
‘ಬಿಗ್ ಬಾಸ್ ಕನ್ನಡ ಸೀಸನ್ 13’ ಶೋನಲ್ಲಿ 79 ದಿನಗಳು ಕಳೆದಿವೆ. ಫಿನಾಲೆ ಹತ್ತಿರ ಆಗುತ್ತಿರುವುದರಿಂದ ಯಾರು ಕೊನೆಯ ತನಕ ಉಳಿದುಕೊಳ್ಳುತ್ತಾರೆ ಎಂಬುದನ್ನು ತಿಳಿಯಲು ವೀಕ್ಷಕರ ಕೌತುಕ ಹೆಚ್ಚಿದೆ. ಈ ವಾರ ನಾಮಿನೇಷನ್ನಿಂದ ಪಾರಾಗಲು ಸ್ಪರ್ಧಿಗಳು ಹಲವು ಬಗೆಯ ಸರ್ಕಸ್ ಮಾಡಿದರು. ಅಂತಿಮವಾಗಿ 5 ಮಂದಿಗೆ ಶಾಕ್ ಎದುರಾಗಿದೆ. ಸೌಂದರ್ಯಾ ಶೆಟ್ಟಿ, ಆಸಿಯಾ, ಕಿರಣ್ ಶಾಸ್ತ್ರಿ, ಜಗದೀಶ್ ಹಾಗೂ ಯಶಸ್ ಅವರನ್ನು ನಾಮಿನೇಟ್ ಮಾಡಲಾಗಿದೆ. ಫಿನಾಲೆಗೆ ಕೆಲವೇ ವಾರಗಳು ಬಾಕಿ ಇರುವುದರಿಂದ ಈ ಸ್ಪರ್ಧಿಗಳ ಎದೆಯಲ್ಲಿ ಢವಢವ ಶುರುವಾಗಿದೆ.
ಈ ವಾರ ಧನುಷ್ ಅವರ ಬಳಿ ಜೋಕರ್ ಕಾರ್ಡ್ ಇದೆ. ಹಾಗಾಗಿ ಅವರು ತಮ್ಮ ಅಧಿಕಾರ ಬಳಸಿ ನಾಮಿನೇಷನ್ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಅದಕ್ಕೂ ಮುನ್ನ ಗಗನ್ ಚಿನ್ನಪ್ಪ ಅವರಿಂದ ಯಶಸ್ ಅವರು ನೇರವಾಗಿ ನಾಮಿನೇಟ್ ಆದರು. ಜಗದೀಶ್ ಅವರನ್ನು ಮನವೊಲಿಸಿ ತಾವು ಸೇಫ್ ಆಗಲು ಸೌಂದರ್ಯಾ ಪ್ರಯತ್ನಿಸಿದ್ದರು. ಆದರೆ ಆ ಪ್ರಯತ್ನಕ್ಕೆ ಫಲ ಸಿಗಲಿಲ್ಲ.
ಯಶಸ್ ಅವರಿಗೆ ಹೆಚ್ಚು ಒತ್ತಡ ಇದೆ. ಯಾಕೆಂದರೆ ಅವರು ಮುಂದಿನ ಎಲ್ಲ ವಾರಗಳಿಗೂ ನಾಮಿನೇಟ್ ಆಗಿದ್ದಾರೆ. ಅವರು ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಹೆಚ್ಚು ಕಷ್ಟಪಡಬೇಕಿದೆ. ಆರಂಭದಿಂದಲೂ ಅವರು ಸೌಂದರ್ಯಾ ಶೆಟ್ಟಿ ಜೊತೆ ಆಪ್ತವಾಗಿದ್ದಾರೆ. ಆದರೆ ಇನ್ಮುಂದೆ ಆಟದಲ್ಲಿ ಪೈಪೋಟಿ ಜಾಸ್ತಿ ಆಗಲಿದೆ. ಸ್ನೇಹವನ್ನು ಬದಿಗಿಟ್ಟು ಆಟ ಆಡಬೇಕಿರುವುದು ಅನಿವಾರ್ಯ ಆಗಲಿದೆ.
ಪೈಪೋಟಿ ಹೆಚ್ಚುವುದರ ಜೊತೆಗೆ ಬಿಗ್ ಬಾಸ್ ಹಲವು ಟ್ವಿಸ್ಟ್ಗಳನ್ನು ನೀಡುತ್ತಿದ್ದಾರೆ. ಯಶಸ್ ಅವರಿಗೆ ಒಂದು ಸೀಕ್ರೆಟ್ ಟಾಸ್ಕ್ ನೀಡಿದ್ದಾರೆ. ಅವರಿಗೆ ಗುಳ್ಳೆನರಿಯ ಪಾತ್ರವನ್ನು ನೀಡಲಾಗಿದೆ. ತಂಡದ ಒಳಗೆ ಸೇರಿಕೊಂಡು ಆಟವನ್ನು ಕೆಡಿಸುವ ಗೌಪ್ಯ ಕೆಲಸವನ್ನು ಅವರಿಗೆ ವಹಿಸಲಾಗಿದೆ. ಅವರು ಅದನ್ನು ಹೇಗೆ ನಿಭಾಯಿಸುತ್ತಾರೆ ಎಂಬುದರ ಮೇಲೆ ಅವರಿಗೆ ವಿಶೇಷ ಅಧಿಕಾರ ಸಿಗಲಿದೆ.
ಇದನ್ನೂ ಓದಿ: ‘ಬಿಗ್ ಬಾಸ್ ಕನ್ನಡ 13’ ಫಿನಾಲೆ ಸಮೀಪಿಸುವಾಗ ಯಶಸ್ ಆಟಕ್ಕೆ ಆಘಾತ; ಸೌಂದರ್ಯಾಗೆ ಬೇಸರ
ಈ ಸೀಕ್ರೆಟ್ ಟಾಸ್ಕ್ ತುಂಬಾ ಚೆನ್ನಾಗಿದೆ ಎಂದು ಯಶಸ್ ಅವರು ಎಗ್ಸೈಟ್ ಆಗಿದ್ದಾರೆ. ಈಗ ಬಿಗ್ ಬಾಸ್ ಮನೆಯಲ್ಲಿ 10 ಜನರು ಇದ್ದಾರೆ. ಟಾಪ್ 5 ಸ್ಪರ್ಧಿ ಆಗಬೇಕು ಎಂಬುದು ಎಲ್ಲರ ಆಸೆ ಆಗಿದೆ. ಆ ಸ್ಥಾನಕ್ಕಾಗಿ ಭರ್ಜರಿ ಪೈಪೋಟಿ ನಡೆಯುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.