Kamal Haasan: ‘ಮಹಿಳಾ ಸ್ಪರ್ಧಿ ಪರ ಬಿಗ್​ ಬಾಸ್​ ನಿರೂಪಕ ಕಮಲ್​ ಹಾಸನ್​ ಪಕ್ಷಪಾತ’: ವನಿತಾ ಆರೋಪ

Vanitha Vijayakumar | Bigg Boss Tamil 6: ವನಿತಾ ವಿಜಯ್​ಕುಮಾರ್​ ಅವರು ‘ಬಿಗ್​ ಬಾಸ್​ ತಮಿಳು 6’ ಕಾರ್ಯಕ್ರಮವನ್ನು ಫಾಲೋ ಮಾಡುತ್ತಿದ್ದಾರೆ. ಇತ್ತೀಚಿನ ಸಂಚಿಕೆಯನ್ನು ನೋಡಿದ ಬಳಿಕ ಅವರಿಗೆ ಪಕ್ಷಪಾತದ ಅನುಮಾನ ಮೂಡಿದೆ.

Kamal Haasan: ‘ಮಹಿಳಾ ಸ್ಪರ್ಧಿ ಪರ ಬಿಗ್​ ಬಾಸ್​ ನಿರೂಪಕ ಕಮಲ್​ ಹಾಸನ್​ ಪಕ್ಷಪಾತ’: ವನಿತಾ ಆರೋಪ
ಕಮಲ್​ ಹಾಸನ್​, ವನಿತಾ ವಿಜಯ್​ಕುಮಾರ್​
TV9kannada Web Team

| Edited By: Madan Kumar

Nov 23, 2022 | 12:58 PM

ಕನ್ನಡ, ಹಿಂದಿ ಮಾತ್ರವಲ್ಲದೇ ಬೇರೆ ಭಾಷೆಗಳಲ್ಲೂ ಬಿಗ್​ ಬಾಸ್​ ಕಾರ್ಯಕ್ರಮ ಫೇಮಸ್​ ಆಗಿದೆ. ತಮಿಳಿನಲ್ಲಿ (Bigg Boss Tamil 6) ಕಮಲ್​ ಹಾಸನ್​ ಅವರು ಈ ಶೋ ನಡೆಸಿಕೊಡುತ್ತಿದ್ದಾರೆ. ಅವರ ನಿರೂಪಣೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಆದರೆ ಅವರ ಮೇಲೆ ಈಗೊಂದು ಆರೋಪ ಕೇಳಿಬಂದಿದೆ. ಮಹಿಳಾ ಸ್ಪರ್ಧಿಯೊಬ್ಬರ ಪರವಾಗಿ ಕಮಲ್​ ಹಾಸನ್​ ಪಕ್ಷಪಾತ ಮಾಡುತ್ತಿದ್ದಾರೆ ಎಂದು ಮಾಜಿ ಸ್ಪರ್ಧಿ ವನಿತಾ ವಿಜಯ್​ಕುಮಾರ್​ (Vanitha Vijayakumar) ಆರೋಪ ಮಾಡಿದ್ದಾರೆ. ಈ ಕುರಿತು ಹೊಸ ಚರ್ಚೆ ಶುರುವಾಗಿದೆ. ವನಿತಾ ಮಾಡಿರುವ ಈ ಆರೋಪದಿಂದ ಕಮಲ್​ ಹಾಸನ್​ (Kamal Haasan) ಅಭಿಮಾನಿಗಳು ಗರಂ ಆಗಿದ್ದಾರೆ.

ತಮಿಳು ಬಿಗ್​ ಬಾಸ್​ ಕಾರ್ಯಕ್ರಮ ಈವರೆಗೆ 5 ಆವೃತ್ತಿಗಳನ್ನು ಯಶಸ್ವಿಯಾಗಿ ಪೂರೈಸಿದೆ. ಈಗ 6ನೇ ಸೀಸನ್​ ನಡೆಯುತ್ತಿದೆ. ಕಮಲ್​ ಹಾಸನ್​ ಅವರು ಈ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಇತ್ತೀಚೆಗೆ ಬಿಗ್​ ಬಾಸ್​ ಮನೆಯ ವಿನ್ಯಾಸವನ್ನು ಬದಲಾಯಿಸಲಾಗಿದೆ. ಕೋರ್ಟ್​ ರೀತಿಯಲ್ಲಿ ಒಂದಷ್ಟು ಬದಲಾವಣೆಗಳನ್ನು ಮಾಡಲಾಗಿದೆ. ಅದಕ್ಕೆ ಅನುಗುಣವಾಗಿ ಟಾಸ್ಕ್​ ನೀಡಲಾಗಿದೆ. ಈ ಶೋನಲ್ಲಿ ಕಮಲ್​ ಹಾಸನ್​ ಅವರು ನಟಿ ರಚಿತಾ ಮಹಾಲಕ್ಷ್ಮಿ ಪರವಾಗಿ ಪಕ್ಷಪಾತ ಮಾಡಿದ್ದಾರೆ ಎಂದು ವನಿತಾ ವಿಜಯ್​ಕುಮಾರ್​ ಹೇಳಿದ್ದಾರೆ.

‘ಬಿಗ್​ ಬಾಸ್​ ತಮಿಳು 3’ರಲ್ಲಿ ವನಿತಾ ವಿಜಯ್​ಕುಮಾರ್ ಅವರು ಸ್ಪರ್ಧಿಸಿದ್ದರು. ‘ಬಿಗ್​ ಬಾಸ್​ ತಮಿಳು 4’ರಲ್ಲಿ ಅತಿಥಿಯಾಗಿ ಆಗಮಿಸಿದ್ದರು. ಒಟಿಟಿ ಆವೃತ್ತಿಯಾದ ‘ಬಿಗ್​ ಬಾಸ್​ ಅಲ್ಟಿಮೇಟ್​ 1’ ಶೋನಲ್ಲೂ ಅವರು ಸ್ಪರ್ಧಿಸಿದ್ದರು. ಆದರೆ ಈಗ ಅವರು ಕಮಲ್​ ಹಾಸನ್​ ವಿರುದ್ಧವೇ ಮಾತನಾಡಿದ್ದಾರೆ.

ವನಿತಾ ವಿಜಯ್​ಕುಮಾರ್​ ಅವರು ‘ಬಿಗ್​ ಬಾಸ್​ ತಮಿಳು 6’ ಕಾರ್ಯಕ್ರಮವನ್ನು ಫಾಲೋ ಮಾಡುತ್ತಿದ್ದಾರೆ. ಇತ್ತೀಚಿನ ಸಂಚಿಕೆಯನ್ನು ನೋಡಿದ ಬಳಿಕ ಅವರಿಗೆ ಪಕ್ಷಪಾತದ ಅನುಮಾನ ಮೂಡಿದೆ. ‘ರಾಬರ್ಟ್​ ಮತ್ತು ರಚಿತಾ ನಡುವಿನ ವಿಚಾರಗಳ ಬಗ್ಗೆ ಕಮಲ್​ ಹಾಸನ್​ ಯಾಕೆ ಮಾತನಾಡುತ್ತಿಲ್ಲ? ರಾಬರ್ಟ್​ ಅವರು ಗಂಭೀರ ವಿಷಯಗಳನ್ನು ಕಾಮಿಡಿಯಾಗಿ ಹೇಳುತ್ತಿದ್ದಾರೆ. ರಚಿತಾ ಪರವಾಗಿ ಪಕ್ಷಪಾತ ಮಾಡಲಾಗುತ್ತಿದೆ ಅಂತ ನನಗೆ ಅನಿಸುತ್ತದೆ. ಕಮಲ್​ ಹಾಸನ್​ ಅವರು ಆಕೆಯ ಅಭಿಮಾನಿ ಆಗಿರಬಹುದು. ಆದರೆ ಆ ವಿಷಯ ಬೇರೆ’ ಎಂದು ವನಿತಾ ವಿಜಯ್​ಕುಮಾರ್​ ಹೇಳಿದ್ದಾರೆ.

‘ಅಜೀಮ್​ಗೆ ಅವರದ್ದೇ ಆದ ತಂತ್ರಗಾರಿಕೆ ಇದೆ. ಆದರೆ ಈಗ ಅವರು ಕಮಲ್​ ಹಾಸನ್​ ವಿರುದ್ಧವೇ ನಡೆದುಕೊಳ್ಳುತ್ತಿದ್ದಾರೆ. ಅದರಿಂದ ಅವರಿಗೆ ಒಳ್ಳೆಯದೇ ಆಗಬಹುದು. ಆದರೆ ಜನರ ತೀರ್ಮಾನವನ್ನು ಮೊದಲೇ ಊಹಿಸೋಕೆ ಆಗಲ್ಲ’ ಎಂದು ಕೂಡ ವನಿತಾ ವಿಜಯ್​ಕುಮಾರ್​ ಹೇಳಿದ್ದಾರೆ.

ಇದನ್ನೂ ಓದಿ

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada