Diya Hegde: ‘ಸರಿಗಮಪ ಲಿಟ್ಲ್​ ಚಾಂಪ್ಸ್​’ ವೇದಿಕೆಯಲ್ಲಿ ದಿಯಾ ಹೆಗಡೆ ಮಿಂಚಿಂಗ್​; ವೈರಲ್ ಆಗಿದೆ ವಿಶೇಷ ಹಾಡು

Anchor Anushree | Arjun Janya: ‘ನಾನು ನಿನ್ನ ಮನೆಯ ಸೊಸೆ ಆಗಬೇಕು ಅಂತ ಹೇಳಿದೀಯ. ಆದರೆ ಮಗ ಯಾರು?’ ಅಂತ ಅನುಶ್ರೀ ಕೇಳಿದ್ದಾರೆ. ‘ನನ್ನ ಮಗ ಬಹಳ ಚೆಂದ ಇದ್ದಾನೆ’ ಎಂದು ಅರ್ಜುನ್​ ಜನ್ಯ ಕಡೆಗೆ ನೋಟ ಬೀರಿದ್ದಾಳೆ ದಿಯಾ!

Diya Hegde: ‘ಸರಿಗಮಪ ಲಿಟ್ಲ್​ ಚಾಂಪ್ಸ್​’ ವೇದಿಕೆಯಲ್ಲಿ ದಿಯಾ ಹೆಗಡೆ ಮಿಂಚಿಂಗ್​; ವೈರಲ್ ಆಗಿದೆ ವಿಶೇಷ ಹಾಡು
ದಿಯಾ ಹೆಗಡೆ, ಅನುಶ್ರೀ
Follow us
TV9 Web
| Updated By: ಮದನ್​ ಕುಮಾರ್​

Updated on: Nov 24, 2022 | 12:50 PM

ಜೀ ಕನ್ನಡ’ (Zee Kannada) ವಾಹಿನಿಯ ‘ಸರಿಗಮಪ’ ಸಿಂಗಿಂಗ್​ ರಿಯಾಲಿಟಿ ಶೋನಿಂದ ಅನೇಕ ಪ್ರತಿಭೆಗಳಿಗೆ ಅವಕಾಶ ಸಿಕ್ಕಿದೆ. ಹಲವಾರು ಸೀಸನ್​ಗಳ ಮೂಲಕ ಸಾಕಷ್ಟು ಗಾಯಕರ ಬದುಕು ಬದಲಾಗಿದೆ. ಈ ಶೋನಲ್ಲಿ ಸ್ಪರ್ಧಿಸಿ ಗಮನ ಸೆಳೆದ ಬಳಿಕ ಸಿನಿಮಾದಲ್ಲೂ ಹಾಡುವ ಅವಕಾಶ ಪಡೆದು ಮಿಂಚಿದವರು ಹಲವರಿದ್ದಾರೆ. ಈಗ ‘ಸರಿಗಮಪ ಲಿಟ್ಲ್​ ಚಾಂಪ್ಸ್​’ 19ನೇ ಸೀಸನ್​ (Sarigamapa Lil champs 19) ನಡೆಯುತ್ತಿದೆ. ಈ ಬಾರಿ ಕೂಡ ಅನೇಕ ಪ್ರತಿಭಾವಂತ ಮಕ್ಕಳು ವೇದಿಕೆ ಏರಿದ್ದಾರೆ. ಪ್ರತಿ ಎಪಿಸೋಡ್​ ಕೂಡ ರಂಜನೀಯವಾಗಿದೆ. ಪುಟಾಣಿ ಗಾಯಕ-ಗಾಯಕಿಯರ ಕಂಠಸಿರಿಗೆ ಕಿರುತೆರೆ ವೀಕ್ಷಕರು ಫಿದಾ ಆಗುತ್ತಿದ್ದಾರೆ. ಆ ಪೈಕಿ ದಿಯಾ ಹೆಗಡೆ (Diya Hegde) ಹೆಚ್ಚು ಗಮನ ಸೆಳೆಯುತ್ತಿದ್ದಾಳೆ. ತನ್ನದೇ ರೀತಿಯಲ್ಲಿ ಪದಗಳನ್ನು ಜೋಡಿಸಿ ಹಾಡುವ ಆಕೆಯ ಪ್ರತಿಭೆಗೆ ಜಡ್ಜ್​ಗಳು ಕೂಡ ಚಪ್ಪಾಳೆ ತಟ್ಟಿದ್ದಾರೆ.

ಪ್ರತಿ ವೀಕೆಂಡ್​ನಲ್ಲಿ ‘ಸರಿಗಮಪ ಲಿಟ್ಲ್​ ಚಾಂಪ್ಸ್​’ ಕಾರ್ಯಕ್ರಮ ಪ್ರಸಾರ ಆಗುತ್ತಿದೆ. ಕಳೆದ ವಾರ ದಿಯಾ ಹೆಗಡೆ ಹೈಲೈಟ್​ ಆಗಿದ್ದಾಳೆ. ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತಿರುವ ನಿರೂಪಕಿ ಅನುಶ್ರೀ ಕುರಿತಾಗಿಯೇ ದಿಯಾ ಹಾಡು ಹೇಳಿದ್ದಾಳೆ. ಈ ವಿಡಿಯೋವನ್ನು ‘ಜೀ ಕನ್ನಡ’ದ ಸೋಶಿಯಲ್​ ಮೀಡಿಯಾದಲ್ಲಿ ಖಾತೆಗಳಲ್ಲಿ ಹಂಚಿಕೊಳ್ಳಲಾಗಿದೆ.

‘ನಾನು ಮುದುಕಿಯಾದರೇನಂತೆ ನಾ ಇನ್ನೂ ಇರಾಕಿ.. ನನ್ನ ಮಗನ ಮಗನ ಮಗನ ಮದುವೆ ಮಾಡಾಕಿ..’ ಹಾಡನ್ನು ದಿಯಾ ಹೆಗಡೆ ಹೇಳಿದ್ದಾಳೆ. ಆದರೆ ಹಾಡಿಗೆ ತನ್ನದೇ ಶೈಲಿಯಲ್ಲಿ ಹೊಸ ಲಿರಿಕ್ಸ್​ ಸೇರಿಸಿಕೊಂಡಿದ್ದಾಳೆ. ತನಗೆ ಅನುಶ್ರೀ ಸೊಸೆಯಾಗಬೇಕು ಎಂದು ಆಕೆ ಹೇಳಿದ್ದಾಳೆ. ಇದನ್ನು ಕೇಳಿ ಕಾರ್ಯಕ್ರಮದಲ್ಲಿದ್ದ ಎಲ್ಲರೂ ಅಚ್ಚರಿಯಿಂದ ನೋಡಿದ್ದಾರೆ.

ಇದನ್ನೂ ಓದಿ
Image
Anushree: ರಮ್ಯಾ ಭೇಟಿ ಮಾಡಿ ‘ನೀವು ಯಾಕಿಷ್ಟು ಚಂದ’ ಎಂದು ಕೇಳಿದ ಆ್ಯಂಕರ್ ಅನುಶ್ರೀ
Image
ಅಮ್ಮನನ್ನು ನೆನೆದು ವೇದಿಕೆ ಮೇಲೆ ಕಣ್ಣೀರು ಹಾಕಿದ ಶಿವಣ್ಣ; ಕ್ಷಮೆ ಕೇಳಿದ ಅನುಶ್ರೀ
Image
ಆ್ಯಂಕರ್ ಅನುಶ್ರೀ ಅವರದ್ದು ಎನ್ನಲಾದ ಸ್ಫೋಟಕ ಆಡಿಯೋ ವೈರಲ್
Image
 ಹಿರಿತೆರೆಗೆ ಆ್ಯಂಕರ್​​ ಅನುಶ್ರೀ ಕಂಬ್ಯಾಕ್​​; ಹೊಸ ಸಿನಿಮಾದ ಹೀರೋ ಯಾರು ಎಂಬ ಗುಟ್ಟು ಬಿಟ್ಟುಕೊಟ್ಟ ನಟಿ

ಅನುಶ್ರೀ ಅವರೇ ಯಾಕೆ ಸೊಸೆ ಆಗಬೇಕು? ಈ ಪ್ರಶ್ನೆಗೂ ಆಕೆ ಹಾಡಿನ ಮೂಲಕವೇ ಉತ್ತರ ನೀಡಿದ್ದಾಳೆ. ‘ಅನುಶ್ರೀ ಅಂದದ ನಗೆ ಬೀರುತ್ತಾಳೆ. ಮಾತಲ್ಲೇ ಮೋಡಿ ಮಾಡುತ್ತಾಳೆ. ನಗುವಿನಲ್ಲೇ ಪ್ರೀತಿ ತೋರುತ್ತಾಳೆ. ಅನುಶ್ರೀ ನಮ್ಮ ಮನೆಯ ಸೊಸೆ ಆಗಲಿ’ ಎಂದು ಹಾಡಿದ್ದಾಳೆ ದಿಯಾ ಹೆಗಡೆ. ‘ನಾನು ನಿನ್ನ ಮನೆಯ ಸೊಸೆ ಆಗಬೇಕು ಅಂತ ಹೇಳಿದೀಯ. ಆದರೆ ಮಗ ಯಾರು?’ ಅಂತ ಅನುಶ್ರೀ ಕೇಳಿದ್ದಾರೆ. ‘ನನ್ನ ಮಗ ಬಹಳ ಚೆಂದ ಇದ್ದಾನೆ. ಒಳ್ಳೊಳ್ಳೆಯ ಮ್ಯೂಸಿಕ್​ ಮಾಡಿದಾನೆ’ ಎಂದು ಅರ್ಜುನ್​ ಜನ್ಯ ಕಡೆಗೆ ನೋಟ ಬೀರಿದ್ದಾಳೆ ದಿಯಾ!

ಜಡ್ಜ್​ಗಳಾದ ವಿಜಯ್​ ಪ್ರಕಾಶ್​, ಅರ್ಜುನ್​ ಜನ್ಯ, ಮಹಾಗುರು ಹಂಸಲೇಖ, ಮೆಂಟರ್​ ನಂದಿತಾ ಮುಂತಾದವರು ದಿಯಾ ಹೆಗಡೆಯ ಪ್ರತಿಭೆಗೆ ವಾವ್​ ಎಂದಿದ್ದಾರೆ. ಮುಂದಿನ ಸಂಚಿಕೆಗಳಲ್ಲಿ ಆಕೆಯ ಇನ್ನಷ್ಟು ಹಾಡುಗಳನ್ನು ಕೇಳಲು ವೀಕ್ಷಕರು ಕಾದಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.