AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್: ಕಿರಣ್ ಶಾಸ್ತ್ರಿ ಇಡೀ ಸೀಸನ್​ನ ಕಳಪೆ; ಮುಲಾಜಿಲ್ಲದೇ ಹೇಳಿದ ತಾಂಡವ್ ರಾಮ್

ಬಿಗ್ ಬಾಸ್ ಮನೆಯಲ್ಲಿ ಕಿರಣ್ ಶಾಸ್ತ್ರಿ ಅವರ ಆಟ ಮೋಸದಿಂದ ಕೂಡಿದೆ ಎಂಬ ಅಭಿಪ್ರಾಯ ಹಲವರಿಗೆ ಇದೆ. ಅಲ್ಲದೇ, ವ್ಯಕ್ತಿತ್ವದಲ್ಲೂ ಕಿರಣ್ ಶಾಸ್ತ್ರಿ ಉತ್ತಮ ಎನಿಸಿಕೊಂಡಿಲ್ಲ. ಮಾತಿನ ಮೇಲೆ ಕೂಡ ಅವರಿಗೆ ನಿಗಾ ಇಲ್ಲ. ಗಾನವಿಗೆ ಬಾಡಿ ಶೇಮಿಂಗ್ ಮಾಡುವ ರೀತಿಯಲ್ಲಿ ಕಿರಣ್ ಶಾಸ್ತ್ರಿ ಮಾತನಾಡಿದ್ದಾರೆ.

ಬಿಗ್ ಬಾಸ್: ಕಿರಣ್ ಶಾಸ್ತ್ರಿ ಇಡೀ ಸೀಸನ್​ನ ಕಳಪೆ; ಮುಲಾಜಿಲ್ಲದೇ ಹೇಳಿದ ತಾಂಡವ್ ರಾಮ್
Kiran Shastri Image Credit source: Colors Kannada
ಮದನ್​ ಕುಮಾರ್​
|

Updated on: Nov 05, 2026 | 10:42 PM

Share

‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋನಲ್ಲಿ ಎಲ್ಲರ ಅಸಲಿ ಮುಖ ಬಯಲಾಗುತ್ತದೆ. ನಾಟಕ ಮಾಡಿಕೊಂಡು ಕೆಲವು ದಿನಗಳು ಮಾತ್ರ ಇರಬಹುದು. ಆದರೆ ಜಾಸ್ತಿ ದಿನ ನಾಟಕ ಮಾಡೋಕೆ ಆಗಲ್ಲ. ಪರಿಸ್ಥಿತಿ ಬದಲಾದಂತೆಲ್ಲ ಸ್ಪರ್ಧಿಗಳ ಮುಖವಾಡ ಕಳಚಿ ಬೀಳುತ್ತದೆ. ಈ ವಾರ ಕಿರಣ್ ಶಾಸ್ತ್ರಿ ಎಲ್ಲರ ಕಣ್ಣಿನಲ್ಲಿ ವಿಲನ್ ಆಗಿದ್ದಾರೆ. ಅವರ ಆಟದ ಶೈಲಿಗೆ ಬಹುತೇಕ ಎಲ್ಲರೂ ಕಿರಿಕಿರಿ ಅನುಭವಿಸಿದ್ದಾರೆ. ಹಾಗಾಗಿ ಬಿಗ್ ಬಾಸ್ ಮನೆಯಲ್ಲಿ ಕಿರಣ್ ಶಾಸ್ತ್ರೀ ಇಡೀ ಸೀಸನ್​ನ ಕಳಪೆ ಎಂದು ತಾಂಡವ್ ರಾಮ್ ಅವರು ಹೇಳಿದ್ದಾರೆ.

ಈ ವಾರ ಬಿಗ್ ಬಾಸ್ ಸ್ಪರ್ಧಿಗಳಿಗೆ ಕುಟುಂಬದವರ ಪತ್ರವನ್ನು ಪಡೆಯುವ ಅವಕಾಶ ನೀಡಲಾಗಿತ್ತು. ಆದರೆ ಆ ಪತ್ರ ಪಡೆಯಲು ಎಲ್ಲರೂ ಶ್ರಮವಹಿಸಿ ಟಾಸ್ಕ್ ಆಡಬೇಕಿತ್ತು. ಆ ವೇಳೆ ಕಿರಣ್ ಶಾಸ್ತ್ರಿ ಅವರು ಕಳ್ಳಾಟ ಆಡಿದ್ದರು. ಅದರಿಂದಾಗಿ ಬೇರೆ ಸ್ಪರ್ಧಿಯ ಪತ್ರ ನಷ್ಟ ಆಗಿತ್ತು. ಆಗ ಎಲ್ಲರೂ ಕಿರಣ್ ಶಾಸ್ತ್ರಿಯನ್ನು ಕಟುವಾಗಿ ಟೀಕಿಸಿದ್ದರು.

ಯಾರು ಎಷ್ಟೇ ಟೀಕಿಸಿದರೂ ಕಿರಣ್ ಶಾಸ್ತ್ರಿ ಬುದ್ಧಿ ಬದಲಾಗಲಿಲ್ಲ. ತಾನು ಬೇಕಂತಲೇ ಆ ರೀತಿ ನಡೆದುಕೊಂಡಿದ್ದು ಎಂಬುದನ್ನು ಭಂಡತನದಿಂದ ಘೋಷಿಸಿಕೊಂಡಿದ್ದರು. ಅಲ್ಲದೇ, ತಮ್ಮ ಸ್ವಾರ್ಥ ಬುದ್ಧಿಯೇ ಸರಿ ಎಂಬಂತೆ ಅವರು ವಾದ ಮಾಡಿದ್ದರು. ಆ ಘಟನೆ ಬಳಿಕ ಇಡೀ ಬಿಗ್ ಬಾಸ್ ಮನೆಯ ಸದಸ್ಯರಿಗೆ ಕಿರಣ್ ಶಾಸ್ತ್ರಿ ಮೇಲೆ ಕೆಟ್ಟ ಅಭಿಪ್ರಾಯ ಮೂಡಿತು.

ಈಗಾಗಲೇ ಕಿರಣ್ ಶಾಸ್ತ್ರಿ ಅವರು ಕಳಪೆ ಪಟ್ಟ ಪಡೆದು ಜೈಲಿಗೆ ಹೋಗಿ ಬಂದಿದ್ದಾರೆ. ಆದರೆ ಅವರು ತಮ್ಮನ್ನು ತಿದ್ದಿಕೊಳ್ಳುವ ಪ್ರಯತ್ನ ಮಾಡುತ್ತಿಲ್ಲ. ದಿನದಿಂದ ದಿನಕ್ಕೆ ಸ್ವಾರ್ಥದ ಆಟವನ್ನು ಮುಂದುವರಿಸಿದ್ದಾರೆ. ಅಲ್ಲದೇ ಅವರಿಗೆ ಮಾತಿನ ಮೇಲೆ ಕೂಡ ನಿಗಾ ಇಲ್ಲ. ನವೆಂಬರ್ 5ರ ಸಂಚಿಕೆಯಲ್ಲಿ ಅವರು ಮಹಿಳಾ ಸ್ಪರ್ಧಿಗಳಿಗೆ ಬಾಡಿ ಶೇಮಿಂಗ್ ಮಾಡುವಂತೆ ಮಾತಾಡಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಕನ್ನಡ ಸೀಸನ್ 13: ಕಳಪೆ ಪಟ್ಟ ಪಡೆದು ಜೈಲು ಸೇರಿದ ಕಿರಣ್ ಶಾಸ್ತ್ರಿ

ಊಟದ ವಿಚಾರಕ್ಕೆ ಬಿಗ್ ಬಾಸ್ ಮನೆಯಲ್ಲಿ ಕಿರಿಕ್ ಆಗಿದೆ. ‘ತಿಂದು ತಿಂದು ಮೈ ಬೆಳೆಸಿಕೊಂಡಿದ್ದೀಯ’ ಎಂದು ಕಿರಣ್ ಶಾಸ್ತ್ರಿ ಅವರು ಗಾನವಿಗೆ ಹೇಳಿದರು. ಆ ಮಾತಿನಿಂದ ಗಾನವಿ ಅವರಿಗೆ ಕೋಪ ಬಂತು. ಅಲ್ಲದೇ, ಸೌಂದರ್ಯಾ ಶೆಟ್ಟಿ ಅವರು ಕೂಡ ಈ ಮಾತನ್ನು ಖಂಡಿಸಿದರು. ಕಿರಣ್ ಶಾಸ್​ತ್ರಿಯ ಮೋಸದ ಆಟವನ್ನು ತಾಂಡವ್ ರಾಮ್ ಅವರು ಪದೇಪದೇ ಖಂಡಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More