
ಬಿಗ್ಬಾಸ್ ಮನೆಯಲ್ಲಿ ಈ ವಾರ ಬುದ್ಧಿ ಉಪಯೋಗಿಸಿ ಆಡುವ ಟಾಸ್ಕ್ಗಳನ್ನು ಸ್ಪರ್ಧಿಗಳಿಗೆ ನೀಡಲಾಗಿತ್ತು. ಅದರಲ್ಲೂ ಗುಳ್ಳೆ ನರಿ, ಕಾಗೆಯ ಟಾಸ್ಕ್ ಅಂತೂ ಬಿಗ್ಬಾಸ್ ಸ್ಪರ್ಧಿಗಳ ಜೊತೆಗೆ ನೋಡುವ ಪ್ರೇಕ್ಷಕರಿಗೂ ಕಿಕ್ ಕೊಟ್ಟಿತು. ಮನೆಯ ಸ್ಪರ್ಧಿಗಳಲ್ಲಿ ಇರುವ ಗುಳ್ಳೆ ನರಿ ಮತ್ತು ಕಾಗೆಯನ್ನು ಕಂಡು ಹಿಡಿಯಬೇಕಿತ್ತು. ಜೊತೆಗೆ ಸಿಂಹದ ಪಾತ್ರವನ್ನು ಸಹ ಬಿಗ್ಬಾಸ್ ಮನೆಗೆ ತರಲಾಗಿ, ಕಾಗೆ ಮತ್ತು ನರಿಯನ್ನು ಹುಡುಕುವುದೇ ಸಿಂಹದ ಕೆಲಸ ಆಗಿತ್ತು. ಈ ಟಾಸ್ಕ್ನಲ್ಲಿ ಎರೆಡು ಬಾರಿ ಇಡೀ ಮನೆಯವರ ದಿಕ್ಕು ತಪ್ಪಿಸಿದ ಯಶಸ್ ಅದ್ಭುತವಾಗಿ ಆಡಿದರು.
ಯಶಸ್ ಗುಳ್ಳೆ ನರಿಯಾಗಿ, ಪ್ರಶಾಂತ್ ಹೆಸರಿನ ಮುಂದೆ ಹಂಟರ್ ಎಂದು ಬರೆದು ಅವರನ್ನು ಕ್ಯಾಪ್ಟೆನ್ಸಿ ಓಟದಿಂದ ಹೊರಗಿಟ್ಟರು. ಪ್ರಶಾಂತ್ ಹೆಸರನ್ನು ಬರೆದ ಗುಳ್ಳೆ ನರಿ ಯಾರೆಂದು ಇಡೀ ಮನೆಯವರೇ ಪ್ರಯತ್ನಿಸಿದರೂ ಹುಡುಕಲಾಗಲಿಲ್ಲ. ಯಶಸ್, ಅವರ ಜೊತೆಗೇ ಇದ್ದುಕೊಂಡು ಎಲ್ಲರ ದಿಕ್ಕು ತಪ್ಪಿಸಿ, ಪ್ರತಿಯೊಬ್ಬರಿಗೂ ಬೇರೊಬ್ಬರ ಮೇಲೆ ಅನುಮಾನ ಬರುವಂತೆ ಮಾಡಿದರು.
ಬಳಿಕ ಗುಳ್ಳೆ ನರಿ ಆಗಿದ್ದುಕೊಂಡು ಸಹ ಸಿಂಹದ ಕಿರೀಟ ತಮಗೇ ಬರುವಂತೆ ಮಾಡಿಕೊಂಡರು. ಕಿರೀಟ ಬರುವುದರಲ್ಲಿ ಯಶಸ್ ಹೆಚ್ಚು ತಲೆ ಉಪಯೋಗಿಸಲಿಲ್ಲವಾದರೂ ಎದುರಾಳಿಗಳು ಮಾಡಿದ ಮೂರ್ಖ ನಿರ್ಣಯದಿಂದ ಸಿಂಹದ ಕಿರೀಟ ಯಶಸ್ ಅವರಿಗೆ ಹೋಯ್ತು. ಸಿಂಹಕ್ಕೆ ನರಿ ಮತ್ತು ಕಾಗೆಯನ್ನು ಹುಡುಕುವ ಟಾಸ್ಕ್ ಅನ್ನು ಬಿಗ್ಬಾಸ್ ನೀಡಿದರು.
ಇದನ್ನೂ ಓದಿ:ಅತಿಥಿಯಾಗಿ ಬಿಗ್ಬಾಸ್ ಮನೆಗೆ ಮರಳಿದ್ದ ಮಂಜ, ಮತ್ತೆ ಹೊರಕ್ಕೆ
ತಾಂಡವ್ ಅವರು ಕಾಗೆ ಆಗಿದ್ದು, ಅವರು ಸೌಂದರ್ಯಾ ಗುಳ್ಳೆ ನರಿ ಆಗಿರಬಹುದು ಎಂಬ ಊಹೆಯಿಂದ ಅವರ ಕಾಫಿ ಕಪ್ ಮೇಲೆ ಸ್ಟಿಕ್ಕರ್ ಅಂಟಿಸಿದರು. ಆದರೆ ಆ ಸ್ಟಿಕ್ಕರ್ ಅಂಟಿಸಿದ ಕಾಗೆಯನ್ನು ಸಿಂಹ ಯಶಸ್ ಹುಡುಕಬೇಕಿತ್ತು. ತಾಂಡವ್ ಅನ್ನು ಕಪ್ಪುಗಳ ಬಳಿ ನೋಡಿದ್ದ ಗಾನವಿ, ಯಶಸ್ಗೆ ತಾಂಡವ್ ಅವರೇ ಕಾಗೆ ಎಂಬ ದೊಡ್ಡ ಸುಳಿವು ನೀಡಿದರು. ಬಳಿಕ ಗಗನ್, ತಾಂಡವ್ ಅವರನ್ನು ಉಳಿಸಲು ಪ್ರಯತ್ನ ಮಾಡಿದರಾದರೂ ಯಶಸ್, ಗಗನ್ ಅವರ ನಾಟಕವನ್ನು ಸುಲಭವಾಗಿ ಗುರುತಿಸಿದರು ಕೊನೆಗೆ ತಾಂಡವ್ ಅವರೇ ಕಾಗೆ ಎಂಬುದನ್ನು ಎಲ್ಲರ ಮುಂದೆ ಹೇಳಿದರು. ಆದರೆ ಬಿಗ್ಬಾಸ್ ಸೂಚಿಸಿದಂತೆ, ನರಿ ತಾವೇ ಎಂಬುದನ್ನು ಯಶಸ್ ಹೇಳಿಲ್ಲ, ಬದಲಿಗೆ ಶಾಸ್ತ್ರಿಯ ಹೆಸರು ಹೇಳಿದ್ದಾರೆ. ವೀಕೆಂಡ್ನಲ್ಲಿ ಯಶಸ್ ಅವರೇ ನರಿ ಎಂಬುದು ಮನೆ ಮಂದಿಗೆ ತಿಳಿಯಲಿದೆ. ಒಟ್ಟಾರೆ ಟಾಸ್ಕ್ ಅನ್ನು ಮನೆ ಮಂದಿಯ ಜೊತೆಗೆ ಪ್ರೇಕ್ಷಕರೂ ಎಂಜಾಯ್ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ