ಗೊತ್ತಿದ್ದೂ ತಪ್ಪು ಮಾಡಿದ ಆರ್ಯವರ್ಧನ್ ಗುರೂಜಿ; ಮನೆ ಮಂದಿಗೆ ಕಠಿಣ ಶಿಕ್ಷೆ

ಆರ್ಯವರ್ಧನ್ ಗುರೂಜಿ ಅವರು ಯಾವಾಗಲೂ ತಮ್ಮ ವಾದವೇ ಸರಿ ಎನ್ನುತ್ತಾ ಬಂದವರು. ಅವರು ನಡೆದುಕೊಳ್ಳುವ ರೀತಿ ಅನೇಕರಿಗೆ ಇಷ್ಟವಾಗುತ್ತಿಲ್ಲ. ಕೆಲವೊಮ್ಮೆ ತಪ್ಪು ಮಾಡಿದರೂ ಅದನ್ನು ಒಪ್ಪಿಕೊಳ್ಳುವುದಿಲ್ಲ.

ಗೊತ್ತಿದ್ದೂ ತಪ್ಪು ಮಾಡಿದ ಆರ್ಯವರ್ಧನ್ ಗುರೂಜಿ; ಮನೆ ಮಂದಿಗೆ ಕಠಿಣ ಶಿಕ್ಷೆ
ಆರ್ಯವರ್ಧನ್
Edited By:

Updated on: Nov 23, 2022 | 10:35 AM

ದಿನ ಕಳೆದಂತೆ ಬಿಗ್ ಬಾಸ್ ಮನೆಯಲ್ಲಿ ಆಟ ಕಠಿಣ ಆಗುತ್ತಿದೆ. ಸ್ಪರ್ಧಿಗಳ ಮಧ್ಯೆ ಟಫ್ ಕಾಂಪಿಟೇಷನ್ ನಡೆಯುತ್ತಿದೆ. ಪ್ರತಿ ವಾರ ಬೇರೆ ಬೇರೆ ಟಾಸ್ಕ್​ಗಳನ್ನು ನೀಡಲಾಗುತ್ತಿದೆ. ಈ ವಾರ ಬಿಗ್ ಬಾಸ್ ಮನೆಯಲ್ಲಿ ಒಂದು ವಿಚಿತ್ರ ಟಾಸ್ಕ್ ನೀಡಲಾಗಿದೆ. ಅದುವೇ ಕಾಡಿನ ಟಾಸ್ಕ್. ಬಿಗ್ ಬಾಸ್ ಮನೆಯನ್ನು ಕಾಡಿನ ರೀತಿ ಬದಲಾಯಿಸಲಾಗಿದೆ. ಸ್ಪರ್ಧಿಗಳು ಕೂಡ ಕಾಡು ಮನುಷ್ಯರ ರೀತಿ ಬಟ್ಟೆ ಧರಿಸಿದ್ದಾರೆ. ಈಗ ಬಿಗ್ ಬಾಸ್ ನೀಡಿದ ಒಂದು ಟಾಸ್ಕ್ ವೇಳೆ ಆರ್ಯವರ್ಧನ್ ಗುರೂಜಿ (Aryavardhan Guruji) ಅವರು ಆಡಿದ ರೀತಿಗೆ ಬಿಗ್ ಬಾಸ್ (Bigg Boss) ಕಠಿಣ ಶಿಕ್ಷೆ ನೀಡಿದ್ದಾರೆ.

ಆರ್ಯವರ್ಧನ್ ಗುರೂಜಿ ಅವರು ಯಾವಾಗಲೂ ತಮ್ಮ ವಾದವೇ ಸರಿ ಎನ್ನುತ್ತಾ ಬಂದವರು. ಅವರು ನಡೆದುಕೊಳ್ಳುವ ರೀತಿ ಅನೇಕರಿಗೆ ಇಷ್ಟವಾಗುತ್ತಿಲ್ಲ. ಕೆಲವೊಮ್ಮೆ ತಪ್ಪು ಮಾಡಿದರೂ ಅದನ್ನು ಒಪ್ಪಿಕೊಳ್ಳುವುದಿಲ್ಲ. ಈಗ ಆರ್ಯವರ್ಧನ್ ಅವರು ಒಂದು ದೊಡ್ಡ ತಪ್ಪು ಮಾಡಿದ್ದಾರೆ. ಇದರಿಂದ ಮನೆ ಮಂದಿಗೆ ದೊಡ್ಡ ನಷ್ಟ ಉಂಟಾಗಿದೆ.

ಬಿಗ್ ಬಾಸ್​ನಲ್ಲಿ ಈ ವಾರ ಟಾಸ್ಕ್​ ಒಂದನ್ನು ನೀಡಲಾಗಿತ್ತು. ಈ ಟಾಸ್ಕ್​ನ ಅನುಸಾರ ನೀರಿನಲ್ಲಿ ಮರದ ಪಂಜರ ಒಂದನ್ನು ಇಡಲಾಗಿತ್ತು. ಇದಕ್ಕೆ 12 ನಟ್​ಗಳನ್ನು ಜೋಡಿಸಲಾಗಿತ್ತು. ಇದನ್ನು ಆಟ ಆಡುವ ಸ್ಪರ್ಧಿಗಳು ಬರಿಗೈನಲ್ಲಿ ಬಿಚ್ಚಬೇಕಿತ್ತು. ಈ ಆದೇಶ ಬಂದ ಹೊರತಾಗಿಯೂ ಆರ್ಯವರ್ಧನ್​ ಬಟ್ಟೆ ಸಹಾಯದಿಂದ ನಟ್ ಬಿಚ್ಚಿದ್ದರು.

ಬಿಗ್ ಬಾಸ್ ನೀಡಿದ ಆದೇಶದಲ್ಲಿ ಬಟ್ಟೆಯನ್ನು ಬಳಕೆ ಮಾಡಬಾರದು ಎಂಬುದನ್ನು ಸ್ಪಷ್ಟವಾಗಿ ಸೂಚಿಸಲಾಗಿತ್ತು. ಆದಾಗ್ಯೂ ಆರ್ಯವರ್ಧನ್ ಅವರು ಬಟ್ಟೆ ಬಳಕೆ ಮಾಡಿದ್ದರು. ಅನುಪಮಾ ಗೌಡ ಮೊದಲಾದವರು ಇಲ್ಲಿ ಎಚ್ಚರಿಕೆ ನೀಡುವ ಕೆಲಸ ಮಾಡಿದರು. ಆದರೆ, ಅದನ್ನು ಆರ್ಯವರ್ಧನ್ ಗಂಭೀರವಾಗಿ ಪರಿಗಣಿಸಿಲ್ಲ. ಆಟ ಮುಗಿದ ಬಳಿಕ ಬಿಗ್ ಬಾಸ್ ಶಿಕ್ಷೆ ಘೋಷಿಸಿದರು.

ಇದನ್ನೂ ಓದಿ: ತಲೆ ಬೋಳಿಸಿಕೊಂಡು ಅಲ್ಲಿ ಕಿಚ್ಚ ಸುದೀಪ್ ಹೆಸರು ಬರೆದುಕೊಳ್ಳಲು ಮುಂದಾದ ಆರ್ಯವರ್ಧನ್

‘ಬಟ್ಟೆ ಬಳಕೆ ಮಾಡಿ ನಟ್ ಬಿಚ್ಚಿದ್ದರಿಂದ ಈ ಆಟವನ್ನು ರದ್ದು ಮಾಡುತ್ತಿದ್ದೇವೆ. ಜತೆಗೆ ಈ ಆಟಕ್ಕೆ ಬಳಕೆ ಮಾಡಿಕೊಂಡಿದ್ದ ಸೌಕರ್ಯ ರದ್ದಾಗುತ್ತಿದೆ’ ಎಂದು ಬಿಗ್ ಬಾಸ್ ಘೋಷಿಸಿದರು. ಇದರಿಂದ ಮನೆ ಮಂದಿ ಆರ್ಯವರ್ಧನ್ ವಿರುದ್ಧ ಕೂಗಾಡಿದರು.