‘ಭುವಿ ಹೆಸರಿಗೆ ರತ್ನಮಾಲಾ ಪೂರ್ತಿ ಆಸ್ತಿ ಬರೆದಿದ್ದಾಳೆ’; ಹರ್ಷನಿಗೆ ವಕೀಲರಿಂದ ತಿಳಿಯಿತು ವಿಚಾರ

ಸಾನಿಯಾಳನ್ನು ಎಂಡಿ ಪಟ್ಟದಿಂದ ಕಿತ್ತೆಸೆದಿದ್ದಾನೆ ಹರ್ಷ. ಇದರಿಂದ ಆಕೆ ಸಿಟ್ಟಾಗಿದ್ದಾಳೆ. ಹರ್ಷ ಹಾಗೂ ವಕೀಲರ ಮಧ್ಯ ವಾಕ್ಸಮರ ನಡೆಯುವಾಗ ಆಕೆ ಕಚೇರಿಗೆ ಬಂದಿದ್ದಾಳೆ. ಬಂದು ತಾನು ಕೋರ್ಟ್​ಗೆ ಹೋಗ್ತೀನಿ ಎಂದು ಆವಾಜ್ ಹಾಕಿದ್ದಾಳೆ.

‘ಭುವಿ ಹೆಸರಿಗೆ ರತ್ನಮಾಲಾ ಪೂರ್ತಿ ಆಸ್ತಿ ಬರೆದಿದ್ದಾಳೆ’; ಹರ್ಷನಿಗೆ ವಕೀಲರಿಂದ ತಿಳಿಯಿತು ವಿಚಾರ
ಹರ್ಷ-ರತ್ನಮಾಲಾ
TV9kannada Web Team

| Edited By: Rajesh Duggumane

Nov 24, 2022 | 9:24 AM

ಧಾರಾವಾಹಿ: ಕನ್ನಡತಿ

ಪ್ರಸಾರ: ಕಲರ್ಸ್ ಕನ್ನಡ

ಸಮಯ: ರಾತ್ರಿ 7.30

ನಿರ್ದೇಶನ: ಯಶ್ವಂತ್ ಪಾಂಡು

ಪಾತ್ರವರ್ಗ: ಕಿರಣ್ ರಾಜ್, ರಂಜನಿ ರಾಘವನ್ ಹಾಗೂ ಇತರರು

ಹಿಂದಿನ ಎಪಿಸೋಡ್​ನಲ್ಲಿ ಏನಾಗಿತ್ತು?

ರತ್ನಮಾಲಾಳು ಭುವಿಗೆ ಎಲ್ಲಾ ಆಸ್ತಿ ಬರೆದಿಟ್ಟಿದ್ದಾಳೆ ಎಂಬ ವಿಚಾರ ಭುವಿಗೆ ಹೇಳಿದ್ದಾಳೆ ವರುಧಿನಿ. ಈ ವಿಚಾರ ತಿಳಿದ ನಂತರದಲ್ಲಿ ಆಕೆ ಶಾಕ್​​ಗೆ ಒಳಗಾಗಿದ್ದಾಳೆ. ಇದೇ ಸಂದರ್ಭದಲ್ಲಿ ಈ ವಿಚಾರ ಹರ್ಷನಿಗೆ ಈ ಮೊದಲೇ ಗೊತ್ತಿತ್ತು ಎಂಬ ಮಾತನ್ನು ಕೂಡ ವರುಧಿನಿ ಹೇಳಿದ್ದಾಳೆ. ಇದನ್ನು ಕೇಳಿ ಭುವಿ ಶಾಕ್​ ಆಗಿದ್ದಾಳೆ.

ಹರ್ಷನಿಗೆ ಗೊತ್ತಾಯ್ತು ವಿಲ್ ವಿಚಾರ

ವಕೀಲರ ಮೂಲಕ ರತ್ನಮಾಲ ತನ್ನ ಎಲ್ಲಾ ಆಸ್ತಿಯನ್ನು ಭುವಿ ಹೆಸರಿಗೆ ಬರೆದಿದ್ದಳು. ಹರ್ಷನಿಗೆ ಕೋಪ ಜಾಸ್ತಿ. ಕೆಲ ವಿಚಾರಗಳಲ್ಲಿ ದುಡುಕಿ ನಿರ್ಧಾರ ತೆಗೆದುಕೊಳ್ಳುತ್ತಾನೆ. ಆದರೆ, ಭುವಿ ಆ ರೀತಿ ಅಲ್ಲ. ಏನೇ ಇದ್ದರೂ ಯೋಚಿಸಿ ನಿರ್ಧಾರ ತೆಗೆದುಕೊಳ್ಳುತ್ತಾಳೆ. ಈ ಕಾರಣಕ್ಕೆ ಭುವಿ ಹೆಸರಿಗೆ ಆಸ್ತಿ ಬರೆದಿದ್ದಾಳೆ ರತ್ನಮಾಲಾ. ಈ ವಿಚಾರ ವಕೀಲರಿಗೆ ಗೊತ್ತಿತ್ತು. ಆದರೆ, ತಾನು ಮೃತಪಟ್ಟ ನಂತರವೇ ಈ ವಿಚಾರವನ್ನು ಹೇಳುವಂತೆ ವಕೀಲರಿಗೆ ರತ್ನಮಾಲಾ ಸೂಚಿಸಿದ್ದಳು. ಆತನಿಂದ ಎಲ್ಲವನ್ನೂ ಬಾಯಿ ಬಿಡಿಸಲು ಈ ಮೊದಲು ವರುಧಿನಿ ಪ್ರಯತ್ನ ಮಾಡಿದ್ದಳು. ಆದರೆ, ಅದು ಯಶಸ್ವಿ ಆಗಿರಲಿಲ್ಲ. ಈ ವಿಚಾರವನ್ನು ತಾನೇ ಹೇಳಿ ಹರ್ಷ ಹಾಗೂ ಭುವಿ ಮಧ್ಯೆ ವೈಮನಸ್ಸು ತರಲು ಪ್ಲ್ಯಾನ್ ಮಾಡಿದ್ದಳು ವರುಧಿನಿ. ಈಗ ಪ್ಲ್ಯಾನ್ ಉಲ್ಟಾ ಆಗಿದೆ.

‘ರತ್ನಮಾಲಾ ಎಲ್ಲಾ ಆಸ್ತಿಯನ್ನು ಭುವಿ ಹೆಸರಿಗೆ ಬರೆದಿದ್ದಾರೆ. ರತ್ನಮಾಲಾ ಒಡೆತನದ ಆಸ್ತಿಗೆ ನೀನು ವಾರಸುದಾರ ಅಲ್ಲ. ಇದನ್ನು ನಾನು ಮೊದಲೇ ಹೇಳಬಹುದಿತ್ತು. ಆದರೆ, ರತ್ನಮಾಲಾ ಅವರು ಈ ಬಗ್ಗೆ ನನಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದರು. ಹೀಗಾಗಿ ಹೇಳಿಲ್ಲ’ ಎಂದು ವಕೀಲರು ಹೇಳುತ್ತಿದ್ದಂತೆ ಹರ್ಷನಿಗೆ ಕೋಪ ಹೆಚ್ಚಾಗಿದೆ. ವಕೀಲರ ಕಾಲರ್ ಪಟ್ಟಿ ಹಿಡಿದು ಆವಾಜ್ ಹಾಕಿದ್ದಾನೆ ಹರ್ಷ. ಕಚೇರಿಯಲ್ಲೇ ಈ ಘಟನೆ ನಡೆದಿದೆ. ಇದರಿಂದ ಕಚೇರಿಯಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣ ಆಗಿತ್ತು.

ಸಾನಿಯಾ ಕಿರಿಕಿರಿ

ಸಾನಿಯಾಳನ್ನು ಎಂಡಿ ಪಟ್ಟದಿಂದ ಕಿತ್ತೆಸೆದಿದ್ದಾನೆ ಹರ್ಷ. ಇದರಿಂದ ಆಕೆ ಸಿಟ್ಟಾಗಿದ್ದಾಳೆ. ಹರ್ಷ ಹಾಗೂ ವಕೀಲರ ಮಧ್ಯ ವಾಕ್ಸಮರ ನಡೆಯುವಾಗ ಆಕೆ ಕಚೇರಿಗೆ ಬಂದಿದ್ದಾಳೆ. ಬಂದು ತಾನು ಕೋರ್ಟ್​ಗೆ ಹೋಗ್ತೀನಿ ಎಂದು ಆವಾಜ್ ಹಾಕಿದ್ದಾಳೆ. ಇದರಿಂದ ಹರ್ಷನಿಗೆ ಕಿರಿಕಿರಿ ಆಗಿದೆ. ಸದ್ಯ ಕೇಳಿರುವ ಶಾಕಿಂಗ್ ವಿಚಾರದಿಂದ ಆತನಿಗೆ ಹೊರಗೆ ಬರೋಕೆ ಸಾಧ್ಯವಾಗುತ್ತಿಲ್ಲ. ಹೀಗಿರುವಾಗಲೇ ಸಾನಿಯಾ ಕಿರಿಕಿರಿ ಮಾಡಿದ್ದಾಳೆ. ಈ ಕಾರಣಕ್ಕೆ ಆತ ಅತ್ತ ಲಕ್ಷ್ಯ ನೀಡಲು ಹೋಗಿಲ್ಲ.

ವರುಧಿನಿ ಡಬಲ್​ಗೇಮ್

ಹರ್ಷ ಹಾಗೂ ಭುವಿ ಮಧ್ಯ ವೈಮನಸ್ಸು ತರಬೇಕು ಎಂದು ವರುಧಿನಿ ನಿರ್ಧರಿಸಿ ಆಗಿದೆ. ಈ ಕಾರಣಕ್ಕೆ ಆಕೆ ಡಬಲ್​ಗೇಮ್ ಆಡೋಕೆ ಶುರು ಮಾಡಿದ್ದಾಳೆ. ಭುವಿ ಬಳಿ ಬಂದ ಆಕೆ, ‘ರತ್ನಮಾಲಾ ಹಾಗೂ ಹರ್ಷನ ಮಧ್ಯೆ ಜಗಳ ನಡೆಯುತ್ತಲೇ ಇತ್ತು. ಈ ಜಗಳ ನಡೆಯುತ್ತಿದ್ದುದು ಮದುವೆ ವಿಚಾರಕ್ಕೆ. ಆ ಬಳಿಕ ರತ್ನಮಾಲಾ ಸೌಪರ್ಣಿಕಾ ಹೆಸರಿಗೆ ಆಸ್ತಿ ಬರೆದಳು. ಆಗ ಹರ್ಷ ಸೌಪರ್ಣಿಕಾ ಹೆಸರಿನವಳನ್ನು ಮದುವೆ ಆಗಲು ಒಪ್ಪಿಕೊಂಡರು’ ಎಂದು ಕಥೆ ಹೇಳಿದ್ದಾಳೆ. ಆದರೆ, ಇದನ್ನು ಭುವಿ ನಂಬಿಲ್ಲ. ವರುಧಿನಿ ಆಡುತ್ತಿರುವ ಮಾತುಗಳು ಸುಳ್ಳು ಎಂಬುದು ಭುವಿಗೆ ಗೊತ್ತಾಗಿದೆ. ‘ಕರ್ಮ ಅನ್ನೋದು ಒಳ್ಳೆಯದಲ್ಲ. ನಾವು ಈಗ ಮಾತನಾಡುತ್ತೇವೆ. ಆದರೆ ಕರ್ಮ ನಮ್ಮನ್ನು ಬಿಡುವುದಿಲ್ಲ’ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾಳೆ ಭುವಿ. ಇದನ್ನು ಕೇಳಿ ವರುಧಿನಿಗೆ ಶಾಕ್ ಆಗಿದೆ.

ಇದನ್ನೂ ಓದಿ

ಶ್ರೀಲಕ್ಷ್ಮಿ ಎಚ್.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada