ಈ ವಾರ ಬಿಗ್​​ಬಾಸ್ ಮನೆಯಿಂದ ಹೊರಬಂದವರು ಯಾರು?

Bigg Boss Kannada: ಪ್ರತಿ ವಾರವೂ ಬಿಗ್​​ಬಾಸ್ ಮನೆ ಮೊದಲಿನಿಂಗಲೂ ಕಿರಿದಾಗುತ್ತಲೇ ಇರುತ್ತದೆ. ಈ ಬಾರಿ ಬಿಗ್​​ಬಾಸ್ ಮನೆಗೆ ಇಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಎಂಟ್ರಿ ನೀಡಿದ್ದಾರೆ. ಮಾಜಿ ಸ್ಪರ್ಧಿಗಳಾದ ರಜತ್ ಮತ್ತು ಚೈತ್ರಾ ಕುಂದಾಪುರ ಅವರು ಬಿಗ್​​ಬಾಸ್ ಮನೆಗೆ ಬಂದಿದ್ದಾರೆ. ಇಬ್ಬರು ಬಂದರಾದರೂ ಒಬ್ಬರು ಈ ವಾರ ಬಿಗ್​​ಬಾಸ್ ಮನೆಯಿಂದ ಹೊರಗೆ ಹೋಗಿದ್ದಾರೆ.

ಈ ವಾರ ಬಿಗ್​​ಬಾಸ್ ಮನೆಯಿಂದ ಹೊರಬಂದವರು ಯಾರು?
Bigg Boss Kannada

Updated on: Nov 30, 2025 | 10:41 PM

ಪ್ರತಿ ಭಾನುವಾರ ಬಿಗ್​​ಬಾಸ್ (Bigg Boss) ಮನೆಯಲ್ಲಿ ಎಲಿಮಿನೇಷನ್ ವಾರ. ಪ್ರತಿ ವಾರವೂ ಬಿಗ್​​ಬಾಸ್ ಮನೆ ಮೊದಲಿನಿಂಗಲೂ ಕಿರಿದಾಗುತ್ತಲೇ ಇರುತ್ತದೆ. ಈ ಬಾರಿ ಬಿಗ್​​ಬಾಸ್ ಮನೆಗೆ ಇಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಎಂಟ್ರಿ ನೀಡಿದ್ದಾರೆ. ಮಾಜಿ ಸ್ಪರ್ಧಿಗಳಾದ ರಜತ್ ಮತ್ತು ಚೈತ್ರಾ ಕುಂದಾಪುರ ಅವರು ಬಿಗ್​​ಬಾಸ್ ಮನೆಗೆ ಬಂದಿದ್ದಾರೆ. ಇಬ್ಬರು ಬಂದರಾದರೂ ಒಬ್ಬರು ಈ ವಾರ ಬಿಗ್​​ಬಾಸ್ ಮನೆಯಿಂದ ಹೊರಗೆ ಹೋಗಿದ್ದಾರೆ.

ಈ ವಾರ ರಘು, ಗಿಲ್ಲಿ, ಕಾವ್ಯಾ, ಅಶ್ವಿನಿ ಗೌಡ, ಧ್ರುವಂತ್, ಜಾನ್ವಿ ಮತ್ತು ಮಾಳು ಅವರುಗಳು ನಾಮಿನೇಟ್ ಆಗಿದ್ದರು. ಮೊದಲಿಗೆ ರಘು, ಗಿಲ್ಲಿ, ಕಾವ್ಯಾ, ಅಶ್ವಿನಿ ಗೌಡ ಅವರುಗಳು ಸೇಫ್ ಆದರು. ಆ ಬಳಿಕ ಧ್ರುವಂತ್ ತಾವು ಬಿಗ್​​ಬಾಸ್ ಮನೆಯಿಂದಲೇ ಹೊರಗೆ ಹೋಗುವುದಾಗಿ ಹೇಳಿದರು. ಆದರೆ ಅದಕ್ಕೆ ಸುದೀಪ್ ಅವಕಾಶ ಕೊಡಲಿಲ್ಲ. ಬದಲಿಗೆ ಧ್ರುವಂತ್ ಅವರು ಸೇಫ್ ಆಗಿರುವುದಾಗಿ ಹೇಳಿದರು. ಅಂತಿಮವಾಗಿ ಜಾನ್ವಿ ಮತ್ತು ಮಾಳು ಅವರುಗಳು ಉಳಿದುಕೊಂಡರು.

ಸುದೀಪ್ ಅವರು ಇಡೀ ಬಿಗ್​​ಬಾಸ್ ಮನೆ ಸ್ಪರ್ಧಿಗಳು ಫ್ರೀಜ್ ಆಗುವಂತೆ ಹೇಳಿ, ಬಳಿಕ ಮಾಳು ಹಾಗೂ ಜಾನ್ವಿಯ ನಡುವೆ ಜಾನ್ವಿ ಅವರ ಪಯಣ ಮುಗಿದಿದೆ ಎಂದು ಘೋಷಿಸಿದರು. ಆದರೆ ಜಾನ್ವಿ ಅವರ ದುರಾದೃಷ್ಟಕ್ಕೆ ಯಾರೂ ಸಹ ಅವರಿಗೆ ಗುಡ್ ಬೈ ಸಹ ಹೇಳಲಾಗಲಿಲ್ಲ. ಆದರೆ ಜಾನ್ವಿ ಎಲ್ಲರಿಗೂ ಧನ್ಯವಾದ ಹೇಳಿದರು. ಅವಕಾಶ ಕೊಟ್ಟಿದ್ದಕ್ಕೆ ಬಿಗ್​​ಬಾಸ್​​ಗೆ ವಾಹಿನಿಗೆ ಧನ್ಯವಾದ ಹೇಳಿದರು. ಅಶ್ವಿನಿ ಅವರಂತೂ ಕೂತಲ್ಲೇ ಅಳುತ್ತಲೇ ಇದ್ದರು. ಜಾನ್ವಿ ಸಹ ಕಣ್ಣೀರು ಹಾಕುತ್ತಾ ಬಿಗ್​​ಬಾಸ್ ಮನೆಯಿಂದ ಹೊರಗೆ ಬಂದರು.

ಇದನ್ನೂ ಓದಿ:ಬಿಗ್​​ಬಾಸ್ ನನಗೆ ಪುನರ್ಜನ್ಮ ಕೊಟ್ಟಿತು: ಚೈತ್ರಾ ಕುಂದಾಪುರ

ಜಾನ್ವಿ ಅವರು ಬಿಗ್​​ಬಾಸ್ ಮನೆಯಲ್ಲಿ ಸುಮಾರು 60ಕ್ಕೂ ಹೆಚ್ಚು ದಿನಗಳನ್ನು ಕರೆದಿದ್ದಾರೆ. ಅಶ್ವಿನಿ ಅವರೊಟ್ಟಿಗೆ ಬಹಳ ಆತ್ಮೀಯ ಗೆಳೆತನವನ್ನು ಜಾನ್ವಿ ಹೊಂದಿದ್ದರು. ಟಾಸ್ಕ್​​ಗಳಲ್ಲಿಯೂ ಸಹ ಚೆನ್ನಾಗಿ ಆಡಿದ್ದರು. ಉತ್ತಮ ಸಹ ಪಡೆದುಕೊಂಡಿದ್ದರು. ಕೆಲವರೊಟ್ಟಿಗೆ ಜಗಳ ಮಾಡಿದ್ದರು. ಆದರೆ ಒಟ್ಟಾರೆಯಾಗಿ ಚೆನ್ನಾಗಿಯೇ ಆಡಿದ್ದರು. ಆರಂಭದಲ್ಲಿ ಗೆಜ್ಜೆ ವಿಷಯದಲ್ಲಿ ಹಾಗೂ ಆ ಬಳಿಕ ವಾಹಿನಿಯ ಬಗ್ಗೆ ಆಡಿದ ಮಾತಿನಿಂದಾಗಿ ಸುದೀಪ್ ಅವರಿಂದಲೂ ಬೈಸಿಕೊಂಡಿದ್ದರು. ಆದರೆ ಬರ ಬರುತ್ತಾ ಎಲ್ಲವನ್ನೂ ಸುಧಾರಿಸಿಕೊಂಡಿದ್ದರು. ಆದರೆ ಕೊನೆಗೂ ಅವರು ಹೊರಗೆ ಬಂದಿದ್ದಾರೆ.

ಹೊರಗೆ ಬಂದು ಸುದೀಪ್ ಅವರೊಡನೆ ಮಾತನಾಡಿದಾಗಲೂ ಸಹ ಖುಷಿಯಾಗಿಯೇ ಮಾತನಾಡಿದರು. ಬಿಗ್​​ಬಾಸ್ ಮನೆಯನ್ನು, ಅಶ್ವಿನಿ ಅವರನ್ನು, ಸುದೀಪ್ ಅವರನ್ನು ಮಿಸ್ ಮಾಡಿಕೊಳ್ಳುವುದಾಗಿ ಅವರು ಹೇಳಿದರು. ಜಾನ್ವಿ ಅವರ ಮಗನೂ ಸಹ ವೇದಿಕೆ ಮೇಲೆ ಬಂದರು. ಇವರು ಮನೆಯನ್ನೂ ಜಗಳ ಮಾಡಿದರು. ಅಲ್ಲೂ ಜಗಳ ಮಾಡಿದರು ಎಂದು ಹೇಳಿದ. ಆ ಬಳಿಕ ಅಶ್ವಿನಿ ಅವರೊಟ್ಟಿಗೆ ಮಾತ್ರವೇ ಇದ್ದರು, ಬೇರೆ ಅವರೊಟ್ಟಿಗೂ ಮಾತನಾಡಬೇಕಿತ್ತು ಎಂದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ