ಬಿಗ್ ಬಾಸ್ ಕನ್ನಡ ಸೀಸನ್ 8 ಅದ್ದೂರಿ ವೇದಿಕೆಯಲ್ಲಿ ಕಿಚ್ಚ ಸುದೀಪ್ ಅವರು ಮಂಜು ಪಾವಗಡ ಅವರ ಕೈಯನ್ನು ಮೇಲೆತ್ತಿದರು. ಈ ಮೂಲಕ ಮಂಜು ವಿನ್ನರ್ ಅನ್ನೋದನ್ನು ಸುದೀಪ್ ಘೋಷಿಸಿದರು. ಬಣ್ಣಬಣ್ಣದ ವೇದಿಕೆ ಮೇಲೆ ಸಂಭ್ರಮ ಮುಗಿಲುಮುಟ್ಟಿತ್ತು. ಇತ್ತ ಸೋಶಿಯಲ್ ಮೀಡಿಯಾದಲ್ಲಿ ಮಂಜುಗೆ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ. ಹಾಗಾದರೆ, ಮಂಜು ಗೆಲ್ಲೋಕೆ ಕಾರಣವಾದ ಅಂಶಗಳೇನು ಎನ್ನುವುದಕ್ಕೆ ಇಲ್ಲಿದೆ ಉತ್ತರ.
ಮನರಂಜನೆ:
ಬಿಗ್ ಬಾಸ್ ಶೋಅನ್ನು ವೀಕ್ಷಕರು ನೋಡುವುದೇ ಮನರಂಜನೆಗೆ. ಕೆಲ ಸ್ಪರ್ಧಿಗಳು ಮನೆಯೊಳಗೆ ತೆರಳಿ ತುಂಬಾನೇ ಗಂಭೀರವಾಗಿ ನಡೆದುಕೊಂಡಿದ್ದರು. ಇದು ವೀಕ್ಷಕರಿಗೆ ಇಷ್ಟವಾಗಿರಲಿಲ್ಲ. ಆದರೆ, ಮಂಜು ಸದಾ ಹಾಸ್ಯ ಮಾಡುತ್ತಾ, ಎಲ್ಲರಿಗೂ ಭರಪೂರ ಮನರಂಜನೆ ನೀಡುತ್ತಾ ಬಂದರು. ಜಾಗ ಯಾವುದೇ ಆಗಲಿ, ಎದುರಿಗಿರುವ ವ್ಯಕ್ತಿ ಹೇಗೆ ಇರಲಿ ಮಂಜು ಎಲ್ಲರನ್ನೂ ನಗಿಸುತ್ತಿರುತ್ತಾರೆ. ಈ ಕಾರಣಕ್ಕೆ ಅವರು ವೀಕ್ಷಕರಿಗೆ ಬೇಗ ಕನೆಕ್ಟ್ ಆಗುತ್ತಾರೆ.
ನಾಯಕತ್ವ:
ಮಂಜು ನಾಯಕತ್ವದಲ್ಲಿ ಎಂದಿಗೂ ಹಿಂದೆ ಬಿದ್ದಿಲ್ಲ. ಯಾವುದೇ ತಂಡದ ನಾಯಕನಾಗಲಿ, ಅವರ ತಂಡದಲ್ಲಿ ಯಾವುದೇ ಸ್ಪರ್ಧಿಗಳಿರಲಿ ತಂಡ ಕೆಳಗೆ ಬೀಳದಂತೆ ನೋಡಿಕೊಂಡಿದ್ದಾರೆ ಮಂಜು. ಅವರ ನಾಯಕತ್ವ ಅನೇಕರಿಗೆ ಇಷ್ಟವಾಗಿದೆ. ಇದು ಅವರಿಗೆ ಪ್ಲಸ್ ಆಗಬಹುದು.
ಸ್ವತಂತ್ರ ಸ್ಪರ್ಧಿ:
ಬಿಗ್ ಬಾಸ್ ಮೊದಲ ಇನ್ನಿಂಗ್ಸ್ನಲ್ಲಿ ದಿವ್ಯಾ ಸುರೇಶ್ ಜತೆ ಮಂಜು ಹೆಚ್ಚು ಆಪ್ತವಾಗಿದ್ದರು. ಕೊನೆಯಲ್ಲಿ ಇದು ಅವರಿಗೆ ಮುಳುವಾಗಿತ್ತು. ಅವರು ಕೆಲ ಕಾಲ ಮನರಂಜನೆ ನೀಡುವುದನ್ನೇ ನಿಲ್ಲಿಸಿದ್ದರು. ಆದರೆ, ಸೆಕೆಂಡ್ ಇನ್ನಿಂಗ್ಸ್ನಲ್ಲಿ ಆರೀತಿ ಆಗಿಲ್ಲ. ಮಂಜು ಸಂಪೂರ್ಣವಾಗಿ ಬದಲಾಗಿದ್ದಾರೆ. ಎಲ್ಲ ಕಡೆಗಳಲ್ಲೂ ಸ್ವತಂತ್ರವಾಗಿ ಗುರುತಿಸಿಕೊಂಡಿದ್ದಾರೆ.
ಹೊಂದಾಣಿಕೆ:
ಬಿಗ್ ಬಾಸ್ ಮನೆಯಲ್ಲಿ ಹೊಂದಾಣಿಕೆ ಅನ್ನೋದು ತುಂಬಾನೇ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಯಾರ ಜತೆ ಹೇಗೆ ಹೊಂದಿಕೊಳ್ಳುತ್ತಾರೆ ಅನ್ನೋದು ಬಹಳ ಮುಖ್ಯವಹಿಸಲಿದೆ. ಮಂಜು ಇದರಲ್ಲಿ ಮೇಲುಗೈ ಸಾಧಿಸಿದ್ದರು. ಎಲ್ಲರ ಜತೆ ಅವರು ಅದ್ಭುತವಾಗಿ ಹೊಂದಿಕೊಳ್ಳುತ್ತಿದ್ದರು.
ಗಮನ ಸೆಳೆಯುವ ಗುಣ:
ಮಂಜು ಅವರನ್ನು ದ್ವೇಷಿಸೋಕೆ ಯಾರಿಗೂ ಕಾರಣ ಸಿಗುವುದಿಲ್ಲ. ಪ್ರಶಾಂತ್ ಸಂಬರಗಿ ಅವರು ಮಂಜು ಅವರನ್ನು ದ್ವೇಷಿಸುತ್ತಿದ್ದರು. ಕೊನೆಕೊನೆಗೆ ಅದು ತಪ್ಪು ಅನ್ನೋದು ಅವರಿಗೆ ಅರಿವಾಗಿತ್ತು. ಈ ಕಾರಣಕ್ಕೆ ಮತ್ತೆ ಹೊಂದಿಕೊಂಡರು. ಮಂಜು ಅವರಲ್ಲಿ ಗಮನ ಸೆಳೆಯುವ ಗುಣವಿದೆ. ಅದು ಎಲ್ಲರಿಗೂ ಇಷ್ಟವಾಗುವಂತಹದು.
ಇದನ್ನೂ ಓದಿ:
ಬಿಗ್ ಬಾಸ್ ಬಳಿಕ ರಂಜಿಸಲು ಬರ್ತಿವೆ ಹೊಸ ಸೀರಿಯಲ್ಗಳು; ಲಕ್ಷಣ, ಕನ್ಯಾಕುಮಾರಿ ಕಥೆ ಏನು?