ಬಿಗ್​ ಬಾಸ್​ ಪ್ರಶಸ್ತಿ ಮೊತ್ತದಲ್ಲಿ ಏರಿಕೆ; ಟಾಪ್​ 5ನಲ್ಲಿರುವ ಎಲ್ಲರಿಗೂ ಸಿಗುತ್ತಿದೆ ಪ್ರೈಜ್​​​ ಅಮೌಂಟ್​

| Updated By: ರಾಜೇಶ್ ದುಗ್ಗುಮನೆ

Updated on: Aug 07, 2021 | 8:31 PM

ಪ್ರತಿ ಬಾರಿ ಗೆದ್ದವರಿಗೆ 50 ಲಕ್ಷ ರೂಪಾಯಿ ನೀಡಲಾಗುತ್ತಿತ್ತು. ಈ ಬಾರಿ ಈ ಮೊತ್ತದಲ್ಲಿ 3 ಲಕ್ಷ ರೂಪಾಯಿ ಏರಿಕೆ ಮಾಡಲಾಗಿದೆ. ಇನ್ನು, ರನ್ನರ್​ ಅಪ್​ಗೆ 10 ಲಕ್ಷ ರೂಪಾಯಿ ನೀಡಲಾಗುತ್ತಿತ್ತು.

ಬಿಗ್​ ಬಾಸ್​ ಪ್ರಶಸ್ತಿ ಮೊತ್ತದಲ್ಲಿ ಏರಿಕೆ; ಟಾಪ್​ 5ನಲ್ಲಿರುವ ಎಲ್ಲರಿಗೂ ಸಿಗುತ್ತಿದೆ ಪ್ರೈಜ್​​​ ಅಮೌಂಟ್​
ಬಿಗ್​ ಬಾಸ್​ ಪ್ರಶಸ್ತಿ ಮೊತ್ತದಲ್ಲಿ ಏರಿಕೆ; ಟಾಪ್​ 5ನಲ್ಲಿರುವ ಎಲ್ಲರಿಗೂ ಸಿಗುತ್ತಿದೆ ಪ್ರೈಜ್​​​ ಅಮೌಂಟ್​
Follow us on

‘ಕನ್ನಡ ಬಿಗ್​ ಬಾಸ್​ ಸೀಸನ್​ 8’ ಕೊನೆಯ ಹಂತಕ್ಕೆ ಬಂದು ನಿಂತಿದೆ. ಇಂದು (ಆಗಸ್ಟ್​​ 7) ಮತ್ತು ನಾಳೆ (ಆಗಸ್ಟ್​ 8) ಫಿನಾಲೆ ಎಪಿಸೋಡ್​ ನಡೆಯುತ್ತಿದೆ. ಅಚ್ಚರಿ ಎಂದರೆ ಬಿಗ್​ ಬಾಸ್​ ಗೆದ್ದವರಿಗೆ ಸಿಗೋ ಸಂಭಾವನೆಯನ್ನು ಏರಿಕೆ ಮಾಡಲಾಗಿದೆ. ಈ ಬಗ್ಗೆ ಸುದೀಪ್​ ಮಾಹಿತಿ ನೀಡಿದ್ದಾರೆ.

ಬಿಗ್​ ಬಾಸ್​ ಗೆದ್ದವರಿಗೆ 53 ಲಕ್ಷ ರೂಪಾಯಿ, ರನ್ನರ್​ ಅಪ್​ಗೆ 11 ಲಕ್ಷ ರೂಪಾಯಿ, ಮೂರನೇ ಸ್ಥಾನ ಪಡೆದವರಿಗೆ 6 ಲಕ್ಷ ರೂಪಾಯಿ,  ನಾಲ್ಕನೇ ಸ್ಥಾನದಲ್ಲಿರುವವರಿಗೆ 3.5 ಲಕ್ಷ ರೂಪಾಯಿ ಹಾಗೂ ಐದನೇ ಸ್ಥಾನದಲ್ಲಿರುವ ಸ್ಪರ್ಧಿಗೆ 2.5 ಲಕ್ಷ ರೂಪಾಯಿ ಸಿಗಲಿದೆ ಎಂದು ಸುದೀಪ್​ ಮಾಹಿತಿ ನೀಡಿದ್ದಾರೆ.

ಪ್ರತಿ ಬಾರಿ ಬಿಗ್​ ಬಾಸ್​ ಗೆದ್ದವರಿಗೆ 50 ಲಕ್ಷ ರೂಪಾಯಿ ನೀಡಲಾಗುತ್ತಿತ್ತು. ಈ ಬಾರಿ ಪ್ರೈಜ್​ ಮೊತ್ತದಲ್ಲಿ 3 ಲಕ್ಷ ರೂಪಾಯಿ ಏರಿಕೆ ಮಾಡಲಾಗಿದೆ. ಇನ್ನು, ರನ್ನರ್​ ಅಪ್​ಗೆ 10 ಲಕ್ಷ ರೂಪಾಯಿ ನೀಡಲಾಗುತ್ತಿತ್ತು. ಈ ಬಾರಿ ಟಾಪ್​ 5ರಲ್ಲಿರುವ ಎಲ್ಲರಿಗೂ ಪ್ರಶಸ್ತಿ ಮೊತ್ತ ನೀಡಲಾಗುತ್ತಿದೆ.

ಈ ಹಣವನ್ನು ಏನು ಮಾಡುತ್ತೀರಿ ಎಂಬುದನ್ನು ಮನೆಯವರನ್ನು ಕೇಳಿದಾಗ ಅದಕ್ಕೆ ಎಲ್ಲರೂ ಉತ್ತರ ನೀಡಿದರು.

ಮಂಜು ಪಾವಗಡ: 2 ವರ್ಷದಿಂದ ಅಪ್ಪ-ಅಮ್ಮನನ್ನು ನೋಡಿಕೊಳ್ಳುತ್ತಾ ಇದೀನಿ. ನಾನು ಸಾಧನೆ ಮಾಡಬೇಕು ಎಂದು ಮನೆಯವರಿಗೆ ದುಡ್ಡುಕೊಟ್ಟಿಲ್ಲ. ನನ್ನ ಅಪ್ಪ ಅಮ್ಮನ ಸುಖವಾಗಿ ನೋಡಿಕೊಳ್ಳಬೇಕು. ಇದು ತುಂಬಾ ದೊಡ್ಡ ವೇದಿಕೆ. ಇದರಿಂದ ಕೆಲಸ ಸಿಗಬೇಕು. ಈ ವೇದಿಕೆಯಿಂದ ಅನೇಕರ ಜೀವನ ಬದಲಾಗಿದೆ.

ಪ್ರಶಾಂತ್ ಸಂಬರಗಿ: ಬಂದ ಹಣಕ್ಕೆ ನನ್ನ ಹಣವನ್ನು ಸೇರಿಸಿ ಹೆಣ್ಣು ಮಕ್ಕಳ ಶಿಕ್ಷಣದ ಪ್ರೋತ್ಸಾಹಕ್ಕಾಗಿ ಟ್ರಸ್ಟ್ ರಚಿಸುತ್ತೇನೆ.

ದಿವ್ಯಾ ಉರುಡುಗ: ನಾನು ಉದ್ಯಮ ಆರಂಭಿಸಬೇಕು. ನನ್ನ ಅಪ್ಪ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕು.

ಅರವಿಂದ್​: ನಾನಿಲ್ಲಿ ಗೆದ್ದರೆ ಇಡೀ ಕರ್ನಾಟಕವೇ ಮೆಚ್ಚಿದೆ ಅಂತ ಅರ್ಥ. ನನ್ನ ವೃತ್ತಿ ಜೀವನಕ್ಕೆ ಇದು ಸಹಕಾರಿ ಆಗಲಿದೆ.

ವೈಷ್ಣವಿ: ಅಪ್ಪ ಅಮ್ಮ ಮನೆ ತೆಗೆದುಕೊಳ್ಳಬೇಕು ಎಂದುಕೊಂಡಿದ್ದಾರೆ. ಈ ಹಣವನ್ನು ಅವರಿಗೆ ನೀಡುತ್ತೇನೆ.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲಿ ನಾಲ್ಕೇ ದಿನಕ್ಕೆ ಎರಡು ಲಕ್ಷ ಸಂಪಾದಿಸಿದ ಅರವಿಂದ್​ ಕೆಪಿ

Published On - 7:49 pm, Sat, 7 August 21