ಬಿಗ್ಬಾಸ್ ಮನೆ ‘ಬಿಬಿ ರೆಸಾರ್ಟ್’ ಆಗಿ ಬದಲಾಗಿ ಕೆಲ ದಿನಗಳಾಗಿವೆ. ಅತಿಥಿ ದೇವೋಭವ ಎನ್ನುವುದು ಬಿಬಿ ರೆಸಾರ್ಟ್ನ ಧ್ಯೇಯ ವಾಕ್ಯ ಆದರೆ ಬಂದ ಅತಿಥಿಗಳು ದೆವ್ವಗಳಂತೆ ವರ್ತಿಸುತ್ತಿದ್ದಾರೆ, ಇದು ರೆಸಾರ್ಟ್ ಸಿಬ್ಬಂದಿಗೆ ತಲೆನೋವಾಗಿ ಪರಿಣಮಿಸಿದೆ. ಮೊದಲಿಗೆ ಭವ್ಯಾ, ತ್ರಿವಿಕ್ರಮ್, ರಜತ್, ಮೋಕ್ಷಿತಾ, ಧನರಾಜ್ ಅವರುಗಳು ಸಿಬ್ಬಂದಿಗಳಾಗಿ ಅತಿಥಿಗಳಾದ ಚೈತ್ರಾ ಕುಂದಾಪುರ, ಉಗ್ರಂ ಮಂಜು, ಹನುಮಂತು, ಐಶ್ವರ್ಯಾ ಮತ್ತು ಗೌತಮಿ ಅವರ ಸೇವೆ ಮಾಡಿದರು. ಈ ವೇಳೆ ಸಿಬ್ಬಂದಿಗಳನ್ನು ಅತಿಥಿಗಳು ವಿಪರೀತ ಗೋಳು ಹೊಯ್ದುಕೊಂಡರು.
ಬುಧವಾರದ ಎಪಿಸೋಡ್ ಪ್ರಾರಂಭ ಆದಾಗ, ಸಿಬ್ಬಂದಿ ತಂಡದ ಭವ್ಯಾ, ಅತಿಥಿ ತಂಡದ ಚೈತ್ರಾ ಅವರನ್ನು ಬಿಗ್ಬಾಸ್ ಸೀಕ್ರೆಟ್ ರೂಂಗೆ ಕರೆಸಿ ಕೆಲವು ನಿಯಮಗಳನ್ನು ವಿವರಿಸಿದರು. ಈ ವೇಳೆ ಭವ್ಯಾ ಗೌಡ ಬಿಗ್ಬಾಸ್ ಎದುರು ಕಣ್ಣೀರು ಹಾಕಲು ಪ್ರಾರಂಭಿಸಿದರು. ‘ನಮಗೆ ಊಟ ಸಹ ಮಾಡಲು ಆಗುತ್ತಿಲ್ಲ, ಊಟ ಮಾಡಲು ಸಹ ಅವಕಾಶವನ್ನು ಅತಿಥಿಗಳು ನೀಡುತ್ತಿಲ್ಲ. ಅದಕ್ಕೆ ಪ್ರತ್ಯೇಕ ಸಮಯ ಇಡಿ’ ಎಂದು ಮನವಿ ಮಾಡಿದರು.
ಅದಕ್ಕೆ ಬಿಗ್ಬಾಸ್, ‘ಯಾವುದೇ ರೆಸಾರ್ಟ್ ಆಗಲಿ ತಮ್ಮ ಸಿಬ್ಬಂದಿಯ ಹೊಟ್ಟೆ ಖಾಲಿ ಇಟ್ಟು ಅತಿಥಿಗಳ ಹೊಟ್ಟೆ ತುಂಬಿಸುವುದಿಲ್ಲ. ರೆಸಾರ್ಟ್ ಮ್ಯಾನೇಜರ್ ಆದವರು ಎಲ್ಲದಕ್ಕೂ ಒಂದು ಸೂಕ್ತ ಸಮಯ ಮಾಡಬೇಕು’ ಎಂದರು. ಆದರೆ ಭವ್ಯಾ ಅವರಿಗೆ ಸಿಬ್ಬಂದಿ ಕೊಟ್ಟ ಕಾಟದಿಂದ ಮಾಡಿಸಿಕೊಂಡ ಸೇವೆಯಿಂದ ಬೇಸರವಾಗಿತ್ತು ಹಾಗಾಗಿ ಕಣ್ಣೀರು ಹಾಕಲು ಪ್ರಾರಂಭಿಸಿದರು. ಅದಕ್ಕೆ ಬಿಗ್ಬಾಸ್, ಭವ್ಯಾ ಅವರನ್ನು ಸಮಾಧಾನ ಮಾಡುತ್ತಾ, ಎಲ್ಲರಿಗೂ ಒಂದು ಸಮಯ ಬರುತ್ತದೆ, ಎಲ್ಲದಕ್ಕೂ ಅಂತ್ಯ ಇರುತ್ತದೆ ಎಂದು ಸಮಾಧಾನ ಮಾಡಿದರು.
ಇದನ್ನೂ ಓದಿ:ಬಿಗ್ಬಾಸ್ ಮನೆಯಲ್ಲಿ ಕಸದ ಬುಟ್ಟಿ: ಚೈತ್ರಾ ಕಸಕ್ಕೆ ಸಮಾನವೆ?
ಆ ಬಳಿಕ ನಿನ್ನೆಯ ಎಪಿಸೋಡ್ನಲ್ಲಿಯೇ ರೋಲ್ ರಿವರ್ಸ್ ಮಾಡಲಾಯ್ತು. ಸಿಬ್ಬಂದಿಯಾಗಿದ್ದ ಭವ್ಯಾ, ತ್ರಿವಿಕ್ರಮ್, ರಜತ್, ಧನರಾಜ್, ಮೋಕ್ಷಿತಾ ಅವರುಗಳು ಅತಿಥಿಗಳಾದರು. ಅತಿಥಿಗಳಾಗಿದ್ದ ಉಗ್ರಂ ಮಂಜು, ಚೈತ್ರಾ ಕುಂದಾಪುರ, ಗೌತಮಿ, ಹನುಮಂತು, ಐಶ್ವರ್ಯಾ ಅವರುಗಳು ಸಿಬ್ಬಂದಿಗಳಾದರು. ಈಗ ಭವ್ಯಾ ಹಾಗೂ ಅವರ ತಂಡದವರು ದ್ವೇಷ ತೀರಿಸಿಕೊಳ್ಳಲು ಕಾತರರಾಗಿದ್ದು, ಅವರು ನೀಡಿದ್ದ ಕಾಟಕ್ಕೆ ದುಪ್ಪಟ್ಟನ್ನು ವಾಪಸ್ ಕೊಡುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ