ನೀವೇನು ಚಿಕ್ಕಪ್ಪ-ದೊಡ್ಡಪ್ಪನ ಮಕ್ಕಳಾ: ಕೆರಳಿದ ಸುದೀಪ್, ಕಾರಣವೇನು?
Bigg Boss Kannada 12: ಬಿಗ್ಬಾಸ್ ಮನೆಯಲ್ಲಿ ಸಣ್ಣವರು-ದೊಡ್ಡವರೆನ್ನುವ ಭೇದವಿಲ್ಲದೆ ಪರಸ್ಪರ ಏಕವಚನದಲ್ಲಿ ಪರಸ್ಪರ ಬೈದಾಡಿಕೊಳ್ಳುತ್ತಾರೆ. ವೀಕೆಂಡ್ ಬಂದಾಗ ಸುದೀಪ್ ಎದುರು ಇದೇ ವಿಷಯವನ್ನು ಇರಿಸಿಕೊಂಡು ದೂರು ಸಹ ಹೇಳಲಾಗುತ್ತದೆ. ಪ್ರತಿಬಾರಿ ಇದನ್ನು ಕೇಳಿ ಸುಸ್ತಾಗಿದ್ದ ಸುದೀಪ್, ಇಂದು ಇದೇ ವಿಷಯವನ್ನು ಚರ್ಚೆಗೆ ಎತ್ತಿಕೊಂಡರು. ಮಾತ್ರವಲ್ಲದೆ ವಿಕ್ಟಿಮ್ ಕಾರ್ಡ್ ತೋರಿಸುತ್ತಿದ್ದ ಅಶ್ವಿನಿ ಹಾಗೂ ಇನ್ನೂ ಕೆಲವರನ್ನು ತರಾಟೆಗೆ ತೆಗೆದುಕೊಂಡರು.

ಬಿಗ್ಬಾಸ್ (Bigg Boss) ಮನೆಯಲ್ಲಿ ಜಗಳ ಸಾಮಾನ್ಯ. ಅದರಲ್ಲೂ ಈ ಬಾರಿಯಂತೂ ಹಾಸ್ಯ, ಗೆಳೆತನ, ಭಾವನೆಗಳು ಸೈಡಿಗೆ ಹೋಗಿ ಜಗಳವೇ ಪ್ರಧಾನವಾಗಿಬಿಟ್ಟಿದೆ. ಅದರಲ್ಲೂ ಮನೆಯಲ್ಲಿ ಸಣ್ಣವರು-ದೊಡ್ಡವರೆನ್ನುವ ಭೇದವಿಲ್ಲದೆ ಪರಸ್ಪರ ಏಕವಚನದಲ್ಲಿ ಪರಸ್ಪರ ಬೈದಾಡಿಕೊಳ್ಳುತ್ತಾರೆ. ವೀಕೆಂಡ್ ಬಂದಾಗ ಸುದೀಪ್ ಎದುರು ಇದೇ ವಿಷಯವನ್ನು ಇರಿಸಿಕೊಂಡು ದೂರು ಸಹ ಹೇಳಲಾಗುತ್ತದೆ. ಪ್ರತಿಬಾರಿ ಇದನ್ನು ಕೇಳಿ ಸುಸ್ತಾಗಿದ್ದ ಸುದೀಪ್, ಇಂದು ಇದೇ ವಿಷಯವನ್ನು ಚರ್ಚೆಗೆ ಎತ್ತಿಕೊಂಡರು. ಮಾತ್ರವಲ್ಲದೆ ವಿಕ್ಟಿಮ್ ಕಾರ್ಡ್ ತೋರಿಸುತ್ತಿದ್ದ ಅಶ್ವಿನಿ ಹಾಗೂ ಇನ್ನೂ ಕೆಲವರನ್ನು ತರಾಟೆಗೆ ತೆಗೆದುಕೊಂಡರು.
ಈ ಮನೆಯಲ್ಲಿ ಯಾರು ಯಾರ ಬಗ್ಗೆ ಏಕವಚನದಲ್ಲಿ ಮಾತನಾಡಿಲ್ಲ ನನಗೆ ಹೇಳಿ ಎಂದು ಪ್ರಶ್ನೆ ಮಾಡಿದರು ಸುದೀಪ್. ಮನೆಯ ಪ್ರತಿಯೊಬ್ಬರೂ ಸಹ ಇನ್ನೊಬ್ಬರ ಬಗ್ಗೆ ಗೌರವ ಇಲ್ಲದೆ ಮಾತನಾಡಿದ್ದೀರಿ, ಮರ್ಯಾದೆ ಯಾವಾಗಲೂ ದ್ವಿಮುಖವಾಗಿರಬೇಕು, ಅದು ಏಕಮುಖ ಅಲ್ಲ. ನೀವು ಏ ಎಂದು ಮಾತನಾಡಿದರೆ ಎದುರು ಇರುವವರೂ ಸಹ ಹಾಗೆಯೇ ಪ್ರತಿಕ್ರಿಯೆ ನೀಡುತ್ತಾರೆ ಎಂದರು ಸುದೀಪ್.
ನಿಮಗೆ ಆಗುವ ಅವಮಾನ ಮಾತ್ರ ಅವಮಾನವಾ? ಬೇರೆಯವರಿಗೆ ಆಗುವ ಅವಮಾನ ಅವಮಾನ ಅಲ್ಲವಾ? ಬೇರೆಯವರ ಸಾಧನೆಗಳು ಲೆಕ್ಕಕ್ಕೆ ಇಲ್ಲವಾ? ಎಂದು ಪ್ರಶ್ನೆ ಮಾಡಿದರು. ವಿಶೇಷವಾಗಿ ಅಶ್ವಿನಿ ಕುರಿತಾಗಿ ಮಾತನಾಡಿದ ಸುದೀಪ್, ‘ನೀವು ಯಾರಾದರೂ ಮಾತನಾಡಿದ ಕೂಡಲೇ ಬೆರಳು ತೋರಿಸಿ, ಏರಿದ ದನಿಯಲ್ಲಿ ಮಾತನಾಡುತ್ತೀರಿ, ಅದರಿಂದ ಸಹಜವಾಗಿಯೇ ಎದುರು ಇರುವವರು ಟ್ರಿಗರ್ ಆಗುತ್ತಾರೆ. ನೀವು ಏ ಎಂದಾಗ ಸಹಜವಾಗಿಯೇ ಎದುರು ಇರುವವರು ಏ ಎನ್ನುತ್ತಾರೆ. ಹೌದು ನೀವು ದೊಡ್ಡವರು, ಹಾಗೆಯೇ ರಘು ಸಹ ನಿಮಗಿಂತಲೂ ವಯಸ್ಸಿನಲ್ಲಿ ದೊಡ್ಡವರು, ಅವರಿಗೂ ನೀವು ಅದೇ ಭಾಷೆಯಲ್ಲಿ ಮಾತನಾಡಿದ್ದೀರಿ’ ಎಂದರು ಸುದೀಪ್.
ಇದನ್ನೂ ಓದಿ:ಅಶ್ವಿನಿ ಬಳಸಿದ ಕೆಟ್ಟ ಪದಗಳ ಆಡಿಯೋ ಹಾಕಿದ ಸುದೀಪ್; ಕೇಳೋಕೆ ಸಾಧ್ಯವಿಲ್ಲ
ಇಡೀ ಮನೆಯಲ್ಲಿ ಯಾರೂ ಸಹ ಇನ್ನೊಬ್ಬರಿಗೆ ಗೌರವದಿಂದ ಸಂಭೋದಿಸುತ್ತಿಲ್ಲ ಎಂದ ಸುದೀಪ್, ‘ಏ, ಹೋಗು ಬಾ’ ಎಂದು ಮಾತನಾಡಲು ನೀವೇನು ದೊಡ್ಡಪ್ಪ-ಚಿಕ್ಕಪ್ಪನ ಮಕ್ಕಳಾ’ ಎಂದು ಗರಂ ಆದರು. ಬಳಿಕ ಆಡಿಯೋ ಒಂದನ್ನು ಸಹ ಪ್ಲೇ ಮಾಡಿದರು ಸುದೀಪ್, ಆಡಿಯೋನಲ್ಲಿ ಅಶ್ವಿನಿ, ಜಾನ್ಹವಿ, ರಿಶಾ ಇನ್ನೂ ಕೆಲವರು ಪರಸ್ಪರ ಏಕವಚನದಲ್ಲಿ ಬೈದಾಡಿರುವ ದ್ವನಿ ಇತ್ತು. ಅದರಲ್ಲೂ ಆ ಆಡಿಯೋನಲ್ಲಿ ಅಶ್ವಿನಿ ಅವರ ದ್ವನಿಯೇ ಹೆಚ್ಚಿತ್ತು.
ಅಂತಿಮವಾಗಿ, ಬಿಗ್ಬಾಸ್ ಮನೆಯಲ್ಲಿ ಮರ್ಯಾದೆ ಕೊಟ್ಟರಷ್ಟೆ ಮರ್ಯಾದೆ ಸಿಗುವುದು, ಗೌರವ ಕೊಟ್ಟರಷ್ಟೆ ಗೌರವ ಸಿಗುವುದು. ಇಲ್ಲಿ ಪ್ರೀತಿ ಕೊಟ್ಟರೆ ಪ್ರೀತಿ ಸಿಗುತ್ತದೆ, ಸ್ನೇಹ ಕೊಟ್ಟರೆ ಸ್ನೇಹ ಸಿಗುತ್ತದೆ. ದ್ವೇಷ ಕೊಟ್ಟರೆ ದ್ವೇಷ ಸಿಗುತ್ತದೆ. ನೀವು ಬಿತ್ತಿದ್ದನ್ನೆ ಇಲ್ಲಿ ಬೆಳೆಯುತ್ತೀರಿ ಎಂದ ಸುದೀಪ್, ಸ್ವತಃ ಮನೆಯವರಿಗೆ ಅಧಿಕಾರ ಒಂದನ್ನು ನೀಡಿದರು. ಯಾರು ನಿಮಗೆ ಗೌರವ ಕೊಡುವುದಿಲ್ಲವೊ ಅವರಿಗೆ ನೀವು ಗೌರವ ಕೊಡಬೇಡಿ, ದೊಡ್ಡವರಾದರೂ ಇರಲಿ, ಚಿಕ್ಕವರಾದರೂ ಇರಲಿ’ ಎಂದರು ಸುದೀಪ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




