AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಿವರ್ಸ್ ಆಯ್ತು ರೋಲ್, ಹೇಳಿದಂತೆ ಹಣ್ಣುಗಾಯಿ ಮಾಡಿದ ರಜತ್

Bigg Boss Kannada: ರಜತ್, ತ್ರಿವಿಕ್ರಮ್ ಇನ್ನಿತರರು ಸಿಬ್ಬಂದಿ ಆಗಿದ್ದಾಗ ಉಗ್ರಂ ಮಂಜು, ಗೌತಮಿ, ಐಶ್ವರ್ಯಾ ಇನ್ನು ಕೆಲವರು ಸಖತ್ ಕಾಟ ಕೊಟ್ಟಿದ್ದರು. ಆಗಲೇ ರಜತ್, ಮುಂದಿನ ಟಾಸ್ಕ್​ನಲ್ಲಿ ಅವರನ್ನು ಹಣ್ಣುಗಾಯಿ ಮಾಡುತ್ತೇನೆ ಎಂದು ಶಪತ ಮಾಡಿದ್ದರು. ಅಂತೆಯೇ ಬಿಗ್​ಬಾಸ್ ನೀಡಿದ ಅವಕಾಶವನ್ನು ಬಳಸಿಕೊಂಡ ರಜತ್, ವಿಪರೀತ ಕಾಟ ಕೊಟ್ಟರು. ಎದುರಾಳಿ ತಂಡದ ಸದಸ್ಯರ ಜೊತೆಗೆ ತಮ್ಮ ತಂಡದ ಸದಸ್ಯರಿಗೂ ಸಖತ್ ಕಾಟ ಕೊಟ್ಟರು.

ರಿವರ್ಸ್ ಆಯ್ತು ರೋಲ್, ಹೇಳಿದಂತೆ ಹಣ್ಣುಗಾಯಿ ಮಾಡಿದ ರಜತ್
Bigg Boss Kannada 11
ಮಂಜುನಾಥ ಸಿ.
|

Updated on: Dec 25, 2024 | 10:55 PM

Share

ಬಿಗ್​ಬಾಸ್ ಮನೆ ಈಗ ಬಿಬಿ ರೆಸಾರ್ಟ್ ಆಗಿದೆ. ಮೊದಲಿಗೆ ಭವ್ಯಾ, ಮೋಕ್ಷಿತಾ, ತ್ರಿವಿಕ್ರಮ್, ರಜತ್, ಧನು ಅವರು ರೆಸಾರ್ಟ್​ನ ಸಿಬ್ಬಂದಿಯಾಗಿದ್ದರು. ಅತಿಥಿಗಳಾಗಿದ್ದ ಚೈತ್ರಾ ಕುಂದಾಪುರ, ಮಂಜು, ಗೌತಮಿ, ಐಶ್ವರ್ಯಾ, ಹನುಮಂತು ಅವರಿಗೆ ಆತಿಥ್ಯ ನೀಡಿದರು. ಈ ಸಮಯದಲ್ಲಿ ಮಂಜು, ಚೈತ್ರಾ, ಐಶ್ವರ್ಯಾ ಇನ್ನು ಕೆಲವರು ರೆಸಾರ್ಟ್ ಸಿಬ್ಬಂದಿಗೆ ಸಾಧ್ಯವಾದಷ್ಟು ಕಾಟಗಳನ್ನು ಕೊಟ್ಟರು. ಭವ್ಯಾ ಅಂತು ಬಿಗ್​ಬಾಸ್ ಎದುರು ಕಣ್ಣೀರು ಹಾಕಿಕೊಂಡರು. ಅತಿಥಿಗಳು ಕೊಟ್ಟ ಕಾಟಕ್ಕೆ ಹೈರಾಣಾಗಿದ್ದ ಭವ್ಯಾ ಮತ್ತು ತಂಡಕ್ಕೆ ಬಿಗ್​ಬಾಸ್ ಅವಕಾಶ ನೀಡಿದರು. ಇಂದು ಭವ್ಯಾ, ಮೋಕ್ಷಿತಾ, ತ್ರಿವಿಕ್ರಮ್, ರಜತ್ ಅವರುಗಳು ಅತಿಥಿಗಳಾದರು, ಚೈತ್ರಾ ಮತ್ತು ತಂಡ ಸಿಬ್ಬಂದಿಯಾದರು.

ರಜತ್, ತ್ರಿವಿಕ್ರಮ್ ಇನ್ನಿತರರು ಸಿಬ್ಬಂದಿ ಆಗಿದ್ದಾಗ ಉಗ್ರಂ ಮಂಜು, ಗೌತಮಿ, ಐಶ್ವರ್ಯಾ ಇನ್ನು ಕೆಲವರು ಸಖತ್ ಕಾಟ ಕೊಟ್ಟಿದ್ದರು. ಆಗಲೇ ರಜತ್, ಮುಂದಿನ ಟಾಸ್ಕ್​ನಲ್ಲಿ ಅವರನ್ನು ಹಣ್ಣುಗಾಯಿ ಮಾಡುತ್ತೇನೆ ಎಂದು ಶಪತ ಮಾಡಿದ್ದರು. ಅಂತೆಯೇ ಬಿಗ್​ಬಾಸ್ ನೀಡಿದ ಅವಕಾಶವನ್ನು ಬಳಸಿಕೊಂಡ ರಜತ್, ವಿಪರೀತ ಕಾಟ ಕೊಟ್ಟರು. ಎದುರಾಳಿ ತಂಡದ ಸದಸ್ಯರ ಜೊತೆಗೆ ತಮ್ಮ ತಂಡದ ಸದಸ್ಯರಿಗೂ ಸಖತ್ ಕಾಟ ಕೊಟ್ಟರು.

ರೆಸಾರ್ಟ್​ಗೆ ಸೇರಿದ ವಿಲನ್ ರೀತಿ ವರ್ತಿಸಲು ಆರಂಭಿಸಿದ ರಜತ್ ಎಲ್ಲರ ಮೇಲೆ ಜಗಳ ಮಾಡುತ್ತಾ, ರೌಡಿ ಬಿಹೇವಿಯರ್ ತೋರಿದರು. ಚೈತ್ರಾ, ಗೌತಮಿ, ಉಗ್ರಂ ಮಂಜು ಇನ್ನಿತರರು ರಜತ್ ಅನ್ನು ನಿಯಂತ್ರಿಸಲು ಹರಸಾಹಸ ಪಟ್ಟರು. ಬೇಕೆಂದೇ ಬೆಡ್​ರೂಂ ಅನ್ನು ಗಲೀಜು ಮಾಡಿದರು. ದಿಂಬುಗಳನ್ನು ಕ್ಯಾಪ್ಟನ್ ರೂಮಿಗೆ ಎಸೆದರು. ಬಾತ್​ರೂಂಗೆ ಹೋಗಿ ನೀರನ್ನೆಲ್ಲ ಎಲ್ಲೆಂದರಲ್ಲಿ ಚೆಲ್ಲಿದರು, ಟಿಶ್ಯು ಪೇಪರ್ ಎಸೆದಾಡಿದರು. ಒಟ್ಟಾರೆ ಸಿಬ್ಬಂದಿಗೆ ಕೊಡಬಾರದ ಕಾಟವನ್ನು ರಜತ್ ಕೊಟ್ಟರು. ಹೇಳಿದ್ದಂತೆ ಎದುರಾಳಿಗಳನ್ನು ಹಣ್ಣುಗಾಯಿ ಮಾಡಿದರು.

ಇದನ್ನೂ ಓದಿ:ಬಿಗ್​ಬಾಸ್ ಮನೆಯಲ್ಲಿ ಕಸದ ಬುಟ್ಟಿ: ಚೈತ್ರಾ ಕಸಕ್ಕೆ ಸಮಾನವೆ?

ಆದರೆ ಚೈತ್ರಾ ಕುಂದಾಪುರ ಹಾಗೂ ಇನ್ನು ಕೆಲವರು ರಜತ್ ಎಷ್ಟೆ ಕಾಟ ಕೊಟ್ಟರೂ ಸಹ ಚೈತ್ರಾ ಕುಂದಾಪುರ, ಗೌತಮಿ ಹಾಗೂ ಒಟ್ಟಾರೆ ಅವರ ತಂಡದವರು ‘ಸಾರಿ ಸರ್, ಸಾರಿ ಸರ್’ ಎನ್ನುತ್ತಾ ಸಮಾಧಾನದಿಂದಲೇ ವರ್ತಿಸಿದರು. ಅಸಲಿಗೆ ಸ್ವತಃ ರಜತ್ ಸಿಬ್ಬಂದಿ ಆಗಿದ್ದಾಗ ಅಷ್ಟು ಸಮಾಧಾನವಾಗಿ ವರ್ತಿಸಿರಲಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್
ನೈಜೀರಿಯಾದಲ್ಲಿ ಐಸಿಸ್ ನೆಲೆಗಳ ಮೇಲೆ ಟ್ರಂಪ್ ಪಡೆಯ ಮಾರಕ ದಾಳಿ
ನೈಜೀರಿಯಾದಲ್ಲಿ ಐಸಿಸ್ ನೆಲೆಗಳ ಮೇಲೆ ಟ್ರಂಪ್ ಪಡೆಯ ಮಾರಕ ದಾಳಿ
ನಿದ್ದೆಗಣ್ಣಿನಲ್ಲಿ 10ನೇ ಮಹಡಿಯಿಂದ ಕೆಳಗೆ ಬಿದ್ದ ವ್ಯಕ್ತಿ
ನಿದ್ದೆಗಣ್ಣಿನಲ್ಲಿ 10ನೇ ಮಹಡಿಯಿಂದ ಕೆಳಗೆ ಬಿದ್ದ ವ್ಯಕ್ತಿ
ತೋರು ಬೆರಳಿನ ಆಕಾರದಿಂದ ಮನುಷ್ಯನ ವ್ಯಕ್ತಿತ್ವ ಗೊತ್ತಾಗುತ್ತಾ?
ತೋರು ಬೆರಳಿನ ಆಕಾರದಿಂದ ಮನುಷ್ಯನ ವ್ಯಕ್ತಿತ್ವ ಗೊತ್ತಾಗುತ್ತಾ?
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಅಡ್ಡಿ
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಅಡ್ಡಿ
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್