‘ಬಿಗ್ ಬಾಸ್ ಇದು ನ್ಯಾಯಸಮ್ಮತವಲ್ಲ’; ತಾಂಡವ್ ಎಲಿಮಿನೇಷನ್​ಗೆ ಓಪನ್ ಆಗಿ ಅಸಮಾಧಾನ ಹೊರಹಾಕಿದ ಗಗನ್

ಬಿಗ್ ಬಾಸ್ ಮನೆಯಲ್ಲಿ ನಡೆದ ಅಚ್ಚರಿಯ ಎಲಿಮಿನೇಷನ್‌ನಲ್ಲಿ ತಾಂಡವ್ ರಾಮ್ ಹೊರಬಿದ್ದಿದ್ದಾರೆ. ವಿಶೇಷ ಅಧಿಕಾರ ಬಳಸಿ ವೋಟ್ ಕಸಿದುಕೊಂಡಿದ್ದರಿಂದ ಈ ಪರಿಸ್ಥಿತಿ ಬಂದಿದ್ದು, ‘ಇದು ನ್ಯಾಯಸಮ್ಮತವಲ್ಲ’ ಎಂದು ಗಗನ್ ಚಿನ್ನಪ್ಪ ಕಣ್ಣೀರು ಸುರಿಸಿದ್ದಾರೆ. ಆದರೆ ಕೆಲವು ಮೂಲಗಳ ಪ್ರಕಾರ ತಾಂಡವ್ ರಾಮ್ ಶೀಘ್ರದಲ್ಲೇ ಬಿಗ್ ಬಾಸ್ ಮನೆಗೆ ಕಂಬ್ಯಾಕ್ ಮಾಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

‘ಬಿಗ್ ಬಾಸ್ ಇದು ನ್ಯಾಯಸಮ್ಮತವಲ್ಲ’; ತಾಂಡವ್ ಎಲಿಮಿನೇಷನ್​ಗೆ ಓಪನ್ ಆಗಿ ಅಸಮಾಧಾನ ಹೊರಹಾಕಿದ ಗಗನ್
ಬಿಗ್ ಬಾಸ್

Updated on: Sep 25, 2026 | 7:01 AM

ಮುಖ್ಯಾಂಶಗಳು

  • ಬಿಗ್ ಬಾಸ್ ಸ್ಪರ್ಧೆಯಲ್ಲಿ ಶಾಕ್
  • ವೋಟ್ ಕಸಿದುಕೊಂಡು ತಾಂಡವ್ ಎಲಿಮಿನೇಟ್
  • ಗಳಸ್ಯ ಗಂಟಸ್ಯ ಗೆಳೆಯನ ನಿರ್ಗಮನ

‘ಬಿಗ್ ಬಾಸ್’ ಮನೆಯಲ್ಲಿ ಒಂದು ಅಚ್ಚರಿಯ ಎಲಿಮಿನೇಷನ್ ನಡೆದಿದೆ. ತಾಂಡವ್ ರಾಮ್ ಅವರು ಬಿಗ್ ಬಾಸ್ ಮನೆಯಿಂದ ಹೊರ ನಡೆದಿದ್ದಾರೆ. ಅವರ ವೋಟ್​ಗಳನ್ನು ಬೇರೆಯವರು ಕಿತ್ತುಕೊಂಡಿದ್ದರಿಂದಲೇ ಈ ರೀತಿಯ ಪರಿಸ್ಥಿತಿ ಬಂತು. ಇದರಿಂದ ತಾಂಡವ್ ರಾಮ್​​​ಗೆ ಅನ್ಯಾಯವಾಗಿದೆ ಎಂಬ ಕೂಗು ಎದ್ದಿದೆ. ಗಗನ್ ಚಿನ್ನಪ್ಪ ಅವರು ಈ ವಿಷಯವನ್ನು ಓಪನ್ ಆಗಿಯೇ ಹಂಚಿಕೊಂಡಿದ್ದಾರೆ. ಗಳಗಳನೆ ಅತ್ತಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 13’ರಲ್ಲಿ ಗಗನ್ ಚಿನ್ನಪ್ಪ ಹಾಗೂ ತಾಂಡವ್ ರಾಮ್ ಅವರು ಗಳಸ್ಯ ಗಂಟಸ್ಯ ರೀತಿಯಲ್ಲಿ ಇದ್ದರು. ಒಬ್ಬರನ್ನೊಬ್ಬರು ಬಿಟ್ಟು ಆಟವನ್ನು ಆಡಿದವರೇ ಅಲ್ಲ. ಇವರ ಗೆಳೆತನದ ಹಾದಿ ಕೆಲವೇ ವಾರಕ್ಕೆ ಕೊನೆ ಆಗುವ ಪರಿಸ್ಥಿತಿ ಬಂದಿದೆ. ಈ ಬಾರಿ ಭಿನ್ನವಾಗಿ ಎಲಿಮಿನೇಷನ್ ಪ್ರಕ್ರಿಯೆ ನಡೆಸಲಾಗಿದೆ. ಇದು ಅನೇಕರಿಗೆ ಅಚ್ಚರಿ ತರಿಸಿದೆ.

ಟಾಸ್ಕ್ ಗೆದ್ದ ಕಿರಣ್, ಆಸಿಯಾ, ಧನುಷ್ ಹಾಗೂ ಕಾವ್ಯಾಗೆ ವಿಶೇಷ ಅಧಿಕಾರ ನೀಡಲಾಯಿತು. ನಾಲ್ವರ ಪೈಕಿ ಪ್ರತಿಯೊಬ್ಬರು ನಾಮಿನೇಷನ್​​ನಲ್ಲಿ ಇರುವವರಿಂದ 50ರಷ್ಟು ವೋಟ್ ಕಿತ್ತುಕೊಳ್ಳಬಹುದು. ಕಿರಣ್ ಅವರು ಸೌಂದರ್ಯಾ ಅವರಿಂದ, ಕಾವ್ಯಾ ಅವರು ಜಗದೀಶ್ ಅವರಿಂದ, ಆಸಿಯಾ ಅವರು ಲಿಖಿತ್ ಅವರಿಂದ ಹಾಗೂ ಧನುಷ್ ಅವರು ತಾಂಡವ್ ರಾಮ್ ಅವರಿಂದ ವೋಟ್ ಕಸಿದುಕೊಂಡರು.

ಆ ಬಳಿಕ ಬಿಗ್ ಬಾಸ್ ಮತ್ತೊಂದು ಟ್ವಿಸ್ಟ್ ಕೊಟ್ಟರು. ಈ ರೀತಿ ವೋಟ್ ಕಳೆದುಕೊಂಡ ನಾಲ್ವರಲ್ಲಿ ಮಾತ್ರ ಎಲಿಮಿನೇಷನ್ ನಡೆಯಲಿದೆ ಎಂದು ಘೋಷಿಸಿದರು. ಮೊದಲು ಕಿರಣ್, ನಂತರ ಜಗದೀಶ್ ಸೇವ್ ಆದರು. ಕೊನೆಯಲ್ಲಿ ಸೌಂದರ್ಯಾ ಹಾಗೂ ತಾಂಡವ್ ಪೈಕಿ ತಾಂಡವ್ ಎಲಿಮಿನೇಟ್ ಆದರು.

ಇದನ್ನೂ ಓದಿ: ಬಿಗ್ ಬಾಸ್ ನಿಲ್ಲಿಸಿ: ಸಲ್ಮಾನ್ ಖಾನ್ ವಿರುದ್ಧ ಗುಡುಗಿದ ಹಾಸ್ಯ ನಟ ಸುನಿಲ್ ಪಾಲ್

ತಾಂಡವ್ ರಾಮ್ ಹೋಗುತ್ತಿದ್ದಂತೆ ಕಣ್ಣೀರು ಹರಿಸಿದರು ಗಗನ್. ‘ಇದು ನ್ಯಾಯಸಮ್ಮತವಲ್ಲ ಬಿಗ್ ಬಾಸ್’ ಎನ್ನುತ್ತಾ ಕಣ್ಣೀರಿಟ್ಟರು. ಸಾಮಾಜಿಕ ಜಾಲತಾಣಗಳ ಚರ್ಚೆಯ ಪ್ರಕಾರ ತಾಂಡವ್ ರಾಮ್ ಅವರು ಕಂಬ್ಯಾಕ್ ಮಾಡುವ ಸಾಧ್ಯತೆ ಇದೆಯಂತೆ. ಈ ಬಗ್ಗೆ ಶೀಘ್ರವೇ ಅಪ್​ಡೇಟ್ ಸಿಗುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Loading...
Unable to load recommendations.
Follow Us