
ಆ್ಯಂಕರ್ ಜಾನ್ವಿ ಅವರು ಬಿಗ್ ಬಾಸ್ಗೆ (Bigg Boss) ತೆರಳಿ ಸುದ್ದಿ ಆಗುತ್ತಿದ್ದಾರೆ. ಅವರ ಬಗ್ಗೆ ನೆಗೆಟಿವ್ ಅಭಿಪ್ರಾಯ ವ್ಯಕ್ತವಾಗಿದೆ. ಅಶ್ವಿನಿ ಗೌಡ ಜೊತೆ ಸೇರಿ ಅವರು ಹಲವು ನಿಯಮಗಳನ್ನು ಬ್ರೇಕ್ ಮಾಡುತ್ತಿದ್ದಾರೆ. ಈ ಕಾರಣದಿಂದ ಸುದ್ದಿ ಆಗುತ್ತಿದ್ದಾರೆ. ಜಾನ್ವಿ ಈಗ ಟಾಸ್ಕ್ ಆಡುವಾಗ ನಡೆದುಕೊಂಡ ರೀತಿ ಚರ್ಚೆಗೆ ಕಾರಣ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಟ್ರೋಲ್ ಮಾಡಲಾಗುತ್ತಿದೆ.
ನವೆಂಬರ್ 18ರ ಎಪಿಸೋಡ್ನಲ್ಲಿ ಟಾಸ್ಕ್ ಒಂದನ್ನು ನೀಡಲಾಗಿತ್ತು. ಈ ಟಾಸ್ಕ್ ಅನುಸಾರ ಈಜುಕೊಳದಿಂದ ನೀರನ್ನು ಬಕೆಟ್ನಲ್ಲಿ ತೆಗೆದುಕೊಂಡು ಬಂದು ಟ್ಯಾಂಕ್ ಒಳಗೆ ಹಾಕಬೇಕಿತ್ತು. ಈ ರೀತಿ ನೀರನ್ನು ಹಾಕಲು ಪ್ರತಿ ತಂಡದಲ್ಲಿ ಇಬ್ಬರಿಗೆ ಅವಕಾಶ ನೀಡಲಾಯಿತು. ಇವರು ನೀರನ್ನು ತೆಗೆದುಕೊಂಡು ಹೋಗದಂತೆ ತಡೆಯಲು ಒಬ್ಬರನ್ನು ನಿಲ್ಲಿಸಲಾಗಿತ್ತು.
ಜಾನ್ವಿ ಹಾಗೂ ರಿಷಾ ಅವರು ನೀರು ತುಂಬುವ ಕಾಯಕದಲ್ಲಿ ನಿರತರಾಗಿದ್ದರು. ರಾಶಿಕಾ ಅವರು ಇವರು ಬರದಂತೆ ತಡೆಯಲು ಗುರಾಣಿ ರೀತಿಯ ವಸ್ತು ಹಿಡಿದು ನಿಂತಿದ್ದರು. ಈ ವೇಳೆ ಜಾನ್ವಿ ಬಕೆಟ್ನಲ್ಲಿ ನೀರು ಹಿಡಿದು ಹೋಗದಂತೆ ತಡೆಯಲಾಯಿತು. ಇದರಿಂದ ಜಾನ್ವಿ ಸಿಟ್ಟಾದರು. ಅವರ ಮುಖದಲ್ಲಿ ಕೋಪ ಮಿತಿ ಮೀರಿತ್ತು. ಅನೇಕರು ಜಾನ್ವಿ ಅವರನ್ನು ನಾಗವಲ್ಲಿಗೆ ಹೋಲಿಕೆ ಮಾಡಿದ್ದಾರೆ. ಸಾಧಾರಣವಾಗಿದ್ದ ಅವರ ಮುಖ ಭಾವನೆ ಒಮ್ಮೆಲೇ ಬದಲಾಗಿದ್ದು ಅನೇಕರಿಗೆ ಅಚ್ಚರಿ ತಂದಿದೆ.
ಜಾನ್ವಿ ಅವರು ಆ ಬಳಿಕ ರಾಶಿಕಾ ಬಳಿ ಜಗಳಕ್ಕೆ ಇಳಿದರು. ಈ ವೇಳೆ ರಾಶಿಕಾ ಅವರು ಕೈ ತೋರಿಸಿದಾಗ ಕೈಗೆ ಹೊಡೆಯುವ ಪ್ರಯತ್ನವನ್ನು ಜಾನ್ವಿ ಮಾಡಿದರು. ಆದರೆ, ಆ ಏಟು ರಾಶಿಕಾಗೆ ಬಿದ್ದಿಲ್ಲ ಅನ್ನೋದು ಅದೃಷ್ಟ. ಈ ಮೊದಲು ರಿಷಾ ಅವರು ಗಿಲ್ಲಿಗೆ ಹೊಡೆದ ವಿಚಾರ ಸಾಕಷ್ಟು ಗಂಭೀರವಾಗಿತ್ತು. ಈಗ ಅವರು ಮತ್ತೆ ಹೊಡೆದಿದ್ದರೆ ಆ ಪ್ರಕರಣ ಮತ್ತಷ್ಟು ಗಂಭಿರತೆ ಪಡೆದುಕೊಳ್ಳುತ್ತಿತ್ತು.
ಇದನ್ನೂ ಓದಿ: ಅಣ್ಣ ಪದಕ್ಕೆ ಕಳಂಕ; ಈ ಸಂಬಂಧವನ್ನು ಬೇಕಾಬಿಟ್ಟಿ ಬಳಸಿದ ಬಿಗ್ ಬಾಸ್ ಸ್ಪರ್ಧಿಗಳು
ಜಾನ್ವಿ ಹಾಗೂ ಅಶ್ವಿನಿ ಡ್ರೆಸ್ಸಿಂಗ್ ರೂಂನಲ್ಲಿ ಮೈಕ್ ಹಾಕದೆ ಮಾತನಾಡಿದ್ದಕ್ಕೆ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದರು. ಇದಾದ ಬಳಿಕ ಮತ್ತೆ ಇದೇ ತಪ್ಪನ್ನು ಮಾಡಿದ್ದರು. ಹೀಗಾಗಿ, ಬಿಗ್ ಬಾಸ್ ಇವರಿಬ್ಬರನ್ನು ನೇರವಾಗಿ ನಾಮಿನೇಟ್ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:31 am, Wed, 19 November 25