ಸುದೀಪ್ ಎದುರೇ ಗಿಲ್ಲಿ ಬೆಂಬಲಕ್ಕೆ ನಿಂತ ಅಶ್ವಿನಿ ಗೌಡ; ಎಲ್ಲರಿಗೂ ಅಚ್ಚರಿ
ಅಶ್ವಿನಿ ಗೌಡ ಮತ್ತು ಗಿಲ್ಲಿ ನಡುವಿನ ದ್ವೇಷವು ಬೆಂಬಲವಾಗಿ ಬದಲಾಗಿದೆ. ಗಿಲ್ಲಿಯ 'ಬನಿಯನ್' ವಿವಾದದ ಬಗ್ಗೆ ವೀಕೆಂಡ್‌ನಲ್ಲಿ ಚರ್ಚೆಯಾಯಿತು. ಸಿಂಪತಿಗಾಗಿ ಬನಿಯನ್ ಧರಿಸುತ್ತಾರೆ ಎಂಬ ಆರೋಪಕ್ಕೆ, ಅಶ್ವಿನಿ ಮತ್ತು ಕಾವ್ಯಾ ಅವರು ಗಿಲ್ಲಿಯನ್ನು ಸಮರ್ಥಿಸಿಕೊಂಡರು. ಅಶ್ವಿನಿ ಅವರ ಈ ದಿಢೀರ್ ಬದಲಾವಣೆ ಎಲ್ಲರನ್ನು ಅಚ್ಚರಿಗೊಳಿಸಿದೆ. ಕಳೆದ ವಾರವೂ ಅಶ್ವಿನಿ ಗಿಲ್ಲಿ ಪರ ನಿಂತಿದ್ದರು.

ಬಿಗ್ ಬಾಸ್ (Bigg Boss) ಮನೆಯಲ್ಲಿ ಅಶ್ವಿನಿ ಗೌಡ ಹಾಗೂ ಗಿಲ್ಲಿ ನಟ ಮಧ್ಯೆ ಆದ ಕಿರಿಕ್ಗಳು ಒಂದೆರಡಲ್ಲ. ಅಶ್ವಿನಿ ಅವರ ವಿರುದ್ಧ ಗಿಲ್ಲಿ ಸಾಕಷ್ಟು ಟೀಕೆಗಳನ್ನು ಮಾಡಿದ್ದರು. ಅಶ್ವಿನಿ ಕೂಡ ಗಿಲ್ಲಿ ವಿರುದ್ಧ ಸಾಕಷ್ಟು ಬಾರಿ ಸಿಡಿದೆದ್ದ ಉದಾಹರಣೆ ಇದೆ. ಆದರೆ, ಕಳೆದ ವಾರ ಎಲ್ಲವೂ ಬದಲಾಯಿತು. ವಾರದ ದಿನಗಳಲ್ಲಿ ಅಶ್ವಿನಿ ಅವರು ಗಿಲ್ಲಿಯನ್ನು ಬೆಂಬಲಿಸುತ್ತಾ ಬಂದರು. ಅಷ್ಟೇ ಏಕೆ, ವೀಕೆಂಡ್ನಲ್ಲೂ ಗಿಲ್ಲಿ ಬೆಂಬಲವಾಗಿ ಅಶ್ವಿನಿ ನಿಂತಿದ್ದಾರೆ. ಸುದೀಪ್ ಎದುರೇ ಅವರು ಗಿಲ್ಲಿ ಪರವಾಗಿ ಮಾತನಾಡಿದ್ದಾರೆ. ಇದು ಅನೇಕರಿಗೆ ಅಚ್ಚರಿ ತರಿಸಿದೆ.
ಗಿಲ್ಲಿಗೆ ಮನೆಯಿಂದ ಸಾಕಷ್ಟು ಡ್ರೆಸ್ಗಳನ್ನು ಕಳುಹಿಸಿಕೊಡಲಾಗಿದೆ. ಇದನ್ನು ಅವರು ಬೆಡ್ನ ಕಳಗೆ ಇಟ್ಟಿದ್ದರು. ಇತ್ತೀಚೆಗೆ ರಘು ಅವರು ಗಿಲ್ಲಿ ವಿರುದ್ಧ ಸಿಡಿದೆದ್ದರು. ಅವರು ಗಿಲ್ಲಿ ಬಟ್ಟೆಯನ್ನು ಎಸೆದು ಕೋಪ ತೋರಿಸಿದ್ದರು. ‘ನಿನಗೆ ಅಷ್ಟು ಬಟ್ಟೆ ಕಳುಹಿಸಿದರೂ ನೀನು ಹಾಕಿಕೊಳ್ಳೋದೆ ಇಲ್ಲವಲ್ಲ’ ಎಂದಿದ್ದರು ರಘು. ಗಿಲ್ಲಿ ಸಿಂಪತಿಗೋಸ್ಕರ ಬಟ್ಟೆ ಇಲ್ಲದವರ ರೀತಿ ತೋರಿಸಿಕೊಳ್ಳುತ್ತಾರೆ ಎಂಬ ಮಾತು ಕೇಳಿ ಬಂತು. ವೀಕೆಂಡ್ನಲ್ಲೂ ಇದೇ ವಿಷಯ ಚರ್ಚೆಗೆ ಬಂದಿದೆ. ಯೆಸ್ ಆರ್ ನೋ ರೌಂಡ್ನಲ್ಲಿ ‘ಸಿಂಪತಿಗಾಗಿ ಗಿಲ್ಲಿ ಬನಿಯಾನ್ ಧರಿಸುತ್ತಾರೆ’ ಎಂದು ಕೇಳಿದಾಗ ಕಾವ್ಯಾ ಹಾಗೂ ಅಶ್ವಿನಿ ಗಿಲ್ಲಿ ಬೆಂಬಲಕ್ಕೆ ನಿಂತರು.
‘ಆ ರೀತಿ ಏನೂ ಇಲ್ಲ. ಅವನಿಗೆ ಕಂಫರ್ಟ್ ಆಗಿದ್ದನ್ನು ಅವನು ಧರಿಸಿಕೊಳ್ಳುತ್ತಿದ್ದಾನೆ ಅಷ್ಟೇ. ಮುಖ್ಯವಾಗಿ ಅವನಿಗೆ ಫ್ಯಾಷನ್ ಸೆನ್ಸ್ ಇಲ್ಲ. ತಾನು ಚೆನ್ನಾಗಿ ಕಾಣಬೇಕು ಎಂದು ಅವನಿಗೆ ಅನಿಸೋದೆ ಇಲ್ಲ’ ಎಂದರು ಕಾವ್ಯಾ. ಆ ಬಳಿಕ ಅಶ್ವಿನಿ ಕೂಡ ಗಿಲ್ಲಿ ಪರವಾಗಿ ಮಾತನಾಡಿದರು. ‘ಸಿಂಪತಿಗಾಗಿ ಅವನು ಬನಿಯಾನ್ ಧರಿಸಿ ಓಡಾಡುತ್ತಿದ್ದಾನೆ ಎಂದು ನಾನು ಆರಂಭದಲ್ಲಿ ಅಂದುಕೊಂಡಿದ್ದೆ. ಆದರೆ, ಆ ರೀತಿ ಅಲ್ಲ ಎಂದು ನನಗೆ ಈಗ ಅನಿಸಿದೆ. ಅವನಿಗೆ ಯಾವುದು ಕಂಫರ್ಟ್ ಅನಿಸುತ್ತದೆಯೋ ಅದನ್ನು ಹಾಕಿಕೊಳ್ಳಲು ಬಿಟ್ಟರೆ ಒಳ್ಳೆಯದು ಎಂದು ನನಗೆ ಅನಿಸುತ್ತದೆ’ ಎಂದರು ಅಶ್ವಿನಿ.
ಇದನ್ನೂ ಓದಿ: ಈ ವಾರ ಬಿಗ್ಬಾಸ್ ಮನೆಯಿಂದ ಹೊರಬಂದವರು ಯಾರು? ಕಳೆದ ವಾರ ಬಂದ ಅತಿಥಿಗಳು ಗಿಲ್ಲಿನ ಟಾರ್ಗೆಟ್ ಮಾಡಿದ ರೀತಿಯಲ್ಲಿ ಇತ್ತು. ಗಿಲ್ಲಿ ಆಗ ಸ್ವಲ್ಪ ಮಂಕಾಗಿದ್ದರು. ಈ ವೇಳೆ ಗಿಲ್ಲಿ ನಟನ ಬೆಂಬಲಕ್ಕೆ ಅಶ್ವಿನಿ ನಿಂತಿದ್ದರು. ಈ ವಾರವೂ ಅದು ಮುಂದುವರಿಯುತ್ತದೆಯೇ ಎಂಬ ಕುತೂಹಲ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




