‘ಯಶಸ್​ಗೆ ಆಸಿಯಾ ರಾಖಿ ಕಟ್ಟಿದ್ದು ಗಿಮಿಕ್’ ; ಬಿಗ್ ಬಾಸ್ ಮನೆಯಲ್ಲಿ ನಿಷ್ಠುರದ ಅಭಿಪ್ರಾಯ

ಆರಂಭದಿಂದಲೂ ಬಿಗ್ ಬಾಸ್ ಮನೆಯಲ್ಲಿ ಆಸಿಯಾ ಮತ್ತು ಯಶಸ್ ಅವರು ಆಪ್ತವಾಗಿದ್ದಾರೆ. ಅವರಿಬ್ಬರ ನಡುವೆ ಸೌಂದರ್ಯಾ ಕೂಡ ಬಂದಿದ್ದರು. ಆದರೆ ಕಳೆದ ವಾರ ಯಶಸ್​ಗೆ ಆಸಿಯಾ ಅವರು ರಾಖಿ ಕಟ್ಟಿದ್ದು ಈಗ ಚರ್ಚೆ ಆಗಿದೆ. ಆಸಿಯಾ ನಡೆಯನ್ನು ಗಿಮಿಕ್, ಡ್ರಾಮಾ ಎಂದು ಗಾನವಿ ನೇರವಾಗಿ ಹೇಳಿದ್ದಾರೆ.

‘ಯಶಸ್​ಗೆ ಆಸಿಯಾ ರಾಖಿ ಕಟ್ಟಿದ್ದು ಗಿಮಿಕ್’ ; ಬಿಗ್ ಬಾಸ್ ಮನೆಯಲ್ಲಿ ನಿಷ್ಠುರದ ಅಭಿಪ್ರಾಯ
Yashas, Asiya
Image Credit source: Colors Kannada

Updated on: Nov 08, 2026 | 10:27 PM

‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋನಲ್ಲಿ ಯಶಸ್ ಅವರು ಮಹಿಳಾ ಸ್ಪರ್ಧಿಗಳ ಜೊತೆ ಹೆಚ್ಚು ಆಪ್ತವಾಗಿದ್ದಾರೆ. ವಿಶೇಷವಾಗಿ ಆಸಿಯಾ ಮತ್ತು ಸೌಂದರ್ಯಾ ಜೊತೆ ಅವರಿಗೆ ಹೆಚ್ಚು ಆಪ್ತತೆ ಇದೆ. ಅವರ ನಂಟಿನ ಬಗ್ಗೆ ಬೇರೆ ಬೇರೆ ಅಭಿಪ್ರಾಯಗಳಿವೆ. ಅಚ್ಚರಿ ಏನೆಂದರೆ, ಕಳೆದ ವಾರ ಆಸಿಯಾ ಅವರು ಯಶಸ್​ಗೆ ರಾಖಿ ಕಟ್ಟುವ ಮೂಲಕ ಎಲ್ಲರಿಗೂ ಅಚ್ಚರಿ ನೀಡಿದರು. ಈ ಬಗ್ಗೆ ಭಾನುವಾರದ (ನವೆಂಬರ್ 8) ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಬಿಗ್ ಬಾಸ್ ಮನೆಯ ಸ್ಪರ್ಧಿಗಳು ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.

‘ಯಶಸ್​ಗೆ ಆಸಿಯಾ ರಾಖಿ ಕಟ್ಟಿದ್ದು ಗಿಮಿಕ್. ಹೌದೋ ಅಲ್ಲವೋ’ ಎಂದು ಸುದೀಪ್ ಅವರು ಪ್ರಶ್ನೆ ಕೇಳಿದರು. ಬಿಗ್ ಬಾಸ್ ಮನೆಯ ಸ್ಪರ್ಧಿಗಳಿಂದ ಈ ಬಗ್ಗೆ ಬೇರೆ ಬೇರೆ ಅಭಿಪ್ರಾಯ ವ್ಯಕ್ತವಾಯಿತು. ಈ ಬಗ್ಗೆ ಗಾನವಿ ಅವರು ತುಂಬಾ ನಿಷ್ಠುರವಾಗಿ ಮಾತನಾಡಿದರು. ಆಸಿಯಾ ರಾಖಿ ಕಟ್ಟಿದ್ದು ಬರೀ ಡ್ರಾಮಾ. ಅದು ದೊಡ್ಡ ಗಿಮಿಕ್ ಎಂದು ಗಾನವಿ ಹೇಳಿದರು.

Loading...

ಸೋನಿಕಾ ಅವರಿಂದಲೂ ಅದೇ ರೀತಿಯ ಅಭಿಪ್ರಾಯ ಕೇಳಿಬಂತು. ಒಂದು ವೇಳೆ ಸಹೋದರ ಎಂಬ ಭಾವನೆ ಇದ್ದಿದ್ದರೆ ಅದು ಮೊದಲಿನಿಂದಲೂ ಇರಬೇಕಿತ್ತು. ಇಷ್ಟು ದಿನ ಕಾದು ಈಗ ರಾಖಿ ಕಟ್ಟಿದ್ದಾರೆ ಎಂದರೆ ಅದು ಗಿಮಿಕ್ ಎಂದು ಸೋನಿಕಾ ಹೇಳಿದರು. ಆದರೆ ಈ ಬಗ್ಗೆ ಸ್ವತಃ ಆಸಿಯಾ ಅವರು ತಮ್ಮ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸಿದರು.

‘ಬಿಗ್ ಬಾಸ್ ಮನೆಯಲ್ಲಿ ಯಾರ ಜೊತೆಯೂ ಜೋಡಿಯಾಗಲು ನಾನು ಸಿದ್ಧವಿಲ್ಲ’ ಎಂದು ಆಸಿಯಾ ಅವರು ಹೇಳಿದರು. ಆರಂಭದಿಂದಲೂ ಯಶಸ್ ಅವರ ಜೊತೆ ತಮಗೆ ಸ್ನೇಹ ಇತ್ತು. ಆದರೆ ಜೋಡಿ ಅಲ್ಲ ಎಂದು ಆಸಿಯಾ ಅವರು ಸುದೀಪ್ ಎದುರಲ್ಲಿ ಸ್ಪಷ್ಟಪಡಿಸಿದರು. ಮುಂದಿನ ದಿನಗಳಲ್ಲಿ ಯಶಸ್ ಜೊತೆ ಅವರು ಹೇಗೆ ನಡೆದುಕೊಳ್ಳುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

ಇದನ್ನೂ ಓದಿ: ಬಿಗ್ ಬಾಸ್: ಕಿರಣ್ ಶಾಸ್ತ್ರಿ ಇಡೀ ಸೀಸನ್​ನ ಕಳಪೆ; ಮುಲಾಜಿಲ್ಲದೇ ಹೇಳಿದ ತಾಂಡವ್ ರಾಮ್

ಯಶಸ್ ಅವರು ಆಸಿಯಾ ರೀತಿ ಸೌಂದರ್ಯಾ ಶೆಟ್ಟಿ ಜೊತೆಗೆ ಹೆಚ್ಚು ಕ್ಲೋಸ್ ಆಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಅವರಿಬ್ಬರು ಮದುವೆ ಬಗ್ಗೆ ಕೂಡ ಮಾತನಾಡಿದ್ದುಂಟು. ಇದರಿಂದಾಗಿ ಅವರಿಗೆ ಟಾಸ್ಕ್ ವೇಳೆ ಸಹಾಯ ಆಗಿತ್ತು. ಸ್ವಯಂವರ ಟಾಸ್ಕ್ ನಡೆದಾಗ ಸೌಂದರ್ಯಾ ಅವರ ಮನವೊಲಿಸಲು ಯಶಸ್ ಅವರಿಗೆ ಸುಲಭ ಆಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us