
‘ಸೀತಾ ರಾಮ’ ಧಾರಾವಾಹಿ ಮೂಲಕ ಮಿಂಚಿದವರು ಗಗನ್ ಚಿನ್ನಪ್ಪ. ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಮಾನಿ ಬಳಗ ಇದೆ. ಆದರೆ, ಅವರು ಬಿಗ್ ಬಾಸ್ ಮನೆಯಲ್ಲಿ ನಡೆದುಕೊಳ್ಳುತ್ತಿರುವ ರೀತಿ ಕೆಲವರಿಗೆ ಇಷ್ಟ ಆಗುತ್ತಿಲ್ಲ. ಕೆಲವರು ಈ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಈ ವೀಕೆಂಡ್‌ನಲ್ಲಿ ಅವರಿಗೆ ಕ್ಲಾಸ್ ನಡೆಯಲೇಬೇಕು ಎಂದು ಆಶಿಸಿದ್ದಾರೆ.
ಧಾರಾವಾಹಿಯಲ್ಲಿ ನೋಡುವ ವ್ಯಕ್ತಿಗೂ, ಅವರ ನಿಜ ಜೀವನದ ವ್ಯಕ್ತಿತ್ವಕ್ಕೂ ಸಾಕಷ್ಟು ವ್ಯತ್ಯಾಸ ಇರುತ್ತದೆ. ಇದಕ್ಕೆ ಗಗನ್ ಚಿನ್ನಪ್ಪ ಉತ್ತಮ ಸಾಕ್ಷಿ. ‘ಸೀತಾ ರಾಮ’ ಧಾರಾವಾಹಿಯಲ್ಲಿ ಅವರು ಮಾಡಿರೋ ರಾಮ್ ಪಾತ್ರಕ್ಕೂ ಅವರ ನಿಜ ವ್ಯಕ್ತಿತ್ವಕ್ಕೂ ಸಾಕಷ್ಟು ವ್ಯತ್ಯಾಸ ಇದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಬಿಗ್ ಬಾಸ್ ಮನೆಗೆ ತೆರಳಿದ ಬಳಿಕ ಅನೇಕರಿಗೆ ಈ ಅನುಭವ ಆಗಿದೆ.
ಬಿಗ್ ಬಾಸ್ ಮನೆಯ ವಿಐಪಿ ಸದಸ್ಯನಾಗಿ ಗಗನ್ ಹೊರ ಹೊಮ್ಮಿದ್ದಾರೆ. ಎಲ್ಲಾ ಟಾಸ್ಕ್ಗಳ ಜವಾಬ್ದಾರಿಯನ್ನು ಅವರಿಗೇ ನೀಡಲಾಗುತ್ತಿದೆ. ಈ ವೇಳೆ ಕಾಮನ್ ಮ್ಯಾನ್ ಆಗಿ ತೆರಳಿದ ಧನುಷ್ ಅವರು ಗಗನ್ ಅವರಿಗೆ ‘ಬ್ರೋ’ ಎಂದು ಕರೆದಿದ್ದಾರೆ. ಇದರಿಂದ ಗಗನ್ ಕೋಪ ನೆತ್ತಿಗೇರಿದೆ.
‘ನನಗೆ ಏಕೆ ಬ್ರೋ ಎಂದು ಕರೆದಿರಿ? ನನ್ನ ವಯಸ್ಸೆಷ್ಟು, ನಿಮ್ಮ ವಯಸ್ಸೆಷ್ಟು’ ಎಂದು ಕೇಳಿದರು. ಜೊತೆಗೆ, ‘ವಿಐಪಿ ಗಗನ್’ ಎಂದು ಕರೆಯುವಂತೆ ಧನುಷ್ಗೆ ಆದೇಶ ನೀಡಿದರು. ಇಷ್ಟೆಲ್ಲ ಗೌರವ ನಿರೀಕ್ಷೆ ಮಾಡಿದ ಗಗನ್ ಅವರು ಧನುಷ್ ಬಳಿ, ‘ಹೋಗಲೋ, ನಡ್ಯಲ್ಲೋ’ ಎಂದು ಸಂಬೋಧಿಸಿದರು. ಈ ಬಗ್ಗೆ ಚರ್ಚೆ ಶುರುವಾಗಿದೆ. ಅವರಿಗೆ ಅಹಂ ಹೆಚ್ಚು ಎಂಬ ಚರ್ಚೆ ಶುರುವಾಗಿದೆ. ನಾಮಿನೇಷನ್ ಬಗ್ಗೆ ನಡೆದ ಓಪನ್ ಚರ್ಚ ಬಗ್ಗೆಯೂ ಪ್ರಶ್ನೆ ಮೂಡಿದೆ.
ಇದನ್ನೂ ಓದಿ: ನಾಮಿನೇಷನ್ ಬಗ್ಗೆ ಗಗನ್-ತಾಂಡವ್ ಓಪನ್ ಟಾಕ್; ಮೊದಲ ವಾರವೇ ಕಿಚ್ಚನ ಕ್ಲಾಸ್ ಫಿಕ್ಸ್
ಕಳೆದ ವರ್ಷದ ಸೀಸನ್ ಅಲ್ಲಿ ಅಶ್ವಿನಿ ಗೌಡ ಅವರು ಎಲ್ಲರನ್ನೂ ಏಕವಚನದಲ್ಲಿ ಮಾತನಾಡಿಸಿ, ತಮಗೆ ಗೌರವ ಸಿಗಲಿ ಎಂದು ಆಶಿಸುತ್ತಾ ಇದ್ದರು. ಇದು ಎಷ್ಟು ಸರಿ ಎಂಬ ಚರ್ಚೆ ನಡೆದಿತ್ತು. ಈ ವಿಷಯವಾಗಿ ಸುದೀಪ್ ಕ್ಲಾಸ್ ಕೂಡ ತೆಗೆದುಕೊಂಡಿದ್ದರು.ಈ ಬಾರಿ ಗಗನ್ ಕೂಡ ಅದೇ ರೀತಿಯ ತಪ್ಪನ್ನು ಮಾಡುತ್ತಿದ್ದಾರೆ. ಹೀಗಾಗಿ, ವೀಕೆಂಡ್ ವೇಳೆ ಕಿಚ್ಚನ ಕ್ಲಾಸ್ ನಡೆಯುತ್ತದೆಯೇ ಎನ್ನುವ ಪ್ರಶ್ನೆ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:02 am, Thu, 10 September 26