ಅಯ್ಯೋ ನಲ್ಲಿ ಮೂಳೆ ಸಹವಾಸ ಸಾಕಪ್ಪ ಎಂದ ಗಿಲ್ಲಿ
Bigg Boss Kannada 12: ವಾರದ ಆರಂಭದಲ್ಲಿ ಬಿಗ್ಬಾಸ್, ಸ್ಪರ್ಧಿಗಳಿಗೆ ಅವರ ಆಸೆ ಕೇಳಿದ್ದರು. ಆಗ ಗಿಲ್ಲಿ, ತಮಗೆ ನಲ್ಲಿ ಮೂಳೆ ತಿನ್ನುವ ಆಸೆ ಆಗಿದೆ ಎಂದಿದ್ದರು. ನಲ್ಲಿ ಮೂಳೆ ತಿಂದು ನಿದ್ದೆ ಮಾಡಬೇಕು ಆಗ ನಾಯಿಗಳು ಬೊಗಳಬಾರದು ಎಂದಿದ್ದರು. ಅದರಂತೆ ಬಿಗ್ಬಾಸ್ ಸಹ ನಲ್ಲಿ ಮೂಳೆ ಕಳಿಸಿದ್ದರು. ಆದರೆ ಅದಾದ ಕೆಲವೇ ದಿನಗಳಲ್ಲಿ ಗಿಲ್ಲಿಗೆ ನಲ್ಲಿ ಮೂಳೆ ಮೇಲೆ ಆಸೆಯೇ ಹೊರಟು ಹೋಗಿದೆ.

ಬಿಗ್ಬಾಸ್ ನಲ್ಲಿ (Bigg Boss) ಈ ವಾರ ಫಿನಾಲೆ ವಾರ ಆಗಿದ್ದ ಕಾರಣ ಯಾವುದೇ ಟಾಸ್ಕ್ಗಳು ಇರಲಿಲ್ಲ ಉಳಿದ ಆರು ಮಂದಿ ಸ್ಪರ್ಧಿಗಳು ಆರಾಮವಾಗಿ ಮಾತನಾಡುತ್ತಾ ಎಂಜಾಯ್ ಮಾಡುತ್ತಾ ಕಾಲ ಕಳೆದರು. ಈ ವಾರ ಮನೆಯಲ್ಲಿ ಯಾವ ಜಗಳವೂ ಸಹ ಇರಲಿಲ್ಲ. ಆದರೆ ವಾರದ ಆರಂಭದಲ್ಲಿ ಬಿಗ್ಬಾಸ್, ಸ್ಪರ್ಧಿಗಳಿಗೆ ಅವರ ಆಸೆ ಕೇಳಿದ್ದರು. ಆಗ ಗಿಲ್ಲಿ, ತಮಗೆ ನಲ್ಲಿ ಮೂಳೆ ತಿನ್ನುವ ಆಸೆ ಆಗಿದೆ ಎಂದಿದ್ದರು. ನಲ್ಲಿ ಮೂಳೆ ತಿಂದು ನಿದ್ದೆ ಮಾಡಬೇಕು ಆಗ ನಾಯಿಗಳು ಬೊಗಳಬಾರದು ಎಂದಿದ್ದರು. ಅದರಂತೆ ಬಿಗ್ಬಾಸ್ ಸಹ ನಲ್ಲಿ ಮೂಳೆ ಕಳಿಸಿದ್ದರು. ಆದರೆ ಅದಾದ ಕೆಲವೇ ದಿನಗಳಲ್ಲಿ ಗಿಲ್ಲಿಗೆ ನಲ್ಲಿ ಮೂಳೆ ಮೇಲೆ ಆಸೆಯೇ ಹೊರಟು ಹೋಗಿದೆ.
ನಲ್ಲಿ ಮೂಳೆ ಕಳಿಸಿದಾಗ ಗಿಲ್ಲಿ ಕಳಿಸಿದ್ದ ಅಷ್ಟೂ ನಲ್ಲಿ ಮೂಳೆಯನ್ನು ಒಬ್ಬರೇ ತಿಂದು ಬಿಟ್ಟರು. ಇತರೆ ಸ್ಪರ್ಧಿಗಳು ಎಚ್ಚರಿಕೆ ನೀಡಿದರೂ ಸಹ ಗಿಲ್ಲಿ ಲೆಕ್ಕ ಮಾಡದೆ ಒಂದೇ ಸಮನೆ ತಿಂದು ಮುಗಿಸಿದರು. ಇದರಿಂದಾಗಿ ಅವರಿಗೆ ಬೇಧಿ ಶುರುವಾಗಿತ್ತು. ಅದರಿಂದ ಬಹಳ ಕಷ್ಟಪಟ್ಟರು. ಎದೆ ಉರಿ ಪ್ರಾರಂಭ ಆಗಿತ್ತು.
ಇಂದು (ಶನಿವಾರ) ಸುದೀಪ್ ಅವರು ಗಿಲ್ಲಿಗೆ ಈ ವಿಷಯವಾಗಿ ಕೇಳಿದ್ದಕ್ಕೆ, ಅಯ್ಯೋ ನಲ್ಲಿ ಮೂಳೆ ಸಹವಾಸವೇ ಸಾಕು ಎನಿಸಿಬಿಟ್ಟಿದೆ ಎಂದರು. ಮತ್ತೊಮ್ಮೆ ನಲ್ಲಿ ಮೂಳೆ ಕಳಿಸಿಕೊಡುತ್ತೇನೆ ಎಂದರೂ ಸಹ ಗಿಲ್ಲಿ, ಬೇಡವೇ ಬೇಡ ಎಂದು ಗೋಗರೆದರು. ನಾನು ಮತ್ತೆ ನಲ್ಲಿ ಮೂಳೆ ತಿನ್ನಲ್ಲ, ಬೇಕಿದ್ದರೆ ಊಟ ಬಿಡುತ್ತೀನಿ ನಲ್ಲಿ ಮೂಳೆ ತಿನ್ನಲ್ಲ ಎಂದು ಗೋಗರೆದರು ಗಿಲ್ಲಿ.
ಇದನ್ನೂ ಓದಿ:ಇಲ್ಲಿದ್ರೆ ಆನಂದ, ಮನೆಗೋದ್ರೆ ಗೋವಿಂದ: ಗಿಲ್ಲಿಯ ಬಿಗ್ಬಾಸ್ ರ್ಯಾಪ್ ಸಾಂಗ್
ಅಸಲಿಗೆ ಸುದೀಪ್, ಅದಕ್ಕೂ ಮುಂಚೆ ಮನೆಯವರಿಗೆಲ್ಲ ಈ ವಾರ ಪೂರ್ತಿ ಗಿಲ್ಲಿಯೇ ಅಡುಗೆ ಮಾಡಬೇಕು ಎಂದಿದ್ದರು. ಅದಕ್ಕೆ ಮನೆ ಸದಸ್ಯರು ಬೇಸರ ವ್ಯಕ್ತಪಡಿಸಿದ್ದರು. ಆದರೆ ಗಿಲ್ಲಿ ಮಾತ್ರ ಉತ್ಸಾಹ ಪ್ರದರ್ಶಿಸಿದ್ದರು. ಬಳಿಕ, ಗಿಲ್ಲಿಗೆ 30 ನಲ್ಲಿ ಮೂಳೆ ಕಳಿಸುತ್ತೇನೆ ಅಷ್ಟನ್ನೂ ತಿನ್ನಬೇಕು ಎಂದಾಗ ಮಾತ್ರ ಸಾಧ್ಯವೇ ಇಲ್ಲ ಎಂದರು. ಬೇಕಿದ್ದರೆ ಅಡುಗೆ ಮಾಡುವುದು ಬಿಡುತ್ತೀನಿ, ಆದರೆ ನಲ್ಲಿ ಮೂಳೆ ಮಾತ್ರ ಕಳಿಸಬೇಡಿ ಎಂದು ಗೋಗರೆದರು ಗಿಲ್ಲಿ. ಅತಿಯಾದರೆ ಅಮೃತವೂ ವಿಷ ಎಂಬುದಕ್ಕೆ ಗಿಲ್ಲಿಯ ನಲ್ಲಿ ಪ್ರಸಂಗ ಒಂದೊಳ್ಳೆ ಉದಾಹರಣೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




