೂರಜ್ ಸಿಂಗ್ ಸಹ ಒಬ್ಬರು. ಅಷ್ಟಕ್ಕೂ ಯಾರು ಈ ಸೂರಜ್ ಸಿಂಗ್. ಇವರ ಹಿನ್ನೆಲೆ ಏನು? ಇಲ್ಲಿದೆ ಮಾಹಿತಿ...

ಕೆನಡಾದಿಂದ ಬಿಗ್​​ಬಾಸ್​ಗೆ​ ಬಂದ: ವೈಲ್ಡ್ ಕಾರ್ಡ್ ಎಂಟ್ರಿ ಸೂರಜ್ ಸಿಂಗ್ ಯಾರು?
Sooraj Singh

Updated on: Oct 19, 2025 | 11:29 PM

ಬಿಗ್​​ಬಾಸ್ (Bigg Boss Kannada) ಮನೆಗೆ ಹೊಸದಾಗಿ ಮೂವರು ಸದಸ್ಯರ ಆಗಮನ ಆಗಿದೆ. ಮಂಜು ಭಾಷಿಣಿ, ಅಶ್ವಿನಿ, ಸತೀಶ್ ಅವರು ಈ ವಾರ ಹೊರ ಹೋಗಿದ್ದು ಅವರ ಜಾಗಕ್ಕೆ ಮೂವರನ್ನು ವೈಲ್ಡ್ ಕಾರ್ಡ್ ಮೂಲಕ ಕರೆದುಕೊಂಡು ಬರಲಾಗಿದೆ. ನಟಿ ರಿಷಾ ಗೌಡ, ವಿಲನ್ ಪಾತ್ರಗಳಲ್ಲಿ ಮಿಂಚುತ್ತಿರುವ ಮ್ಯೂಟಂಟ್ ರಘು ಮತ್ತು ಸೂರಜ್ ಸಿಂಗ್ ಅವರುಗಳು ಬಿಗ್​​ಬಾಸ್ ಮನೆ ಪ್ರವೇಶ ಮಾಡಿದ್ದಾರೆ. ಈ ಮೂವರಲ್ಲಿ ಮ್ಯೂಟಂಟ್ ರಘು ಮತ್ತು ರಿಷಾ ಗೌಡ ನಟ-ನಟಿಯರಾಗಿದ್ದಾರೆ. ಆದರೆ ಸೂರಜ್ ಸಿಂಗ್ ಸಿನಿಮಾ ರಂಗಕ್ಕೆ ಸಂಬಂಧಿಸಿದವರಲ್ಲ. ಹಾಗಿದ್ದರೆ ಅವರ ಹಿನ್ನೆಲೆ ಏನು? ಎಲ್ಲಿಂದ ಬಂದವರು?

ಸೂರಜ್ ಸಿಂಗ್ ಅಸಲಿಗೆ ಮೈಸೂರಿನವರಂತೆ. ಆದರೆ ಹಲವು ವರ್ಷ ಕೆನಡಾನಲ್ಲಿದ್ದರು. ಆದರೆ ಇಲ್ಲಿ ಅಮ್ಮ ಒಬ್ಬರೇ ಇದ್ದ ಕಾರಣ ಹಾಗೂ ಕೆನಡಾನಲ್ಲಿ ಒಬ್ಬರಿಗೇ ಇರಲು ಇಷ್ಟವಾಗದೆ ಮೈಸೂರಿಗೆ ಮರಳಿದ್ದಾರೆ. ಅಂದಹಾಗೆ ಸೂರಜ್ ಸಿಂಗ್, ಫ್ಯಾಷನ್ ಪ್ರಿಯ. ಚೆನ್ನಾಗಿ ರೆಡಿ ಆಗಿ ಪಾರ್ಟಿಗಳಿಗೆ ಕಾರ್ಯಕ್ರಮಗಳಿಗೆ ಹೋಗುವುದು ಅವರ ಅಭ್ಯಾಸವಂತೆ. ತಮ್ಮ ಫ್ಯಾಷನ್ ಜ್ಞಾನವನ್ನು ಎಲ್ಲರಿಗೂ ಹಂಚಬೇಕು ಎಂದುಕೊಂಡು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋಗಳನ್ನು ಹಂಚಿಕೊಳ್ಳಲು ಆರಂಭಿಸಿದ್ದರು. ಅದು ಹಿಟ್ ಆಗಿ ಅವರಿಗೆ ಒಳ್ಳೆಯ ಫಾಲೋವರ್​​ಗಳು ಸಿಕ್ಕಿದ್ದಾರೆ.

ಸೂರಜ್ ಸಿಂಗ್ ಅವರು ಫ್ಯಾಷನ್ ಮಾತ್ರವಲ್ಲದೆ ಅಡುಗೆ ಫ್ಯಾಷನ್ ಅನ್ನೂ ಸಹ ಹೊಂದಿದ್ದಾರೆ. ಸೂರಜ್ ಚೆನ್ನಾಗಿ ಅಡುಗೆ ಸಹ ಮಾಡುತ್ತಾರಂತೆ. ಬಿಗ್​​ಬಾಸ್ ಶೋಗೆ ಬರುವ ಮುಂಚೆ ಅವರು ಶೆಫ್ ಆಗಿಯೂ ಕೆಲಸ ಮಾಡಿದ್ದಾರೆ. ಅವರೇ ಹೇಳಿರುವಂತೆ ಸೂರಜ್ ಕನ್ನಡಿಯ ರೀತಿಯಂತೆ. ನನ್ನೊಟ್ಟಿಗೆ ಯಾರು ಚೆನ್ನಾಗಿ ಇರುತ್ತಾರೆಯೋ ಅವರೊಟ್ಟಿಗೆ ನಾನೂ ಚೆನ್ನಾಗಿ ಇರುತ್ತೇನೆ. ಆದರೆ ನನ್ನೊಟ್ಟಿಗೆ ಯಾರು ಕೆಟ್ಟದಾಗಿ ನಡೆದುಕೊಳ್ಳುತ್ತಾರೊ ಅವರ ಜೊತೆ ನಾನು ಇನ್ನೂ ಕೆಟ್ಟದಾಗಿ ನಡೆದುಕೊಳ್ಳುತ್ತೇನೆ. ನನ್ನನ್ನು ಎದುರು ಹಾಕಿಕೊಂಡವರು ಬಹಳ ಕಷ್ಟಪಡಬೇಕಾಗುತ್ತದೆ’ ಎಂದಿದ್ದಾರೆ ಸೂರಜ್.

ಇದನ್ನೂ ಓದಿ:ಕ್ರೀಡಾಪಟು ಆಗಬೇಕಿದ್ದವರು ಬಿಗ್​​ಬಾಸ್ ಆಡಲು ಬಂದಿದ್ದಾರೆ: ಯಾರು ಈ ರಿಷಾ ಗೌಡ?

ಮಲ್ಲಮ್ಮ, ರಕ್ಷಿತಾ ಶೆಟ್ಟಿ ಹೊರತುಪಡಿಸಿ ಈಗ ಬಿಗ್​​ಬಾಸ್ ಮನೆಯಲ್ಲಿ ಇರುವವರೆಲ್ಲರೂ ಟಿವಿ ಅಥವಾ ಸಿನಿಮಾ ರಂಗದವರೇ ಆಗಿದ್ದಾರೆ. ಇಂದು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಆದ ಮೂವರಲ್ಲಿ ಇಬ್ಬರು ಸಿನಿಮಾ ಕ್ಷೇತ್ರಕ್ಕೆ ಸೇರಿದವರೇ ಆಗಿದ್ದಾರೆ. ಸಿನಿಮಾ-ಟಿವಿ ರಂಗದ ಹೊರತಾಗಿರುವ ಅಲ್ಪಸಂಖ್ಯಾತರ ಸಾಲಿಗೆ ಸೂರಜ್ ಸಹ ಸೇರಿಕೊಂಡಿದ್ದಾರೆ. ಬಿಗ್​​ಬಾಸ್ ಮನೆಯ ಸ್ಪರ್ಧಿಗಳು ಈಗಾಗಲೇ ಮನೆಗೆ ಹೊಂದಿಕೊಂಡಿದ್ದಾರೆ. ವೈಲ್ಡ್ ಕಾರ್ಡ್ ಮೂಲಕ ಬಂದವರನ್ನು ಅವರು ತಮ್ಮವರಲ್ಲಿ ಒಬ್ಬರಾಗಿ ಸೇರಿಸಿಕೊಳ್ಳುತ್ತಾರೆಯೋ ಇಲ್ಲವೊ ಎಂಬ ಅನುಮಾನ ಇದೆ.

ಇನ್ನು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟವರಿಗೆ ಇರುವ ಲಾಭವೆಂದರೆ ಅವರು ಶೋ ಅನ್ನು ನೋಡಿಕೊಂಡು ಮನೆಯ ಒಳಗೆ ಹೋಗುತ್ತಿದ್ದಾರೆ. ಅವರಿಗೆ ಯಾರು ಹೇಗೆ? ಯಾರ ವ್ಯಕ್ತಿತ್ವ ಎಂಥಹದ್ದು, ಯಾರ ಬಗ್ಗೆ ಹೊರಗೆ ಒಲವಿದೆ, ಯಾರ ಬಗ್ಗೆ ಇಲ್ಲ ಎಂಬುದು ಅವರಿಗೆ ಗೊತ್ತಿದೆ. ಇದು ಅವರ ಆಟದಲ್ಲಿ ದೊಡ್ಡ ಮಟ್ಟದಲ್ಲಿ ನೆರವಾಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ